ಶ್ರೀರಾಮಾಯನಮ:
ರಾಮಾಯಣ ಹಕ್ಕಿನೋಟ-೧೮೧
ಇನ್ನು
ಕರುಣಾಳು ರಾಮಕತೆ-ಚರಿತೆ-
ಉತ್ತರ ರಾಮಚರಿತೆ!
ಕುಬೇರನು ರಾಮ ತನಗೆ ಕಳುಹಿಸಿದ ಪುಷ್ಪಕ ವಿಮಾನವನ್ನು ಸ್ಮರಣಿಕೆಯಾಗಿ ರಾಮನಿಗೇ ಸಮರ್ಪಿಸಿದ.
ರಾಮ ಅವನ ಪ್ರೀತಿಗೆ ಗೌರವವನ್ನು ನೀಡಿ ಸ್ವೀಕರಿಸಿ 'ನಾನು ನೆನೆದಾಗ ಬಾ' ಎಂದು ಅದನ್ನು ಪೂಜಿಸಿ ಕಳಿಸಿದ.
ರಾಮನ ಪಟ್ಟಾಭಿಷೇಕವಾಗಿ ತಿಂಗಳು ಕಳೆಯಿತು. ಕೋಸಲದಲ್ಲಿ ರಾಮರಾಜ್ಯದ ಪ್ರಭಾವದಿಂದ-
.ಮನುಷ್ಯೇತರ ಪ್ರಾಣಿಗಳು ಮನುಷ್ಯರಂತೆ ಮಾತಾಡುವುದು
.ಎಲ್ಲರೂ ನಿರೋಗಿಗಳಾಗಿ ದೃಢಕಾಯರಾಗಿರುವುದು
.ಸ್ತ್ರೀಯರು ಅನಾಯಾಸವಾಗಿ ಮಕ್ಕಳನ್ನು ಹಡೆಯುತ್ತಿರುವುದು
.ಸುಜಲ, ಸುಫಲ,ಹಿತಕರ ಮಾರುತ ಇರುವುದು-
ಕಂಡು ಬರುತ್ತದೆ ಎಂದು ಭರತನು ಹೇಳಿದಾಗ ರಾಮ ಸಂತಸಗೊಂಡನು.
ಅಯೋಧ್ಯೆಯಲ್ಲೂ ಒಂದು ಅಶೋಕವನವಿತ್ತು.
ದೇವಲೋಕದ ನಂದನವನದಂತಿರುವ ಆ ಉದ್ಯಾನದಲ್ಲಿ ಸೀತಾರಾಮರು ವಿಹರಿಸುತ್ತಿದ್ದರು.
ಧರ್ಮಜ್ಞನಾದ ಶ್ರೀರಾಮನು ದಿನದ ಮೊದಲ ಭಾಗದಲ್ಲಿ ಧರ್ಮಾನುಸಾರವಾಗಿ ಧಾರ್ಮಿಕ ಕ್ರಿಯೆಗಳನ್ನು ನಡೆಸಿ ಉಳಿದ ಅರ್ಧ ದಿನವನ್ನು ಅಂತ:ಪುರದಲ್ಲಿ ಕಳೆಯುತ್ತಿದ್ದನು.
ಉಗ್ರತೇಜಸ್ವಿಗಳಾಗಿರುವ ಮಹರ್ಷಿಗಳ ಸಾನ್ನಿಧ್ಯದಲ್ಲಿ ಕೆಲವು ದಿವಸಗಳನ್ನಾದರೂ ಕಳೆಯಬೇಕೆಂಬ ಆಸೆ-ಎಂದಾಗ ರಾಮ ಸಂತಸದಿಂದ ಹಾಗಯೇ ಆಗಲಿ ಎಂದು ಒಪ್ಪಿದನು.
ಸೀತೆಯ ಬಯಕೆ!!
ಆಕೆ ಯಾಕಾದರೂ ಬಯಸುತ್ತಾಳೋ!!?-
(ಜಿಂಕೆಗೆ ಮನಸೋತು ಬಯಸಿದಾಗ- ಸೆರೆವಾಸ!
ಇದೀಗ ಆಶ್ರಮ ದರ್ಶನದಾಸೆ!) ಎನ್ನುವಂತಹ ದುಸ್ಥಿತಿ ಬರಬಹುದೆಂದು ರಾಮನಾಗಲೀ ಸೀತೇಯಾಗಲೀ
ಊಹಿಸಿಯೇ ಇರಲಿಲ್ಲ!
ವಿಶ್ವ


No comments:
Post a Comment
Please leave your comments here.....