ರಾಮಾಯಣ ಹಕ್ಕಿನೋಟ-೨೦೯ A Bird's-eye view of Ramayana : 209

 ಶ್ರೀರಾಮಾಯನಮ:

ಶ್ರೀರಾಮಾಯಣ ಹಕ್ಕಿನೋಟ

ರಾಮಾಯಣ ಹಕ್ಕಿನೋಟ-೨೦೯


 ಬೆಳಗಾಯಿತು.ಮಹಾಯಾತ್ರೆಗೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ಕ್ರಿಯೆಗಳನ್ನು ವಸಿಷ್ಠರು ನೆರವೇರಿಸಿದರು.ಶ್ರೀರಾಮನು ವೇದಮಂತ್ರೋಚ್ಚಾರಣೆಯೊಂದಿಗೆ ಸರಯೂನದಿಯತ್ತ ನಡೆದನು.ಹೋಗುವ ದಾರಿಯಲ್ಲಿ ಶ್ರೀರಾಮನ ಮುಂದೆ ಮಹಾವಿಷ್ಣು,

ಬಲಗಡೆಯಲ್ಲಿ ಲಕ್ಷ್ಮೀದೇವಿ,

ಎಡಗಡೆಯಲ್ಲಿ ಭೂದೇವಿ ವಿರಾಜಿಸುತ್ತಿದ್ದರು.ಅಸ್ತ್ರ-ಶಸ್ತ್ರ- ಆಯುಧಗಳು ಪುರುಷ ರೂಪದಲ್ಲಿ, ವೇದಗಳು ವಿಪ್ರವೇಷದಲ್ಲಿ ಅವನನ್ನು ಅನುಸರಿಸಿದವು.

ಪ್ರಣವ-ಗಾಯತ್ರಿ ಮಂತ್ರಗಳೂ ಶ್ರೀರಾಮನನ್ನು ಅನುಸರಿಸಿದವು.

ಮಹರ್ಷಿಗಳೂ ಮಹಾಪ್ರಸ್ಥಾನದಲ್ಲಿ ಶ್ರೀರಾಮನನ್ನು ಅನುಸರಿಸಿದರು.ಅಯೋಧ್ಯೆಯ ಬಾಲ ವೃದ್ಧರೆನ್ನದೆ  ಎಲ್ಲಾ ಪ್ರಜೆಗಳು ರಾಮನ ಹಾದಿಯಲ್ಲಿ ನಡೆದರು.

"ಸರ್ವೇ ರಾಮಮನುವ್ರತಮ್" ಎಂಬಂತೆ ಸಮಸ್ತ ಸ್ವಸ್ಥ ಜೀವಕೋಟಿ ಉತ್ಸಾಹ ಸಂತೋಷಗಳಿಂದ ಶ್ರೀರಾಮನ ಮಹಾಯಾತ್ರೆಯಲ್ಲಿ ಪಾಲ್ಗೊಂಡರು.ಶ್ರೀರಾಮನ ಮಹಾಯಾತ್ರೆಯನ್ನು ನೋಡಲು ನಿಂತವರೂ ಅವನನ್ನು ಅನುಸರಿಸಿದರು ಎಂದರೆ ಉಳಿದವರಾರು!? ಅಯೋಧ್ಯೆ ಜನಶೂನ್ಯವಲ್ಲ ಜೀವಶೂನ್ಯವಾಯಿತು!!



ನದೀದಡಕ್ಕೆ ಶ್ರೀರಾಮನು ತಲುಪಿದಾಗ ಬ್ರಹ್ಮನೂ ಸಮಸ್ತ ದೇವತೆಗಳೊಂದಿಗೆ ಅಲ್ಲಿಗೆ ಬಂದನು.ಜೊತೆಗೆ ಅಸಂಖ್ಯಾತ ವಿಮಾನಗಳು.

ಪಂಚಭೂತಗಳು ಮಂಗಳಮಯವಾಗಿದ್ದವು.

ಶ್ರೀರಾಮಚಂದ್ರನು ಸರಯೂನದಿಗೆ ಇಳಿಯುವಾಗ ಬ್ರಹ್ಮನು

 'ಹೇ ಮಹಾಬಾಹು,

ದೇವಸದೃಶರಾದ ಅನುಜರೊಂದಿಗೆ ನಿನ್ನ ಮೂಲಭೂತವಾದ,ನಿನಗೆ ಇಷ್ಟವಾದ ದೇಹವನ್ನು ಧರಿಸು.ನೀನು ಯಾವ ಸ್ವರೂಪದಲ್ಲಿ ಪ್ರವೇಶಿಸಲು ಇಷ್ಟ ಪಡುವೆಯೋ ಅದರಲ್ಲಿ ವೈಷ್ಣವ ತೇಜಸ್ಸಿನಲ್ಲಿ ಪ್ರವೇಶಿಸು'ಎಂದನು.

ಶ್ರೀರಾಮನು ಸಶರೀರನಾಗಿ ತನ್ನ ತಮ್ಮಂದಿರೊಡನೆ ವೈಷ್ಣವ ತೇಜಸ್ಸಿನಲ್ಲಿ ಪ್ರವೇಶಿಸಿದನು.

ದೇವತೆಗಳು ಅವನನ್ನು ಪೂಜಿಸಿ ಸ್ವಾಗತಿಸಿದರು. 

ಆಗ ಶ್ರೀರಾಮನು  ಬ್ರಹ್ಮನಲ್ಲಿ-ಪಿತಾಮಹ, ನನ್ನನ್ನು ಅನುಸರಿಸಿ ಬಂದಿರುವ ಈ ಜನಸಮುದಾಯಕ್ಕೆ  ಉತ್ತಮವಾದ ಲೋಕಗಳನ್ನು ಅನುಗ್ರಹಿಸು-ಎನ್ನಲು 

ಬ್ರಹ್ಮನು -ಪ್ರಭುವೇ ನಿನ್ನನ್ನು ಅನುಸರಿಸಿ ಬಂದ  ನಿನ್ನ ಎಲ್ಲಾ ಪ್ರಿಯರೂ 'ಸಾಂತಾನಿಕ' ಎಂಬ ಪುಣ್ಯ ಲೋಕಕ್ಕೆ ಹೋಗುತ್ತಾರೆ. ಉಳಿದ ಜೀವಿಗಳು- ಪ್ರಾಣಿಗಳು ಯಾವ ಯಾವ ದೇವತೆಗಳಿಂದ ಜನಿಸಿದ್ದುವೋ ಆಯಾ ದೇವತೆಗಳನ್ನು ಹೊಂದುತ್ತವೆ-ಎಂದನು. ಬ್ರಹ್ಮನುಹೀಗೆ ಹೇಳುತ್ತಿರಲು ಎಲ್ಲವೂ ಎಲ್ಲರೂ ಸರಯೂನದಿಯಲ್ಲಿ ಮುಳುಗಿ ತಮ್ಮ ಇಹರೂಪವನ್ನು ತೊರೆದು ದಿವ್ಯರೂಪಗಳಲ್ಲಿ ಸ್ವರ್ಗವನ್ನು ಪ್ರವೇಶಿಸಿದರು.

 ಹೌದು! "ಹೂವಿನೊಂದಿಗೆ ನಾರೂ ದೇವರನ್ನು ಏರಿತು!" ಎಂಬ ಹಿರಿಯರ ಮಾತು ಅಂದು ಸರಯೂನದಿಯಲ್ಲಿ ಸಾಕಾರಗೊಂಡಿತು!



 ಶ್ರೀರಾಮನೊಂದಿಗೆ ಶ್ರೀರಾಮನ ಎಲ್ಲರೂ ಎಲ್ಲವೂ!!


ಶ್ರೀರಾಮಾವತಾರಕ್ಕೆ ಮಂಗಳ!


ಮಂಗಳಂ ಕೋಸಲೇಂದ್ರಾಯ

ಮಹನೀಯ ಗುಣಾತ್ಮನೇ|

ಚಕ್ರವರ್ತಿ ತನೂಜಾಯ

ಸಾರ್ವಭೌಮಾಯ ಮಂಗಳಂ|| 


ಹರೇರಾಮ! ಹರೇರಾಮ!


ವಿಶ್ವ


ಶ್ರೀರಾಮನು ಪರಂಧಾಮ ವನ್ನು ಹೊಂದಿದ ನಂತರ ಅಯೋಧ್ಯೆಯು ಹಲವಾರು ವರ್ಷಗಳ ಕಾಲ ಜನರಹಿತವಾಗಿತ್ತು. ಋಷಭನು ರಾಜನಾದ ನಂತರ ಅಲ್ಲಿ ಜನರು ವಾಸಿಸ ತೊಡಗಿದರು.


Om ShriRamaya Namaha : 209


A Bird's-eye view of Ramayana : 209


The morning broke. Vasishta performed all the religious rites which was related to the great pilgrimage. ShreeRama went towards the river Sarayu by chanting Vedas . While going on the way ,Mahaavishnu, Laxmidevi on the right, the mother earth on the left side were illuminating with splendor ahead of ShreeRama . Artillery - arms - weapons in the form of men and Vedas in the form of a virtuous Brahmin followed ShreeRama. 

The chantings Pranava and Gayatri followed ShriRama . The Maharshis followed ShreeRama in the great journey . Every citizen of Ayodhya irrespective of their ages including the kids and the old people followed the path of Rama. As the saying ' Sarve Ramamanuvratham ' the entire crores of healthy creatures took part in the great pilgrimage of ShreeRama with happiness and enthusiasm. 

Who remained there if the people who had stood there to witness the great pilgrimage of ShreeRama ,followed him !? Ayodhya did not become the unpopulated land but it became hollow without lives !!


When ShreeRama reached the shore of the river, Brahma came there along with the gods. Along with them numerous planes. 

The five great elements were filled with auspiciousness.

When ShreeRamachandra was descending into the sea ,Brahma says " Mahaabaahu , wear the body you like which is fundamental along with your Younger brothers who are similitude of God. Enter in the form that you like to enter with the radiance of Vaishnava ". ShreeRama with his mortal body entered with the radiance of Vaishnava along with his brothers. 

The gods welcomed them by worshiping them. 

During the time ShreeRama says to Brahma - " Oh father, grant the finest worlds to this community of people who have come following me ". For which Brahma says - " Lord,  all the people who are dear to you and who have come following you will go to the sacred world called ' Saanthaanika'. The remaining creatures ,animals will possess the gods respectively whom they have taken birth from ". While Brahma was saying this, everything and everyone drowned in the river Sarayu and entered the heaven in the finest form by abandoning their earthly body .

Yes ! " Along with the flowers , the thread  too ascended the gods !" - These words of the veterans turned true in the river Sarayu then !



Along with ShreeRama, everyone and everything of ShreeRama !!


An auspicious end to ' ShreeRamavathaara' !


Mangalam Kosalendraya

mahaneeya gunaathmane !

Chakravarthi thanoojaaya

saarvabhaumaaya mangalam !!


Hare Rama ! Hare Rama !


After ShreeRama obtaining the paradise, Ayodhya had been a desert without the inhabitants for so many years. The people began to live there when Rushabha became the king. 


Kannada version of the story is written by- 

Shri U S Vishweshwara BhatVishweshwara Bhat. 

Translated by- 

Kum. Rashmi A Suvarna Rashmi A Suvarna. 

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....