ನಿತ್ಯ ದೇವರ ಸಂಕ್ಷಿಪ್ತ ಪೂಜೆ ಮಾಡುವ ಕ್ರಮ

source: whataspp forward message 

ನಿತ್ಯ ದೇವರ ಸಂಕ್ಷಿಪ್ತ ಪೂಜೆ ಮಾಡುವ ಕ್ರಮ


[ನಿತ್ಯ ದೇವರ ಪೂಜೆಯನ್ನು ಸಂಕ್ಷಿಪ್ತವಾಗಿ ಮಾಡ ಬಯಸುವವರು ಮೂವತ್ತು ನಿಮಿಷಗಳಲ್ಲಿ ದೇವರ ಪೂಜೆಯನ್ನು ಈ ಕೆಳಕಂಡಂತೆ ಮಾಡಬಹುದು]


ಶ್ರೀ ಗುರುಭ್ಯೋ ನಮಃ|| ಹರಿಃ ಓಂ ||  

ಓಂ, ಅಪವಿತ್ರಃ ಪವಿತ್ರೋವ ಸರ್ವಾವಸ್ಥಾಂ ಗತೋಪಿವಾ | ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||

[ದೇವರ ಸ್ಮರಣೆ ಮಾಡುತ್ತಾ ಶಿರಸ್ಸಿಗೆ ನೀರು ಪ್ರೊಕ್ಷಣೆ ಮಾಡಿಕೊಳ್ಳಬೇಕು] 


ದೀಪ ಪ್ರಜ್ಯಾಲಯಾಮ್:   

[ದೀಪವನ್ನು ಹಚ್ಚಿ ನಮಸ್ಕರಿಸುವುದು]  

ದೀಪಂ ಜ್ಯೋತಿ ಪರಂ ಬ್ರಹ್ಮಾ ದೀಪಂ ಸರ್ವ ತಮೋಪಹಂ| ಇಷ್ಟಾ ಕಾಮ್ಯಾರ್ಥ ಸಿದ್ಧ್ಯರ್ಥಂ ದೀಪ ಪ್ರಜ್ಯಾಲಯಾಮ್ಯಾಹಂ||


ಆಚಮನ  [ದ್ವಿರಾಚಮ್ಯ]

    

ಪ್ರಾರ್ಥನಂ:

ಓಂ, ಶ್ರೀ ಗಣೇಶಾಯ ನಮಃ || ಶ್ರೀ ಗುರುಭ್ಯೋ ನಮಃ || ಶ್ರೀ ಕುಲದೇವತಾಭ್ಯೋ ನಮಃ | ಇಷ್ಟದೇವತಾಭ್ಯೋ ನಮಃ |  ಗ್ರಾಮದೇವತಾಭ್ಯೋ ನಮಃ | ಸ್ಥಾನದೇವತಾಭ್ಯೋ ನಮಃ | ಆದಿತ್ಯಾದಿನವಗ್ರಹ ದೇವತಾಭ್ಯೋ ನಮಃ |     ಸರ್ವೇಭ್ಯೋ ದೇವೇಭ್ಯೋ ನಮಃ | ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮಃ | ಏತತ್ಕರ್ಮಪ್ರಧಾನದೇವತಾಭ್ಯೋ ನಮಃ |

(ಇಲ್ಲಿ ಕುಲದೇವತಾ, ಇಷ್ಟದೇವತಾ ಎಂದಕಡೆಯಲ್ಲಾ ನಿಮ್ಮ ಮನೆ ದೇವರ, ನಿಮ್ಮ ಇಷ್ಟ ದೇವರ ಹೆಸರನ್ನು ಹೇಳಬಹುದು)


ಘಂಟಾನಾದನಂ:  [ಘಂಟೆಗೆ ಹೂವು ಅಕ್ಷತೆ ಏರಿಸಿ ಗಂಟೆ ಬಾರಿಸುವುದು] 

ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ || ಕುರ್ವೇ ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ ||     ಇತಿ ಘಂಟಾನಾದಂ ಕೃತ್ವಾ ||


|| ನಿರ್ವಿಘ್ನಮಸ್ತು ||                 

ಶ್ರೀ ಮಹಾಗಣಪತಯೇ ನಮಃ

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ | ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ || 


ಭೂತೋಚ್ಚಾಟನಂ:

ಅಪಸರ್ಪಂತು ಯೇ ಭೂತಾ ಯೇ ಭೂತಾ ಭುವಿ ಸಂಸ್ಥಿತಾಃ || ಯೇ ಭೂತಾ ವಿಘ್ನಕರ್ತಾರಸ್ತೇ ನಶ್ಯಂತು ಶಿವಾಜ್ಞಯಾ || ಅಪಕ್ರಾಮಂತು ಭೂತಾದ್ಯಾಃ ಸರ್ವೇತೇ ಭೂಮಿ ಭಾರಕಾಃ || ಸರ್ವೇಷಾಮವಿರೋಧೇನ ಪೂಜಾಕರ್ಮ ಸಮಾರಭೇತ್ ||

            

ಆಸನಶುದ್ದಿಃ  

[ಶುಚಿಗೊಳಿಸಿದ ಪೀಠವನ್ನು ಮುಟ್ಟುವುದು, ಪೀಠದ ಮೇಲೆ ನಾಲ್ಕು ದಿಕ್ಕಿಗೂ ಹೂವು ಇಡುವುದು]  

ಪೃಥಿವೀತಿ ಮಂತ್ರಸ್ಯ ಮೇರುಪೃಷ್ಠ ಋಷಿಃ | ಕೂರ್ಮೋ ದೇವತಾ ಸುತಲಂ ಛಂದಃ ಆಸನೇ ವಿನಿಯೋಗಃ |                                                                                                                                              ಅನಂತಾಸನಾಯ ನಮಃ || ಕೂರ್ಮಾಸನಾಯ ನಮಃ ||                      ಪೃಥ್ವಿ ತ್ವಯಾ ಧೃತಾ ಲೋಕ ದೇವಿತ್ವಂ ವಿಷ್ಣುನಾ ಧೃತಾ | ತ್ವಂ ಚ ಧಾರಯ ಮಾಂ ದೇವಿ ಪವಿತ್ರಮ್ ಕುರುಚಾಸನಮ್ ||


ಆಚಮನ,  ಪ್ರಾಣಾಯಾಮ ಮಾಡುವುದು.


ಸಂಕಲ್ಪಃ      

[ ಕೈಯಲ್ಲಿ ಹೂವು ಅಕ್ಷತೆ ತೆಗೆದುಕೊಂಡು ಎಡಕೈಯಲ್ಲಿ ಹಾಕಿ ಬಲಗೈಯನ್ನು ಮುಚ್ಚಿ , ಬಲ ತೊಡೆಯ ಮೇಲೆ ಇಟ್ಟುಕೊಂಡು ಹೇಳಬೇಕು ] 

ಶುಭಾಭ್ಯಂ ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತವರಾಹ ಕಲ್ಪೇ  ವ್ಯೆವಸ್ವತ ಮನ್ವಂತರೇ  ಕಲಿಯುಗೇ ಪ್ರಥಮ ಪಾದೇ  ಜಂಬೂದ್ವೀಪೇ  ಭರತವರ್ಷೆ ಭರತ ಖಂಡೇ  ದಂಡಕಾರಣ್ಯೇ  ಗೋದಾವರ್ಯಾಃ  ದಕ್ಷಿಣೇ ತೀರೇ  ಶಾಲಿವಾಹನ ಶಕೆ  ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರ ಮಾನೇನ _ ಸಂವತ್ಸರೇ _ಆಯನೇ _ಋತೌ_ಮಾಸೇ _ಪಕ್ಷೇ _ತಿಥೌ_ವಾಸರೇ ಶುಭನಕ್ಷತ್ರೇ ಶುಭಯೋಗೆ ಶುಭಕರಣೆ ಏವಂಗುಣ  ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ,  ಮಮ ಉಪಾತ್ತ     ಸಮಸ್ತ ದುರಿತಕ್ಷಯದ್ವಾರ | ಶ್ರೀ ಪರಮೇಶ್ವರ ಪ್ರೀತ್ಯರ್ಥಂ | ಶ್ರೀ ಕುಲದೇವತಾ, ಇಷ್ಟದೇವತಾ ಪ್ರೀತ್ಯರ್ಥಂ |                  ಯಥಾಶಕ್ತಿ,  ಯಥಾ ಜ್ಞಾನ,  ಧ್ಯಾನ-ಆವಾಹನಾದಿ  ಷೋಡಶೋಪಚಾರ  ಪೂಜಾಂ  ಕರಿಷ್ಯೇ || 

[ ಎಡಗೈಯಲ್ಲಿ ಇರುವ ಹೂ ಅಕ್ಷತವನ್ನು ಬಲಗೈಗೆ ಹಾಕಿ ಎಡಗೈಯಿಂದ ಒಂದು ಸೌಟು ನೀರು ಹಾಕಿ ಹರಿವಾಣಕ್ಕೆ ಬಿಡಬೇಕು ]

ತದಂಗತ್ವೇನ  ಕಲಶಾರ್ಚನಂ, ಶಂಖಾರ್ಚನಂ ಚ ಕರಿಷ್ಯೇ |                                                                              [  "ಕರಿಷ್ಯೇ" ಎಂದಾಗಲೆಲ್ಲಾ ಬಲಹಸ್ತದಿಂದ ನಾಲ್ಕು ಬೆರಳ ತುದಿಯಿಂದ ಹರಿವಾಣಕ್ಕೆ ಒಂದು ಸೌಟು ನೀರು ಬಿಡಬೇಕು ]

  

ನಿರ್ವಿಘ್ನತಾ ಸಿಧ್ಯರ್ಥಂ ಶ್ರೀ ಮಹಾಗಣಪತಿ ಪ್ರಾರ್ಥನಂ ಚ ಕರಿಷ್ಯೇ ||   

ಓಂ, ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ | ಲಂಬೋದರಶ್ಚ ವಿಕಟೋ ವಿಘ್ನನಾಶೋ ಗಣಾಧಿಪಃ || ಧೂಮ್ರಕೇತುರ್ಗಣಾಧ್ಯಕ್ಷೋ ಭಾಲಚಂದ್ರೋ ಗಜಾನನಃ | ದ್ವಾದಶೈತಾನಿ ನಾಮಾನಿ ಯಃ ಪಠೇತ್ ಶೃಣುಯಾದಪಿ |  ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ | ಸಂಗ್ರಾಮೇ ಸಂಕಟೇ ಚೈವ ವಿಘ್ನಸ್ತಸ್ಯ ನ ಜಾಯತೇ ||


|| ಅಥ ಕಲಶ ಪೂಜಾಂ ||                             [ನೀರು ತುಂಬಿದ ಕಲಶವನ್ನು ದೇವರ ಬಲ/ಎದುರು/ನಮ್ಮ ಬಲ ಭಾಗದಲ್ಲಿ, ನೀರಿನಲ್ಲಿ ನೆಲದ ಮೇಲೆ ಚತುರಶ್ರ ಮಂಡಲಹಾಕಿ ಅದರ ಮೇಲಿಟ್ಟು, ಅದಕ್ಕೆ ಹೂವು,ದೂರ್ವೆ, ತುಲಸಿ ಕುಡಿ ಹಾಕಿ, ಅದರ ಮೇಲೆ (ಎರಡು) ಕೈ ಇಟ್ಟುಕೊಂಡು ಅಭಿಮಂತ್ರಿಸುವುದು]    


ಕಲಶಸ್ಯ ಮುಖೇ ವಿಷ್ಣುಃ | ಕಂಠೇ ರುದ್ರಃ ಸಮಾಶ್ರಿತಃ | ಮೂಲೇ ತತ್ರ ಸ್ಥಿತೋ ಬ್ರಹ್ಮಾ | ಮಧ್ಯೇ ಮಾತೃಗಣಾಃ ಸ್ಮೃತಾಃ ||     ಕುಕ್ಷೌ ತು ಸಾಗರಾಃ ಸರ್ವೇ ಸಪ್ತದ್ವೀಪಾ ವಸುಂಧರಾ | ಋಗ್ವೇದೋSಥ ಯಜುರ್ವೇದಃ ಸಾಮವೇದೋ-ಹ್ಯಥರ್ವಣಃ ||   

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

ಓಂ ಭೂರ್ಭುವಸ್ಸುವಃ ||  ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ | ಓಮಾಪೋಜ್ಯೋತಿ ರಸೋSಮೃತಂ ಬ್ರಹ್ಮ ಭೂರ್ಭುವಸ್ಸುವರೋಂ || 

ಕಲಶಾಧಿ ದೇವತಾಭ್ಯೋ ನಮಃ || ಗಂಧ ಪುಷ್ಪಾ ಅಕ್ಷತಾನ್ ಸಮರ್ಪಯಾಮಿ | ಇತಿ ಕಲಶಾರ್ಚನಂ ||     

(ಗಂಧ ಮುಟ್ಟಸಿದ ಹೂವು, ದೂರ್ವೆ, ತುಳಸಿ ಹಾಕಿ ನಮಸ್ಕರಿಸುವುದು)


|| ಅಥ ಶಂಖ ಪೂಜಾಂ ||                             [ಶಂಖವನ್ನು ಕೈಯಲ್ಲಿ ತೆಗೆದುಕೊಂಡು ಓಂಕಾರ ಹೇಳಿ, ನೀರು ತುಂಬಿಸಿ, ಗಂಧ ಪುಷ್ಪಾದಿಗಳನ್ನು ಅದಕ್ಕೆ ಏರಿಸಿ, ಪುನಃ ಅದರ ಸ್ಥಾನದಲ್ಲಿಡುವುದು] 


ಶಂಖಂ ಚಂದ್ರಾರ್ಕ ದೈವತ್ಯಂ ಮಧ್ಯೇ ವರುಣ ದೇವತಾಃ | ಪೃಷ್ಟೇ ಪ್ರಜಾಪತಿಸ್ತತ್ರ ಅಗ್ರೇ ಗಂಗಾ ಸರಸ್ವತಿ || ಪಾಂಚಜನ್ಯಾಯ ವಿದ್ಮಹೇ ಪದ್ಮ ಗರ್ಭಾಯ ಧೀಮಹಿ | ತನ್ನಃ ಶಂಖ ಪ್ರಚೋದಯಾತ್ ||                               

ಇತಿ ಶಂಖಾರ್ಚನಂ ||   

[ಶಂಖ ಜಲವನ್ನು ಸ್ವಲ್ಪ ಕಳಶಕ್ಕೆ ಹಾಕಿ, ತುಳಸೀ ಕುಡಿಯಿಂದ ತನಗೂ, ಉಪಕರಣಗಳಿಗೂ, ಚಮಕಿಸಿ ಉಳಿದುದನ್ನು ಬರಿದುಮಾಡಿ, ಪುನಃ ಓಂಕಾರದಿಂದ ಕಲಶದ ನೀರನ್ನು ತುಂಬಿ ಯಥಾಸ್ಥಾನದಲ್ಲಿ- ಮಂಟಪದಲ್ಲಿ ದೇವರ ಬಲಕ್ಕೆ ಚಿಕ್ಕ ಬಟ್ಟಲಲ್ಲಿ ಇಡುವದು]


|| ಅಥ ನಿರ್ವಿಘ್ನತಾ ಸಿಧ್ಯರ್ಥಂ ಶ್ರೀ ಮಹಾಗಣಪತಿ ಪೂಜಾಂ ಚ ಕರಿಷ್ಯೇ ||                                                                         [ ಹೂವು ಮತ್ತು ಅಕ್ಷತೆಯನ್ನು ಕೈಯಲ್ಲಿ ಹಿಡಿದುಕೊಂಡು, ನಿತ್ಯಪೂಜೆಯನ್ನು ನಿರ್ವಿಘ್ನದಿಂದ ನಡೆಸಿಕೊಡುವಂತೆ ಗಣಪತಿಯನ್ನು ಪ್ರಾರ್ಥಿಸಿಕೊಂಡು ನಂತರ ಷೋಡಶೋಪಚಾರ ಪೂಜೆಯನ್ನು ಮಾಡುವುದು. ನಿತ್ಯ ಪೂಜೆಯಲ್ಲಿ ಗಣಪತಿಯ ಸ್ಮರಣೆ ಮತ್ತು ಶ್ಲೋಕಗಳನ್ನು ಪಠಿಸಿದರೆ ಸಾಕು ]


ಓಂ ಶ್ರೀ ಮಹಾಗಣಪತಯೇ ನಮಃ || ಧ್ಯಾಯಾಮಿ || 

ಓಂ ಗಣಾನಾಂ” ತ್ವಾ ಗಣಪ’ತಿಂ ಹವಾಮಹೇ | ಕವಿಂ ಕ’ವೀನಾಮ್-ಉಪಮಶ್ರ’ವಸ್ತಮಂ | 

ಜ್ಯೇಷ್ಠರಾಜಂ ಬ್ರಹ್ಮ’ಣಾಂ ಬ್ರಹ್ಮಣಸ್ಪತ | ಆ ನಃ’ ಶೃಣ್ವನ್ನೊತಿಭಿ’ಸ್ಸೀದ ಸಾದ’ನಂ ||  

ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ |

ಶ್ರೀ ಮಹಾಗಣಪತಯೇ ನಮಃ | ವೇದೋಕ್ತ ಮಂತ್ರಪುಷ್ಪಂ ಸಮರ್ಪಯಾಮಿ || ಸಮಸ್ಕಾರಾನ್ ಸಮರ್ಪಯಾಮಿ ||

ಮನಸಾಭೀಷ್ಟ ಪ್ರಾರ್ಥನಾನ್ ಸಮರ್ಪಯಾಮಿ ||  [ ಕೈ ಮುಗಿದು ಪ್ರಾರ್ಥಿಸುವುದು]

ಅನಯಾ ಪೂಜಯಾ ಮಹಾಗಣಪತಿಃ  ಸುಪ್ರೀತಃ  ಸುಪ್ರಸನ್ನೋ  ವರದೋ ಭವತು | ಮಮ  ಇಷ್ಟಾರ್ಥ ಸಿದ್ಧಿರಸ್ತು  ||

[ ನಿತ್ಯ ಪೂಜೆಯಲ್ಲಿ ಗಣಪತಿಯ ಪೂಜೆ ಇಷ್ಟೇ ಸಾಕು ]

__________

|| ತತ್ವಾರ್ಥ ಧ್ಯಾನಂ ||  [ ಆತ್ಮಾರಾಧನೆ ]                                                                                                                      

ದೇಹೋ ದೇವಾಲಯಃ  ಪ್ರೋಕ್ತೋ   ಜೀವೋ ದೇವಃ ಸದಾಶಿವಃ | ತ್ಯಜೇದ್ ಅಜ್ಞಾನ ನಿರ್ಮಾಲ್ಯಂ   ಸೋಹಂ ಭಾವೇನ ಪೂಜಯೇತ್ ||   [ದೇಹವನ್ನು ದೇವಾಲಯವೆಂದೂ, ಜೀವನು ಪರಮಾತ್ಮನಾದ ಸದಾಶಿವನೆಂದು ಭಾವಿಸಿ ಅಜ್ಞಾನ ತೊರೆದು ಪೂಜಿಸಬೇಕು.]

   

|| ಅಥ ಧ್ಯಾನಂ ||             

ಶಾಂತಂ ಪದ್ಮಾಸನಸ್ಥಂ ಶಶಿಧರ-ಮಕುಟಂ ಪಂಚವಕ್ತ್ರಂ ತ್ರಿನೇತ್ರಂ | ಶೂಲಂ ವಜ್ರಂ ಚ ಖಡ್ಗಂ ಪರಶು-ಮಭಯದಂ ದಕ್ಷಭಾಗೇ ವಹಂತಂ | ನಾಗಂ ಪಾಶಂ ಚ ಘಂಟಾಂ ಪ್ರಳಯ-ಹುತವಹಂ ಸಾಂಕುಶಂ ವಾಮಭಾಗೇ | ನಾನಾಲಂಕಾರಯುಕ್ತಂ ಸ್ಪಟಿಕ-ಮಣಿ-ನಿಭಂ ಪಾರ್ವತೀಶಂ ನಮಾಮಿ || 

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ | ವಿಶ್ವಾಧಾರಂ ಗಗನ-ಸದೃಶಂ ಮೇಘವರ್ಣಂ ಶುಭಾಂಗಂ | 

ಲಕ್ಷೀಕಾಂತಂ ಕಮಲನಯನಂ ಯೋಗಿಹೃದ್ಧ್ಯಾನಗಮ್ಯಂ | ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ ||


ll ಷೋಡಶೋಪಚಾರ ಪೂಜಾಂ ||    

ಶ್ರೀ ಮಹಾಗಣಪತಯೇ ನಮಃ || 

ಶ್ರೀ ಕುಲದೇವತಾ, ಇಷ್ಟದೇವತಾಭ್ಯೋ ನಮಃ ||  ಸರ್ವೇಭ್ಯೋ ದೇವೇಭ್ಯೋ ನಮಃ ||

ಆವಾಹಯಾಮಿ | ಆಸನಂ ಸಮರ್ಪಯಾಮಿ |

ಪಾದಾರವಿಂದಯೋಃ  ಪಾದ್ಯಂ-ಪಾದ್ಯಂ ಸಮರ್ಪಯಾಮಿ |       

ಹಸ್ತಯೋಃ  ಅಘ್ರ್ಯಮಘ್ರ್ಯಂ ಸಮರ್ಪಯಾಮಿ | 

ಮುಖೇ ಆಚಮನೀಯಂ ಸಮರ್ಪಯಾಮಿ |

  

ಅಥ ಮಲಾಪಕರ್ಷಣ ಸ್ನಾನಂ ಕರಿಷ್ಯೇ ||  [ಸಾಲಿಗ್ರಾಮಾದಿ ಶಿಲೆಗಳನ್ನು, ದೇವರ ಮೂರ್ತಿಗಳನ್ನು ನೀರಿನಿಂದ ಅಭಿಷೇಕ ಮಾಡಬೇಕು]   

ಓಂ,  ಆಪೋಹಿಷ್ಠಾ ಮಯೋ ಭುವಃ | ತಾನ ಊರ್ಜೇ ದಧಾತನಃ | ಮಹೇರಣಾಯ ಚಕ್ಷಸೇ | ಯೋವಃ  ಶಿವತಮೋರಸಃ | ತಸ್ಯ ಭಾಜಯತೇ ಹನಃ | ಉಶತೀರಿವ ಮಾತರಃ | ತಸ್ಮಾ ಅರಂಗ ಮಾಮವಃ | ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯಥಾ ಚ ನಃ || 

ಮಲಾಪಕರ್ಷಣ ಸ್ನಾನಂ ಸಮರ್ಪಯಾಮಿ ||   ತದನಂತರೇ ಶುದ್ಧೋದಕ ಸ್ನಾನಂ ಸಮರ್ಪಯಾಮಿ ||                 

[ಸೂಚನೆ: ಸಮಯಾವಕಾಶವಿದ್ದಲ್ಲಿ -  ಶ್ರೀರುದ್ರ,  ಚಮಕ, ಪುರಷಸೂಕ್ತ, ನಾರಾಯಣಸೂಕ್ತ, ಆದಿತ್ಯ, ಗಣಪತಿಸೂಕ್ತಗಳನ್ನು ಪಠಿಸಿ ಅಭಿಷೇಕ ಮಾಡಬಹುದು. ಶುದ್ಧೋದಕ ಸ್ನಾನದ ನಂತರ ಸಾಲಿಗ್ರಾಮ, ದೇವರ ಮೂರ್ತಿಗಳನ್ನು ಒರೆಸುವಾಗ ಶ್ರೀಸೂಕ್ತವನ್ನು ಹೇಳವುದು ರೂಡಿಯಲ್ಲಿದೆ]


ಪಂಚಾಮೃತ ಸ್ನಾನಂ ಕರಿಷ್ಯೇ ||  [ವಿಶೇಷ ದಿನಗಳಲ್ಲಿ ಮಾತ್ರ ಪಂಚಾಮೃತ ಅಭಿಷೇಕ ]                                                    

ಅಥ ಪಂಚಾಮೃತ ಸ್ನಾನಂ ||  [ಸಾಮೂಹಿಕ]

ಕ್ಷೀರೋದಧಿ ಘೃತಂ ಚೈವ ಮಧುಶರ್ಕರ ಸಂಯುತಂ | ಫಲೋದಕಂ ಮಹಾದೇವ  ಪ್ರೋಕ್ಷಯಾಮಿ ಮಹೇಶ್ವರ ||

ಶ್ರೀ ಕುಲದೇವತಾ, ಇಷ್ಟದೇವತಾಭ್ಯೋ ನಮಃ | ಶ್ರೀ........ ದೇವತಾಭ್ಯೋ ನಮಃ | ಸರ್ವಾಭ್ಯೋ ದೇವತಾಭ್ಯೋ ನಮಃ | ಪಂಚಾಮೃತಸ್ನಾನಂ ಸಮರ್ಪಯಾಮಿ. [ಸೂಚನೆ: ಸಮಯಾವಕಾಶವಿದ್ದಲ್ಲಿ ಪಂಚಾಮೃತದಿಂದ ಪ್ರತ್ಯೇಕವಾಗಿ ಅಭಿಷೇಕ ಮಾಡಬಹುದು]

ಪಂಚಾಮೃತ ಸ್ನಾನಾನಂತರೇ ಶುದ್ಧೋದಕ ಸ್ನಾನಂ ಸಮರ್ಪಯಾಮಿ | ತದನಂತರೇ ಆಚಮನೀಯಂ ಸಮರ್ಪಯಾಮಿ || 


ಪೀಠೇ ಪ್ರತಿಷ್ಠಾಪ್ಯ ||   

[ಅಭಿಷೇಕ ಮಾಡಿದ ನಂತರ ಸಾಲಿಗ್ರಾಮ, ದೇವರ ಮೂರ್ತಿಗಳನ್ನು ಚೆನ್ನಾಗಿ ಶುಭ್ರಗೊಳಿಸಿ ಒರಸಿ, ಗಂಧ-ಅಕ್ಷತೆ ಹಚ್ಚಿ, ಪೂಜಾ ಸಂಪುಟ/ಮಂಟಪದಲ್ಲಿ ಇಟ್ಟು ಪೂಜೆಯನ್ನು ಮುಂದುವರೆಸಬೇಕು]                        

ವಸ್ತ್ರಯುಗ್ಮಂ ಸಮರ್ಪಯಾಮಿ ||

ಉಪವೀತಂ ಸಮರ್ಪಯಾಮಿ ||

ಆಭರಣಂ ಸಮರ್ಪಯಾಮಿ ||

ಗಂಧಾನ್,  ಅಕ್ಷತಾನ್ ಸಮರ್ಪಯಾಮಿ ||

ಪತ್ರಂ ಸಮರ್ಪಯಾಮಿ ||

ಪರಿಮಳ ಪುಷ್ಪಾಣಿ ಸಮರ್ಪಯಾಮಿ ||      

ಧೂಪಂ ಆಘ್ರಾಪಯಾಮಿ ||   

ದೀಪಂ ದರ್ಶಯಾಮಿ ||    

ದೀಪಾನಂತರೇ  ನೈವೇದ್ಯಂ  ನಿವೇದಯಾಮಿ ||


ಅಥ ನೈವೇದ್ಯಂ ||        

[ಚತುರಸ್ರ ಮಂಡಲ ಬರೆದು ಅದರಮೇಲೆ ಅನ್ನವನ್ನೂ ಇತರ ಉಪಸ್ಕರಗಳನ್ನೂ ನೈವೇದ್ಯಕ್ಕೆ ಇಡುವುದು. ತುಪ್ಪದಿಂದ ಅಭಿಗಾರ ಮಾಡಿ, ತುಲಸೀದಲ ಹಾಕಿ, ಗಾಯತ್ರೀ ಮಂತ್ರದಿಂದ ಪ್ರೋಕ್ಷಣೆ ಮಾಡುವುದು] 

" ಓಂ ಭೂರ್ಭುವಸ್ಸುವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ " 

ಸತ್ಯಂತ್-ವರ್ತೇನ ಪರಿಷಿಂಚಾಮಿ [ನೀರಿನಿಂದ ಸುತ್ತು ಕಟ್ಟಬೇಕು]  

|| ಶ್ರೀ ಅನ್ನಪೂರ್ಣೆಶ್ವರೈ ನಮಃ ||            

ಅಮೃತಂ ಅಸ್ತು | ಅಮೃತೋಪಸ್ತರಣಮಸಿ ಸ್ವಾಹಾ  || (ನೈವೇದ್ಯ ಪದಾರ್ಥಗಳ ಮೇಲೆ ಒಂದು ಉದ್ದರಣೆ ನೀರನ್ನು ಹಾಕಬೇಕು) 

ಓಂ ಪ್ರಾಣಾಯ ಸ್ವಾಹಾ |  

ಓಂ ಅಪಾನಾಯ ಸ್ವಾಹಾ |  

ಓಂ ವ್ಯಾನಾಯ ಸ್ವಾಹಾ |   

ಓಂ ಉದಾನಾಯ ಸ್ವಾಹಾ |   

ಓಂ ಸಮಾನಾಯ ಸ್ವಾಹಾ |  

ಓಂ ಬ್ರಹ್ಮಣೇ ಸ್ವಾಹಾ |                      

[ನೈವೇದ್ಯ ಪದಾರ್ಥಗಳನ್ನಿಟ್ಟಿರುವ ದಿಕ್ಕಿನಿಂದ ದೇವರಿರುವ ದಿಕ್ಕಿಗೆ ಕೈ ತೋರಿಸುತ್ತಾ, ದೇವರು ನೈವೇದ್ಯವನ್ನು ಸ್ವೀಕರಿಸಿದಂತೆ ಗ್ರಹಿಸಬೇಕು]


|| ಶ್ರೀ ಕುಲದೇವತಾ, ಇಷ್ಟದೇವತಾಭ್ಯೋ ನಮಃ ||  ಸರ್ವೇಭ್ಯೋ ದೇವೇಭ್ಯೋ ನಮಃ || 

ಭಕ್ಷ್ಯ ಭೋಜ್ಯ ಸಹಿತ ಮಹಾನೇವೇದ್ಯಂ ನಿವೇದಯಾಮಿ ||  

ನಾರಿಕೇಲಾದಿ ನಾನಾವಿಧ ಫಲಂ ನಿವೇದಯಾಮಿ |

ಮಧ್ಯೇ-ಮಧ್ಯೇ ಅಮೃತ ಪಾನೀಯಂ ಸಮರ್ಪಯಾಮಿ | ಅಮೃತೋಪಸ್ತರಣಮಸಿ ಸ್ವಾಹಾ || ಇತಿ ಕಿಂಚಜ್ಜಲ ಸಮರ್ಪಯೇತ್ |  ಉತ್ತರಾಪೋಷನಂ - ಹಸ್ತ ಪ್ರಕ್ಷಾಲನಂ - ಮುಖ ಪ್ರಕ್ಷಾಲನಂ - ಪಾದ ಪ್ರಕ್ಷಾಲನಂ - ಪುನರಾಚಮನಂ  ಸಮರ್ಪಯಾಮಿ ||

[ಪ್ರತಿ(5) ಸಾರಿಯೂ ಉದ್ಧರಣೆಯಿಂದ ನೀರನ್ನು ತೆಗೆದು ಅಘ್ರ್ಯಪಾತ್ರೆಯಲ್ಲಿ ಬಿಡಬೇಕು]


ತಾಂಬೂಲಂ ಸಮರ್ಪಯಾಮಿ ||   

ದಕ್ಷಿಣಾಂ ಸಮರ್ಪಯಾಮಿ || 

ಮಂಗಲ-ಆರ್ತಿಕ್ಯ ದೀಪಂ ದರ್ಶಯಾಮಿ ||

[ಘಂಟೆ, ಜಾಗಟೆ, ಶಂಖ ಇತ್ಯಾದಿ ಮಂಗಳವಾದ್ಯಗಳನ್ನು ಬಾರಿಸುತ್ತಾ ತುಪ್ಪದ ಬತ್ತಿ ಅಥವಾ ಕರ್ಪೂರವನ್ನು ಹಚ್ಚಿ, ಹಲಗಾರತಿಯ / ತಟ್ಟೆಯಲ್ಲಿ ಹೂವು, ಪತ್ರೆ, ಅಕ್ಷತೆಯನ್ನು ಇಟ್ಟುಕೊಂಡು ಆರತಿ ಮಾಡಬೇಕು. ನಂತರ ಗಂಟೆಯನ್ನು ಕೆಳಗಿಟ್ಟು, ಅದಕ್ಕೆ ಹೂವು ಅಕ್ಷತೆ ಹಾಕಿ, ಆರತಿ ಎತ್ತಿ, ಒಂದು ಉದ್ಧರಣೆ ನೀರನ್ನು ಅಘ್ರ್ಯಪಾತ್ರೆಯಲ್ಲಿ ವಿಸರ್ಜಿಸುವುದು. ಹಲಗಾರತಿ/ತಟ್ಟೆಯಲ್ಲಿರುವ ಪತ್ರ, ಪುಷ್ಪವನ್ನು ಉರಿಯುತ್ತಿರುವ ಆರತಿಗೆ ತೋರಿಸಿ, ಅದನ್ನು ದೇವರಿಗೆ ಸಮರ್ಪಿಸಬೇಕು]

ಮಂಗಲ-ಆರ್ತಿಕ್ಯ ದೀಪಾನಂತರೇ  ಆಚಮನೀಯಂ ಸಮರ್ಪಯಾಮಿ ||  [ಒಂದು ಉದ್ಧರಣೆ ನೀರನ್ನು ಅಘ್ರ್ಯ ಪಾತ್ರೆಯಲ್ಲಿ ಬಿಡುವುದು]


ಅಥ ಮಂತ್ರ ಪುಷ್ಪಂII     

[ಕೈಯಲ್ಲಿ ಪುಷ್ಪವನ್ನು ಹಿಡಿದುಕೊಂಡು] 

ಓಂ ಗಣಾನಾಮ್ ತ್ವಾ ಗಣಪತಿಗ್‍ಮ್ ಹವಾಮಹೇ ಕವಿಂ ಕವೀನಾಮ್ ಉಪಮಶ್ರವಸ್ತವಮ್ | ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆ ನಃ ಶೃಣ್ವನ್ನೂತಿಭಿಸ್ಸೀದ ಸಾದನಮ್ ||

ಶ್ರೀ ವಿಘ್ನೇಶ್ವರಾಯ ನಮ:

ಪ್ರಣೋದೇವೀ ಸರಸ್ವತೀ | ವಾಜೇಭಿರ್ ವಾಜಿನೀವತೀ | ಧೀನಾಮವಿತ್ರ್ಯವತು ||

ಓಂ ರಾ॒ಜಾ॒ಧಿ॒ರಾ॒ಜಾಯ ಪ್ರಸಹ್ಯ ಸಾ॒ಹಿನೇ.........   ..........

(ವಿಶೇಷ ದಿನದ ಪೂಜೆಯಲ್ಲಿ

ಯೋஉಪಾಂ ಪುಷ್ಪಂ ವೇದ ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ | ಚಂದ್ರಮಾ ವಾ ಅಪಾಂ ಪುಷ್ಪಮ್....)

  

ಶ್ರೀ ಗಣಪತ್ಯಂಬಿಕಾ ಶಿವವಿಷ್ಣುಆದಿತ್ಯಾದಿದೇವತಾಭ್ಯೋ ನಮಃ ||  ವೇದೋಕ್ತ ಮಂತ್ರಪುಷ್ಪಂ ಸಮರ್ಪಯಾಮಿ ||

ಯಥಾಶಕ್ತಿ  ಪ್ರದಕ್ಷಿಣ,  ಸಮಸ್ಕಾರಾನ್ ಸಮರ್ಪಯಾಮಿ ||  

ಯಾನಿ-ಕಾನಿ ಚ ಪಾಪಾನಿ ಜನ್ಮಾಂತರ  ಕೃತಾನಿ ಚ | ತಾನಿ-ತಾನಿ ವಿನಶ್ಯಂತಿ ಪ್ರದಕ್ಷಿಣಾತ್ ಪದೇ-ಪದೇ |           ಪಾಪೋಹಂ ಪಾಪ ಕರ್ಮಾಹಂ ಪಾಪಾತ್ಮಾ ಪಾಪ ಸಂಭವ | ತ್ರಾಹಿ-ಮಾಂ ಕೃಪಾಯ ದೇವ ಶರಣಾಗತ ವತ್ಸಲ |      ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ | ತಸ್ಮಾತ್-ಕಾರುಣ್ಯ ಭಾವೇನ ರಕ್ಷ-ರಕ್ಷ ಮಹೇಶ್ವರಃ |                     

[ಹೀಗೆ ಹೇಳುತ್ತಾ 3  ಪ್ರದಕ್ಷಿಣೆ ಮಾಡಿ ಸಾಷ್ಟಾಂಗ ನಮಸ್ಕಾರ ಮಾಡಬೇಕು. ಮತ್ತೆ ನೀವು ಕುಳಿತಿರುವ ಜಾಗದಲ್ಲಿಯೇ ಕುಳಿತುಕೊಳ್ಳಬೇಕು]


|| ಪ್ರಸನ್ನಾರ್ಘ್ಯಂ ಕರಿಷ್ಯೆ ||

ಓಂ ಏಕದಂತಾಯ ವಿದ್ಮಹೇ | ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ ||                ಓಂ ತತ್ಪುರುಷಾಯ ವಿದ್ಮಹೇ | ಮಹಾದೇವಾಯ ಧೀಮಹಿ | ತನ್ನೋ ರುದ್ರಃ ಪ್ರಚೋದಯಾತ್ ||              ಓಂ ಕಾತ್ಯಾಯನಾಯ ವಿದ್ಮಹೇ | ಕನ್ಯಾಕುಮಾರಿ ಧೀಮಹಿ | ತನ್ನೋ ದುರ್ಗೀ ಪ್ರಚೋದಯಾತ್ ||

ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ| ತನ್ನೋ ವಿಷ್ಣುಃ ಪ್ರಚೋದಯಾತ್ ||            ಓಂ ಮಹಾಲಕ್ಷ್ಮೈಚ ವಿದ್ಮಹೇ ವಿಷ್ಣುಪತ್ನೀಚ ಧೀಮಹಿ | ತನ್ನೋ ಲಕ್ಷ್ಮೀ ಪ್ರಚೋದಯಾತ್ ||

ಓಂ ಭಾಸ್ಕರಾಯ ವಿದ್ಮಹೇ | ಮಹಾದ್ಯುತಿಕಾರಾಯ ಧೀಮಹಿ | ತನ್ನೋ ಆದಿತ್ಯಃ ಪ್ರಚೋದಯಾತ್ ||

ಇತಿ ಪ್ರಸನ್ನಾರ್ಘ್ಯಂ ಸಮರ್ಪಯಾಮಿ || 

(ಪ್ರಸನ್ನಾರ್ಘ್ಯವನ್ನು ಕೊಡುವಾಗ ತುಲಸಿ, ದೂರ್ವೆ, ಹೂ, ಗಂಧ ಮತ್ತು ಅಕ್ಷತೆ ಗಳನ್ನು ಅಂಗೈಯಲ್ಲಿ ಇಟ್ಟುಕೊಂಡು , ಅಂಗೈ ಮೇಲೆ ನೀರು ಹಾಕಿ ಬೆರಳ ತುದಿಗಳಿಂದ ನೀರು ಬಿಡಬೇಕು. ಐದೂ ಅರ್ಘ್ಯಗಳು ಆದಮೇಲೆ ತುಲಸಿ, ದೂರ್ವೆ, ಹೂ ಮತ್ತು ಅಕ್ಷತೆಗಳನ್ನು ಮಂಟಪದಲ್ಲಿ ದೇವರ ಪಾದತಲಕ್ಕೆ ಇಡಬೇಕು) 


ಸ್ವಸ್ತಿವಾಚನಂ :

ಸ್ವಸ್ತಿಪ್ರಜಾಭ್ಯ: ಪರಿಪಾಲಯಂತಾಂ | ನ್ಯಾಯೇನ-ಮಾರ್ಗೇಣ ಮಹೀಂ ಮಹೀಶಃ |

ಗೋಬ್ರಾಹ್ಮಣೇಭ್ಯ: ಶುಭಮಸ್ತು ನಿತ್ಯಂ | ಲೋಕಾಃ ಸಮಸ್ತಾಃ ಸುಖಿನೋ ಭವಂತು ||

ಸಮಸ್ತ ಸನ್ಮಂಗಳಾನಿ ಭವಂತು || 


|| ಸಮರ್ಪಣಂ ||                                                                                                                                      ಯಸ್ಯಸ್ಮೃತ್ಯಾ ಚ ನಾಮೋಕ್ತ್ಯಾ ತಪೋ ಪೂಜಾ ಕ್ರಿಯಾದಿಷು| ನ್ಯೂನಂ ಸಂಪುರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ || ಮಂತ್ರಹೀನಂ ಕ್ರೀಯಾ ಹೀನಂ ಭಕ್ತಿ ಹೀನಂ ಜನಾರ್ಧನ | ಯತ್-ಕೃತಂತು ಮಯಾ ದೇವ ಪರಿಪೂರ್ಣಂ ತದಸ್ತು ಮೇ ||  ಅನಯಾ ಪೂಜಯಾ ಶ್ರೀ ಕುಲದೇವತಾ, ಇಷ್ಟದೇವತಾ ಸುಪ್ರೀತಃ  ಸುಪ್ರಸನ್ನೋ  ವರದೋ ಭವತು | ಮಮ  ಇಷ್ಟಾರ್ಥ ಸಿದ್ಧಿರಸ್ತು ||

        

ಪೂಜಾಕಾಲೇ ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಧ್ಯಾನ ನಿಯಮ ನ್ಯೂನಾತಿರಿಕ್ತ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಂತ್ರ ಜಪಂ ಕರಿಷ್ಯೇ |


ಓಂ ಅಚ್ಯುತಾಯ ನಮಃ | ಅನಂತಾಯ ನಮಃ | ಗೋವಿಂದಾಯ ನಮಃ [3 ಬಾರಿ] 



ಆಚಮನ [ದ್ವಿರಾಚಮ್ಯ]

                                                                                                                                           

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾವಾ ಪ್ರಕೃತೇ ಸ್ವಭಾವಾತ್ | 

ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಯೇತಿ ಸಮರ್ಪಯಾಮಿ ||    

|| ತತ್ಸತ್ ಬ್ರಹ್ಮಾರ್ಪಣಮಸ್ತು ||


ತಿಲಕ ಧಾರಣಂ :  [ತಾನು ಕುಳಿತು ಪೂಜೆ ಮಾಡಿದ ಆಸನದ ಕೆಳಗಿನ ಭೂಮಿಯನ್ನು ಪ್ರೋಕ್ಷಿಸಿ, ಬೆರಳಿನಿಂದ ಸ್ಪರ್ಶಿಸುತ್ತಾ ತಿಲಕಧಾರಣೆ ಮಾಡಬೇಕು] 


|| ತೀರ್ಥ ಸ್ವೀಕಾರ || 

ಅಕಾಲಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ | ದೇವಪಾದೋದಕಂ ತೀರ್ಥಂ ಜಠರೇ ಧಾರಯಾಮ್ಯಹಂ ||

-ಈ ಮಂತ್ರ ಹೇಳಿ ತೀರ್ಥ ಸ್ವೀಕಾರ ಮಾಡುವುದು.  

ಪ್ರಸಾದಂ ಗೃಹೀತ್ವಾ -ಪ್ರಸಾದ ಸ್ವೀಕರಿಸುವುದು.

(ಸಂಗ್ರಹಿತ)

ರಾಮಾಯಣ ಹಕ್ಕಿನೋಟದ ಇಣುಕುನೋಟ 2 A peep into A Bird's-eye view of Ramayana 2

 ಶ್ರೀರಾಮಾಯನಮಃ

ಶ್ರೀರಾಮಾಯಣ ಹಕ್ಕಿನೋಟ

"ರಾಮಾಯಣ ಹಕ್ಕಿನೋಟ"ದಲ್ಲೊಂದು ಇಣುಕುನೋಟ


•ರಾಮನು ಅಶ್ವಮೇಧ ಯಾಗ ನಡೆಸಿದಾಗ ಕುಶಲವರೊಂದಿಗಾಗಲೀ ಬೇರಾರೊಂದಿಗಾಗಲೀ ಯುದ್ಧ ನಡೆದಿಲ್ಲ 

•ಯುದ್ಧ ಬಿಡಿ ಒಂದು ಹನಿ ನೆತ್ತರೂ ಹರಿದಿಲ್ಲವೋ ಎಂಬಂತೆ ಇಡೀ ಭೂಮಂಡಲವೇ ಸ್ವಯಂಪ್ರೇರಿತವಾಗಿ ಯಾಗದಲ್ಲಿ ಪಾಲ್ಗೊಂಡಿತ್ತು.

•ಬಾಯ್ಬಿರಿದ ಭೂಮಿಯೊಳಗೆ ಸೀತೆ ಇಳಿದದ್ದಲ್ಲ! ಸಾಕ್ಷಾತ್ ಭೂಮಾತೆಯೇ ಸಿಂಹಾಸನ ಸಹಿತ ಬಂದು ತನ್ನೊಡನೆ ರಸಾತಳಕ್ಕೆ ಸೀತೆಯನ್ನು ಕೊಂಡೊಯ್ದಳು.

•ಶಂಬೂಕನನ್ನು ಶೂದ್ರನೆನ್ನುವ ಕಾರಣಕ್ಕೆ ರಾಮನು ಅವನನ್ನು ವಧಿಸಿದುದಲ್ಲ.ಅವನ ಘೋರ ತಪಸ್ಸಿಗೆ ಮೆಚ್ಚುಗೆಯನ್ನು ಸೂಸುತ್ತಾನೆ.ಆದರೆ ತಪಸ್ಸಿನ ಮೂಲಕ ಸ್ವರ್ಗಕ್ಕೆ ಲಗ್ಗೆ ಹಾಕಿ ಸ್ವರ್ಗವನ್ನಾಳಬೇಕು ಎಂದು ಅವನು ಹೇಳಿದ ಮರುಕ್ಷಣದಲ್ಲಿ  ರಾಮನು ಅವನ ತಲೆ ಕತ್ತರಿಸುತ್ತಾನೆ.

•ಅಹಿರಾವಣನೆಂಬ ಪಾತ್ರವಾಗಲೀ ಅದಕ್ಕೆ ಸಂಬಂಧಿಸಿದ ಘಟನೆ/ಕತೆಯಾಗಲೀ ರಾಮಾಯಣದಲ್ಲಿಲ್ಲ!

•ಇಂದ್ರಜಿತುವನ್ನು ವಧಿಸಬೇಕಾದರೆ ಹದಿನಾಲ್ಕು ವರ್ಷಗಳ ಬ್ರಹ್ಮಚರ್ಯ, ನಿದ್ದೆಯಿಲ್ಲದ ಜಾಗರಣೆ ಮಾಡಿದವನಾಗಬೇಕೆಂಬ(ಲಕ್ಷ್ಮಣ)ವಿಚಾರವೂ ಇಲ್ಲಿಲ್ಲ!

•ವನವಾಸದಿಂದ ರಾಮನು ಹೇಳಿದ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಭರತನು ಅಗ್ನಿಪ್ರವೇಶಕ್ಕೆ ಸಿದ್ಧತೆ ನಡೆಸಿದ್ದ ನೆಂಬ ವಿಚಾರವೂ ಇಲ್ಲಿಲ್ಲ!ರಾಮನು ಸಮಯಕ್ಕೆ ಸರಿಯಾಗಿ,ಅದೂ ಭರತನು ಗಡಿಬಿಡಿ ಮಾಡಬಾರದೆಂಬುದನ್ನು ಹೇಳಲು ಸಾಕಷ್ಟು ಮುಂಚಿತವಾಗಿ ಹನುಮನ ಮೂಲಕ ತಾನು ಬರುತ್ತಿರುವ ಸಂದೇಶವನ್ನು ಕಳಿಸುತ್ತಾನೆ.

•ಪರಶುರಾಮನು ಭೂಮಿಯ ಮೇಲಿನ ಎಲ್ಲಾ ಕ್ಷತ್ರಿಯರನ್ನು ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಹಗೆತನದಿಂದ ಕೊಂದಿದ್ದ ಎಂಬ ವಿಷಯ ಇಲ್ಲಿಲ್ಲ. ದಶರಥನಲ್ಲದೆ ಬೇರೆ ಸನ್ನಡತೆಯ ಕ್ಷತ್ರಿಯರಾಜರು ಆಗ ಇದ್ದರು.

ಅಂತಹವರಿಗೆ ಅವನು ಶತ್ರುವಾಗಿರಲಿಲ್ಲವೆನಿಸುತ್ತದೆ.

•ರಾಮನಲ್ಲಿ ಅಗಸ್ತ್ಯರಿತ್ತ ದಿವ್ಯ ಧನುಸ್ಸು,ಇಂದ್ರನು ಮಾತಲಿಯ ಮೂಲಕ ಕಳಿಸಿದ ಧನುಸ್ಸು ಮತ್ತಿತರ ಶಸ್ತ್ರಾಸ್ತ್ರಗಳ ಪ್ರಸ್ತಾಪವಿದೆಯೇ ಹೊರತು 'ಕೋದಂಡ' ರಾಮನ ಬಿಲ್ಲು ಎಂಬ ಸಂಗತಿ ಕಂಡುಬರುವುದಿಲ್ಲ!

•ಕೋದಂಡರಾಮನೆಂಬ ಹೆಸರಿನ ಉಲ್ಲೇಖವಿಲ್ಲ!

•ಹನುಮನ ನಿರಾಯುಧ.ಗದೆ ಅವನ ಆಯುಧವಲ್ಲ.ಕೈಗೆ ಸಿಕ್ಕಿದ ವಸ್ತುವನ್ನೇ ಆಯುಧವನ್ನಾಗಿಸಿ (ಕೆಲವೊಮ್ಮೆ ಶತ್ರುಗಳ ಆಯುಧವನ್ನೇ ಸೆಳೆದು ಅದರಿಂದ ಅವರನ್ನು ಕೊಂದಿರುವುದು)ಹನುಮನೂ ಸೇರಿದಂತೆ  ಎಲ್ಲಾ ಕಪಿವೀರರು ಯುದ್ಧ ಮಾಡಿದ್ದರು.

•ಅಹಲ್ಯೆ ಶಿಲಾತಪಸ್ವಿನಿಯಲ್ಲ.

 ದೇಹವಿಡೀ ಭಸ್ಮಧಾರಣೆ ಮಾಡಿಕೊಂಡಿದ್ದ ವಿರಾಗಿಣಿ!ತಪಸ್ವಿನಿ!!

•ಲಕ್ಷ್ಮಣನು  ಶೂರ್ಪನಖಿಯ ಕಿವಿ ಮೂಗುಗಳನ್ನು ಮಾತ್ರ ಕತ್ತರಿಸಿದ್ದು!

•ಸೀತಾರಾಮರು ಮದುವೆಯಾಗಿ ಹನ್ನೆರಡು ವರ್ಷಗಳ ಕಾಲ ಅಯೋಧ್ಯಯಲ್ಲಿ,ಪೂರ್ತಿ ಹನ್ನೆರಡು ವರ್ಷಗಳ ಕಾಲ ವನವಾಸದಲ್ಲಿ ಜೊತೆಯಾಗಿ ಸುಖವಾಗಿ ಕಾಲ ಕಳೆದಿದ್ದರು.

ಸೀತಾ ಪರಿತ್ಯಾಗದ ಬಳಿಕ ಸೀತೆ ಹನ್ನೆರಡು ವರ್ಷಗಳ ಕಾಲ ವಾಲ್ಮೀಕಿ ಆಶ್ರಮದಲ್ಲಿದ್ದಳು.

•ಸುಮಾರು ಹದಿನಾಲ್ಕು ತಿಂಗಳುಗಳ ಕಾಲ ರಾವಣನ ಸೆರೆಯಲ್ಲಿದ್ದು ಸೀತೆ ರಾಮನಿಂದ ದೂರವಾಗಿದ್ದರೆ,ಹನ್ನೆರಡು ವರ್ಷಗಳ ಕಾಲ ವಾಲ್ಮೀಕಿ ಆಶ್ರಮವಾಸದಲ್ಲಿ ರಾಮನಿಂದ ಬೇರೆಯಾಗಿದ್ದಳು.

•ಅಗಸನೊಬ್ಬನ ಮಾತಿನಿಂದಾಗಿ ರಾಮ ಸೀತೆಯನ್ನು ತ್ಯಜಿಸಿದ್ದಲ್ಲ! ಊರಿಗೆ ಊರೇ ಎನ್ನವಂತೆ ಸೀತೆಯ ಚಾರಿತ್ರ್ಯದ ಕುರಿತು ಚರ್ಚೆ,ಗುಸುಗುಸು ನಡೆದಿತ್ತು.

•ಯಾರನ್ನಾದರೂ ಎದುರಿಸುವ ಸಂದರ್ಭದಲ್ಲಿ ವಾಲಿಗೆ ಎದುರಾಳಿಗಳ ಅರ್ಧ ಬಲ ಸಿಗುತ್ತಿತ್ತು ಎನ್ನುವ ವಿಷಯವೂ ರಾಮಾಯಣದಲ್ಲಿಲ್ಲ.

•ರಾಮಾಯಣದ ಅತಿ ಚಿಕ್ಕ ಸಂಕ್ಷಿಪ್ತ ಕತೆ ಬರುವುದು ಕಾಲಪುರುಷನ ಬಾಯಲ್ಲಿ!

•ಸುಂದರಕಾಂಡದಲ್ಲಿ ಎರಡು ಬಾರಿ ಈ ಹಿಂದಿನ ಕತೆಯ ಹಿನ್ನೋಟ ಕಂಡು ಬರುತ್ತದೆ.

•ಭರಧ್ವಾಜರ ಆಶ್ರಮಕ್ಕೆ ಲಂಕೆಯಿಂದ ಹಿಂದಿರುಗುವಾಗ ಬಂದ ಸಂದರ್ಭದಲ್ಲೂ ಎರಡುಸಲ ಹಿನ್ನೋಟ ಕಂಡುಬರುತ್ತದೆ.

•ಅಲ್ಲಲ್ಲಿ ರಾಮಾಯಣ ಕತೆಯ ಸಿಂಹಾವಲೋಕನ ಕಂಡುಬರುವುದು ವಾಲ್ಮೀಕಿಯ ಕಥನ ಶೈಲಿಯ ವಿಶೇಷತೆ.ರಾಮಾಯಣ ಪಾರಾಯಣದ ಸಂದರ್ಭದಲ್ಲಿ ಕತೆಯನ್ನು ಜೋಡಿಸಿಕೊಂಡು ನೆನಪಿಸಲು ಈ ಶೈಲಿ ಸಹಕಾರಿ.ಇದು ಅತ್ಯುತ್ತಮ ಕಲಿಕಾ ವಿಧಾನ,

ನೆನಪಲ್ಲಿಟ್ಟುಕೊಳ್ಳಲು ಸಹಾಯಕವಾಗುವ ಅಂಶವೂ ಹೌದು.

•ರಾಮ ಸ್ವಸಾಮರ್ಥ್ಯದಲ್ಲಿ ನಂಬಿಕೆಯಿಟ್ಟ ಆತ್ಮವಿಶ್ವಾಸಿ.

•ಸೀತೆ ಹೇಗೆ ಪತಿವ್ರತೆಯೋ ರಾಮ ಹಾಗೇ ಪತ್ನೀವ್ರತ.

ಸಿತೆಯಿಲ್ಲದ ಹತ್ತುಸಾವಿರ ವರ್ಷಗಳ ಕಾಲದ ಅವನ ವಿಧುರ ಬದುಕು ಪರಮಪಾವನ!


ವಿಶ್ವ



: A peeping glance in A Bird's-eye view of Ramayana. 


• When Rama performed the sacrificial ritual 'Ashwamedha ' ,the battle did not take place with neither KushaLava nor with anyone else. 

• Forget about the war, the entire earth took part in the sacrificial ritual voluntarily in such a way that not even a drop of blood was shed.

• Seetha has not descended into the earth which was wide open ! The mother earth herself came up in the royal throne and took Seetha along with her into the subterranean region. 

• Rama has not slayed Shambooka since he is a Shoodra. Rama appreciates him for his ardent penance. But the very next moment, when Shambooka said that he would rule the heaven by conquering through his penance, Rama cut his head off .

• Either the character called ' Ahiraavana' or any incident or story related to that is not there in the Ramayana !

• The concept of following celibacy for 14 years and staying awake the entire night to slay Indrajith, is too not found here !

• The incident that Bharatha had made arrangements for the ordeal by fire since Rama had not arrived on time from the exile is not here ! In fact, Rama at the right time, sends the message of his arrival prior through Hanuman so that Bharatha should not hustle .

• The concept of Parashurama slaying all the Kshatriyas who were there on the earth by circumambulating the earth for 21 times by vengeance, is not here. There were also other virtuous Kshatriya kings other than Dasharatha. 

      It seems he was not foe to such 

      people. 

• There is a reference of the finest bow which was given to Rama by Agasthya, the bow which was sent by Indra through Maathali and other artilleries but apart from these the concept of the bow of ' Kodanda' Rama doesn't appear here !

• The name ' KodandaRaama' has not mentioned here !

• Hanuman is a.          . He doesn't possess any weapon. The club is not his weapon. Including Hanuman, all the other monkey warriors had fought by using the things whatever they got in their hands as their weapons ( sometimes they had killed the enemies with their own weapons by snatching from them ).

• Ahalya is not a stone ascetic .

      She is the one who is not involved in  

     the earthly life  who had smeared 

     herself with ashes ! An ascetic woman !!

• Lakshmana had cut off only the ears and the nose of Shoorpanakha !

• After being married to each other, SeethaRama had spent 12 years in Ayodhya and complete 12 years in the exile together happily. After the abandonment of Seetha ,she resided in the hermitage of Valmiki Maharshi for 12 years.

• If Seetha was separated from Rama for almost 14 months being imprisoned by Ravana , she got separated from Rama for 12 years being the resident of Valmiki's hermitage. 

• Rama did not abandoned Seetha hearing the words of only a Washerman ! The entire village spoke and whispered about the chastity of Seetha.

• The concept of Vaali gaining the partial force from his opponent while confronting anyone is not mentioned here.

• The shortest and brief story of the Ramayana is narrated by Kaalapurusha !

• The flashback of the previous story appears twice in Sundara Kaanda. 

• The flashback appears twice even during the time returning to the hermitage of Bharadhwaja from Lanka. 

• The appearance of flashback of the Ramayana here and there is the specialty of the style of Valmiki's story. This style helps to remember by connecting the story while studying the Ramayana. This is the best way of learning while will help to remember points. 

• Rama is a self - confident who believed in self - caliber or efficiency. 

• How Seetha is a chaste woman in the same way Rama too is a chaste man. 

      His widower life of 10,000 years 

      without Seetha is supremely sacred .

ರಾಮಾಯಣ ಹಕ್ಕಿನೋಟದ ಇಣುಕುನೋಟ 1 A peep into A Bird's-eye view of Ramayana 1

 ಶ್ರೀರಾಮಾಯನಮಃ

ಶ್ರೀರಾಮಾಯಣ ಹಕ್ಕಿನೋಟ

ರಾಮಾಯಣ ಹಕ್ಕಿನೋಟದ ಇಣುಕುನೋಟ


"ಕೃತಯುಗ ಸತ್ಯಯುಗ! ಸಹಜ ಬದುಕು ಅಂದಿನ ಕ್ರಮವಾಗಿತ್ತು.ಸಾವು ಬದುಕಿನ ಸಮಸ್ಯೆಯಿರಲಿಲ್ಲ.ಪ್ರಕೃತಿದತ್ತ ಆಹಾರವನ್ನು ಸೇವಿಸಿ ನಿರೋಗಿಗಳಾಗಿ ಎಲ್ಲರೂ ಇದ್ದರು. ಆಗ ಕೃಷಿ ಮಾಡುವುದೂ ಇದ್ದಿರಲಿಲ್ಲ! ಕೃಷಿ ತ್ರೇತಾಯುಗದ ಕೊಡುಗೆ.ಇದು ರಾಜಸವಾದುದು.ರಾಜತ್ವದ ಪರಿಕಲ್ಪನೆಯು ತ್ರೇತಾಯುಗದ್ದು."ಇವು  ಶಂಬೂಕನ ತಪಸ್ಸಿನ ದುಷ್ಪರಿಣಾಮವನ್ನು ವಿಶ್ಲೇಷಿಸುವ ಸಂದರ್ಭದಲ್ಲಿ  ನಾರದರು ಹೇಳಿದ ಮಾತುಗಳು.


ಅಹಲ್ಯಾ ಎಂದರೆ ಉಳಲಾಗದ ಎನ್ನುವ ಅರ್ಥ ಬರುತ್ತದೆ. ಗೌತಮರ ತಪೋವನ ಇದ್ದದ್ದು ಮಿಥಿಲಾ ನಗರದ ಹೊರವಲಯದಲ್ಲಿ.ನಗರದ ಪಕ್ಕದಲ್ಲಿ ಬಂಜರು/ಪಾಳು ಬಿದ್ದ ಭೂಮಿ ಇದ್ದರೆ ಹೇಗೆ? ಹೇಳಿ ಕೇಳಿ ಜನಕರಾಜ ಕರ್ಮಯೋಗಿ. ಸ್ವತಃ ಉಳುಮೆ ಮಾಡುತ್ತಿದ್ದವ.

ಶ್ರೀರಾಮ ಆ ಕಾಲದಲ್ಲಿ ರಾಜಶಾಸನವನ್ನು ಜ್ಯಾರಿಗೆ ತರುವ ಸಂದರ್ಭದಲ್ಲಿ ಕೃಷಿಗೂ ಆದ್ಯತೆ ನೀಡಿದ್ದನೇ? ಎಂಬ ವಿಚಾರ ಮೂಡುತ್ತದೆ.

ತಪಸ್ಸು ಮಾಡುತ್ತಿದ್ದ ಗೌತಮರನ್ನು ಕರೆಸಿ ಅಹಲ್ಯೆಯೊಡನೆ ಮತ್ತೆ ಬಾಳುವೆ ನಡೆಸುವಂತೆ ಮಾಡಿದುದರ ಸಂದೇಶ ಇದನ್ನೂ ಹೇಳುತ್ತದೆಯಲ್ಲವೇ? ಇಂದ್ರ ಮಳೆಗೆ ಸಂಬಂಧಿಸಿದ ದೇವತೆ.ಕೇವಲ ಮಳೆ ಸುರಿದರೆ ಸಾಲದು ಒಂದಷ್ಟು ಪುರುಷ ಪ್ರಯತ್ನವೂ ಆಗಬೇಕು ಎನ್ನುವುದು ಇದರ ಹಿಂದಿದೆಯೇ?

ಸೀತೆ ಉಳುಮೆ ಮಾಡುತ್ತಿದ್ದಾಗ ಸಿಕ್ಕಿದ್ದು. ಭೂಮಿಯಲ್ಲಿ ತಾನೇ ಗಿಡ- ಮರ-ಬಳ್ಳಿ-ಬೀಜಗಳು ಸಿಗುವುದು.ಅವುಗಳಿಂದ ತಾನೇ ಸಸ್ಯ ರಾಶಿಗಳನ್ನು ಭೂಮಿಯಲ್ಲಿ ನಾವು ಕಾಣುವುದು ಪಡೆಯುವುದು.ವಿಶ್ವಾಮಿತ್ರರು ರಾಮನಿಗೆ ಸಮಕಾಲೀನ ಅಗತ್ಯತೆಯನ್ನು,ಕರ್ತವ್ಯವನ್ನು ಸೂಚಿಸಿದರೇ?

ಸೀತೆಯು ಬೀಜದ ಸಾಂಕೇತಿಕ ರೂಪವೇ?


ಅಶ್ವಮೇಧ ಯಾಗದ ಸಂದರ್ಭದಲ್ಲಿ ಸೀತೆ ರಸಾತಳವನ್ನು ಪ್ರವೇಶಿಸಿದಳು.ಬೇರು ಹೋಗುವುದು ಮಣ್ಣಿನೊಳಗೆ ತಾನೇ?

ರಾಮಾಯಣವೆಂಬ ಅಮರ ಮಹಾವೃಕ್ಷಕ್ಕೆ ಸೀತೆಯೇ ತಾಯಿಬೇರು!(ಸಾಮಾನ್ಯ ತಾಯಿಬೇರಲ್ಲ.ರಸಾತಳಕ್ಕಿಳಿದ ತಾಯಿಬೇರು!!) ರಾಮನೇ ಕಾಂಡ!( ಮದ್ದಿಗೂ ಗುದ್ದಿಗೂ ಕೆತ್ತುವವರೆನಿತು! ಆದರೂ ರಾಮಕಾಂಡ ನಿತ್ಯ ಸುಪುಷ್ಟ!- ನಮ್ಮನಿಮ್ಮಂತಹ ಹನುಮ ಭಕ್ತರ ಆರಾಧನೆಯಿಂದ!)

ಭರತ ಲಕ್ಷ್ಮಣ ಶತ್ರುಘ್ನರು ಕೊಂಬೆಗಳು.ಈ ನಾಲ್ವರು ಸೋದರರಿಗೆ ಇಬ್ಬಿಬ್ಬರು ಮಕ್ಕಳು! ಬೀಜ ಮೊಳಕೆಯೊಡೆದಾಗ ಸಾಮಾನ್ಯವಾಗಿ ಕಾಣುವುದು ಎರಡೆರಡು ಚಿಗುರುಗಳನ್ನು ತಾನೇ? ಕುಶ ಲವಾದಿಗಳು ಈ ಮಹಾವೃಕ್ಷಕ್ಕೆ ಚಿಗುರುಗಳು!

ವಾಲ್ಮೀಕಿ (ಪೂರ್ವಾಶ್ರಮದಲ್ಲಿ ಬೇಡ,ಬಳಿಕ ಕೃಷಿಕನಾಗಿ ಬದಲಾದುದರ ಸಂಕೇತವೇ?)ಕೃಷಿಕ! ನಾರದರ ಮಾರ್ಗದರ್ಶನದಲ್ಲಿ ಅವರಿತ್ತ ಬೀಜದಿಂದ ಗಿಡ ಬೆಳೆಸಿ ನೆಟ್ಟು ಕೊಟ್ಟ.ಹನುಮ ಅದರ ಸಾಕಣೆಯ ಹೊಣೆ ಹೊತ್ತ.

ರಾಮಾಯಣವು ಇರುವಲ್ಲಿಯವರೆಗೆ ಹನುಮ! ಹನುಮನಿರುವಲ್ಲಿಯವರೆಗೆ ರಾಮಾಯಣ!!ಕೃಷಿಯೂ ಹಾಗೆಯೇ ತಾನೇ?

ಕೃಷಿ ಇರುವ ತನಕ ಕೃಷಿಕ! ಕೃಷಿಕನಿರುವ ತನಕ ಕೃಷಿ.ಕೃಷಿ- ಕೃಷಿಕನಿರುವ ತನಕ ನಾವು ನೀವು ಸೇರಿದಂತೆ ಸಮಸ್ತ ಜೀವಕುಲ! 


ರಾಮನಿರ್ದಂದು ರಾವಣನೊಬ್ಬನಿರ್ದನಲ!

ಭೀಮನಿರ್ದಂದು ದುಶ್ಶಾಸನನದೊರ್ವನ್!

ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು?

ರಾಮಭಟನಾಗು ನೀಂ ಮಂಕುತಿಮ್ಮ!

ಕಗ್ಗಕವಿಯ ಸಾರ್ವಕಾಲಿಕ ಕರೆಯನ್ನು ಸಂದೇಶವನ್ನು ಆದರದಿಂದ ನೆನಪಿಸುತ್ತಾ-

ರಾಮಾಯನಮಃ

ರಾಮಾಯನಮಃ


ವಿಶ್ವ


A peep into A Bird's-eye view of Ramayana. 


• When Rama performed the sacrificial ritual 'Ashwamedha ' ,the battle did not take place with neither KushaLava nor with anyone else. 

• Forget about the war, the entire earth took part in the sacrificial ritual voluntarily in such a way that not even a drop of blood was shed.

• Seetha has not descended into the earth which was wide open ! The mother earth herself came up in the royal throne and took Seetha along with her into the subterranean region. 

• Rama has not slayed Shambooka since he is a Shoodra. Rama appreciates him for his ardent penance. But the very next moment, when Shambooka said that he would rule the heaven by conquering through his penance, Rama cut his head off .

• Either the character called ' Ahiraavana' or any incident or story related to that is not there in the Ramayana !

• The concept of following celibacy for 14 years and staying awake the entire night to slay Indrajith, is too not found here !

• The incident that Bharatha had made arrangements for the ordeal by fire since Rama had not arrived on time from the exile is not here ! In fact, Rama at the right time, sends the message of his arrival prior through Hanuman so that Bharatha should not hustle .

• The concept of Parashurama slaying all the Kshatriyas who were there on the earth by circumambulating the earth for 21 times by vengeance, is not here. There were also other virtuous Kshatriya kings other than Dasharatha. 

      It seems he was not foe to such 

      people. 

• There is a reference of the finest bow which was given to Rama by Agasthya, the bow which was sent by Indra through Maathali and other artilleries but apart from these the concept of the bow of ' Kodanda' Rama doesn't appear here !

• The name ' KodandaRaama' has not mentioned here !

• Hanuman is an unarmed . He doesn't possess any weapon. The club is not his weapon. Including Hanuman, all the other monkey warriors had fought by using the things whatever they got in their hands as their weapons ( sometimes they had killed the enemies with their own weapons by snatching from them ).

• Ahalya is not a stone ascetic .

      She is the one who is not involved in  

     the earthly life and who had smeared 

     herself with ashes ! An ascetic woman !!

• Lakshmana had cut off only the ears and the nose of Shoorpanakha !

• After being married to each other, SeethaRama had spent 12 years in Ayodhya and complete 12 years in the exile together happily. After the abandonment of Seetha ,she resided in the hermitage of Valmiki Maharshi for 12 years.

• If Seetha was separated from Rama for almost 14 months being imprisoned by Ravana , she got separated from Rama for 12 years being the resident of Valmiki's hermitage. 

• Rama did not abandoned Seetha hearing the words of only a Washerman ! The entire country spoke and whispered about the chastity of Seetha.

• The concept of Vaali gaining the partial force from his opponent while confronting anyone is not mentioned here.

• The shortest and brief story of the Ramayana is narrated by Kaalapurusha !

• The flashback of the previous story appears twice in Sundara Kaanda. 

• The flashback appears twice even during the time returning to the hermitage of Bharadhwaja from Lanka. 

• The appearance of flashback of the Ramayana here and there is the speciality of the style of Valmiki's story. This style helps to remember by connecting the story while studying the Ramayana. This is the best way of learning while will help to remember points. 

• Rama is a self - confident who believed in self - caliber or efficiency. 

• How Seetha is a chaste woman in the same way Rama too is a chaste man. 

      His widower life of 10,000 years 

      without Seetha is supremely sacred .


Kannada version of the story is written by- 

Shri U S Vishweshwara BhatVishweshwara Bhat. 

Translated by- 

Rashmi A SuvarnaRashmi A Suvarna. 

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

ಶ್ರೀರಾಮಾಯಣ ಹಕ್ಕಿನೋಟ-೨೧೦ A Bird's-eye view of Ramayana : 210

 ಶ್ರೀರಾಮಾಯನಮ:

ಶ್ರೀರಾಮಾಯಣ ಹಕ್ಕಿನೋಟ

ರಾಮಾಯಣ ಹಕ್ಕಿನೋಟ-೨೧೦


ರಾಮಾಯಣ ಪಾರಾಯಣ-ಶ್ರವಣ-ಅಧ್ಯಯನ..ಗಳ ಮಹಿಮೆ



ನಾರದರಿಂದ ಹೇಳಲ್ಪಟ್ಟು, ಬ್ರಹ್ಮನ ನಿರ್ದೇಶನದಂತೆ ರಚಿಸಲ್ಪಟ್ಟ ಆದಿಕವಿ ವಾಲ್ಮೀಕಿ ಮಹರ್ಷಿಗಳು ರಚಿಸಿದ ಆದಿಕಾವ್ಯ ರಾಮಾಯಣವನ್ನು ಪಾರಾಯಣ-ಶ್ರವಣ-ಅಧ್ಯಯನಾದಿಗಳನ್ನು ಶ್ರದ್ಧೆಯಿಂದ  ಮಾಡುವುದರಿಂದ-

●ಸಮಸ್ತ ಪಾಪಗಳ ಪರಿಹಾರವಾಗುತ್ತದೆ 

●ಸಂತಾನ ವೃದ್ಧಿ,ಕೌಟುಂಬಿಕ ಸೌಖ್ಯ ಉಂಟಾಗುತ್ತದೆ 

●ದೀರ್ಘಾಯುಷ್ಯ,ಸದೃಢ ಆರೋಗ್ಯ, ವಿಷ್ಣು ಲೋಕ ಪ್ರಾಪ್ತಿಯಾಗುತ್ತದೆ 

●ಕರ್ತೃವಿನ ತಂದೆ ಅಜ್ಜ ಮುತ್ತಜ್ಜ  ಅಜ್ಜನ ಅಜ್ಜರೂ ಸದ್ಗತಿಯನ್ನು ಪಡೆದು ವಿಷ್ಣು ಲೋಕವನ್ನು ಸೇರುತ್ತಾರೆ

 ●ನಾಲ್ಕು ಪುರುಷಾರ್ಥಗಳಾದ   ಧರ್ಮ ಅರ್ಥ ಕಾಮ ಮೋಕ್ಷ ಗಳನ್ನು ಪಡೆಯುತ್ತಾನೆ 

●ರಾಮಾಯಣ ಕಾವ್ಯದ ಒಂದು ಪದ,ಪಾದ,

ಶ್ಲೋಕ,ಸರ್ಗ,ಕಾಂಡವನ್ನು ದಿನದ ಮೂರು ಹೊತ್ತುಗಳಲ್ಲಿ ಯಾವಾಗಲಾದರೂ ಓದಿ ಅದು ಸತ್ಪರಿಣಾಮವನ್ನು ನೀಡುತ್ತದೆ.

●ಎಲ್ಲರಿಗೂ ಮಂಗಳವಾಗಲಿ 

●ಮಹಾವಿಷ್ಣುವಿನ ಬಲ ವೃದ್ಧಿಸಲಿ

●ಮಹಾವಿಷ್ಣುವಿಗೆ; ಶ್ರೀರಾಮಚಂದ್ರನಿಗೆ ಜಯವಾಗಲಿ 

●ಶ್ರೀರಾಮ ಜಯರಾಮ ಜಯ ಜಯ ರಾಮ

ಎಲ್ಲರಿಗೂ ರಾಮಾನುಗ್ರಹವಿರಲಿ,

ಸೋದರತೆ ಚಿರವಾಗಿರಲಿ.



ಪ್ರಣಾಮಗಳು. 


ವಿಶ್ವ


Om ShriRamaya Namaha : 210


A Bird's-eye view of Ramayana : 210


The greatness of devoted study of recitation - listening of the Ramayana. 


By doing the recitation, listening and the devoted studies with the dedication of the Ramayana which was said by Naarada, created as per the guidance of Brahma and composed by the first poet Valmiki Maharshi -



• All the sins get absolved. 

• Will be blessed with progeny ,there will be happiness in the family. 

• Longevity, good health, and the world of Vishnu will be obtained. 

• The father, grandfather, great grandfather of the creator will enter the world of Vishnu by obtaining the salvation. 

• Will obtain the four objects of human pursuit ( Purushaarthas) Dharma ( righteousness), Artha ( prosperity), Kaama( pleasure), Moksha ( salvation).

• Read a word, lyric ,verse, chapter and Kaanda of the Ramayana thrice a day whenever you find time and that will bring the good result. 

• May everyone be auspicious. 

• Let the power of Mahaavishnu enhance. 

• Let Mahaavishnu and ShreeRamachandra be victorious. 

• Let everyone has the grace of Rama upon them.

      ShreeRama Jayarama Jaya Jaya Rama.

      Let the universal brotherhood be 

      eternal. 



Kannada version of the story is written by- 

Shri U S Vishweshwara BhatVishweshwara Bhat. 

Translated by- 

Rashmi A SuvarnaRashmi A Suvarna. 

Lecturer in English,Vivekananda P U College,Puttur.


ಚಿತ್ರ :ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

ರಾಮಾಯಣ ಹಕ್ಕಿನೋಟ-೨೦೯ A Bird's-eye view of Ramayana : 209

 ಶ್ರೀರಾಮಾಯನಮ:

ಶ್ರೀರಾಮಾಯಣ ಹಕ್ಕಿನೋಟ

ರಾಮಾಯಣ ಹಕ್ಕಿನೋಟ-೨೦೯


 ಬೆಳಗಾಯಿತು.ಮಹಾಯಾತ್ರೆಗೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ಕ್ರಿಯೆಗಳನ್ನು ವಸಿಷ್ಠರು ನೆರವೇರಿಸಿದರು.ಶ್ರೀರಾಮನು ವೇದಮಂತ್ರೋಚ್ಚಾರಣೆಯೊಂದಿಗೆ ಸರಯೂನದಿಯತ್ತ ನಡೆದನು.ಹೋಗುವ ದಾರಿಯಲ್ಲಿ ಶ್ರೀರಾಮನ ಮುಂದೆ ಮಹಾವಿಷ್ಣು,

ಬಲಗಡೆಯಲ್ಲಿ ಲಕ್ಷ್ಮೀದೇವಿ,

ಎಡಗಡೆಯಲ್ಲಿ ಭೂದೇವಿ ವಿರಾಜಿಸುತ್ತಿದ್ದರು.ಅಸ್ತ್ರ-ಶಸ್ತ್ರ- ಆಯುಧಗಳು ಪುರುಷ ರೂಪದಲ್ಲಿ, ವೇದಗಳು ವಿಪ್ರವೇಷದಲ್ಲಿ ಅವನನ್ನು ಅನುಸರಿಸಿದವು.

ಪ್ರಣವ-ಗಾಯತ್ರಿ ಮಂತ್ರಗಳೂ ಶ್ರೀರಾಮನನ್ನು ಅನುಸರಿಸಿದವು.

ಮಹರ್ಷಿಗಳೂ ಮಹಾಪ್ರಸ್ಥಾನದಲ್ಲಿ ಶ್ರೀರಾಮನನ್ನು ಅನುಸರಿಸಿದರು.ಅಯೋಧ್ಯೆಯ ಬಾಲ ವೃದ್ಧರೆನ್ನದೆ  ಎಲ್ಲಾ ಪ್ರಜೆಗಳು ರಾಮನ ಹಾದಿಯಲ್ಲಿ ನಡೆದರು.

"ಸರ್ವೇ ರಾಮಮನುವ್ರತಮ್" ಎಂಬಂತೆ ಸಮಸ್ತ ಸ್ವಸ್ಥ ಜೀವಕೋಟಿ ಉತ್ಸಾಹ ಸಂತೋಷಗಳಿಂದ ಶ್ರೀರಾಮನ ಮಹಾಯಾತ್ರೆಯಲ್ಲಿ ಪಾಲ್ಗೊಂಡರು.ಶ್ರೀರಾಮನ ಮಹಾಯಾತ್ರೆಯನ್ನು ನೋಡಲು ನಿಂತವರೂ ಅವನನ್ನು ಅನುಸರಿಸಿದರು ಎಂದರೆ ಉಳಿದವರಾರು!? ಅಯೋಧ್ಯೆ ಜನಶೂನ್ಯವಲ್ಲ ಜೀವಶೂನ್ಯವಾಯಿತು!!



ನದೀದಡಕ್ಕೆ ಶ್ರೀರಾಮನು ತಲುಪಿದಾಗ ಬ್ರಹ್ಮನೂ ಸಮಸ್ತ ದೇವತೆಗಳೊಂದಿಗೆ ಅಲ್ಲಿಗೆ ಬಂದನು.ಜೊತೆಗೆ ಅಸಂಖ್ಯಾತ ವಿಮಾನಗಳು.

ಪಂಚಭೂತಗಳು ಮಂಗಳಮಯವಾಗಿದ್ದವು.

ಶ್ರೀರಾಮಚಂದ್ರನು ಸರಯೂನದಿಗೆ ಇಳಿಯುವಾಗ ಬ್ರಹ್ಮನು

 'ಹೇ ಮಹಾಬಾಹು,

ದೇವಸದೃಶರಾದ ಅನುಜರೊಂದಿಗೆ ನಿನ್ನ ಮೂಲಭೂತವಾದ,ನಿನಗೆ ಇಷ್ಟವಾದ ದೇಹವನ್ನು ಧರಿಸು.ನೀನು ಯಾವ ಸ್ವರೂಪದಲ್ಲಿ ಪ್ರವೇಶಿಸಲು ಇಷ್ಟ ಪಡುವೆಯೋ ಅದರಲ್ಲಿ ವೈಷ್ಣವ ತೇಜಸ್ಸಿನಲ್ಲಿ ಪ್ರವೇಶಿಸು'ಎಂದನು.

ಶ್ರೀರಾಮನು ಸಶರೀರನಾಗಿ ತನ್ನ ತಮ್ಮಂದಿರೊಡನೆ ವೈಷ್ಣವ ತೇಜಸ್ಸಿನಲ್ಲಿ ಪ್ರವೇಶಿಸಿದನು.

ದೇವತೆಗಳು ಅವನನ್ನು ಪೂಜಿಸಿ ಸ್ವಾಗತಿಸಿದರು. 

ಆಗ ಶ್ರೀರಾಮನು  ಬ್ರಹ್ಮನಲ್ಲಿ-ಪಿತಾಮಹ, ನನ್ನನ್ನು ಅನುಸರಿಸಿ ಬಂದಿರುವ ಈ ಜನಸಮುದಾಯಕ್ಕೆ  ಉತ್ತಮವಾದ ಲೋಕಗಳನ್ನು ಅನುಗ್ರಹಿಸು-ಎನ್ನಲು 

ಬ್ರಹ್ಮನು -ಪ್ರಭುವೇ ನಿನ್ನನ್ನು ಅನುಸರಿಸಿ ಬಂದ  ನಿನ್ನ ಎಲ್ಲಾ ಪ್ರಿಯರೂ 'ಸಾಂತಾನಿಕ' ಎಂಬ ಪುಣ್ಯ ಲೋಕಕ್ಕೆ ಹೋಗುತ್ತಾರೆ. ಉಳಿದ ಜೀವಿಗಳು- ಪ್ರಾಣಿಗಳು ಯಾವ ಯಾವ ದೇವತೆಗಳಿಂದ ಜನಿಸಿದ್ದುವೋ ಆಯಾ ದೇವತೆಗಳನ್ನು ಹೊಂದುತ್ತವೆ-ಎಂದನು. ಬ್ರಹ್ಮನುಹೀಗೆ ಹೇಳುತ್ತಿರಲು ಎಲ್ಲವೂ ಎಲ್ಲರೂ ಸರಯೂನದಿಯಲ್ಲಿ ಮುಳುಗಿ ತಮ್ಮ ಇಹರೂಪವನ್ನು ತೊರೆದು ದಿವ್ಯರೂಪಗಳಲ್ಲಿ ಸ್ವರ್ಗವನ್ನು ಪ್ರವೇಶಿಸಿದರು.

 ಹೌದು! "ಹೂವಿನೊಂದಿಗೆ ನಾರೂ ದೇವರನ್ನು ಏರಿತು!" ಎಂಬ ಹಿರಿಯರ ಮಾತು ಅಂದು ಸರಯೂನದಿಯಲ್ಲಿ ಸಾಕಾರಗೊಂಡಿತು!



 ಶ್ರೀರಾಮನೊಂದಿಗೆ ಶ್ರೀರಾಮನ ಎಲ್ಲರೂ ಎಲ್ಲವೂ!!


ಶ್ರೀರಾಮಾವತಾರಕ್ಕೆ ಮಂಗಳ!


ಮಂಗಳಂ ಕೋಸಲೇಂದ್ರಾಯ

ಮಹನೀಯ ಗುಣಾತ್ಮನೇ|

ಚಕ್ರವರ್ತಿ ತನೂಜಾಯ

ಸಾರ್ವಭೌಮಾಯ ಮಂಗಳಂ|| 


ಹರೇರಾಮ! ಹರೇರಾಮ!


ವಿಶ್ವ


ಶ್ರೀರಾಮನು ಪರಂಧಾಮ ವನ್ನು ಹೊಂದಿದ ನಂತರ ಅಯೋಧ್ಯೆಯು ಹಲವಾರು ವರ್ಷಗಳ ಕಾಲ ಜನರಹಿತವಾಗಿತ್ತು. ಋಷಭನು ರಾಜನಾದ ನಂತರ ಅಲ್ಲಿ ಜನರು ವಾಸಿಸ ತೊಡಗಿದರು.


Om ShriRamaya Namaha : 209


A Bird's-eye view of Ramayana : 209


The morning broke. Vasishta performed all the religious rites which was related to the great pilgrimage. ShreeRama went towards the river Sarayu by chanting Vedas . While going on the way ,Mahaavishnu, Laxmidevi on the right, the mother earth on the left side were illuminating with splendor ahead of ShreeRama . Artillery - arms - weapons in the form of men and Vedas in the form of a virtuous Brahmin followed ShreeRama. 

The chantings Pranava and Gayatri followed ShriRama . The Maharshis followed ShreeRama in the great journey . Every citizen of Ayodhya irrespective of their ages including the kids and the old people followed the path of Rama. As the saying ' Sarve Ramamanuvratham ' the entire crores of healthy creatures took part in the great pilgrimage of ShreeRama with happiness and enthusiasm. 

Who remained there if the people who had stood there to witness the great pilgrimage of ShreeRama ,followed him !? Ayodhya did not become the unpopulated land but it became hollow without lives !!


When ShreeRama reached the shore of the river, Brahma came there along with the gods. Along with them numerous planes. 

The five great elements were filled with auspiciousness.

When ShreeRamachandra was descending into the sea ,Brahma says " Mahaabaahu , wear the body you like which is fundamental along with your Younger brothers who are similitude of God. Enter in the form that you like to enter with the radiance of Vaishnava ". ShreeRama with his mortal body entered with the radiance of Vaishnava along with his brothers. 

The gods welcomed them by worshiping them. 

During the time ShreeRama says to Brahma - " Oh father, grant the finest worlds to this community of people who have come following me ". For which Brahma says - " Lord,  all the people who are dear to you and who have come following you will go to the sacred world called ' Saanthaanika'. The remaining creatures ,animals will possess the gods respectively whom they have taken birth from ". While Brahma was saying this, everything and everyone drowned in the river Sarayu and entered the heaven in the finest form by abandoning their earthly body .

Yes ! " Along with the flowers , the thread  too ascended the gods !" - These words of the veterans turned true in the river Sarayu then !



Along with ShreeRama, everyone and everything of ShreeRama !!


An auspicious end to ' ShreeRamavathaara' !


Mangalam Kosalendraya

mahaneeya gunaathmane !

Chakravarthi thanoojaaya

saarvabhaumaaya mangalam !!


Hare Rama ! Hare Rama !


After ShreeRama obtaining the paradise, Ayodhya had been a desert without the inhabitants for so many years. The people began to live there when Rushabha became the king. 


Kannada version of the story is written by- 

Shri U S Vishweshwara BhatVishweshwara Bhat. 

Translated by- 

Kum. Rashmi A Suvarna Rashmi A Suvarna. 

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

ರಾಮಾಯಣ ಹಕ್ಕಿನೋಟ-೨೦೮ A Bird's-eye view of Ramayana : 208

 ಶ್ರೀರಾಮಾಯನಮ:


ರಾಮಾಯಣ ಹಕ್ಕಿನೋಟ-೨೦೮

ಶ್ರೀರಾಮಾಯಣ ಹಕ್ಕಿನೋಟ


  ಅವರಿವರೆನ್ನದೆ ಅಯೋಧ್ಯಾ ಪುರವಾಸಿಗಳೆಲ್ಲರೂ ಶ್ರೀರಾಮನೊಂದಿಗೆ ಅವನು ಹೋಗುವಲ್ಲಿಗೆ ಅವನೊಡನೆ ತೆರಳಲು ದೃಢ ನಿಶ್ಚಯಮಾಡಿ ಅವನಲ್ಲಿ ತಮ್ಮನ್ನೂ ಕರೆದುಕೊಂಡು ಹೋಗುವಂತೆ ಪ್ರಾರ್ಥಿಸಿದರು.ವಸಿಷ್ಠರ ಸಲಹೆಯಂತೆ ಶ್ರೀರಾಮನು ಸಮ್ಮತಿಸಿದನು. 

ಶ್ರೀರಾಮನೊಂದಿಗೆ ಅವನ ಸೋದರರೂ ಮಹಾಯಾತ್ರೆಗೆ ಸಿದ್ಧರಾದರು. ಋಕ್ಷ -ವಾನರ- ರಾಕ್ಷಸರು ಗುಂಪು ಗುಂಪಾಗಿ ಬಂದು ನಮ್ಮೆಲ್ಲರನ್ನು ಕರೆದುಕೊಂಡು ಹೋಗು ಎಂದು ವಿನಂತಿಸಿದರು.

ಸುಗ್ರೀವನು ಅಂಗದನಿಗೆ ಪಟ್ಟಾಭಿಷೇಕ ಮಾಡಿಯೇ ಬಂದಿದ್ದ.!! ಸುಗ್ರೀವನ ಅರಿಕೆಯನ್ನು ಕೇಳಿದ ರಾಮ- ಮಿತ್ರಾ,ನಿನ್ನನ್ನು ಬಿಟ್ಟು ಸ್ವರ್ಗಕ್ಕೂ ಹೋಗುವುದಿಲ್ಲ, ಪರಮಪದಕ್ಕೂ ಹೋಗುವುದಿಲ್ಲ-  ಎಂದು ಮಾತು ಕೊಟ್ಟನು.



ಬಳಿಕ ವಿಭೀಷಣನಲ್ಲಿ-

ರಾಕ್ಷಸೇಂದ್ರ, ಎಂದಿನವರೆಗೆ ಪ್ರಪಂಚದಲ್ಲಿ ಪ್ರಜೆಗಳು ಜೀವಿಸಿರುವರೋ ಅಲ್ಲಿಯ ವರೆಗೆ ನೀನು ಸಶರೀರನಾಗಿ ಲಂಕೆಯಲ್ಲಿರು, ರವಿಚಂದ್ರರಿರುವ ತನಕ,ನನ್ನ ಕತೆಯು ಲೋಕದಲ್ಲಿ ಇರುವ ತನಕವೂ  ಲಂಕಾರಾಜ್ಯವು ನಿನ್ನದಾಗಿರಲಿ.ಇದು ನನ್ನ  ಮಿತ್ರ ಭಾವದ ಆಜ್ಞೆ.

ಪ್ರಜೆಗಳನ್ನು ಧರ್ಮದಿಂದ ಪರಿಪಾಲಿಸು.ಇಕ್ಷ್ವಾಕು ಕುಲದೇವತೆಯಾಗಿರುವ ಜಗನ್ನಾಥನನ್ನು ಆರಾಧಿಸು.-ಎಂದನು. ವಿಭೀಷಣನು ಈ ಎಲ್ಲಾ ಮಾತುಗಳನ್ನು ಒಪ್ಪಿದನು. 

ಈಗ ಹನುಮನ ಸರದಿ.

" ದೀರ್ಘ ಕಾಲದವರೆಗೆ ಬದುಕಿರಬೇಕೆಂಬ ನಿನ್ನ ದೃಢ ನಿಶ್ಚಯ ನಿಜವಾಗಲಿ.ನನ್ನ ಕತೆಯು ಜಗತ್ತಿನಲ್ಲಿ ಎಂದಿನವರೆಗೆ  ಪ್ರಚಲಿತವಾಗಿರುವುದೋ ಅಂದಿನವರೆಗೂ ನೀನು ನನ್ನ ಆಜ್ಞೆಯಂತೆ ಓಡಾಡುತ್ತಾ ಆನಂದಿಂದಿರು - ಎಂದು ಶ್ರೀರಾಮನು ಹೇಳಿದಾಗ ತುಂಬಾ ಸಂತೋಷಗೊಂಡ ಹನುಮನು-

ಪ್ರಪಂಚದಲ್ಲಿ ಎಲ್ಲಿಯವರೆಗೆ ನಿನ್ನ ಕತೆಯು ಪ್ರಚಲಿತವಾಗಿರುವುದೋ ಅಲ್ಲಿಯವರೆಗೂ ನಿನ್ನ ಆಜ್ಞೆಯನ್ನು ಪಾಲಿಸುತ್ತಾ ಭೂಮಂಡಲದಲ್ಲಿರುತ್ತೇನೆ- ಎಂದು ಮಾತು ಕೊಟ್ಟನು.



ಶ್ರೀರಾಮನು ಬಳಿಕ ಜಾಂಬವಂತ,ಹನುಮಂತ, ಮೈಂದ,ದ್ವಿವಿದ,ವಿಭೀಷಣರಿಗೆ ಒಟ್ಟಾಗಿ- ನೀವೆಲ್ಲರೂ ಪ್ರಳಯಕಾಲದವರೆಗೂ ಜೀವಿಸಿರಿ -ಎಂದನು.


ವಿಶ್ವ

Om ShriRamaya Namaha : 208


A Bird's-eye view of Ramayana : 208


Each and every inhabitants of Ayodhya made the decision of going along with ShreeRama and prayed to him to take them along with him. As per the advice of Vasishta, ShreeRama too agreed for that. 

The brothers too got ready for the great pilgrimage along with ShreeRama. Yakshas - Monkeys - Monsters came in groups and requested Rama to take all of them along with him. Sugreeva had come there by already coronating Angada !!. While asking the opinion of Sugreeva, Rama says to him - " dear friend, I do not want neither the heaven nor the highest rank without you ". In this way Rama promised Sugreeva. 

Later Rama says to Vibhishana -

" The monster king, be there in Lanka with the mortal body until people live in this world. Let Lanka state be yours till the sun and the moon exist and till my story exists in this world. This is my cordial command. 

Protect the citizens righteously. Worship the clan deity ' Jagannaatha' of Ikshvaku ". Vibhishana agreed to all these words of Rama. 



Now it is the turn of Hanuman. 

" Let your firm determination of living for a longer span of time turn true. Wander happily as per my command till my story is prevalent in this world ". When ShreeRama said this, Hanuman being overjoyed says - " I will be on this earth by following your command till your story exists in the world ". In this way Hanuman gave a promise to Rama. 

Later ShreeRama told Jaambavantha, Hanuman, Mainda, Dwivida, Vibhishana to live together till the time of catastrophe. 


Kannada version of the story is written by- 

Shri U S Vishweshwara Bhat Vishweshwara Bhat. 

Translated by- 

Rashmi A Suvarna Rashmi A Suvarna. 

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

ರಾಮಾಯಣ ಹಕ್ಕಿನೋಟ-೨೦೭ A Bird's-eye view of Ramayana : 207

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ.

ರಾಮಾಯಣ ಹಕ್ಕಿನೋಟ-೨೦೭


ಲಕ್ಷ್ಮಣನ ಪರಿತ್ಯಾಗದ ಬಳಿಕ ಶ್ರೀರಾಮನು ದುಃಖ ಶೋಕಗಳಿಂದ ಕೂಡಿದವನಾಗಿದ್ದು ಮತ್ತೆ ವನವಾಸಕ್ಕೆ ಮನಮಾಡಿದನು.

ಮಂತ್ರಿ, ಪುರೋಹಿತ, ಪ್ರಜೆಗಳನ್ನು ಕರೆದು ಭರತನಿಗೆ ಪಟ್ಟಾಭಿಷೇಕ ಮಾಡಿ ವನವಾಸಕ್ಕೆ ತೆರಳುವ,

ಲಕ್ಷ್ಮಣನ ಹಾದಿಯನ್ನು ತುಳಿಯುವ ನಿರ್ಧಾರವನ್ನು ಪ್ರಟಿಸಿದನು.

ಶ್ರೀರಾಮನ ಮಾತುಗಳನ್ನು ಕೇಳಿ ಎಲ್ಲರೂ ದುಃಖದಿಂದ ತಲೆಯ ಮೇಲೆ ಕೈಯಿಟ್ಟರು.

ಭರತ ಎಚ್ಚರದಪ್ಪಿ ಬಿದ್ದನು.

ಬಳಿಕ  ಎಚ್ಚೆತ್ತುಕೊಂಡು-

ರಾಘವ,

ನೀನಿಲ್ಲದೆ ನನಗೆ ರಾಜ್ಯವೂ ಬೇಡ,ಸ್ವರ್ಗಸುಖವೂ ಬೇಡ.ಇದು ನನ್ನ ಶಪಥ.ಕುಶ-ಲವರಿಗೆ ರಾಜ್ಯಭಿಷೇಕ ಮಾಡು. ಕುಶನನ್ನು ಉತ್ತರ ಕೋಸಲ ರಾಜ್ಯಕ್ಕೂ,ಲವನನ್ನು ದಕ್ಷಿಣ ಕೋಸಲ ರಾಜ್ಯಕ್ಕೂ ರಾಜರನ್ನಾಗಿ ಮಾಡು.ನಾವು  ಮಹಾಯಾತ್ರೆಯನ್ನು ಕೈಗೊಳ್ಳುವ ವಿಚಾರವನ್ನು ಕೂಡಲೇ ಶತ್ರುಘ್ನನಿಗೆ ತಿಳಿಸು- ಎಂದನು. ಭರತನ ಮಾತಿಗೆ ಶ್ರೀರಾಮನು ಒಪ್ಪಿ ಶತ್ರುಘ್ನನನ್ನು ಕರೆತರಲು ದೂತರನ್ನು ಕಳಿಸಿದನು.ವಸಿಷ್ಠರು ಪ್ರಜೆಗಳ ಅಭಿಪ್ರಾಯವನ್ನು ಕೇಳಲು ಶ್ರೀರಾಮನಿಗೆ ಹೇಳಿದರು.ಶ್ರೀರಾಮನು ಪ್ರಜೆಗಳಲ್ಲಿ ಕೇಳಿದಾಗ ಅವರೆಲ್ಲಾ ಒಕ್ಕೊರಲಿನಿಂದ ನಾವು ನೀನು ಹೋಗುವಲ್ಲಿಗೆ ನಿನ್ನನ್ನು ಹಿಂಬಾಲಿಸಿಕೊಂಡು ಬರುತ್ತೇವೆ, ಇದರಿಂದ ನಮಗೂ ನಮ್ಮವರಿಗೂ ನಮ್ಮೆಲ್ಲರಿಗೂ ಅಮಿತವಾದ ಆನಂದವುಂಟಾಗುತ್ತದೆ ಎಂದರು.ಪ್ರಜೆಗಳ ಪ್ರೀತಿಗೆ ಶ್ರೀರಾಮನು ಮಣಿದ.(ಪ್ರಜೆಗಳಿಗಾಗಿ ಸೀತಾ ಪರಿತ್ಯಾಗ.ಇದೀಗ ಪ್ರಜೆಗಳನ್ನು ತನ್ನೊಂದಿಗೇ ಕರೆದೊಯ್ಯುವ ನಿರ್ಧಾರ. ರಾಮನ ಪ್ರಜಾ ವಾತ್ಸಲ್ಯಕ್ಕೆ ಎಣೆಯಿಲ್ಲ.ಪ್ರಜೆಗಳ ರಾಮಪ್ರೀತಿ ಆಶ್ಚರ್ಯ ತರುವಂತಿದೆ!!)



ರಾಮನು

ಕೂಡಲೇ ಕುಶ ಲವರನ್ನು ಉತ್ತರ-ದಕ್ಷಿಣ ಕೋಸಲ ದೇಶಗಳ ರಾಜರನ್ನಾಗಿಸಿ ಪಟ್ಟಾಭಿಷೇಕ ಮಾಡಿದನು.

ಅಭಿಷಿಕ್ತ ಮಕ್ಕಳನ್ನು ತನ್ನ ತೊಡೆಯ ಮೇಲೆ ಕೂರಿಸಿ ಅವರ ನೆತ್ತಿಗಳನ್ನು ಪದೇ ಪದೇ  ಆಘ್ರಾಣಿಸಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದನು. ಅವರಿಬ್ಬರಿಗೆ ಸಾವಿರಾರು ರಥಗಳನ್ನು,ಹತ್ತು ಸಾವಿರ ಆನೆಗಳನ್ನು,ಒಂದು ಲಕ್ಷ ಕುದುರೆಗಳನ್ನು,ರತ್ನ- ಐಶ್ವರ್ಯಗಳನ್ನು ಸಮಾನವಾಗಿ ಹಂಚಿದನು.

ಬಳಿಕ ಅವರನ್ನು ಅವರವರ ರಾಜಧಾನಿಗಳಿಗೆ(ಕುಶನನ್ನು ಕುಶಾವತಿಗೆ,ಲವನನ್ನು ಶ್ರಾವಸ್ತಿಗೆ) ಹರಸಿ ಬೀಳ್ಕೊಟ್ಟನು.


ಇತ್ತ ಅಣ್ಣನ ಮಹಾಯಾತ್ರೆಯ ಸುದ್ದಿ ತಿಳಿದ ಶತ್ರುಘ್ನನು ಕೂಡಲೇ ತನ್ನ ಮಕ್ಕಳಾದ ಸುಬಾಹುವನ್ನು ಮಧುರಾ ಪಟ್ಟಣಕ್ಕೆ,ಶತ್ರುಘಾತಿಯನ್ನು ವಿದಿಶಾ ನಗರಕ್ಕೆ ರಾಜರನ್ನಾಗಿ ಮಾಡಿ ಪಟ್ಟಾಭಿಷೇಕವನ್ನು ಮಾಡಿ ತನ್ನ ಸಂಪತ್ತನ್ನು ಇಬ್ಬರಿಗೂ ಸಮಾನವಾಗಿ ಹಂಚಿ ಹರಸಿ ಕಳುಹಿಸಿದನು. ಬಳಿಕ ತಾನೊಬ್ಬನೇ ರಥದಲ್ಲಿ ಅಯೋಧ್ಯೆಗೆ ಬಂದನು. 


ವಿಶ್ವ


Om ShriRamaya Namaha : 207


A Bird's-eye view of Ramayana : 207


After sacrificing Lakshmana, ShreeRama drowned in the sorrow and grief and he made up his mind to go into the exile again. 

He called the minister, priest and the subjects and announced his decision of walking in the path that Lakshmana had gone in and going into the exile again by coronating Bharatha. 

Everyone who heard the words of ShreeRama became distressed out of sorrow. 

Bharatha fell unconscious. 



After regaining his consciousness- he says to Rama - " Raghava, I don't want the state and the pleasure of the heaven without you. This is my oath. Coronate Kusha and Lava. Make Kusha the king of the North Kosala state and Lava the king of the South Kosala state. And inform Shatrughna immediately about the great pilgrimage that we are going to undertake ". By agreeing to the words of Bharatha ShreeRama sent the messengers to escort Shatrughna. Vasishta asked ShreeRama to ask the opinion of the subjects . When ShreeRama asked them, they all said in unison that they would come following him wherever he would go and that would bring boundless happiness for them, for their own people and for all of them. 

ShreeRama surrendered himself to the love of the subjects. ( sacrificed Seetha for the subjects. And now, decision of taking them along with him. There is no limit for Rama's love for the subjects. The citizens' love for Rama seems to bring astonishment !! ).


Rama coronated Kusha and Lava the king of the North - South Kosala countries immediately. He took the crowned children on his lap and expressed his love and affection on them by smelling their heads again and again. He distributed thousands of chariots, ten thousands of elephants, one lacks of horses, precious gems and wealth between Kusha and Lava equally. Then he sent them off to their respective capitals ( Kusha to Kushaavathi, Lava to Shraavasthi ) by blessing them.



On the other hand, Shatrughna who heard about the great pilgrimage of his elder brother, coronated his children named Subaahu and Shatrugathi and made Subaahu the king of the town Madhura and made Shatrughathi the king of Vidishaa town. Then he distributed his wealth between them equally and sent them off by blessing them. After that he alone came to Ayodhya in chariot. 


Kannada version of the story is written by- 

Shri U S Vishweshwara Bhat Vishweshwara Bhat. 

Translated by- 

Kum. Rashmi A Suvarna

Rashmi A Suvarna. 

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

ರಾಮಾಯಣ ಹಕ್ಕಿನೋಟ-೨೦೬ A Bird's-eye view of Ramayana : 206

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ

ರಾಮಾಯಣ ಹಕ್ಕಿನೋಟ-೨೦೬


 ಇಕ್ಕಟ್ಟಿನಲ್ಲಿ ಲಕ್ಷ್ಮಣ! 

ಅಷ್ಟೇ, ಒಂದೇ ಕ್ಷಣ! ಕರ್ತವ್ಯಶೀಲ ಲಕ್ಷ್ಮಣನು

 " ಏಕಸ್ಯ ಮರಣಂ ಮೇsಸ್ತು ಮಾ ಭೂತ್ಸರ್ವವಿನಾಶನಮ್"

ನಾನೊಬ್ಬ ಸತ್ತರೂ ಚಿಂತೆಯಿಲ್ಲ, ಸರ್ವವೂ ವಿನಾಶವಾಗುವುದು ಬೇಡ! ಎಂದು ನಿರ್ಧರಿಸಿ ಶ್ರೀರಾಮನಿಗೆ ದುರ್ವಾಸರು ಬಂದ ಸುದ್ದಿಯನ್ನು ತಿಳಿಸಿದ.

ಕೂಡಲೇ ಕಾಲಪುರುಷನನ್ನು ಬೀಳ್ಕೊಂಡ ಶ್ರೀರಾಮನು ದುರ್ವಾಸರನ್ನು ಎದುರುಗೊಂಡು- ಮಹಾಮುನಿಯೇ,ನನ್ನಿಂದೇನಾಗಬೇಕು? ದಯಮಾಡಿ ಹೇಳಿ- ಎಂದು ಪ್ರಾರ್ಥಿಸಿದನು.

ದುರ್ವಾಸರು- ಶ್ರೀರಾಮ,ನಾನು ವ್ರತದ ನಿಮಿತ್ತವಾಗಿ ಒಂದು ಸಾವಿರ ವರ್ಷಗಳಿಂದ ಉಪವಾಸ ಮಾಡುತ್ತಿದ್ದೇನೆ.ಅದು ಇಂದಿಗೆ ಮುಗಿಯಿತು.ಆದುದರಿಂದ ನಿನ್ನ ಅರಮನೆಯಲ್ಲಿ ಯಾವ ಭೋಜನವು ಸಿದ್ಧವಾಗಿದೆಯೋ ಅದನ್ನುಣ್ಣಲು ಬಯಸಿದ್ದೇನೆ- ಎಂದರು. ಶ್ರೀರಾಮನು ಆದರದಿಂದ ದುರ್ವಾಸರಿಗೆ ಉಣಬಡಿಸಿದನು.ಅದನ್ನುಂಡು ತೃಪ್ತರಾದ ದುರ್ವಾಸರು ಶ್ರೀರಾಮನನ್ನು ಹರಸಿ ತನ್ನ ಆಶ್ರಮಕ್ಕೆ ತೆರಳಿದರು. 



ಈಗ ರಾಮನಿಗೆ ಇಕ್ಕಟ್ಟು!ಕಾಲಪುರುಷನಿಗೆ ಕೊಟ್ಟ ಮಾತಿನ ಪ್ರಕಾರ ಲಕ್ಷ್ಮಣನನ್ನು  ವಧಿಸಬೇಕು.ಲಕ್ಷ್ಮಣನಿಲ್ಲದೆ ತಾನಿರುವುದೆಂತು?ಹೀಗೆ  ಪರಿತಾಪ ಪಡತ್ತಾ ಇದ್ದಾಗ ಸಂತೋಷದಿಂದ ಪ್ರಾಜ್ಞ ಲಕ್ಷ್ಮಣ ಬಂದನು.

ಶ್ರೀರಾಮನಲ್ಲಿ-

ಅಣ್ಣಾ, ನನ್ನ ಸಲುವಾಗಿ ದುಃಖಿಸಬೇಡ.ಪೂರ್ವ ಜನ್ಮದ ಕರ್ಮಗಳಿಗೆ ಬದ್ಧರಾದ ನಮ್ಮೆಲ್ಲರ ಕಾಲಗತಿಯೂ ಇಂತಹುದೇ ಆಗಿರುತ್ತದೆ. ಯಾವುದೇ ಭಯವಿಲ್ಲದೆ ನನ್ನನ್ನು ಸಂಹರಿಸಿ ಪ್ರತಿಜ್ಞಾಬದ್ಧನಾಗು.ಇಲ್ಲದಿದ್ದರೆ ನರಕ ಪ್ರಾಪ್ತಿಯಾಗುತ್ತದೆ.

ನಿನಗೆ ನನ್ನ ಮೇಲೆ ಪ್ರೀತಿಯಿದ್ದರೆ ನನ್ನನ್ನು ಸಂಹರಿಸಿ ಕೊಟ್ಟ ಮಾತನ್ನುಳಿಸಿ ಧರ್ಮಪರನಾಗು- ಎಂದನು. 


ದುಃಖಿತ ಶ್ರೀರಾಮನು ಒಡನೆಯೇ ಮಂತ್ರಿಗಳನ್ನು, ವಸಿಷ್ಠರೇ ಮೊದಲಾದ ಪುರೋಹಿತರನ್ನು ಕರೆಸಿದನು.ಅವರೆಲ್ಲರಿಗೂ ನಡೆದ ಘಟನೆಗಳನ್ನು ವಿವರವಾಗಿ ಹೇಳಿದನು.ತಾನು ಮಾಡಬೇಕಾದ ಕರ್ತವ್ಯವನ್ನು ಹೇಳಿದನು.ಆಗ ವಸಿಷ್ಠರು- ಇದು ನನಗೆ ನಿರೀಕ್ಷಿತ. ಕಾಲವನ್ನು ಎದುರಿಸಿ ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಆದುದರಿಂದ ನೀನು ಲಕ್ಷ್ಮಣನನ್ನು ತ್ಯಜಿಸುವುದು ಉಚಿತವೇ ಆಗಿದೆ.ಧರ್ಮಕ್ಕೆ ಎಂದೂ ಚ್ಯುತಿ ಬರಬಾರದು- ಎಂದು ಸಲಹೆಯಿತ್ತರು.


ಶ್ರೀರಾಮನು ಲಕ್ಷ್ಮಣನಲ್ಲಿ- ಲಕ್ಷ್ಮಣ! ನಾನು ನಿನ್ನನ್ನು ತ್ಯಾಗಮಾಡುತ್ತೇನೆ.ಧರ್ಮ ಲೋಪವೆಂದೂ ಆಗಬಾರದು. ಸತ್ಪುರುಷರಿಗೆ ತ್ಯಾಗಮಾಡುವುದೂ ವಧೆ ಮಾಡುವುದೂ ಒಂದೇ ಆಗುತ್ತದೆ. ಇದು ಮರಣದಂಡನೆಗೆ ಸಮ- ಎಂದನು. 



ಲಕ್ಷ್ಮಣನ ಕಂಗಳು ತುಂಬಿ ಬಂದವು.ಒಡನೆಯೇ ಅಲ್ಲಿಂದ ಹೊರಟನು.ತನ್ನ ಮನೆಗೂ ಹೋಗದೆ ನೇರ ಸರಯೂನದಿಯ ತೀರಕ್ಕೆ  ಹೋದನು. ಅದಾಗಲೇ ದೇವತೆಗಳು ಅಲ್ಲಿ ನೆರೆದಿದ್ದರು. ಲಕ್ಷ್ಮಣನು ಶುದ್ಧಾಚಮನವನ್ನು ಮಾಡಿದನು. ಯೋಗಯುಕ್ತನಾಗಿ ಶ್ವಾಸೋಚ್ಛ್ವಾಸಗಳನ್ನು ಬಂಧಿಸಿದನು.ಕೂಡಲೇ ಜನರ ಕಣ್ಣಿಗೆ ಕಾಣದಂತೆ ಇಂದ್ರನು ಮಹಾಬಲಶಾಲಿಯಾದ ಲಕ್ಷ್ಮಣನನ್ನು ಸಶರೀರನಾಗಿ ಸ್ವರ್ಗಕ್ಕೆ ಕರೆದುಕೊಂಡು ಹೋದನು.ಮಹಾವಿಷ್ಣುವಿನ ಪೂರ್ಣಾಂಶದಲ್ಲಿ ಕಾಲುಭಾಗ ಕೂಡಿದ ಲಕ್ಷ್ಮಣನು ಸ್ವರ್ಗಕ್ಕೆ ಬಂದುದನ್ನು ನೋಡಿ ದೇವತೆಗಳು ಸಂತಸದಿಂದ ಅವನನ್ನು ಪೂಜಿಸಿ ಸತ್ಕರಿಸಿದರು.


ಲಕ್ಷ್ಮಣನಂತಹ ಒಬ್ಬ ಸೋದರ ಲಕ್ಷ್ಮಣ ಮಾತ್ರ-ಶ್ರೀರಾಮ ಹೇಳಿದ್ದು ಸತ್ಯ!!


ಹೌದು. ದೇವತೆಗಳು ಅವರಾಗಿಯೇ ಒಲಿದರೆ ಮನುಜರನ್ನು ಸಶರೀರದಲ್ಲಿ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾರೆ,ಅಮರತ್ವವನ್ನೂ ನೀಡುತ್ತಾರೆ! (ಹನುಮಂತ, ವಿಭೀಷಣರಿಗೆ ಅಮರತ್ವ,ಲಕ್ಷ್ಮಣನಿಗೆ ಸಶರೀರ ಸ್ವರ್ಗಾರೋಹಣ..) ಆದರೆ ಇವುಗಳಿಗಾಗಿ ಎಷ್ಟೇ ತಪಸ್ಸು ಮಾಡಿದರೂ; ನಾವಾಗಿ ಕೇಳಿದರೂ ಅವೆರಡನ್ನೂ ಕೊಡುವುದಿಲ್ಲ.(ತ್ರಿಶಂಕು, ರಾವಣ,ಮೇಘನಾದ, ಶಂಬೂಕ..) ಅಲ್ಲವೇ?


ಒಲಿದು ಬರಬೇಕು-ಹೋಗಬೇಕು. 


ವಿಶ್ವ


Om ShriRamaya Namaha : 206


A Bird's-eye view of Ramayana : 206


Lakshmana is in a fix !

That's it, only a moment ! Lakshmana who was duty bound utters - 

"Ekasya maranam mestumaa

bhootsarvavinaasham "

Which means, 

It doesn't matter if I alone die, but everything should not get annihilated !" - by deciding this he informed ShreeRama about the arrival of Durvaasa. 

Soon after sending off Kaalapurusha, ShreeRama welcomed Durvaasa. Rama prays to him that " the great sage ,what shall I do for you? Kindly say that ". During the time Durvaasa says to Rama - " ShreeRama, I have been performing fasting for one year due to observance which has got accomplished today. Therefore, I wish to eat the food whatever is prepared in your palace ". On hearing this, ShreeRama served him food with great respect . Durvaasa who felt contented having that went to his hermitage by blessing ShreeRama. 



Now Rama is in a fix ! As per the words he had given to Kaalapurusha, Rama has to slay Lakshmana. How can he survive without Lakshmana ? While he was grieving in this way, the wise Lakshmana came . He says to ShreeRama -

" Brother ,do not grieve because of me. The fate of everyone who have been bound to the deeds of the previous birth will be like this. Be bound to the vow and slay me without any fear. If not the hell will be attained . If you have love and affection on me then slay me and be on the side of righteousness by fulfilling the words you have given ".


The distressed ShreeRama called the ministers, Vasishta and other priests immediately. He explained them the incident that had happened in detail . He told them about the duty that he had to done. During the time Vasishta says to Rama - " This is expected for me. Nobody can stand confronting fate. Therefore it will be right to sacrifice Lakshmana. Righteousness should not be ruined ". In this way he advised Rama.


ShreeRama says to Lakshmana - " Lakshmana ! I will sacrifice you. There should not be any flaw in righteousness. Sacrificing and slaying are one and the same for the virtuous men. This is equal to the capital punishment ".


The tears accumulated in the eyes of Lakshmana. He left from there immediately. He went straight away to the shore of Sarayu river without even going to his home. The Gods had already gathered there in the Sarayu river by then. Lakshmana performed Sandhyavandanam and purification ritual . He blocked exhaling and inhaling being focused . Indra took the great mighty man   Lakshmana in his mortal body to the heaven without being visible to the people. The Gods who saw Lakshmana in the heaven who was of Vishnu's quarter component, treated him with all the devotion and hospitality. 


" A brother like Lakshmana is only Lakshmana " - The statement of ShreeRama is true !!



Yes. If Gods get pleased by themselves then they take the humans in the mortal body to the heaven and grant them immortality too ! ( Immortality to Hanuman, Vibheeshana and ascent to the heaven with the mortal body to Lakshmana). But these two will not be given even if we ask and even if many penance are performed . ( Thrishanku ,Ravana, Meghanada, Shambooka...) isn't it ?


It should be come and go by itself. 


Kannada version of the story is written by- 

Shri U S Vishweshwara BhatVishweshwara Bhat. 

Translated by- 

Kum . Rashmi A Suvarna. 

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

ರಾಮಾಯಣ ಹಕ್ಕಿನೋಟ-೨೦೫ A Bird's-eye view of Ramayana : 205

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ

ರಾಮಾಯಣ ಹಕ್ಕಿನೋಟ-೨೦೫


ತಾಪಸ ವೇಷದ ಕಾಲಪುರುಷನು ಶ್ರೀರಾಮನಲ್ಲಿ- ಹೇ ಮಹಾರಾಜ,ದೇವ ಪಿತಾಮಹನ ಆಜ್ಞೆಯಂತೆ ನಾನು ಬಂದಿರುತ್ತೇನೆ.ಅವನ ಮಾತುಗಳನ್ನು ನಿನಗೆ ಹೇಳತ್ತೇನೆ- 

" ನೀನು ಮೂರುಲೋಕಗಳ ರಕ್ಷಣೆಗಾಗಿ  ಮಾಡಿದ್ದ ಪ್ರತಿಜ್ಞೆಯು ಪೂರ್ಣವಾಗಿದೆ.

ನನ್ನನ್ನೂ ಸೇರಿದಂತೆ ಸರ್ವಸೃಷ್ಟಿಗಳ ಹಿಂದೆ ಇರುವ ಶಕ್ತಿ ನೀನು.ಪಾಲಕನೂ ನೀನು. ಹಾಗೆಯೇ ಅಗತ್ಯವಿದ್ದಾಗ ಸಂಹಾರಕನೂ ಆಗರುವೆ.

ರಾವಣನು ಲೋಕಕಂಟಕನಾಗಿರಲು ನರಜನ್ಮದಲ್ಲಿ ಅವತರಿಸಿ ಹನ್ನೊಂದು ಸಾವಿರ ವರ್ಷಗಳ ಕಾಲ ಭೂಮಿಯಲ್ಲಿ ವಾಸಿಸಲು ನಿರ್ಧಾರ ಮಾಡಿದೆ.ರಾವಣನೇ ಮೊದಲಾದ ಲೋಕಕಂಟಕರನ್ನು ನಾಶ ಮಾಡಿದೆ. ನೀನು ಇಲ್ಲಿಗೆ ಬಂದ ಕಾರ್ಯ ಕೈಗೂಡಿತು.ಇಲ್ಲಿನ ನಿನ್ನ ಪೂರ್ಣಾಯುಷ್ಯವೂ ಮುಗಿಯಿತು.ಇದೀಗ ನಮ್ಮ ಬಳಿಗೆ ಬರಲು ಸಕಾಲ.ಇಲ್ಲೇ ಮುಂದುವರಿಯಲೂ ಬಹುದು, ಅಥವಾ ದೇವಲೋಕಕ್ಕೂ ಬರಬಹುದು.ನೀನು ವೈಕುಂಠಕ್ಕೆ ಬಂದರೆ ದೇವತೆಗಳು ಸನಾಥರಾಗಿ ನಿಶ್ಚಿಂತರಾಗಿರುತ್ತಾರೆ"-ರಾಘವ ಇವು ಪಿತಾಮಹನ ಮಾತುಗಳು ಎಂದನು. 

ಪಿತಾಮಹನ ಮಾತುಗಳನ್ನು ಕೇಳಿ ಸುಪ್ರೀತನಾದ ಶ್ರೀರಾಮನು- ಮಹಾಕಾಲನೇ,ದೇವದೇವ ಬ್ರಹ್ಮನ ಮಾತುಗಳಿಂದ ನಾನು ಸುಪ್ರೀತನಾಗಿದ್ದೇನೆ.ನನ್ನ ಅವತಾರದ ಸಂಕಲ್ಪವು ಈಗ ಪೂರ್ಣವಾಗಿದೆ.ನಿನಗೆ ಮಂಗಳವಾಗಲಿ. ನಾನು ಎಲ್ಲಿಂದ ಬಂದಿದ್ದೆನೋ ಅಲ್ಲಿಗೇ ಹೋಗುತ್ತೇನೆ-

ಎಂದನು. 



ಇದೇ ಹೊತ್ತಿಗೆ ಶ್ರೀರಾಮನನ್ನು ಕಾಣಲೆಂದು ದುರ್ವಾಸರು ಬಂದರು.ನಾನು ಕೂಡಲೇ ಮಹತ್ತರ ಕಾರ್ಯಕ್ಕೆ ಶ್ರೀರಾಮನನ್ನು ಕಾಣಬೇಕು ಎಂದರು.ಲಕ್ಷ್ಮಣನು ಮುಹೂರ್ತ ಕಾಲದವರೆಗೆ ಕಾಯಿರಿ ಎಂದು ಪ್ರಾರ್ಥಿಸಿದಾಗ ಅವರ ಸಹನೆ ತಪ್ಪಿತು."ಲಕ್ಷ್ಮಣ! ಈ ಕ್ಷಣದಲ್ಲೇ  ನೀನು;

ನಾನು ಬಂದಿರುವುದನ್ನು ಶ್ರೀರಾಮನಿಗೆ  ಹೇಳಲೇಬೇಕು.

ಒಂದು ವೇಳೆ ನೀನೇನಾದರೂ ಹೇಳದಿದ್ದರೆ ನಿನ್ನನ್ನೂ,

ಅಯೋಧ್ಯೆಯನ್ನೂ,

ರಾಮನನ್ನೂ,ಭರತನನ್ನೂ,

ನಿಮ್ಮ ವಂಶವನ್ನೂ ಹಾಳಾಗಿಹೋಗುವಂತೆ ಶಪಿಸುತ್ತೇನೆ "ಎಂದು ಕೋಪದಲ್ಲಿ ನುಡಿದರು.


ವಿಶ್ವ.


Om ShriRamaya Namaha : 205


A Bird's-eye view of Ramayana : 205


Kaalapurush (fate) who was in the form of an ascetic says to ShreeRama -

" My lord, I have come here as per the command of Brahma. I will convey his words to you -

" The pledge that you have taken to protect the three worlds has been accomplished. 

You are the power which is behind every creation including myself. You are the nurturer. In the same way, you have also become the slayer when it is necessary. When Ravana was flourishing being the trouble monger on the earth ,you decided to born in the form of a mortal and live on the earth for 11,000 years. You annihilated Ravana and other trouble mongers who were there in the world. The work for which you have come here, has been accomplished. Your complete longevity has come to an end here. Now this is the right time for you to come to me. You can continue here or can come to the heaven. If you come to the heaven then the gods will be untroubled being eternal ". Kaalapurusha conveyed these words of Brahma to ShreeRama. 



ShreeRama who was extremely happy hearing the words of Brahma says to Kaalapurusha -

" Mahaakaal, I am in a state of bliss after hearing the words of the lord Brahma. The purpose of my avatara( form) has been fulfilled. Let you be prosperous. I will go to the place where I have come from ".

During the same time, Durvaasa came to see ShreeRama . He said that he wanted to see ShreeRama for an important work immediately. When Lakshmana prayed to him to wait till the Muhoortha period, he lost his temper. Durvaasa being angry says to Lakshmana -

"Lakshmana ! You have to tell ShreeRama about my arrival here, at this moment itself. Incase you do not convey then I will curse you, Ayodhya, Rama, Bharatha and your entire clan to get annihilated ". 


Kannada version of the story is written by- 

Shri U S Vishweshwara Bhat  

Translated by- 

Rashmi A Suvarna  

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

ರಾಮಾಯಣ ಹಕ್ಕಿನೋಟ-೨೦೪ A Bird's-eye view of Ramayana : 204

 ಶ್ರೀರಾಮಾಯನಮ:


ರಾಮಾಯಣ ಹಕ್ಕಿನೋಟ-೨೦೪


ಭರತನ ಮಕ್ಕಳಾದ ತಕ್ಷ  ಪುಷ್ಕಲರಿಗೆ ಪಟ್ಟಾಭಿಷೇಕ ಮಾಡಿದ ಬಳಿಕ ಶ್ರೀರಾಮನು ಲಕ್ಷ್ಮಣನ ಮಕ್ಕಳಾದ ಅಂಗದ ಮತ್ತು ಚಂದ್ರಕೇತು ಇವರಿಗೆ ಪಟ್ಟಾಭಿಷೇಕ ಮಾಡಲು ನಿಶ್ಚಯಿಸಿ ತಮ್ಮಂದಿರ ಸಲಹೆಗಳನ್ನು ಕೇಳಿದನು.ಆಗ ಭರತನು ಅಂಗದನಿಗೆ ಕಾರುಪಥವನ್ನೂ,ಚಂದ್ರಕೇತುವಿಗೆ ಮಲ್ಲದೇಶವನ್ನೂ ಸೂಚಿಸಿದಾಗ ಎಲ್ಲರೂ ಸಂತೋಷದಿಂದ ಒಪ್ಪಿದರು.ಕಾರುಪಥದಲ್ಲಿ ಅಂಗದೀಯಾ ಎಂಬ ಪಟ್ಟಣವನ್ನು ನಿರ್ಮಿಸಿ ಅದಕ್ಕೆ ಅಂಗದನನ್ನು ರಾಜನನ್ನಾಗಿ ಪಟ್ಟಾಭಿಷೇಕ ಮಾಡಿ ಶ್ರೀರಾಮನು  ಲಕ್ಷ್ಮಣನೊಂದಿಗೆ ಅವನನ್ನು ಅಲ್ಲಿಗೆ ಕಳುಹಿಸಿದನು. ಮಲ್ಲದೇಶದಲ್ಲಿ  ಚಂದ್ರಕಾಂತ ನಗರವನ್ನು ನಿರ್ಮಿಸಿ ಅದಕ್ಕೆ ಚಂದ್ರಕೇತುವನ್ನು ರಾಜನನ್ನಾಗಿಸಿ ಪಟ್ಟಾಭಿಷೇಕ ಮಾಡಿದ ಶ್ರೀರಾಮನು ಭರತನೊಂದಿಗೆ ಅವನನ್ನು ಅಲ್ಲಿಗೆ ಕಳಿಸಿದನು. ಭರತ ಲಕ್ಷ್ಮಣರು ಒಂದು ವರ್ಷದ ಕಾಲ ಕುಮಾರರೊಂದಿಗಿದ್ದು ಬಳಿಕ ಅಣ್ಣನತ್ತ ಧಾವಿಸಿದರು.

ಸ್ವಂತ ಮಕ್ಕಳನ್ನಾದರೂ ಬಿಟ್ಟು ಇದ್ದಾರು ಅಣ್ಣ ರಾಮನನ್ನಲ್ಲ! ಎನ್ನುವ ಅಪೂರ್ವ ಸೋದರ ಪ್ರೇಮ ಆ ಸೋದರರದು!



ರಾಮ ಭರತ ಲಕ್ಷ್ಮಣರು ಪ್ರಜೆಗಳಿಗೆ ಹಿತವಾಗುವ ಕಾರ್ಯಗಳಲ್ಲಿಯೂ,ಧಾರ್ಮಿಕ ಕಾರ್ಯಗಳಲ್ಲಿಯೂ ಸದಾ ಮಗ್ನರಾಗಿರುತ್ತಿದ್ದರು.ಹೀಗೆ ಹತ್ತು ಸಾವಿರ ವರ್ಷಗಳು ಕಳೆದು ಹೋದವು! 


ಹೀಗಿರುತ್ತಾ ಒಂದು ದಿನ ಕಾಲಪುರುಷನು ತಪಸ್ವಿಯ ವೇಷವನ್ನು ಧರಿಸಿ ಶ್ರೀರಾಮನ ಅರಮನೆಯ  ಮಹಾದ್ವಾರಕ್ಕೆ ಬಂದನು.ಲಕ್ಷ್ಮಣನಲ್ಲಿ ತಾನು ಅತಿ ಅಗತ್ಯದ ಕಾರ್ಯದ ಸಲುವಾಗಿ ಶ್ರೀರಾಮನನ್ನು ಕಾಣಬೇಕು ಎಂದನು. ಲಕ್ಷ್ಮಣನು ಶ್ರೀರಾಮನ ಅನುಮತಿಯನ್ನು ಪಡೆದು ಅವನನ್ನು  ಶ್ರೀರಾಮನಲ್ಲಿಗೆ ಕರೆತಂದನು. ಋಷಿಯೋಗ್ಯ ಸತ್ಕಾರದ ಬಳಿಕ ಶ್ರೀರಾಮನು ತಪಸ್ವಿಯಲ್ಲಿ ಬಂದ ಕಾರಣವನ್ನು ಕೇಳಿದನು. ಆಗ ಆ ತಪಸ್ವಿಯು ಏಕಾಂತ ಭೇಟಿಯನ್ನು ಬಯಸಿ;ಅದಕ್ಕೆ ವಿಘ್ನ ತರುವವರಿಗೆ ಮರಣದಂಡನೆಯನ್ನು ವಿಧಿಸಬೇಕಾದ ಶರತ್ತನ್ನು ಹೇಳಿದನು.ಶ್ರೀರಾಮನು ಅದಕ್ಕೆ ಒಪ್ಪಿ ಲಕ್ಷ್ಮಣನಲ್ಲಿ- ಲಕ್ಷ್ಮಣ! ದ್ವಾರಪಾಲಕನನ್ನು ಕಳುಹಿಸಿ ನೀನೇ ಆ ಸ್ಥಾನದಲ್ಲಿರು.ನಾವಿಬ್ಬರು ಮಾತಾಡುವುದನ್ನು ಯಾರು ಕೇಳಿಸಿಕೊಳ್ಳುತ್ತಾರೋ ನೋಡುತ್ತಾರೋ ಅಂತಹವನು ನನ್ನಿಂದ ವಧಿಸಲ್ಪಡುತ್ತಾನೆ.

ಇದು ನನ್ನ ಪ್ರತಿಜ್ಞೆಯಾಗಿದೆ- ಎಂದನು. 

ರಾಜಾಜ್ಞೆಯಂತೆ

ಲಕ್ಷ್ಮಣನು ಕಾವಲು ನಿಂತನು.


ವಿಶ್ವ


Om ShriRamaya Namaha : 204


A Bird's-eye view of Ramayana : 204


After coronating Thaksha and Pushkala, the children of Bharatha, ShreeRama decided to coronate Lakshmana's children Angada and Chandrakethu . He asked the advise of his brothers regarding coronating them. During the time Bharatha suggested ' Kaarupatha' to Angada and the country ' Malla' to Chandrakethu for which everyone agreed happily. By building the town ' Angadeeya' in Kaarupatha, ShreeRama coronated Angada as its king and sent him there along with Lakshmana. By building ' Chandrakaantha ' town in the country Malla ,Rama coronated Chandrakethu as its king and sent him there along with Bharatha. Bharatha and Lakshmana spent a year with the children and then returned to their elder brother. 

They may live without their own children, but not Rama ! Such kind of unprecedented brotherly love was there among the brothers !


Rama, Bharatha and Lakshmana always engrossed themselves in the religious deeds and in the deed which were good for the citizens. Ten thousand years elapsed in this way !



During this time, one day Kaalapurusha( fate) came to the great entrance of ShreeRama's palace in the disguise of an ascetic. He told Lakshmana that he wanted to see ShreeRama since there was something important to discuss with him. Lakshmana with the consent of ShreeRama, brought the man before ShreeRama. After treating him respectfully with the suitable hospitality which should be given to an ascetic, ShreeRama asked him the reason for his arrival. During the time the ascetic wished to have a secret meeting with him and further asked Rama to give a capital punishment to those who would be an impediment to their meeting. ShreeRama agreed to his condition. ShreeRama calls and says to Lakshmana - 

" Lakshmana ! Stand in the position of the guard by sending him out. Whoever hears what we speak, they will be slayed by me. This is my vow ". As per the command of the king ,Lakshmana stood there watching over.



Kannada version of the story is written by- 

Shri U S Vishweshwara Bhat 

Translated by- 

Rashmi A Suvarna 

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ