ಶ್ರೀರಾಮಾಯಣ ಹಕ್ಕಿನೋಟ -೧೮೦ A Bird's-eye view of Ramayana : 180

 ಶ್ರೀ ರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೮೦


ಒಂದು ಅಪೂರ್ವ ಸನ್ನಿವೇಶ-ಸಂದರ್ಭ!

ಸಿಂಹಾಸನದಲ್ಲಿ ರಾಮ. ಅವನ ತೊಡೆಗಳಲ್ಲಿ ಯುವರಾಜ ಅಂಗದ ಮತ್ತು ಸುಗ್ರೀವಸಖ-ಮಂತ್ರಿ  ಹನುಮ! ರಾಮ  ಸುಗ್ರೀವನಿಗೆ ಅವರಿಬ್ಬರನ್ನೂ ಜೋಪಾನವಾಗಿ ನೋಡಿಕೊಳ್ಳುವ ಹೊಣೆಯನ್ನಿತ್ತ. ಬಳಿಕ  ತನ್ನ ಮೈಮೇಲೆ ಇದ್ದ ಆಭರಣಗಳನ್ನೆಲ್ಲಾ 

ತೆಗೆದು ಅವರಿಬ್ಬರಿಗೆ ತೊಡಿಸಿದ.ಅವರು ತನಗಾಗಿ ಮಾಡಿದ ನಿಸ್ವಾರ್ಥ ಸೇವೆಯನ್ನು ಇದಲ್ಲದೆ ಬೇರಾವ ರೀತಿಯಲ್ಲಿ ತಾನೇ  ರಾಮ ಸ್ಮರಿಸಬಲ್ಲ!?


ರಾಮ ಸುಗ್ರೀವನ ಸೇನಾನಾಯಕರಾದ ನಲ ನೀಲ ಮೊದಲಾದ  ಇಪ್ಪತ್ತು ಮಂದಿ  ವಾನರವೀರರನ್ನು-ನೀವೆಲ್ಲರೂ ನನ್ನನ್ನು ವ್ಯಸನದಿಂದ ಉದ್ಧರಿಸಿದಿರಿ.ನನ್ನ ಸೋದರ ಸುಹೃದ ಶರೀರವೇ ಆಗಿರುವಿರಿ-ಎನ್ನುತ್ತಾ ಅವರನ್ನೂ ಸಂಮಾನಿಸಿದ.

ಸುಗ್ರೀವನನ್ನು ಪದೇ ಪದೇ ಆಲಂಗಿಸುತ್ತಾ ಉತ್ತಮ ಆಡಳಿತವನ್ನು ಹಾರೈಸುತ್ತಾ ಹಾರವನ್ನು ತೊಡಿಸಿ ಬೀಳ್ಕೊಳ್ಳಲಾರದೆ ಬೀಳ್ಕೊಟ್ಟನು.

ವಿಭೀಷಣನನ್ನು-  ಲಂಕೆಯನ್ನು ಧರ್ಮದಿಂದ ಶಾಸನ ಮಾಡು.ಸುಗ್ರೀವ ಸಹಿತನಾದ ನನ್ನನ್ನು ನೆನಪಿಸುತ್ತಿರು- ಎಂದು  ಪ್ರೀತಿಯಿಂದ ಬೀಳ್ಕೊಟ್ಟನು.



ಕೊನೆಯದಾಗಿ ಹನುಮನ ಸರದಿ!ಎಲ್ಲರಿಗೂ ರಾಮ ಹೇಳಿದರೆ ಇಲ್ಲಿ ಅವನೇ ರಾಮನಿಗೆ ಹೇಳಿದ!

"ಯಾವದ್ರಾಮಕಥಾ ವೀರ 

ಚರಿಷ್ಯತಿ ಮಹೀತಲೇ|

ತಾವಚ್ಛರೀರೇ ವತ್ಸ್ಯನ್ತು

ಪ್ರಾಣಾ ಮಮ ನ ಸಂಶಯ:|| 

ಈ ಭೂಮಂಡಲದಲ್ಲಿ ಎಂದಿನವರೆಗೆ ರಾಮಕಥೆಯು ಪ್ರಚಲಿತವಾಗಿರುವುದೋ ಅಂದಿನವರೆಗೂ ಯಾವ ಶಂಕೆಯೂ ಇಲ್ಲದೇ ನನ್ನ ಪ್ರಾಣಗಳು ಈ ಶರೀರದಲ್ಲಿರಲಿ!- ಎಂದು ರಾಮನಲ್ಲಿ ಬಿನ್ನವಿಸಿದ.

ಹನುಮನ ಪ್ರೀತಿ ರಾಮನನ್ನು ಪಟ್ಟದಿಂದ ಏಳುವಂತೆ ಮಾಡಿತು! ರಾಮ ಹನುಮನನ್ನು ಬಾಚಿ ತಬ್ಬಿ-ಜಗತ್ತು ಇರುವವರೆಗೆ ನನ್ನ  ಕಥೆಯೂ ಇರುತ್ತದೆ; ನೀನೂ ಇರುತ್ತಿ,ಕತೆ ಕೇಳುತ್ತಿ.ನೀನು ಮಾಡಿದ ಉಪಕಾರಗಳೆಲ್ಲವೂ ನನ್ನ ಶರೀರದಲ್ಲಿ ಜೀರ್ಣವಾಗಿ ಹೋಗಲಿ.ನಿನಗೆ ಪ್ರತ್ಯುಪಕಾರ ಮಾಡುವುದೆಂದರೆ ನಿನಗೆ ಆಪತ್ತು ಬರುವುದನ್ನು ನಿರೀಕ್ಷಿಸುವುದಾಗುತ್ತದೆ.ಅದು ಬೇಡವೇ ಬೇಡ.ಅದು ನನ್ನಲ್ಲೇ ಕರಗಿ ಹೋಗಲಿ ( ಈ ಕಷ್ಟ ಬೇರಾರಿಗೂ ಬರುವುದು ಬೇಡ ಎಂದೂ ಅರ್ಥೈಸಬಹುದು)-ಎಂದು ತನ್ನ ಕೊರಳಲ್ಲಿದ್ದ ವೈಢೂರ್ಯ ಮಣಿಗಳ ಚಂದ್ರಹಾರವನ್ನು ಅವನ ಕೊರಳಿಗೆ ಹಾಕಿದನು.

ತುಂಬಿದ ಕಂಗಳು.

ಕಣ್ಣೀರ ಕೆನ್ನೆಗಳು! 

ಗದ್ಗದ ಕಂಠಗಳು

ಭಾರವಾದ ಹೃದಯಗಳು!

ವಾನರ ಋಕ್ಷ ರಾಕ್ಷಸರು ರಾಮಪಾದಗಳಿಗೆ ಮಣಿದು ಅವನ ಅನುಮತಿ ಪಡೆದು ಭಾರವಾದ ಹೃದಯದಿಂದ  ಹೊರಟರು.

ಸುಗ್ರೀವ ವಿಭೀಷಣರು ಬಹಳ ಹೊತ್ತು ರಾಮನನ್ನು ತಬ್ಬಿ ಹಿಡಿದಿದ್ದರು.ಅಣ್ಣಂದಿರನ್ನು ಕಳೆದುಕೊಂಡ ಅವರಿಗೆ ಸೋದರತೆಯ ಪ್ರೇಮಾಮೃತವನ್ನುಣಿಸಿದ ದೊಡ್ಡಣ್ಣ ಸಿಕ್ಕಿದ್ದ.ಅವರಿಬ್ಬರೂ ಮುಂದುಗಾಣದಾಗಿದ್ದರು.

ಎಲ್ಲಿಯ ಅಯೋಧ್ಯೆ-ರಾಮ,

 ಎಲ್ಲಿಯ ಕಿಷ್ಕಿಂಧೆ- ಸುಗ್ರೀವ!

 ಎಲ್ಲಿಯ ಲಂಕೆ - ವಿಭೀಷಣ! ಇದು ಯಾವ ಜನ್ಮ ಜನ್ಮಾಂತರಗಳ

 ಬಂಧ-ಸಂಬಂಧ!!

ಮಾನವ ಮಾಧವನಾದಾಗ ವಾನರ ರಾಕ್ಷಸರು ಮಾನವರಾಗುತ್ತಾರೆ.ರಾಮನು ಮಾಧವ ಹೃದಯದ ಮಾನವನಾಗಿ ವಾನರ- ರಾಕ್ಷಸರನ್ನು ತನ್ನವರನ್ನಾಗಿಸಿದ!

ರಾಮನಿಗೆ ರಾಮನೇ ಸಾಟಿ!

ಹನುಮನಿಗೆ ಹನುಮ!!

ಒಬ್ಬ ರಾಮ! 

ಒಬ್ಬನೇ ಒಬ್ಬ ಹನುಮ!!


ನಮೋನಮ: ನಮೋನಮ:


ವಿಶ್ವ


Om ShriRamaya Namaha : 180


A Bird's-eye view of Ramayana : 180


An uncommon situation - circumstance !

Rama on the royal throne. The prince Angada and Sugreeva's friend - the minister Hanuman on the laps of Rama ! Rama gave the responsibility of taking care of Angada and Hanuman to Sugreeva. Later he took off all the jewelries that he had on him and put them on both Angada and Hanuman. 

How could Rama remember the selfless service of those to him other than this way !?


Rama said addressing Sugreeva's chief commanders such as Nala ,Neela and other twenty monkey warriors that they had saved him from grief and sorrow. Rama honored them by saying that they would remain as his own brothers. He sent them off being half hearted by embracing Sugreeva again and again. He garlanded Sugreeva and wished him for the best administration. 

He sent Vibhishana off with affection by advising him to reign Lanka righteously and asked him to keep remembering him along with Sugreeva. 



Finally, it was the turn of Hanuman !

Rama had spoken to everyone but Hanuman himself spoke to Rama there!

He cites, 

" Yaavadraamakathaa veera

charishyathi maheethale |

thaavachareere vatsyanthu

praanaa mama na samshayaha : ||

Which means, 

he requests Rama ,

" Let the life not depart from my body until the story of Rama exists on this earth !"

The love of Hanuman made Rama arose from his throne ! Rama embraced Hanuman and states that - " my story exists till the world exists ; you too will exist and hear the story. Let all the favor that you have done for me, assimilate in my body. Returning your favor would be like anticipating a threat to your life. And that should never happen. Let that emaciate in myself. ( It can be understood as he doesn't want anyone to face such kind of misery). By stating this Rama put the chain 'Chandrahaara' made of precious stones which he had around his neck on Hanuman. 

The teary eyes. 

The tears on the cheeks !

Choked voices !

The heavy hearts !

The apes ,yakshas and the monsters bowed down to the feet of Rama and set off with heavy hearts after taking the consent of Rama. Sugreeva and Vibhishana embraced Rama for a long time. They got an elder brother who fed them the nectar of brotherly love who had lost their elder brothers. Both Sugreeva and Vibhishana did know what to do.

Where is Ayodhya - Rama, 

where is Kishkindha - Sugreeva !

where is Lanka - Vibhishana ! 

The relationship and the bonding of so many births !!

When a human becomes Madhava( Krishna), the apes and the monsters become humans. Rama being the human with the heart of Madhava embraced the apes and the monsters as his own !

Rama is matched with only Rama !

Hanuman for Hanuman !!

There is only one Rama !

Only one Hanuman !!


Kannada version of the story is written by- 

Shri U S Vishweshwara Bhat

Translated by- 

Kum. Rashmi A Suvarna 

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....