source: whataspp forward message
ನಿತ್ಯ ದೇವರ ಸಂಕ್ಷಿಪ್ತ ಪೂಜೆ ಮಾಡುವ ಕ್ರಮ
[ನಿತ್ಯ ದೇವರ ಪೂಜೆಯನ್ನು ಸಂಕ್ಷಿಪ್ತವಾಗಿ ಮಾಡ ಬಯಸುವವರು ಮೂವತ್ತು ನಿಮಿಷಗಳಲ್ಲಿ ದೇವರ ಪೂಜೆಯನ್ನು ಈ ಕೆಳಕಂಡಂತೆ ಮಾಡಬಹುದು]
ಶ್ರೀ ಗುರುಭ್ಯೋ ನಮಃ|| ಹರಿಃ ಓಂ ||
ಓಂ, ಅಪವಿತ್ರಃ ಪವಿತ್ರೋವ ಸರ್ವಾವಸ್ಥಾಂ ಗತೋಪಿವಾ | ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
[ದೇವರ ಸ್ಮರಣೆ ಮಾಡುತ್ತಾ ಶಿರಸ್ಸಿಗೆ ನೀರು ಪ್ರೊಕ್ಷಣೆ ಮಾಡಿಕೊಳ್ಳಬೇಕು]
ದೀಪ ಪ್ರಜ್ಯಾಲಯಾಮ್:
[ದೀಪವನ್ನು ಹಚ್ಚಿ ನಮಸ್ಕರಿಸುವುದು]
ದೀಪಂ ಜ್ಯೋತಿ ಪರಂ ಬ್ರಹ್ಮಾ ದೀಪಂ ಸರ್ವ ತಮೋಪಹಂ| ಇಷ್ಟಾ ಕಾಮ್ಯಾರ್ಥ ಸಿದ್ಧ್ಯರ್ಥಂ ದೀಪ ಪ್ರಜ್ಯಾಲಯಾಮ್ಯಾಹಂ||
ಆಚಮನ [ದ್ವಿರಾಚಮ್ಯ]
ಪ್ರಾರ್ಥನಂ:
ಓಂ, ಶ್ರೀ ಗಣೇಶಾಯ ನಮಃ || ಶ್ರೀ ಗುರುಭ್ಯೋ ನಮಃ || ಶ್ರೀ ಕುಲದೇವತಾಭ್ಯೋ ನಮಃ | ಇಷ್ಟದೇವತಾಭ್ಯೋ ನಮಃ | ಗ್ರಾಮದೇವತಾಭ್ಯೋ ನಮಃ | ಸ್ಥಾನದೇವತಾಭ್ಯೋ ನಮಃ | ಆದಿತ್ಯಾದಿನವಗ್ರಹ ದೇವತಾಭ್ಯೋ ನಮಃ | ಸರ್ವೇಭ್ಯೋ ದೇವೇಭ್ಯೋ ನಮಃ | ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮಃ | ಏತತ್ಕರ್ಮಪ್ರಧಾನದೇವತಾಭ್ಯೋ ನಮಃ |
(ಇಲ್ಲಿ ಕುಲದೇವತಾ, ಇಷ್ಟದೇವತಾ ಎಂದಕಡೆಯಲ್ಲಾ ನಿಮ್ಮ ಮನೆ ದೇವರ, ನಿಮ್ಮ ಇಷ್ಟ ದೇವರ ಹೆಸರನ್ನು ಹೇಳಬಹುದು)
ಘಂಟಾನಾದನಂ: [ಘಂಟೆಗೆ ಹೂವು ಅಕ್ಷತೆ ಏರಿಸಿ ಗಂಟೆ ಬಾರಿಸುವುದು]
ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ || ಕುರ್ವೇ ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ || ಇತಿ ಘಂಟಾನಾದಂ ಕೃತ್ವಾ ||
|| ನಿರ್ವಿಘ್ನಮಸ್ತು ||
ಶ್ರೀ ಮಹಾಗಣಪತಯೇ ನಮಃ
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ | ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||
ಭೂತೋಚ್ಚಾಟನಂ:
ಅಪಸರ್ಪಂತು ಯೇ ಭೂತಾ ಯೇ ಭೂತಾ ಭುವಿ ಸಂಸ್ಥಿತಾಃ || ಯೇ ಭೂತಾ ವಿಘ್ನಕರ್ತಾರಸ್ತೇ ನಶ್ಯಂತು ಶಿವಾಜ್ಞಯಾ || ಅಪಕ್ರಾಮಂತು ಭೂತಾದ್ಯಾಃ ಸರ್ವೇತೇ ಭೂಮಿ ಭಾರಕಾಃ || ಸರ್ವೇಷಾಮವಿರೋಧೇನ ಪೂಜಾಕರ್ಮ ಸಮಾರಭೇತ್ ||
ಆಸನಶುದ್ದಿಃ
[ಶುಚಿಗೊಳಿಸಿದ ಪೀಠವನ್ನು ಮುಟ್ಟುವುದು, ಪೀಠದ ಮೇಲೆ ನಾಲ್ಕು ದಿಕ್ಕಿಗೂ ಹೂವು ಇಡುವುದು]
ಪೃಥಿವೀತಿ ಮಂತ್ರಸ್ಯ ಮೇರುಪೃಷ್ಠ ಋಷಿಃ | ಕೂರ್ಮೋ ದೇವತಾ ಸುತಲಂ ಛಂದಃ ಆಸನೇ ವಿನಿಯೋಗಃ | ಅನಂತಾಸನಾಯ ನಮಃ || ಕೂರ್ಮಾಸನಾಯ ನಮಃ || ಪೃಥ್ವಿ ತ್ವಯಾ ಧೃತಾ ಲೋಕ ದೇವಿತ್ವಂ ವಿಷ್ಣುನಾ ಧೃತಾ | ತ್ವಂ ಚ ಧಾರಯ ಮಾಂ ದೇವಿ ಪವಿತ್ರಮ್ ಕುರುಚಾಸನಮ್ ||
ಆಚಮನ, ಪ್ರಾಣಾಯಾಮ ಮಾಡುವುದು.
ಸಂಕಲ್ಪಃ
[ ಕೈಯಲ್ಲಿ ಹೂವು ಅಕ್ಷತೆ ತೆಗೆದುಕೊಂಡು ಎಡಕೈಯಲ್ಲಿ ಹಾಕಿ ಬಲಗೈಯನ್ನು ಮುಚ್ಚಿ , ಬಲ ತೊಡೆಯ ಮೇಲೆ ಇಟ್ಟುಕೊಂಡು ಹೇಳಬೇಕು ]
ಶುಭಾಭ್ಯಂ ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತವರಾಹ ಕಲ್ಪೇ ವ್ಯೆವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತವರ್ಷೆ ಭರತ ಖಂಡೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೆ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರ ಮಾನೇನ _ ಸಂವತ್ಸರೇ _ಆಯನೇ _ಋತೌ_ಮಾಸೇ _ಪಕ್ಷೇ _ತಿಥೌ_ವಾಸರೇ ಶುಭನಕ್ಷತ್ರೇ ಶುಭಯೋಗೆ ಶುಭಕರಣೆ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯತಿಥೌ, ಮಮ ಉಪಾತ್ತ ಸಮಸ್ತ ದುರಿತಕ್ಷಯದ್ವಾರ | ಶ್ರೀ ಪರಮೇಶ್ವರ ಪ್ರೀತ್ಯರ್ಥಂ | ಶ್ರೀ ಕುಲದೇವತಾ, ಇಷ್ಟದೇವತಾ ಪ್ರೀತ್ಯರ್ಥಂ | ಯಥಾಶಕ್ತಿ, ಯಥಾ ಜ್ಞಾನ, ಧ್ಯಾನ-ಆವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ||
[ ಎಡಗೈಯಲ್ಲಿ ಇರುವ ಹೂ ಅಕ್ಷತವನ್ನು ಬಲಗೈಗೆ ಹಾಕಿ ಎಡಗೈಯಿಂದ ಒಂದು ಸೌಟು ನೀರು ಹಾಕಿ ಹರಿವಾಣಕ್ಕೆ ಬಿಡಬೇಕು ]
ತದಂಗತ್ವೇನ ಕಲಶಾರ್ಚನಂ, ಶಂಖಾರ್ಚನಂ ಚ ಕರಿಷ್ಯೇ | [ "ಕರಿಷ್ಯೇ" ಎಂದಾಗಲೆಲ್ಲಾ ಬಲಹಸ್ತದಿಂದ ನಾಲ್ಕು ಬೆರಳ ತುದಿಯಿಂದ ಹರಿವಾಣಕ್ಕೆ ಒಂದು ಸೌಟು ನೀರು ಬಿಡಬೇಕು ]
ನಿರ್ವಿಘ್ನತಾ ಸಿಧ್ಯರ್ಥಂ ಶ್ರೀ ಮಹಾಗಣಪತಿ ಪ್ರಾರ್ಥನಂ ಚ ಕರಿಷ್ಯೇ ||
ಓಂ, ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ | ಲಂಬೋದರಶ್ಚ ವಿಕಟೋ ವಿಘ್ನನಾಶೋ ಗಣಾಧಿಪಃ || ಧೂಮ್ರಕೇತುರ್ಗಣಾಧ್ಯಕ್ಷೋ ಭಾಲಚಂದ್ರೋ ಗಜಾನನಃ | ದ್ವಾದಶೈತಾನಿ ನಾಮಾನಿ ಯಃ ಪಠೇತ್ ಶೃಣುಯಾದಪಿ | ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ | ಸಂಗ್ರಾಮೇ ಸಂಕಟೇ ಚೈವ ವಿಘ್ನಸ್ತಸ್ಯ ನ ಜಾಯತೇ ||
|| ಅಥ ಕಲಶ ಪೂಜಾಂ || [ನೀರು ತುಂಬಿದ ಕಲಶವನ್ನು ದೇವರ ಬಲ/ಎದುರು/ನಮ್ಮ ಬಲ ಭಾಗದಲ್ಲಿ, ನೀರಿನಲ್ಲಿ ನೆಲದ ಮೇಲೆ ಚತುರಶ್ರ ಮಂಡಲಹಾಕಿ ಅದರ ಮೇಲಿಟ್ಟು, ಅದಕ್ಕೆ ಹೂವು,ದೂರ್ವೆ, ತುಲಸಿ ಕುಡಿ ಹಾಕಿ, ಅದರ ಮೇಲೆ (ಎರಡು) ಕೈ ಇಟ್ಟುಕೊಂಡು ಅಭಿಮಂತ್ರಿಸುವುದು]
ಕಲಶಸ್ಯ ಮುಖೇ ವಿಷ್ಣುಃ | ಕಂಠೇ ರುದ್ರಃ ಸಮಾಶ್ರಿತಃ | ಮೂಲೇ ತತ್ರ ಸ್ಥಿತೋ ಬ್ರಹ್ಮಾ | ಮಧ್ಯೇ ಮಾತೃಗಣಾಃ ಸ್ಮೃತಾಃ || ಕುಕ್ಷೌ ತು ಸಾಗರಾಃ ಸರ್ವೇ ಸಪ್ತದ್ವೀಪಾ ವಸುಂಧರಾ | ಋಗ್ವೇದೋSಥ ಯಜುರ್ವೇದಃ ಸಾಮವೇದೋ-ಹ್ಯಥರ್ವಣಃ ||
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಓಂ ಭೂರ್ಭುವಸ್ಸುವಃ || ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ | ಓಮಾಪೋಜ್ಯೋತಿ ರಸೋSಮೃತಂ ಬ್ರಹ್ಮ ಭೂರ್ಭುವಸ್ಸುವರೋಂ ||
ಕಲಶಾಧಿ ದೇವತಾಭ್ಯೋ ನಮಃ || ಗಂಧ ಪುಷ್ಪಾ ಅಕ್ಷತಾನ್ ಸಮರ್ಪಯಾಮಿ | ಇತಿ ಕಲಶಾರ್ಚನಂ ||
(ಗಂಧ ಮುಟ್ಟಸಿದ ಹೂವು, ದೂರ್ವೆ, ತುಳಸಿ ಹಾಕಿ ನಮಸ್ಕರಿಸುವುದು)
|| ಅಥ ಶಂಖ ಪೂಜಾಂ || [ಶಂಖವನ್ನು ಕೈಯಲ್ಲಿ ತೆಗೆದುಕೊಂಡು ಓಂಕಾರ ಹೇಳಿ, ನೀರು ತುಂಬಿಸಿ, ಗಂಧ ಪುಷ್ಪಾದಿಗಳನ್ನು ಅದಕ್ಕೆ ಏರಿಸಿ, ಪುನಃ ಅದರ ಸ್ಥಾನದಲ್ಲಿಡುವುದು]
ಶಂಖಂ ಚಂದ್ರಾರ್ಕ ದೈವತ್ಯಂ ಮಧ್ಯೇ ವರುಣ ದೇವತಾಃ | ಪೃಷ್ಟೇ ಪ್ರಜಾಪತಿಸ್ತತ್ರ ಅಗ್ರೇ ಗಂಗಾ ಸರಸ್ವತಿ || ಪಾಂಚಜನ್ಯಾಯ ವಿದ್ಮಹೇ ಪದ್ಮ ಗರ್ಭಾಯ ಧೀಮಹಿ | ತನ್ನಃ ಶಂಖ ಪ್ರಚೋದಯಾತ್ ||
ಇತಿ ಶಂಖಾರ್ಚನಂ ||
[ಶಂಖ ಜಲವನ್ನು ಸ್ವಲ್ಪ ಕಳಶಕ್ಕೆ ಹಾಕಿ, ತುಳಸೀ ಕುಡಿಯಿಂದ ತನಗೂ, ಉಪಕರಣಗಳಿಗೂ, ಚಮಕಿಸಿ ಉಳಿದುದನ್ನು ಬರಿದುಮಾಡಿ, ಪುನಃ ಓಂಕಾರದಿಂದ ಕಲಶದ ನೀರನ್ನು ತುಂಬಿ ಯಥಾಸ್ಥಾನದಲ್ಲಿ- ಮಂಟಪದಲ್ಲಿ ದೇವರ ಬಲಕ್ಕೆ ಚಿಕ್ಕ ಬಟ್ಟಲಲ್ಲಿ ಇಡುವದು]
|| ಅಥ ನಿರ್ವಿಘ್ನತಾ ಸಿಧ್ಯರ್ಥಂ ಶ್ರೀ ಮಹಾಗಣಪತಿ ಪೂಜಾಂ ಚ ಕರಿಷ್ಯೇ || [ ಹೂವು ಮತ್ತು ಅಕ್ಷತೆಯನ್ನು ಕೈಯಲ್ಲಿ ಹಿಡಿದುಕೊಂಡು, ನಿತ್ಯಪೂಜೆಯನ್ನು ನಿರ್ವಿಘ್ನದಿಂದ ನಡೆಸಿಕೊಡುವಂತೆ ಗಣಪತಿಯನ್ನು ಪ್ರಾರ್ಥಿಸಿಕೊಂಡು ನಂತರ ಷೋಡಶೋಪಚಾರ ಪೂಜೆಯನ್ನು ಮಾಡುವುದು. ನಿತ್ಯ ಪೂಜೆಯಲ್ಲಿ ಗಣಪತಿಯ ಸ್ಮರಣೆ ಮತ್ತು ಶ್ಲೋಕಗಳನ್ನು ಪಠಿಸಿದರೆ ಸಾಕು ]
ಓಂ ಶ್ರೀ ಮಹಾಗಣಪತಯೇ ನಮಃ || ಧ್ಯಾಯಾಮಿ ||
ಓಂ ಗಣಾನಾಂ” ತ್ವಾ ಗಣಪ’ತಿಂ ಹವಾಮಹೇ | ಕವಿಂ ಕ’ವೀನಾಮ್-ಉಪಮಶ್ರ’ವಸ್ತಮಂ |
ಜ್ಯೇಷ್ಠರಾಜಂ ಬ್ರಹ್ಮ’ಣಾಂ ಬ್ರಹ್ಮಣಸ್ಪತ | ಆ ನಃ’ ಶೃಣ್ವನ್ನೊತಿಭಿ’ಸ್ಸೀದ ಸಾದ’ನಂ ||
ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ |
ಶ್ರೀ ಮಹಾಗಣಪತಯೇ ನಮಃ | ವೇದೋಕ್ತ ಮಂತ್ರಪುಷ್ಪಂ ಸಮರ್ಪಯಾಮಿ || ಸಮಸ್ಕಾರಾನ್ ಸಮರ್ಪಯಾಮಿ ||
ಮನಸಾಭೀಷ್ಟ ಪ್ರಾರ್ಥನಾನ್ ಸಮರ್ಪಯಾಮಿ || [ ಕೈ ಮುಗಿದು ಪ್ರಾರ್ಥಿಸುವುದು]
ಅನಯಾ ಪೂಜಯಾ ಮಹಾಗಣಪತಿಃ ಸುಪ್ರೀತಃ ಸುಪ್ರಸನ್ನೋ ವರದೋ ಭವತು | ಮಮ ಇಷ್ಟಾರ್ಥ ಸಿದ್ಧಿರಸ್ತು ||
[ ನಿತ್ಯ ಪೂಜೆಯಲ್ಲಿ ಗಣಪತಿಯ ಪೂಜೆ ಇಷ್ಟೇ ಸಾಕು ]
__________
|| ತತ್ವಾರ್ಥ ಧ್ಯಾನಂ || [ ಆತ್ಮಾರಾಧನೆ ]
ದೇಹೋ ದೇವಾಲಯಃ ಪ್ರೋಕ್ತೋ ಜೀವೋ ದೇವಃ ಸದಾಶಿವಃ | ತ್ಯಜೇದ್ ಅಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್ || [ದೇಹವನ್ನು ದೇವಾಲಯವೆಂದೂ, ಜೀವನು ಪರಮಾತ್ಮನಾದ ಸದಾಶಿವನೆಂದು ಭಾವಿಸಿ ಅಜ್ಞಾನ ತೊರೆದು ಪೂಜಿಸಬೇಕು.]
|| ಅಥ ಧ್ಯಾನಂ ||
ಶಾಂತಂ ಪದ್ಮಾಸನಸ್ಥಂ ಶಶಿಧರ-ಮಕುಟಂ ಪಂಚವಕ್ತ್ರಂ ತ್ರಿನೇತ್ರಂ | ಶೂಲಂ ವಜ್ರಂ ಚ ಖಡ್ಗಂ ಪರಶು-ಮಭಯದಂ ದಕ್ಷಭಾಗೇ ವಹಂತಂ | ನಾಗಂ ಪಾಶಂ ಚ ಘಂಟಾಂ ಪ್ರಳಯ-ಹುತವಹಂ ಸಾಂಕುಶಂ ವಾಮಭಾಗೇ | ನಾನಾಲಂಕಾರಯುಕ್ತಂ ಸ್ಪಟಿಕ-ಮಣಿ-ನಿಭಂ ಪಾರ್ವತೀಶಂ ನಮಾಮಿ ||
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ | ವಿಶ್ವಾಧಾರಂ ಗಗನ-ಸದೃಶಂ ಮೇಘವರ್ಣಂ ಶುಭಾಂಗಂ |
ಲಕ್ಷೀಕಾಂತಂ ಕಮಲನಯನಂ ಯೋಗಿಹೃದ್ಧ್ಯಾನಗಮ್ಯಂ | ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ ||
ll ಷೋಡಶೋಪಚಾರ ಪೂಜಾಂ ||
ಶ್ರೀ ಮಹಾಗಣಪತಯೇ ನಮಃ ||
ಶ್ರೀ ಕುಲದೇವತಾ, ಇಷ್ಟದೇವತಾಭ್ಯೋ ನಮಃ || ಸರ್ವೇಭ್ಯೋ ದೇವೇಭ್ಯೋ ನಮಃ ||
ಆವಾಹಯಾಮಿ | ಆಸನಂ ಸಮರ್ಪಯಾಮಿ |
ಪಾದಾರವಿಂದಯೋಃ ಪಾದ್ಯಂ-ಪಾದ್ಯಂ ಸಮರ್ಪಯಾಮಿ |
ಹಸ್ತಯೋಃ ಅಘ್ರ್ಯಮಘ್ರ್ಯಂ ಸಮರ್ಪಯಾಮಿ |
ಮುಖೇ ಆಚಮನೀಯಂ ಸಮರ್ಪಯಾಮಿ |
ಅಥ ಮಲಾಪಕರ್ಷಣ ಸ್ನಾನಂ ಕರಿಷ್ಯೇ || [ಸಾಲಿಗ್ರಾಮಾದಿ ಶಿಲೆಗಳನ್ನು, ದೇವರ ಮೂರ್ತಿಗಳನ್ನು ನೀರಿನಿಂದ ಅಭಿಷೇಕ ಮಾಡಬೇಕು]
ಓಂ, ಆಪೋಹಿಷ್ಠಾ ಮಯೋ ಭುವಃ | ತಾನ ಊರ್ಜೇ ದಧಾತನಃ | ಮಹೇರಣಾಯ ಚಕ್ಷಸೇ | ಯೋವಃ ಶಿವತಮೋರಸಃ | ತಸ್ಯ ಭಾಜಯತೇ ಹನಃ | ಉಶತೀರಿವ ಮಾತರಃ | ತಸ್ಮಾ ಅರಂಗ ಮಾಮವಃ | ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯಥಾ ಚ ನಃ ||
ಮಲಾಪಕರ್ಷಣ ಸ್ನಾನಂ ಸಮರ್ಪಯಾಮಿ || ತದನಂತರೇ ಶುದ್ಧೋದಕ ಸ್ನಾನಂ ಸಮರ್ಪಯಾಮಿ ||
[ಸೂಚನೆ: ಸಮಯಾವಕಾಶವಿದ್ದಲ್ಲಿ - ಶ್ರೀರುದ್ರ, ಚಮಕ, ಪುರಷಸೂಕ್ತ, ನಾರಾಯಣಸೂಕ್ತ, ಆದಿತ್ಯ, ಗಣಪತಿಸೂಕ್ತಗಳನ್ನು ಪಠಿಸಿ ಅಭಿಷೇಕ ಮಾಡಬಹುದು. ಶುದ್ಧೋದಕ ಸ್ನಾನದ ನಂತರ ಸಾಲಿಗ್ರಾಮ, ದೇವರ ಮೂರ್ತಿಗಳನ್ನು ಒರೆಸುವಾಗ ಶ್ರೀಸೂಕ್ತವನ್ನು ಹೇಳವುದು ರೂಡಿಯಲ್ಲಿದೆ]
ಪಂಚಾಮೃತ ಸ್ನಾನಂ ಕರಿಷ್ಯೇ || [ವಿಶೇಷ ದಿನಗಳಲ್ಲಿ ಮಾತ್ರ ಪಂಚಾಮೃತ ಅಭಿಷೇಕ ]
ಅಥ ಪಂಚಾಮೃತ ಸ್ನಾನಂ || [ಸಾಮೂಹಿಕ]
ಕ್ಷೀರೋದಧಿ ಘೃತಂ ಚೈವ ಮಧುಶರ್ಕರ ಸಂಯುತಂ | ಫಲೋದಕಂ ಮಹಾದೇವ ಪ್ರೋಕ್ಷಯಾಮಿ ಮಹೇಶ್ವರ ||
ಶ್ರೀ ಕುಲದೇವತಾ, ಇಷ್ಟದೇವತಾಭ್ಯೋ ನಮಃ | ಶ್ರೀ........ ದೇವತಾಭ್ಯೋ ನಮಃ | ಸರ್ವಾಭ್ಯೋ ದೇವತಾಭ್ಯೋ ನಮಃ | ಪಂಚಾಮೃತಸ್ನಾನಂ ಸಮರ್ಪಯಾಮಿ. [ಸೂಚನೆ: ಸಮಯಾವಕಾಶವಿದ್ದಲ್ಲಿ ಪಂಚಾಮೃತದಿಂದ ಪ್ರತ್ಯೇಕವಾಗಿ ಅಭಿಷೇಕ ಮಾಡಬಹುದು]
ಪಂಚಾಮೃತ ಸ್ನಾನಾನಂತರೇ ಶುದ್ಧೋದಕ ಸ್ನಾನಂ ಸಮರ್ಪಯಾಮಿ | ತದನಂತರೇ ಆಚಮನೀಯಂ ಸಮರ್ಪಯಾಮಿ ||
ಪೀಠೇ ಪ್ರತಿಷ್ಠಾಪ್ಯ ||
[ಅಭಿಷೇಕ ಮಾಡಿದ ನಂತರ ಸಾಲಿಗ್ರಾಮ, ದೇವರ ಮೂರ್ತಿಗಳನ್ನು ಚೆನ್ನಾಗಿ ಶುಭ್ರಗೊಳಿಸಿ ಒರಸಿ, ಗಂಧ-ಅಕ್ಷತೆ ಹಚ್ಚಿ, ಪೂಜಾ ಸಂಪುಟ/ಮಂಟಪದಲ್ಲಿ ಇಟ್ಟು ಪೂಜೆಯನ್ನು ಮುಂದುವರೆಸಬೇಕು]
ವಸ್ತ್ರಯುಗ್ಮಂ ಸಮರ್ಪಯಾಮಿ ||
ಉಪವೀತಂ ಸಮರ್ಪಯಾಮಿ ||
ಆಭರಣಂ ಸಮರ್ಪಯಾಮಿ ||
ಗಂಧಾನ್, ಅಕ್ಷತಾನ್ ಸಮರ್ಪಯಾಮಿ ||
ಪತ್ರಂ ಸಮರ್ಪಯಾಮಿ ||
ಪರಿಮಳ ಪುಷ್ಪಾಣಿ ಸಮರ್ಪಯಾಮಿ ||
ಧೂಪಂ ಆಘ್ರಾಪಯಾಮಿ ||
ದೀಪಂ ದರ್ಶಯಾಮಿ ||
ದೀಪಾನಂತರೇ ನೈವೇದ್ಯಂ ನಿವೇದಯಾಮಿ ||
ಅಥ ನೈವೇದ್ಯಂ ||
[ಚತುರಸ್ರ ಮಂಡಲ ಬರೆದು ಅದರಮೇಲೆ ಅನ್ನವನ್ನೂ ಇತರ ಉಪಸ್ಕರಗಳನ್ನೂ ನೈವೇದ್ಯಕ್ಕೆ ಇಡುವುದು. ತುಪ್ಪದಿಂದ ಅಭಿಗಾರ ಮಾಡಿ, ತುಲಸೀದಲ ಹಾಕಿ, ಗಾಯತ್ರೀ ಮಂತ್ರದಿಂದ ಪ್ರೋಕ್ಷಣೆ ಮಾಡುವುದು]
" ಓಂ ಭೂರ್ಭುವಸ್ಸುವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ "
ಸತ್ಯಂತ್-ವರ್ತೇನ ಪರಿಷಿಂಚಾಮಿ [ನೀರಿನಿಂದ ಸುತ್ತು ಕಟ್ಟಬೇಕು]
|| ಶ್ರೀ ಅನ್ನಪೂರ್ಣೆಶ್ವರೈ ನಮಃ ||
ಅಮೃತಂ ಅಸ್ತು | ಅಮೃತೋಪಸ್ತರಣಮಸಿ ಸ್ವಾಹಾ || (ನೈವೇದ್ಯ ಪದಾರ್ಥಗಳ ಮೇಲೆ ಒಂದು ಉದ್ದರಣೆ ನೀರನ್ನು ಹಾಕಬೇಕು)
ಓಂ ಪ್ರಾಣಾಯ ಸ್ವಾಹಾ |
ಓಂ ಅಪಾನಾಯ ಸ್ವಾಹಾ |
ಓಂ ವ್ಯಾನಾಯ ಸ್ವಾಹಾ |
ಓಂ ಉದಾನಾಯ ಸ್ವಾಹಾ |
ಓಂ ಸಮಾನಾಯ ಸ್ವಾಹಾ |
ಓಂ ಬ್ರಹ್ಮಣೇ ಸ್ವಾಹಾ |
[ನೈವೇದ್ಯ ಪದಾರ್ಥಗಳನ್ನಿಟ್ಟಿರುವ ದಿಕ್ಕಿನಿಂದ ದೇವರಿರುವ ದಿಕ್ಕಿಗೆ ಕೈ ತೋರಿಸುತ್ತಾ, ದೇವರು ನೈವೇದ್ಯವನ್ನು ಸ್ವೀಕರಿಸಿದಂತೆ ಗ್ರಹಿಸಬೇಕು]
|| ಶ್ರೀ ಕುಲದೇವತಾ, ಇಷ್ಟದೇವತಾಭ್ಯೋ ನಮಃ || ಸರ್ವೇಭ್ಯೋ ದೇವೇಭ್ಯೋ ನಮಃ ||
ಭಕ್ಷ್ಯ ಭೋಜ್ಯ ಸಹಿತ ಮಹಾನೇವೇದ್ಯಂ ನಿವೇದಯಾಮಿ ||
ನಾರಿಕೇಲಾದಿ ನಾನಾವಿಧ ಫಲಂ ನಿವೇದಯಾಮಿ |
ಮಧ್ಯೇ-ಮಧ್ಯೇ ಅಮೃತ ಪಾನೀಯಂ ಸಮರ್ಪಯಾಮಿ | ಅಮೃತೋಪಸ್ತರಣಮಸಿ ಸ್ವಾಹಾ || ಇತಿ ಕಿಂಚಜ್ಜಲ ಸಮರ್ಪಯೇತ್ | ಉತ್ತರಾಪೋಷನಂ - ಹಸ್ತ ಪ್ರಕ್ಷಾಲನಂ - ಮುಖ ಪ್ರಕ್ಷಾಲನಂ - ಪಾದ ಪ್ರಕ್ಷಾಲನಂ - ಪುನರಾಚಮನಂ ಸಮರ್ಪಯಾಮಿ ||
[ಪ್ರತಿ(5) ಸಾರಿಯೂ ಉದ್ಧರಣೆಯಿಂದ ನೀರನ್ನು ತೆಗೆದು ಅಘ್ರ್ಯಪಾತ್ರೆಯಲ್ಲಿ ಬಿಡಬೇಕು]
ತಾಂಬೂಲಂ ಸಮರ್ಪಯಾಮಿ ||
ದಕ್ಷಿಣಾಂ ಸಮರ್ಪಯಾಮಿ ||
ಮಂಗಲ-ಆರ್ತಿಕ್ಯ ದೀಪಂ ದರ್ಶಯಾಮಿ ||
[ಘಂಟೆ, ಜಾಗಟೆ, ಶಂಖ ಇತ್ಯಾದಿ ಮಂಗಳವಾದ್ಯಗಳನ್ನು ಬಾರಿಸುತ್ತಾ ತುಪ್ಪದ ಬತ್ತಿ ಅಥವಾ ಕರ್ಪೂರವನ್ನು ಹಚ್ಚಿ, ಹಲಗಾರತಿಯ / ತಟ್ಟೆಯಲ್ಲಿ ಹೂವು, ಪತ್ರೆ, ಅಕ್ಷತೆಯನ್ನು ಇಟ್ಟುಕೊಂಡು ಆರತಿ ಮಾಡಬೇಕು. ನಂತರ ಗಂಟೆಯನ್ನು ಕೆಳಗಿಟ್ಟು, ಅದಕ್ಕೆ ಹೂವು ಅಕ್ಷತೆ ಹಾಕಿ, ಆರತಿ ಎತ್ತಿ, ಒಂದು ಉದ್ಧರಣೆ ನೀರನ್ನು ಅಘ್ರ್ಯಪಾತ್ರೆಯಲ್ಲಿ ವಿಸರ್ಜಿಸುವುದು. ಹಲಗಾರತಿ/ತಟ್ಟೆಯಲ್ಲಿರುವ ಪತ್ರ, ಪುಷ್ಪವನ್ನು ಉರಿಯುತ್ತಿರುವ ಆರತಿಗೆ ತೋರಿಸಿ, ಅದನ್ನು ದೇವರಿಗೆ ಸಮರ್ಪಿಸಬೇಕು]
ಮಂಗಲ-ಆರ್ತಿಕ್ಯ ದೀಪಾನಂತರೇ ಆಚಮನೀಯಂ ಸಮರ್ಪಯಾಮಿ || [ಒಂದು ಉದ್ಧರಣೆ ನೀರನ್ನು ಅಘ್ರ್ಯ ಪಾತ್ರೆಯಲ್ಲಿ ಬಿಡುವುದು]
ಅಥ ಮಂತ್ರ ಪುಷ್ಪಂII
[ಕೈಯಲ್ಲಿ ಪುಷ್ಪವನ್ನು ಹಿಡಿದುಕೊಂಡು]
ಓಂ ಗಣಾನಾಮ್ ತ್ವಾ ಗಣಪತಿಗ್‍ಮ್ ಹವಾಮಹೇ ಕವಿಂ ಕವೀನಾಮ್ ಉಪಮಶ್ರವಸ್ತವಮ್ | ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆ ನಃ ಶೃಣ್ವನ್ನೂತಿಭಿಸ್ಸೀದ ಸಾದನಮ್ ||
ಶ್ರೀ ವಿಘ್ನೇಶ್ವರಾಯ ನಮ:
ಪ್ರಣೋದೇವೀ ಸರಸ್ವತೀ | ವಾಜೇಭಿರ್ ವಾಜಿನೀವತೀ | ಧೀನಾಮವಿತ್ರ್ಯವತು ||
ಓಂ ರಾ॒ಜಾ॒ಧಿ॒ರಾ॒ಜಾಯ ಪ್ರಸಹ್ಯ ಸಾ॒ಹಿನೇ......... ..........
(ವಿಶೇಷ ದಿನದ ಪೂಜೆಯಲ್ಲಿ
ಯೋஉಪಾಂ ಪುಷ್ಪಂ ವೇದ ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ | ಚಂದ್ರಮಾ ವಾ ಅಪಾಂ ಪುಷ್ಪಮ್....)
ಶ್ರೀ ಗಣಪತ್ಯಂಬಿಕಾ ಶಿವವಿಷ್ಣುಆದಿತ್ಯಾದಿದೇವತಾಭ್ಯೋ ನಮಃ || ವೇದೋಕ್ತ ಮಂತ್ರಪುಷ್ಪಂ ಸಮರ್ಪಯಾಮಿ ||
ಯಥಾಶಕ್ತಿ ಪ್ರದಕ್ಷಿಣ, ಸಮಸ್ಕಾರಾನ್ ಸಮರ್ಪಯಾಮಿ ||
ಯಾನಿ-ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ | ತಾನಿ-ತಾನಿ ವಿನಶ್ಯಂತಿ ಪ್ರದಕ್ಷಿಣಾತ್ ಪದೇ-ಪದೇ | ಪಾಪೋಹಂ ಪಾಪ ಕರ್ಮಾಹಂ ಪಾಪಾತ್ಮಾ ಪಾಪ ಸಂಭವ | ತ್ರಾಹಿ-ಮಾಂ ಕೃಪಾಯ ದೇವ ಶರಣಾಗತ ವತ್ಸಲ | ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ | ತಸ್ಮಾತ್-ಕಾರುಣ್ಯ ಭಾವೇನ ರಕ್ಷ-ರಕ್ಷ ಮಹೇಶ್ವರಃ |
[ಹೀಗೆ ಹೇಳುತ್ತಾ 3 ಪ್ರದಕ್ಷಿಣೆ ಮಾಡಿ ಸಾಷ್ಟಾಂಗ ನಮಸ್ಕಾರ ಮಾಡಬೇಕು. ಮತ್ತೆ ನೀವು ಕುಳಿತಿರುವ ಜಾಗದಲ್ಲಿಯೇ ಕುಳಿತುಕೊಳ್ಳಬೇಕು]
|| ಪ್ರಸನ್ನಾರ್ಘ್ಯಂ ಕರಿಷ್ಯೆ ||
ಓಂ ಏಕದಂತಾಯ ವಿದ್ಮಹೇ | ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ || ಓಂ ತತ್ಪುರುಷಾಯ ವಿದ್ಮಹೇ | ಮಹಾದೇವಾಯ ಧೀಮಹಿ | ತನ್ನೋ ರುದ್ರಃ ಪ್ರಚೋದಯಾತ್ || ಓಂ ಕಾತ್ಯಾಯನಾಯ ವಿದ್ಮಹೇ | ಕನ್ಯಾಕುಮಾರಿ ಧೀಮಹಿ | ತನ್ನೋ ದುರ್ಗೀ ಪ್ರಚೋದಯಾತ್ ||
ಓಂ ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ| ತನ್ನೋ ವಿಷ್ಣುಃ ಪ್ರಚೋದಯಾತ್ || ಓಂ ಮಹಾಲಕ್ಷ್ಮೈಚ ವಿದ್ಮಹೇ ವಿಷ್ಣುಪತ್ನೀಚ ಧೀಮಹಿ | ತನ್ನೋ ಲಕ್ಷ್ಮೀ ಪ್ರಚೋದಯಾತ್ ||
ಓಂ ಭಾಸ್ಕರಾಯ ವಿದ್ಮಹೇ | ಮಹಾದ್ಯುತಿಕಾರಾಯ ಧೀಮಹಿ | ತನ್ನೋ ಆದಿತ್ಯಃ ಪ್ರಚೋದಯಾತ್ ||
ಇತಿ ಪ್ರಸನ್ನಾರ್ಘ್ಯಂ ಸಮರ್ಪಯಾಮಿ ||
(ಪ್ರಸನ್ನಾರ್ಘ್ಯವನ್ನು ಕೊಡುವಾಗ ತುಲಸಿ, ದೂರ್ವೆ, ಹೂ, ಗಂಧ ಮತ್ತು ಅಕ್ಷತೆ ಗಳನ್ನು ಅಂಗೈಯಲ್ಲಿ ಇಟ್ಟುಕೊಂಡು , ಅಂಗೈ ಮೇಲೆ ನೀರು ಹಾಕಿ ಬೆರಳ ತುದಿಗಳಿಂದ ನೀರು ಬಿಡಬೇಕು. ಐದೂ ಅರ್ಘ್ಯಗಳು ಆದಮೇಲೆ ತುಲಸಿ, ದೂರ್ವೆ, ಹೂ ಮತ್ತು ಅಕ್ಷತೆಗಳನ್ನು ಮಂಟಪದಲ್ಲಿ ದೇವರ ಪಾದತಲಕ್ಕೆ ಇಡಬೇಕು)
ಸ್ವಸ್ತಿವಾಚನಂ :
ಸ್ವಸ್ತಿಪ್ರಜಾಭ್ಯ: ಪರಿಪಾಲಯಂತಾಂ | ನ್ಯಾಯೇನ-ಮಾರ್ಗೇಣ ಮಹೀಂ ಮಹೀಶಃ |
ಗೋಬ್ರಾಹ್ಮಣೇಭ್ಯ: ಶುಭಮಸ್ತು ನಿತ್ಯಂ | ಲೋಕಾಃ ಸಮಸ್ತಾಃ ಸುಖಿನೋ ಭವಂತು ||
ಸಮಸ್ತ ಸನ್ಮಂಗಳಾನಿ ಭವಂತು ||
|| ಸಮರ್ಪಣಂ || ಯಸ್ಯಸ್ಮೃತ್ಯಾ ಚ ನಾಮೋಕ್ತ್ಯಾ ತಪೋ ಪೂಜಾ ಕ್ರಿಯಾದಿಷು| ನ್ಯೂನಂ ಸಂಪುರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ || ಮಂತ್ರಹೀನಂ ಕ್ರೀಯಾ ಹೀನಂ ಭಕ್ತಿ ಹೀನಂ ಜನಾರ್ಧನ | ಯತ್-ಕೃತಂತು ಮಯಾ ದೇವ ಪರಿಪೂರ್ಣಂ ತದಸ್ತು ಮೇ || ಅನಯಾ ಪೂಜಯಾ ಶ್ರೀ ಕುಲದೇವತಾ, ಇಷ್ಟದೇವತಾ ಸುಪ್ರೀತಃ ಸುಪ್ರಸನ್ನೋ ವರದೋ ಭವತು | ಮಮ ಇಷ್ಟಾರ್ಥ ಸಿದ್ಧಿರಸ್ತು ||
ಪೂಜಾಕಾಲೇ ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಧ್ಯಾನ ನಿಯಮ ನ್ಯೂನಾತಿರಿಕ್ತ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಂತ್ರ ಜಪಂ ಕರಿಷ್ಯೇ |
ಓಂ ಅಚ್ಯುತಾಯ ನಮಃ | ಅನಂತಾಯ ನಮಃ | ಗೋವಿಂದಾಯ ನಮಃ [3 ಬಾರಿ]
ಆಚಮನ [ದ್ವಿರಾಚಮ್ಯ]
ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾವಾ ಪ್ರಕೃತೇ ಸ್ವಭಾವಾತ್ |
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಯೇತಿ ಸಮರ್ಪಯಾಮಿ ||
|| ತತ್ಸತ್ ಬ್ರಹ್ಮಾರ್ಪಣಮಸ್ತು ||
ತಿಲಕ ಧಾರಣಂ : [ತಾನು ಕುಳಿತು ಪೂಜೆ ಮಾಡಿದ ಆಸನದ ಕೆಳಗಿನ ಭೂಮಿಯನ್ನು ಪ್ರೋಕ್ಷಿಸಿ, ಬೆರಳಿನಿಂದ ಸ್ಪರ್ಶಿಸುತ್ತಾ ತಿಲಕಧಾರಣೆ ಮಾಡಬೇಕು]
|| ತೀರ್ಥ ಸ್ವೀಕಾರ ||
ಅಕಾಲಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ | ದೇವಪಾದೋದಕಂ ತೀರ್ಥಂ ಜಠರೇ ಧಾರಯಾಮ್ಯಹಂ ||
-ಈ ಮಂತ್ರ ಹೇಳಿ ತೀರ್ಥ ಸ್ವೀಕಾರ ಮಾಡುವುದು.
ಪ್ರಸಾದಂ ಗೃಹೀತ್ವಾ -ಪ್ರಸಾದ ಸ್ವೀಕರಿಸುವುದು.
(ಸಂಗ್ರಹಿತ)
No comments:
Post a Comment
Please leave your comments here.....