ಶ್ರೀರಾಮಾಯಣ ಹಕ್ಕಿನೋಟ -೧೦೦ A Bird's-eye view of Ramayana : 100

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೦೦


ಕಾಣದ ಸೀತಾಮಾತೆಯನ್ನು,ಅವಳ ದಯನೀಯ ಸ್ಥಿತಿಯನ್ನು ಹನುಮನು ಹೇಗೆ ಊಹಿಸಿದ್ದನೋ ಅವೆಲ್ಲವೂ ಅವನ ಕಣ್ಣೆದುರೇ ಮೈದೋರ ತೊಡಗಿದವು.

ಕುರೂಪಿಗಳ ಮಧ್ಯೆ ಸುರೂಪಿ.

ತಾಮಸದ 

ನೀಚಾತಿ ನೀಚ,

ಹೀನಾತಿ ಹೀನ ಗುಣಗಳ,

ಗಣಗಳ ಮಧ್ಯೆ ಸಾತ್ವಿಕತೆಯ ಸರ್ವೋತ್ಕೃಷ್ಟ, 

ಸರ್ವೋಚ್ಚ ಗುಣಗಳ ಏಕವ್ಯಕ್ತಿ!

ಅದೇ ಸೀತೆ, ಜಾನಕಿ,ರಾಮಸತಿ,

ದಶರಥನ ಸೊಸೆ!!


ಶಿಂಶುಪಾ ಮರದಲ್ಲಿ ಅಡಗಿ ಕುಳಿತ ಹನುಮ ಅದಾರದೋ ಬರುವ ಬರವಿನ ಘೋಷವನ್ನು ಕೇಳಿದನು.ನೂರಾರು ಸುಂದರ ಹೆಂಗಸರ ಕಿಲಕಿಲ ಕಲಕಲ ದನಿಯೊಡನೆ ದೃಢ ಹೆಜ್ಜೆಗಳ ಸುಂದರ ವೇಷ ಭೂಷಣಗಳನ್ನು ಧರಿಸಿದ ಏಕಮಾತ್ರ ಪುರುಷ! ಹೌದು.ಅವನೇ!ನಿನ್ನೆ ಇರುಳು ಮಲಗಿದ್ದು ಕೊಂಡು ಕಂಡವ.

ನಿದ್ದೆ ಮಾಡಿದವನ ಎಚ್ಚರ ರೂಪ.

ಬಂದವರ ಕೈತುಂಬಾ ಶೃಂಗಾರ ಸಾಧನಗಳು-

ಸೀತೆಗೆ ಅರ್ಪಿಸಲು, ಸೀತೆಯನ್ನು ಒಪ್ಪಿಸಲು.

ತನಗೊಲಿಯಲು ರಾವಣನು ಸೀತೆಗೆ ನೀಡಿದ್ದ ಹನ್ನೆರಡು ತಿಂಗಳುಗಳು ಕಳೆದಿದ್ದವು.

ಅದನ್ನು ನೆನಪಿಸಲು ,ಒಲಿಸಲು ಮತ್ತೆ ಬಂದಿದ್ದನು.ಈ ಹನ್ನೆರಡು ತಿಂಗಳುಗಳಲ್ಲಿ ತನ್ನ ದೃಢ ನಿರ್ಧಾರದಿಂದ ಸೀತೆ ಹಿಂದೆ ಸರಿಯಲೇ ಇಲ್ಲ!ಕಾಮುಕ ರಾವಣನೂ ತೀರಾ ಹಿತೈಷಿಗಳ ಸಲಹೆಯ ನಡುವೆಯೂ ತನ್ನ ಯತ್ನವನ್ನು ಬಿಡಲಿಲ್ಲ.ಅವನೇ ಸೀತೆಗೆ ಹೇಳಿದ-

"ಗರುಡ ಪಕ್ಷಿಯು ಹಾವನ್ನು ಅಪಹರಿಸುವಂತೆ ನನ್ನ ಮನಸ್ಸನ್ನು ನೀನು ಅಪಹರಿಸಿರುವೆ" ಈ ಮಾತು ರಾವಣನ ಪಾಲಿಗೆ ಸತ್ಯವಾಗುವ ಹಂತ.ಸೀತೆ ಗುರುಡ ಪಕ್ಷಿಯಾದಳು,ರಾವಣ ಹಾವಾದ;ಕುಕ್ಕಿ ಕುಕ್ಕಿ ತಿನ್ನುವ ಹಕ್ಕಿಯ ಬಾಯಿಗೆ ತುತ್ತಾದ!

ತನ್ನ ತನ್ನ ಕುಲಕ್ಕೆ ತಾನೇ ಕುತ್ತಾದ!!


ನೀನು ಎಂದೆಂದೂ ಹುಲು ಮಾನವ; ದರಿದ್ರ; ವನವಾಸಿ ರಾಮನನ್ನು ಮತ್ತೆ ಕಾಣಲಾರೆ,ಪಡೆಯಲಾರೆ.

ಅವನೂ ಅಷ್ಟೆ! ತಪಸ್ಸು,ಬಲ, ಪರಾಕ್ರಮ,ಧನ,ತೇಜಸ್ಸು, ಯಶಸ್ಸು ಯಾವುದರಲ್ಲೂ ನನಗೆ ಸಮನಲ್ಲ.

ನನ್ನನ್ನು ಸ್ವೀಕರಿಸಿ ನನ್ನ ಪಟ್ಟದರಸಿಯಾಗಿ ನನ್ನ ಕಾಮನೆಗಳನ್ನು ಪೂರೈಸು-ಇವು ರಾವಣನ ಚರ್ವಿತ ಚರ್ವಣ ಮಾತುಗಳು!!

ಅವನ ಎಲ್ಲಾ ಮಾತುಗಳ ಕೇಂದ್ರ ಕಾಮ!ಕಾಮ!!

ಸಾಮ ದಾನ ಭೇದೋಪಾಯಗಳಿಂದ ಸೀತೆಯನ್ನು ಒಲಿಸಲು ನೋಡಿದನು.

ಆದರೆ ಸೀತೆ!! ಅಬ್ಬಾ!!

ಸೀತೆಗೆ ಸೀತೆಯೇ ಸಾಟಿ!!

ಅವನ ಮುಸುಡನ್ನೂ ನೋಡದೆ ತನ್ನ ಭಾವನೆಗಳನ್ನು ಬಲಿಷ್ಠವಾಗಿಸಲು ಹುಲ್ಲು ಕಡ್ಡಿಯೊಂದನ್ನು ಮಧ್ಯೆ ಇಟ್ಟು ರಾವಣನನ್ನು ಖಂಡಿಸಿ ಮಾತಾಡತೊಡಗಿದಳು.



Om ShriRamaya Namaha : 100


A Bird's-eye view of Ramayana : 100


The things began taking place infront of Hanuman's eyes in the same manner how he had imagined about Seethamaatha whom he had never seen before and about her miserable condition. 


The beautiful woman amidst of uncouth.

Amidst of monsters who were wretches with evil minds and heinous attributes ,there was only one person who was superior to all with all the good attributes ! And that was Seethamaatha, Jaanakee, the better half of ShreeRama ,the daughter in law of Dasharatha !!


Hanuman who was secretly sitting in the Shimshupaa tree, heard the announcement of someone's arrival. The only man ,who was grandly dressed and arriving with firm steps along with hundreds of beautiful women who were giggling and laughing ! Yes . Hanuman recognized him and said to himself that he was the same man whom he had seen sleeping the previous night. 


The awakening appearance of the man who was asleep. 


There were full of ornaments and accessories in the hands of those who had come there - to offer them to Seetha and to win over her. The 12 months had already passed which Ravana had given to Seetha, to accept him. Ravana had come to Seetha again to remind her the time he had given and to persuade her. But Seetha had never backed out from her firm decision in those 12 months ! The lustful Ravana did not keep quiet but kept trying to induce Seetha ,though he was advised by his close well wishers. He told Seetha that she stole his heart in the same way how an eagle takes away a snake. To put it in his own words  : 

" You  have stolen my heart as an eagle takes away a snake ". And it was the stage where the statement of Ravana was about to turn true. Seetha became the Eagle ,Ravana became the snake ; He became the food to the bird which eat by pecking with the beak !

He became an impediment for his own clan  !!


The following are the wearisome words of Raavana to Seetha !! -

" You will always be a mere human ; a sinister ; You will never see and gain Rama who is living in the forest. Even he too ! He is not equivalent to me in penance , might, valor, wealth, prowess, success and in anything. 

Accept me and fulfill all my desires by being my queen ".


The core of all his words is Lust ! Lust !!

He tried to win over Seetha through his words , material things and differentiating strategies. But Seetha !! Incredible !!

Seetha can only be matched with Seetha !!


She began speaking by condemning Raavana without even looking at his face .She placed a hay stick in the center so that she could express her feelings and emotions even more stronger while rebuking Ravana. 





No comments:

Post a Comment

Please leave your comments here.....