ಶ್ರೀರಾಮಾಯನಮಃ
ಶ್ರೀರಾಮಾಯಣ ಹಕ್ಕಿನೋಟ
ರಾಮಾಯಣ ಹಕ್ಕಿನೋಟದ ಇಣುಕುನೋಟ
"ಕೃತಯುಗ ಸತ್ಯಯುಗ! ಸಹಜ ಬದುಕು ಅಂದಿನ ಕ್ರಮವಾಗಿತ್ತು.ಸಾವು ಬದುಕಿನ ಸಮಸ್ಯೆಯಿರಲಿಲ್ಲ.ಪ್ರಕೃತಿದತ್ತ ಆಹಾರವನ್ನು ಸೇವಿಸಿ ನಿರೋಗಿಗಳಾಗಿ ಎಲ್ಲರೂ ಇದ್ದರು. ಆಗ ಕೃಷಿ ಮಾಡುವುದೂ ಇದ್ದಿರಲಿಲ್ಲ! ಕೃಷಿ ತ್ರೇತಾಯುಗದ ಕೊಡುಗೆ.ಇದು ರಾಜಸವಾದುದು.ರಾಜತ್ವದ ಪರಿಕಲ್ಪನೆಯು ತ್ರೇತಾಯುಗದ್ದು."ಇವು ಶಂಬೂಕನ ತಪಸ್ಸಿನ ದುಷ್ಪರಿಣಾಮವನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ನಾರದರು ಹೇಳಿದ ಮಾತುಗಳು.
ಅಹಲ್ಯಾ ಎಂದರೆ ಉಳಲಾಗದ ಎನ್ನುವ ಅರ್ಥ ಬರುತ್ತದೆ. ಗೌತಮರ ತಪೋವನ ಇದ್ದದ್ದು ಮಿಥಿಲಾ ನಗರದ ಹೊರವಲಯದಲ್ಲಿ.ನಗರದ ಪಕ್ಕದಲ್ಲಿ ಬಂಜರು/ಪಾಳು ಬಿದ್ದ ಭೂಮಿ ಇದ್ದರೆ ಹೇಗೆ? ಹೇಳಿ ಕೇಳಿ ಜನಕರಾಜ ಕರ್ಮಯೋಗಿ. ಸ್ವತಃ ಉಳುಮೆ ಮಾಡುತ್ತಿದ್ದವ.
ಶ್ರೀರಾಮ ಆ ಕಾಲದಲ್ಲಿ ರಾಜಶಾಸನವನ್ನು ಜ್ಯಾರಿಗೆ ತರುವ ಸಂದರ್ಭದಲ್ಲಿ ಕೃಷಿಗೂ ಆದ್ಯತೆ ನೀಡಿದ್ದನೇ? ಎಂಬ ವಿಚಾರ ಮೂಡುತ್ತದೆ.
ತಪಸ್ಸು ಮಾಡುತ್ತಿದ್ದ ಗೌತಮರನ್ನು ಕರೆಸಿ ಅಹಲ್ಯೆಯೊಡನೆ ಮತ್ತೆ ಬಾಳುವೆ ನಡೆಸುವಂತೆ ಮಾಡಿದುದರ ಸಂದೇಶ ಇದನ್ನೂ ಹೇಳುತ್ತದೆಯಲ್ಲವೇ? ಇಂದ್ರ ಮಳೆಗೆ ಸಂಬಂಧಿಸಿದ ದೇವತೆ.ಕೇವಲ ಮಳೆ ಸುರಿದರೆ ಸಾಲದು ಒಂದಷ್ಟು ಪುರುಷ ಪ್ರಯತ್ನವೂ ಆಗಬೇಕು ಎನ್ನುವುದು ಇದರ ಹಿಂದಿದೆಯೇ?
ಸೀತೆ ಉಳುಮೆ ಮಾಡುತ್ತಿದ್ದಾಗ ಸಿಕ್ಕಿದ್ದು. ಭೂಮಿಯಲ್ಲಿ ತಾನೇ ಗಿಡ- ಮರ-ಬಳ್ಳಿ-ಬೀಜಗಳು ಸಿಗುವುದು.ಅವುಗಳಿಂದ ತಾನೇ ಸಸ್ಯ ರಾಶಿಗಳನ್ನು ಭೂಮಿಯಲ್ಲಿ ನಾವು ಕಾಣುವುದು ಪಡೆಯುವುದು.ವಿಶ್ವಾಮಿತ್ರರು ರಾಮನಿಗೆ ಸಮಕಾಲೀನ ಅಗತ್ಯತೆಯನ್ನು,ಕರ್ತವ್ಯವನ್ನು ಸೂಚಿಸಿದರೇ?
ಸೀತೆಯು ಬೀಜದ ಸಾಂಕೇತಿಕ ರೂಪವೇ?
ಅಶ್ವಮೇಧ ಯಾಗದ ಸಂದರ್ಭದಲ್ಲಿ ಸೀತೆ ರಸಾತಳವನ್ನು ಪ್ರವೇಶಿಸಿದಳು.ಬೇರು ಹೋಗುವುದು ಮಣ್ಣಿನೊಳಗೆ ತಾನೇ?
ರಾಮಾಯಣವೆಂಬ ಅಮರ ಮಹಾವೃಕ್ಷಕ್ಕೆ ಸೀತೆಯೇ ತಾಯಿಬೇರು!(ಸಾಮಾನ್ಯ ತಾಯಿಬೇರಲ್ಲ.ರಸಾತಳಕ್ಕಿಳಿದ ತಾಯಿಬೇರು!!) ರಾಮನೇ ಕಾಂಡ!( ಮದ್ದಿಗೂ ಗುದ್ದಿಗೂ ಕೆತ್ತುವವರೆನಿತು! ಆದರೂ ರಾಮಕಾಂಡ ನಿತ್ಯ ಸುಪುಷ್ಟ!- ನಮ್ಮನಿಮ್ಮಂತಹ ಹನುಮ ಭಕ್ತರ ಆರಾಧನೆಯಿಂದ!)
ಭರತ ಲಕ್ಷ್ಮಣ ಶತ್ರುಘ್ನರು ಕೊಂಬೆಗಳು.ಈ ನಾಲ್ವರು ಸೋದರರಿಗೆ ಇಬ್ಬಿಬ್ಬರು ಮಕ್ಕಳು! ಬೀಜ ಮೊಳಕೆಯೊಡೆದಾಗ ಸಾಮಾನ್ಯವಾಗಿ ಕಾಣುವುದು ಎರಡೆರಡು ಚಿಗುರುಗಳನ್ನು ತಾನೇ? ಕುಶ ಲವಾದಿಗಳು ಈ ಮಹಾವೃಕ್ಷಕ್ಕೆ ಚಿಗುರುಗಳು!
ವಾಲ್ಮೀಕಿ (ಪೂರ್ವಾಶ್ರಮದಲ್ಲಿ ಬೇಡ,ಬಳಿಕ ಕೃಷಿಕನಾಗಿ ಬದಲಾದುದರ ಸಂಕೇತವೇ?)ಕೃಷಿಕ! ನಾರದರ ಮಾರ್ಗದರ್ಶನದಲ್ಲಿ ಅವರಿತ್ತ ಬೀಜದಿಂದ ಗಿಡ ಬೆಳೆಸಿ ನೆಟ್ಟು ಕೊಟ್ಟ.ಹನುಮ ಅದರ ಸಾಕಣೆಯ ಹೊಣೆ ಹೊತ್ತ.
ರಾಮಾಯಣವು ಇರುವಲ್ಲಿಯವರೆಗೆ ಹನುಮ! ಹನುಮನಿರುವಲ್ಲಿಯವರೆಗೆ ರಾಮಾಯಣ!!ಕೃಷಿಯೂ ಹಾಗೆಯೇ ತಾನೇ?
ಕೃಷಿ ಇರುವ ತನಕ ಕೃಷಿಕ! ಕೃಷಿಕನಿರುವ ತನಕ ಕೃಷಿ.ಕೃಷಿ- ಕೃಷಿಕನಿರುವ ತನಕ ನಾವು ನೀವು ಸೇರಿದಂತೆ ಸಮಸ್ತ ಜೀವಕುಲ!
ರಾಮನಿರ್ದಂದು ರಾವಣನೊಬ್ಬನಿರ್ದನಲ!
ಭೀಮನಿರ್ದಂದು ದುಶ್ಶಾಸನನದೊರ್ವನ್!
ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು?
ರಾಮಭಟನಾಗು ನೀಂ ಮಂಕುತಿಮ್ಮ!
ಕಗ್ಗಕವಿಯ ಸಾರ್ವಕಾಲಿಕ ಕರೆಯನ್ನು ಸಂದೇಶವನ್ನು ಆದರದಿಂದ ನೆನಪಿಸುತ್ತಾ-
ರಾಮಾಯನಮಃ
ರಾಮಾಯನಮಃ
ವಿಶ್ವ
A peep into A Bird's-eye view of Ramayana.
• When Rama performed the sacrificial ritual 'Ashwamedha ' ,the battle did not take place with neither KushaLava nor with anyone else.
• Forget about the war, the entire earth took part in the sacrificial ritual voluntarily in such a way that not even a drop of blood was shed.
• Seetha has not descended into the earth which was wide open ! The mother earth herself came up in the royal throne and took Seetha along with her into the subterranean region.
• Rama has not slayed Shambooka since he is a Shoodra. Rama appreciates him for his ardent penance. But the very next moment, when Shambooka said that he would rule the heaven by conquering through his penance, Rama cut his head off .
• Either the character called ' Ahiraavana' or any incident or story related to that is not there in the Ramayana !
• The concept of following celibacy for 14 years and staying awake the entire night to slay Indrajith, is too not found here !
• The incident that Bharatha had made arrangements for the ordeal by fire since Rama had not arrived on time from the exile is not here ! In fact, Rama at the right time, sends the message of his arrival prior through Hanuman so that Bharatha should not hustle .
• The concept of Parashurama slaying all the Kshatriyas who were there on the earth by circumambulating the earth for 21 times by vengeance, is not here. There were also other virtuous Kshatriya kings other than Dasharatha.
It seems he was not foe to such
people.
• There is a reference of the finest bow which was given to Rama by Agasthya, the bow which was sent by Indra through Maathali and other artilleries but apart from these the concept of the bow of ' Kodanda' Rama doesn't appear here !
• The name ' KodandaRaama' has not mentioned here !
• Hanuman is an unarmed . He doesn't possess any weapon. The club is not his weapon. Including Hanuman, all the other monkey warriors had fought by using the things whatever they got in their hands as their weapons ( sometimes they had killed the enemies with their own weapons by snatching from them ).
• Ahalya is not a stone ascetic .
She is the one who is not involved in
the earthly life and who had smeared
herself with ashes ! An ascetic woman !!
• Lakshmana had cut off only the ears and the nose of Shoorpanakha !
• After being married to each other, SeethaRama had spent 12 years in Ayodhya and complete 12 years in the exile together happily. After the abandonment of Seetha ,she resided in the hermitage of Valmiki Maharshi for 12 years.
• If Seetha was separated from Rama for almost 14 months being imprisoned by Ravana , she got separated from Rama for 12 years being the resident of Valmiki's hermitage.
• Rama did not abandoned Seetha hearing the words of only a Washerman ! The entire country spoke and whispered about the chastity of Seetha.
• The concept of Vaali gaining the partial force from his opponent while confronting anyone is not mentioned here.
• The shortest and brief story of the Ramayana is narrated by Kaalapurusha !
• The flashback of the previous story appears twice in Sundara Kaanda.
• The flashback appears twice even during the time returning to the hermitage of Bharadhwaja from Lanka.
• The appearance of flashback of the Ramayana here and there is the speciality of the style of Valmiki's story. This style helps to remember by connecting the story while studying the Ramayana. This is the best way of learning while will help to remember points.
• Rama is a self - confident who believed in self - caliber or efficiency.
• How Seetha is a chaste woman in the same way Rama too is a chaste man.
His widower life of 10,000 years
without Seetha is supremely sacred .
Kannada version of the story is written by-
Shri U S Vishweshwara BhatVishweshwara Bhat.
Translated by-
Rashmi A SuvarnaRashmi A Suvarna.
Lecturer in English,Vivekananda P U College,Puttur.
ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ
No comments:
Post a Comment
Please leave your comments here.....