ರಾಮಾಯಣ ಹಕ್ಕಿನೋಟ-೨೦೭ A Bird's-eye view of Ramayana : 207

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ.

ರಾಮಾಯಣ ಹಕ್ಕಿನೋಟ-೨೦೭


ಲಕ್ಷ್ಮಣನ ಪರಿತ್ಯಾಗದ ಬಳಿಕ ಶ್ರೀರಾಮನು ದುಃಖ ಶೋಕಗಳಿಂದ ಕೂಡಿದವನಾಗಿದ್ದು ಮತ್ತೆ ವನವಾಸಕ್ಕೆ ಮನಮಾಡಿದನು.

ಮಂತ್ರಿ, ಪುರೋಹಿತ, ಪ್ರಜೆಗಳನ್ನು ಕರೆದು ಭರತನಿಗೆ ಪಟ್ಟಾಭಿಷೇಕ ಮಾಡಿ ವನವಾಸಕ್ಕೆ ತೆರಳುವ,

ಲಕ್ಷ್ಮಣನ ಹಾದಿಯನ್ನು ತುಳಿಯುವ ನಿರ್ಧಾರವನ್ನು ಪ್ರಟಿಸಿದನು.

ಶ್ರೀರಾಮನ ಮಾತುಗಳನ್ನು ಕೇಳಿ ಎಲ್ಲರೂ ದುಃಖದಿಂದ ತಲೆಯ ಮೇಲೆ ಕೈಯಿಟ್ಟರು.

ಭರತ ಎಚ್ಚರದಪ್ಪಿ ಬಿದ್ದನು.

ಬಳಿಕ  ಎಚ್ಚೆತ್ತುಕೊಂಡು-

ರಾಘವ,

ನೀನಿಲ್ಲದೆ ನನಗೆ ರಾಜ್ಯವೂ ಬೇಡ,ಸ್ವರ್ಗಸುಖವೂ ಬೇಡ.ಇದು ನನ್ನ ಶಪಥ.ಕುಶ-ಲವರಿಗೆ ರಾಜ್ಯಭಿಷೇಕ ಮಾಡು. ಕುಶನನ್ನು ಉತ್ತರ ಕೋಸಲ ರಾಜ್ಯಕ್ಕೂ,ಲವನನ್ನು ದಕ್ಷಿಣ ಕೋಸಲ ರಾಜ್ಯಕ್ಕೂ ರಾಜರನ್ನಾಗಿ ಮಾಡು.ನಾವು  ಮಹಾಯಾತ್ರೆಯನ್ನು ಕೈಗೊಳ್ಳುವ ವಿಚಾರವನ್ನು ಕೂಡಲೇ ಶತ್ರುಘ್ನನಿಗೆ ತಿಳಿಸು- ಎಂದನು. ಭರತನ ಮಾತಿಗೆ ಶ್ರೀರಾಮನು ಒಪ್ಪಿ ಶತ್ರುಘ್ನನನ್ನು ಕರೆತರಲು ದೂತರನ್ನು ಕಳಿಸಿದನು.ವಸಿಷ್ಠರು ಪ್ರಜೆಗಳ ಅಭಿಪ್ರಾಯವನ್ನು ಕೇಳಲು ಶ್ರೀರಾಮನಿಗೆ ಹೇಳಿದರು.ಶ್ರೀರಾಮನು ಪ್ರಜೆಗಳಲ್ಲಿ ಕೇಳಿದಾಗ ಅವರೆಲ್ಲಾ ಒಕ್ಕೊರಲಿನಿಂದ ನಾವು ನೀನು ಹೋಗುವಲ್ಲಿಗೆ ನಿನ್ನನ್ನು ಹಿಂಬಾಲಿಸಿಕೊಂಡು ಬರುತ್ತೇವೆ, ಇದರಿಂದ ನಮಗೂ ನಮ್ಮವರಿಗೂ ನಮ್ಮೆಲ್ಲರಿಗೂ ಅಮಿತವಾದ ಆನಂದವುಂಟಾಗುತ್ತದೆ ಎಂದರು.ಪ್ರಜೆಗಳ ಪ್ರೀತಿಗೆ ಶ್ರೀರಾಮನು ಮಣಿದ.(ಪ್ರಜೆಗಳಿಗಾಗಿ ಸೀತಾ ಪರಿತ್ಯಾಗ.ಇದೀಗ ಪ್ರಜೆಗಳನ್ನು ತನ್ನೊಂದಿಗೇ ಕರೆದೊಯ್ಯುವ ನಿರ್ಧಾರ. ರಾಮನ ಪ್ರಜಾ ವಾತ್ಸಲ್ಯಕ್ಕೆ ಎಣೆಯಿಲ್ಲ.ಪ್ರಜೆಗಳ ರಾಮಪ್ರೀತಿ ಆಶ್ಚರ್ಯ ತರುವಂತಿದೆ!!)



ರಾಮನು

ಕೂಡಲೇ ಕುಶ ಲವರನ್ನು ಉತ್ತರ-ದಕ್ಷಿಣ ಕೋಸಲ ದೇಶಗಳ ರಾಜರನ್ನಾಗಿಸಿ ಪಟ್ಟಾಭಿಷೇಕ ಮಾಡಿದನು.

ಅಭಿಷಿಕ್ತ ಮಕ್ಕಳನ್ನು ತನ್ನ ತೊಡೆಯ ಮೇಲೆ ಕೂರಿಸಿ ಅವರ ನೆತ್ತಿಗಳನ್ನು ಪದೇ ಪದೇ  ಆಘ್ರಾಣಿಸಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದನು. ಅವರಿಬ್ಬರಿಗೆ ಸಾವಿರಾರು ರಥಗಳನ್ನು,ಹತ್ತು ಸಾವಿರ ಆನೆಗಳನ್ನು,ಒಂದು ಲಕ್ಷ ಕುದುರೆಗಳನ್ನು,ರತ್ನ- ಐಶ್ವರ್ಯಗಳನ್ನು ಸಮಾನವಾಗಿ ಹಂಚಿದನು.

ಬಳಿಕ ಅವರನ್ನು ಅವರವರ ರಾಜಧಾನಿಗಳಿಗೆ(ಕುಶನನ್ನು ಕುಶಾವತಿಗೆ,ಲವನನ್ನು ಶ್ರಾವಸ್ತಿಗೆ) ಹರಸಿ ಬೀಳ್ಕೊಟ್ಟನು.


ಇತ್ತ ಅಣ್ಣನ ಮಹಾಯಾತ್ರೆಯ ಸುದ್ದಿ ತಿಳಿದ ಶತ್ರುಘ್ನನು ಕೂಡಲೇ ತನ್ನ ಮಕ್ಕಳಾದ ಸುಬಾಹುವನ್ನು ಮಧುರಾ ಪಟ್ಟಣಕ್ಕೆ,ಶತ್ರುಘಾತಿಯನ್ನು ವಿದಿಶಾ ನಗರಕ್ಕೆ ರಾಜರನ್ನಾಗಿ ಮಾಡಿ ಪಟ್ಟಾಭಿಷೇಕವನ್ನು ಮಾಡಿ ತನ್ನ ಸಂಪತ್ತನ್ನು ಇಬ್ಬರಿಗೂ ಸಮಾನವಾಗಿ ಹಂಚಿ ಹರಸಿ ಕಳುಹಿಸಿದನು. ಬಳಿಕ ತಾನೊಬ್ಬನೇ ರಥದಲ್ಲಿ ಅಯೋಧ್ಯೆಗೆ ಬಂದನು. 


ವಿಶ್ವ


Om ShriRamaya Namaha : 207


A Bird's-eye view of Ramayana : 207


After sacrificing Lakshmana, ShreeRama drowned in the sorrow and grief and he made up his mind to go into the exile again. 

He called the minister, priest and the subjects and announced his decision of walking in the path that Lakshmana had gone in and going into the exile again by coronating Bharatha. 

Everyone who heard the words of ShreeRama became distressed out of sorrow. 

Bharatha fell unconscious. 



After regaining his consciousness- he says to Rama - " Raghava, I don't want the state and the pleasure of the heaven without you. This is my oath. Coronate Kusha and Lava. Make Kusha the king of the North Kosala state and Lava the king of the South Kosala state. And inform Shatrughna immediately about the great pilgrimage that we are going to undertake ". By agreeing to the words of Bharatha ShreeRama sent the messengers to escort Shatrughna. Vasishta asked ShreeRama to ask the opinion of the subjects . When ShreeRama asked them, they all said in unison that they would come following him wherever he would go and that would bring boundless happiness for them, for their own people and for all of them. 

ShreeRama surrendered himself to the love of the subjects. ( sacrificed Seetha for the subjects. And now, decision of taking them along with him. There is no limit for Rama's love for the subjects. The citizens' love for Rama seems to bring astonishment !! ).


Rama coronated Kusha and Lava the king of the North - South Kosala countries immediately. He took the crowned children on his lap and expressed his love and affection on them by smelling their heads again and again. He distributed thousands of chariots, ten thousands of elephants, one lacks of horses, precious gems and wealth between Kusha and Lava equally. Then he sent them off to their respective capitals ( Kusha to Kushaavathi, Lava to Shraavasthi ) by blessing them.



On the other hand, Shatrughna who heard about the great pilgrimage of his elder brother, coronated his children named Subaahu and Shatrugathi and made Subaahu the king of the town Madhura and made Shatrughathi the king of Vidishaa town. Then he distributed his wealth between them equally and sent them off by blessing them. After that he alone came to Ayodhya in chariot. 


Kannada version of the story is written by- 

Shri U S Vishweshwara Bhat Vishweshwara Bhat. 

Translated by- 

Kum. Rashmi A Suvarna

Rashmi A Suvarna. 

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....