ಶ್ರೀರಾಮಾಯಣ ಹಕ್ಕಿನೋಟ -೧೯೫ A Bird's-eye view of Ramayana : 195

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೯೫


ಅಗಸ್ತ್ಯರು ಹನ್ನೆರಡು ವರ್ಷಗಳ ಕಾಲ 'ಜಲಶಯ್ಯಾ' ಎಂಬ ವ್ರತವನ್ನು ಕೈಗೊಂಡಿದ್ದು ಅದನ್ನು ಯಶಸ್ವಿಯಾಗಿ ಪೂರೈಸಿದ್ದರು. ಅದಕ್ಕಾಗಿ  ಅವರನ್ನು ಎಲ್ಲರೂ ಅಭಿನಂದಿಸಿದರು.ಬಳಿಕ 

ದೇವತೆಗಳು ಅವರವರ ಸ್ಥಾನಗಳಿಗೆ ತೆರಳಿದರು. ರಾಮನು ಅಗಸ್ತ್ಯರ ಕೋರಿಕೆಯಂತೆ ಅವರ ಆತಿಥ್ಯವನ್ನು ಸ್ವೀಕರಿಸಿ ಅಂದಿರುಳು ಅಲ್ಲಿಯೇ ತಂಗಿದನು. ಅಗಸ್ತ್ಯರು ರಾಮನಿಗೆ ತನ್ನಲ್ಲಿದ್ದ ವಿಶ್ವಕರ್ಮನು ನಿರ್ಮಿಸಿದ್ದ  ದಿವ್ಯವಾದ ಆಭರಣವೊಂದನ್ನು   ನೀಡಿದರು.'ದಂಡಕಾರಣ್ಯ' ಹೆಸರು ಬಂದುದರ ಹಿಂದೆ ಇರುವ ಇಕ್ಷ್ವಾಕು ವಂಶದ  'ದಂಡ' ರಾಜನ ಕತೆಯನ್ನು ಹೇಳಿದರು.

ಮರುದಿನ ಬೆಳಗ್ಗೆ ಪ್ರಾತರ್ವಿಧಿಗಳನ್ನು ಪೂರೈಸಿದ ರಾಮ  ಅಗಸ್ತ್ಯರಿಗೆ ಅಭಿವಂದಿಸಿ  ಅಯೋಧ್ಯೆಗೆ ಹಿಂದಿರುಗಿದ. 



ಪುಷ್ಪಕವನ್ನು ಆತ್ಮೀಯವಾಗಿ ಬೀಳ್ಕೊಟ್ಟು ಭರತ ಲಕ್ಷ್ಮಣ ರನ್ನು ತನ್ನಲ್ಲಿಗೆ ಬರಮಾಡಿಕೊಂಡನು. 

ರಾಮ ತಮ್ಮಂದಿರಲ್ಲಿ 'ರಾಜಸೂಯ ಯಾಗ' ಮಾಡುವ ಇಂಗಿತವನ್ನು ವ್ಯಕ್ತಪಡಿಸಿದನು. ಆಗ ಭರತನು ವಿನೀತನಾಗಿ ಅಣ್ಣನಲ್ಲಿ- ದೇವತೆಗಳು ಪ್ರಜಾಪತಿಯನ್ನು ಕಾಣುವಂತೆ; ಭೂಮಂಡಲದಲ್ಲಿರುವ ಎಲ್ಲಾ ರಾಜರು ಮಗನು ತಂದೆಯನ್ನು ಕಾಣುವಂತೆ  ನಿನ್ನನ್ನು ಕಾಣುತ್ತಿದ್ದಾರೆ.ಸಮಸ್ತ ಭೂಮಂಡಲಕ್ಕೆ ನೀನೇ ಪರಮಾಶ್ರಯನಾಗಿರುವಾಗ ರಾಜವಂಶಗಳ ವಿನಾಶಕ್ಕೆ, ರಾಜರುಗಳ ಕೋಪಕ್ಕೆ ಕಾರಣವಾಗುವ ಈ ಹಿಂಸಾತ್ಮಕ,ಮತ್ಸರಕ್ಕೆ ಕಾರಣವಾಗುವ ಯಾಗ ಬೇಕಿಲ್ಲ ಎನಿಸುತ್ತದೆ- ಎಂದು ಹೇಳಿದ. 

ಭರತನ ಮಾತುಗಳನ್ನು ರಾಮನು ಸಂತೋದಿಂದ ಸಮ್ಮತಿಸಿ ರಾಜಸೂಯ ಯಾಗ ಮಾಡುವ ಯೋಚನೆಯನ್ನು ಕೈಬಿಟ್ಟನು.

ಆಗ ಲಕ್ಷ್ಮಣನು 'ಅಶ್ವಮೇಧ ಯಾಗ'ವನ್ನು ಮಾಡುವ ಸಲಹೆಯನ್ನು ಮುಂದಿಟ್ಟ.

ಇದೇ ಸಂದರ್ಭದಲ್ಲಿ ವೃತ್ರಾಸುರನ ಕತೆಯನ್ನು ಹೇಳಿದ.ಅವನ ವಧೆಯಿಂದಾಗಿ ತನಗಂಟಿದ್ದ ಬ್ರಹ್ಮ ಹತ್ಯಾದೋಷವನ್ನು ಇಂದ್ರನು ಅಶ್ವಮೇಧ ಯಾಗವನ್ನು ಮಾಡಿ  ಮಹಾವಿಷ್ಣುವನ್ನು ಆರಾಧಿಸಿ ತನ್ನ ದೋಷವನ್ನು ಕಳೆದುಕೊಂಡು ಮರಳಿ ಇಂದ್ರಪದವಿಯನ್ನು ಪಡೆದ ವಿಷಯವನ್ನೂ ಹೇಳಿದನು.

ಅಶ್ವಮೇಧ ಯಾಗದ ಮೂಲಕ ದೇವತಾರಾಧನೆ ಮಾಡುವುದು ಸೂಕ್ತ ಎಂದು ಸಲಹೆಯಿತ್ತನು. ರಾಮನು ಸೋದರರ ಮಾತುಗಳನ್ನು ಕೇಳಿ ಹರ್ಷಿತನಾದನು.

ಆಗ ರಾಮನು ಶಂಕರನ ಅತೃಪ್ತಿಗೆ ಸಿಲುಕಿ  ಧರ್ಮಿಷ್ಠ ಇಲಾ ರಾಜ ಪುರುಷತ್ವವನ್ನು ಕಳಕೊಂಡು ಪ್ರಜಾಪತಿಯು ನೀಡಿದ ಸಲಹೆಯಂತೆ ಅಶ್ವಮೇಧ ಯಾಗದ ಮೂಲಕ ಶಂಕರನನ್ನು ತೃಪ್ತಿ ಪಡಿಸಿ ಮರಳಿ ಪುರುಷತ್ವವನ್ನು ಪಡೆದ ಕತೆಯನ್ನು ತಮ್ಮಂದಿರಿಗೆ ಹೇಳಿದ. ಮಹಾವಿಷ್ಣು ಮಹೇಶ್ವರಾದಿ ದೇವತೆಗಳ ಸಂತೃಪ್ತಿಗೆ ಅಶ್ವಮೇಧ ಯಾಗವನ್ನು  ಮಾಡುವ ನಿರ್ಧಾರ ಕೈಗೊಂಡು ತಮ್ಮಂದಿರಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಲು ರಾಮನು ಆದೇಶಿಸಿದ. 


ವಿಶ್ವ



Om ShriRamaya Namaha : 195


A Bird's-eye view of Ramayana : 195


Agasthya had undertaken the observance named ' Jalashayya' for 12 years and he had completed that successfully. Everyone congratulated him on that. After that the gods returned to their abodes. Rama, on the request of Agasthya stayed there itself on that night by accepting his hospitality. Agasthya gave Rama the divine ornament which he had and which was created by Vishwakarma . He told Rama the story of the king Danda of Ikshvaku clan who was the reason behind the origin of the name ' Dandakaaranya '.

The following day after completing the morning rites by respecting Agasthya, Rama returned to Ayodhya. 



After sending off Pushpaka dearly, he welcomed Bharatha and Lakshmana. He expressed his wish of performing the sacrificial ritual ' Rajasooya Yaaga' . During the time Bharatha being humble says to his elder brother  - " The gods see you as Prajapathy ( Brahma); Everyone sees you as the kings and the sons of this earth see their father. It feels ,there is no need for this sacrificial ritual which will be the reason for jealousy, vandalism, and the annihilation of the clan of the kings for which you are the ultimate shelter ".

Rama agreed with the words of Bharatha happily and discarded the thought of performing Rajasooya sacrificial ritual. 

During the time Lakshmana gave him the suggestion of performing ' Ashwamedha yaga '.

During the same time he told him the story of Vruthaasura. He told Rama about the defect that Indra was subjected to due to the slaying of Vruthaasura and how Indra got his position back and how he freed himself from the defect through Ashwamedha yaga by worshiping Mahaavishnu .

Lakshmana advised Rama to worship the gods by performing Ashwamedha Yaga. 

Rama was overjoyed hearing the words of his brothers. 

During the time, Rama told his brothers the story of the pious king Ilaa who had lost his virility being subject to the discontentment of Shankara and how he obtained his manhood back by pleasing Shankara through performing Ashwamedha yaga by being advised by Prajaapathi.

He made the decision of pleasing and satisfying the gods Mahaavishnu , Maheshwara and others through performing Ashwamedha yaga and commanded his younger brothers to make all the arrangements. 



Kannada version of the story is written by- 

Shri U S Vishweshwara Bhat . 

Translated by- 

Rashmi A Suvarna

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....