ಶ್ರೀರಾಮಾಯಣ ಹಕ್ಕಿನೋಟ -೧೯೧ A Bird's-eye view of Ramayana : 191

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೯೧


ಲವಣಾಸುರನ ಸಂಹಾರದಿಂದ ಸಂತುಷ್ಟರಾದ ದೇವತೆಗಳು ಶತ್ರುಘ್ನನಿಗೆ ವರವನ್ನು ಕೇಳಲು ಹೇಳಿದರು. ಆಗ ಶತ್ರುಘ್ನನು " ದೇವನಿರ್ಮಿತವಾದ ಮತ್ತು ರಮಣೀಯವಾದ ಈ ಮಧುಪುರಿಯು ಶೀಘ್ರವಾಗಿ ನನ್ನ ಮನೋಹರವಾದ ರಾಜಧಾನಿಯಾಗಲಿ" ಎಂಬ ವರವನ್ನು ಕೋರಿದನು. ದೇವತೆಗಳು ತಥಾಸ್ತು ಎಂದು ಇದು ಇನ್ನು ಮುಂದೆ "ಶೂರಸೇನ"ಎಂಬ ಹೆಸರಿನಿಂದ  ಸುಪ್ರಸಿದ್ಧ ದೇಶವಾಗುತ್ತದೆಯೆಂದು ಅನುಗ್ರಹಿಸಿ ದೇವಲೋಕಕ್ಕೆ ತೆರಳಿದರು.

 


 ರಾಮನು ಮಧುಪುರದ ಪಟ್ಟವನ್ನು ಶತ್ರುಘ್ನನಿಗೆ ಕಟ್ಟುವಾಗ ಶತ್ರುಘ್ನನು "ನಗರನಿರ್ಮಾಣ ತಜ್ಞ " ಎಂದು ಕೊಂಡಾಡಿ ಮಧುಪುರಿಗೆ ಚತುರಂಗಬಲದೊಂದಿಗೆ ಕಳಿಸಿದ್ದನು.( ಲಕ್ಷ್ಮಣನು ಅರಣ್ಯ ವಿಜ್ಞಾನಿ, ಶತ್ರುಘ್ನನು ವಾಸ್ತುಶಾಸ್ತ್ರಜ್ಞ,ಭರತನು ರಾಜರ್ಷಿ)ಹನ್ನೆರಡು ವರ್ಷಗಳ ನಿರಂತರ ನಿರ್ಮಾಣ ಕಾರ್ಯ ನಡೆದು ಯಮುನಾ ನದಿಯ ದಡದಲ್ಲಿ ಸುಂದರ ನಗರ ನಿರ್ಮಾಣವಾಯಿತು.ಮೂಲ ಮಧುಪುರಿಯನ್ನುಳಿಸಿಕೊಂಡು,ಅದನ್ನು ಸುಂದರಗೊಳಿಸಿ ನವಮಧುಪುರಿಯ ನಿರ್ಮಾಣ ಮಾಡಿದ ಶತ್ರುಘ್ನನು ರಾಮನಿತ್ತ ಬಿರುದನ್ನು ಸಾರ್ಥಕಗೊಳಿಸಿದನು. ಕರ್ತವ್ಯ ಪೂರ್ಣಗೊಳ್ಳುತ್ತಲೇ ಅಣ್ಣನನ್ನು ಕಾಣುವ ತವಕ ಹೆಚ್ಚಾಯಿತು.ನಗರ ರಕ್ಷಣೆಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿ ಸೀಮಿತ ಸೇನೆಯೊಂದಿಗೆ ಅಯೋಧ್ಯೆಯತ್ತ ಹೊರಟ.


ಅಯೋಧ್ಯೆಗೆ ತೆರಳುವ ದಾರಿಯಲ್ಲಿ ಶತ್ರುಘ್ನನು ವಾಲ್ಮೀಕಿ ಮಹರ್ಷಿಗಳ ಆಶ್ರಮದಲ್ಲಿ ಒಂದಿರುಳು ತಂಗಿ ಅವರ ಆತಿಥ್ಯವನ್ನು ಸ್ವೀಕರಿಸಿದನು.ಮಹರ್ಷಿಗಳು ಶತ್ರುಘ್ನನ ಲವಣಾಸುರ ಸಂಹಾರದ ಸಾಹಸವನ್ನು ಕೊಂಡಾಡಿದರು. ಅಂದಿರುಳು ಅವರು ಶತ್ರುಘ್ನನಿಗೆ ಬಹಳಷ್ಟು  ಕತೆಗಳನ್ನು ಹೇಳಿದರು.

ಇನ್ನೇನು ವಿಶ್ರಾಂತಿಗೆ ಹೋಗಬೇಕು ಎನ್ನುವಾಗ-

ತನ್ತ್ರೀಲಯ ಸಮಾಯುಕ್ತಂ

ತ್ರಿಸ್ಥಾನಕರಣಾನ್ವಿತಮ್|

ಸಂಸ್ಕೃತಂ ಲಕ್ಷಣೋಪೇತಂ

ಸಮತಾಲಸಮನ್ವಿತಮ್||

ಈ ಹಿಂದೆಯೇ ರಚಿಸಲ್ಪಟ್ಟಿದ್ದ ಶ್ರೀರಾಮಚರಿತಾಮೃತವನ್ನು "- •ವೀಣಾವಾದ್ಯದ ಸಹಯೋಗದಲ್ಲಿ,•

ಮಂದ್ರ- ಮಧ್ಯ-ತಾರ ಸ್ಥಾಯಿಗಳೆಂಬ ಸ್ವರ ಭೇದಗಳೊಂದಿಗೆ,

•ಸಂಸ್ಕೃತ ಭಾಷೆಯಲ್ಲಿರುವ ಆ ಮಹಾಕಾವ್ಯವನ್ನು ವ್ಯಾಕರಣ,ಛಂದಸ್ಸು ಮತ್ತು ಸಂಗೀತ ಶಾಸ್ತ್ರದ ಲಕ್ಷಣಗಳ ಪ್ರಕಾರ •ತಾಳ-ಲಯಬದ್ಧವಾಗಿ" ಯಾರೋ ಮನೋಹರವಾಗಿ ಹಾಡುತ್ತಿದ್ದರು. ಶತ್ರುಘ್ನನೂ ಸೇರಿದಂತೆ ಅವನೊಡನೆ ಬಂದಿದ್ದ ಸೇನಾನಿಗಳು ತಮ್ಮನ್ನು ತಾವು ಮರೆತರು.



ನಿಜಕತೆಯನ್ನು ಕಣ್ಣಿಗೆ ಕಟ್ಟುವಂತೆ ಹಾಡಿದ ಆ ಪರಿಯಿಂದ ಕಂಬನಿದುಂಬಿದ ಕಂಗಳ ಶತ್ರುಘ್ನನು ಮೂರ್ಛಿತನಾದನು! ಎದೆದುಂಬಿ ರಾಮಚರಿತಾಮೃತವನ್ನು ಹಾಡಿದ ಆ ಎಳೆಯ ಕಂಠಗಳ ಪರಿಚಯ ಶತ್ರುಘ್ನನಿಗೆ ಆಯಿತೆನ್ನಿಸುತ್ತದೆ! ಸರಿಯಾಗಿ ಹನ್ನೆರಡು ವರ್ಷಗಳ ಹಿಂದೆ ಅವಳಿಕಂಠಗಳ ಅಳುವನ್ನು ಕೇಳಿ ಹರ್ಷದಿಂದ ಮಧುಪುರಿಗೆ ಹೋದ ಶತ್ರುಘ್ನನ ಕಿವಿಗಳಿಗೆ ಇಂದು ಅವಳಿ ಕಂಠಗಳಿಂದ ರಾಮರಸಾಯನ!

ಅಳುವನ್ನು ಕೇಳಿ ಅಂದು ಶತ್ರುಘ್ನನ ಎದೆ ಹಿಗ್ಗಿತ್ತು.

ಇಂದು  ಎದೆಹಿಂಡಿದ ಅನುಭವವಾಗುತ್ತಿತ್ತು! 'ಹಾಡಿದವರಾರೆಂಬುದನ್ನು ಮಹರ್ಷಿಗಳಲ್ಲಿ ಕೇಳಿ ತಿಳಿ' ಎಂಬ ಸೈನಿಕರ ಮಾತನ್ನು ಹಾಗೆಲ್ಲಾ ನಾವು ಕೇಳಬಾರದು ಎಂದು ಹೇಳಿ 'ರಾಜರಹಸ್ಯ'ವನ್ನು ಕಾಪಾಡಿದನೆನಿಸುತ್ತದೆ! ವಾಲ್ಮೀಕಿ ಮಹರ್ಷಿಗಳೂ ಹಾಡಿದವರ ಪರಿಚಯ  ಹೇಳಲಿಲ್ಲ!


ಶತ್ರುಘ್ನನಿಗೆ ಮತ್ತೆ ನಿದ್ದೆ ಬರಲಿಲ್ಲ!ಬೆಳಗಾಗುತ್ತಲೇ ಪ್ರಾತರ್ವಿಧಿ- ಸಂಧ್ಯಾವಂದನೆಗಳನ್ನು ಪೂರೈಸಿ ಮಹರ್ಷಿಗಳ ಪ್ರೀತಿಯ ಆತಿಥ್ಯವನ್ನು ಕೊಂಡಾಡಿ ಅವರ ಅನುಮತಿ- ಆಶೀರ್ವಾದಗಳನ್ನು ಪಡೆದು ಶತ್ರುಘ್ನನು ತನ್ನ ಪರಿವಾರದೊಂದಿಗೆ ಅಯೋಧ್ಯೆಯತ್ತ ತೆರಳಿದನು.


ವಿಶ್ವ


Om ShriRamaya Namaha : 191


A Bird's-eye view of Ramayana : 191


The gods who felt contented by the death of Lavanaasura, said to Shatrughna to ask for boons. During the time Shatrughna requests them that -" Let this godly built and enchanting Madhupura be the beautiful capital of mine soon". The gods granted what he had requested for and said that the country would be popularly known as ' Shoorasena' in the future. After granting the boon to Shatrughna, the gods went to the heaven.


Rama while coronating Shatrughna as the king of Madhupura ,he had sent along with the army of wings by praising Shatrughna that he was " an expert architect" . ( Lakshmana was the silviculturist, Shatrughna was an archeologist, Bharatha was Raajarshi ). A beautiful town was built on the shore of the river Yamuna after 12 years of constant work. Shatrughna gave meaning to the title which was given to him by Rama by building the new Madhupura by beautifying it without demolishing the original Madhupura. His excitement to see his elder brother increased soon after the completion of his duty. After making the proper arrangements for the protection of the city, he travelled towards Ayodhya along with the limited army.

On the way to Ayodhya, Shatrughna spent a night by staying in the hermitage of Valmiki Maharshi and accepted his hospitality. The Maharshi appreciated Shatrughna for his adventure of slaying Lavanaasura. The night he had stayed there, he was told so many stories by Valmiki Maharshi. 

When Shatrughna was about to fall asleep he heard someone singing -

" Thantreelaya samaayuktam

tristhanakaranaanvitham |

Samskrutham lakshnopetham

samathaalasamanvitham ||

ShreeRamacharithaamrutha " - which had been composed earlier - 

• with the collaboration of the musical instrument the Veena ,

• with the division of firm sounds such as bass tone - normal - high note,

• Singing the great epic which was there in the Sanskrit language with the right grammar, metrical form as per the feature of musicology. 

Including Shatrughna, the soldiers who had come along with him lost themselves in the song.



The song was sung in such a way that it picturized the real incidents which brought tears in the eyes of Shatrughna and he fell unconscious ! 

Probably Shatrughna might have recognized those young guttural which had sung Ramacharithaamrutha ( The history of Rama) ! 

' Ramarasaayana' from the twin guttural to the ears of Shatrughna who had gone to Madhupura being happy after hearing the cry of twin guttural exactly 12 years back !

Shatrughna's heart was rejoiced then hearing the cry. 

But this time he felt as if his heart was being crushed !

When the soldiers asked him to learn about those who sang the song from Valmiki Maharshi he said that it would not be right to ask such things ! It seems that Shatrughna might have protected the secret of the king . Valmiki Maharshi too did not disclose about the singers !


Shatrughna did not fall asleep again ! As the morning sun rose ,he performed the morning rituals and Sandhyavandanam. Shatrughna appreciated the affectionate hospitality offered by Valmiki Maharshi. Shatrughna travelled along with his entourage towards Ayodhya after taking the consent and the blessings of the Maharshi. 


Kannada version of the story is written by- 

Shri U S Vishweshwara Bhat 

Translated by- 

Kum. Rashmi A Suvarna

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....