ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೧೮೫
ಆಘಾತ!! ಮಾತಿನೇಟು!ಅಪವಾದದೇಟು.
ಮಹಾರಾಣಿ ಪಟ್ಟದಿಂದ ನೆಲಕ್ಕುರುಳಿದಳೋ ಎಬಂತೆ ಸೀತೆ ಎಚ್ಚರದಪ್ಪಿ ನೆಲಕ್ಕುರುಳಿದಳು.
ನಿಧಾನಕ್ಕೆ ಎಚ್ಚೆತ್ತುಕೊಂಡು ದೈನ್ಯದಿಂದ ಲಕ್ಷ್ಮಣನಿಗೆ- ನಿಶ್ಚಯವಾಗಿಯೂ ನನ್ನೀ ದೇಹವನ್ನು ಬ್ರಹ್ಮನು ದುಃಖವನ್ನನುಭವಿಸಲೆಂದೇ ಸೃಷ್ಟಿಸಿದ್ದಾನೆ.ನಾನು ಹಿಂದಿನ ಜನ್ಮದಲ್ಲಿ ಯಾವ ಪಾಪವನ್ನು ಮಾಡಿದ್ದೆನು? ಯಾರನ್ನು ಪತ್ನಿಯಿಂದ ಬೇರ್ಪಡಿಸಿದ್ದೆನು? ಶುದ್ಧ ಚಾರಿತ್ರ್ಯಳಾದ ನನ್ನನ್ನು ಮಹಾರಾಜನು ತ್ಯಜಿಸಿದನೇ? ಮುನಿಜನರು ಮಹಾರಾಜನು ಯಾವ ಕಾರಣಕ್ಕಾಗಿ ತ್ಯಜಿಸಿದನೆಂದು ಕೇಳಿದರೆ ನಾನೇನೆಂದು ಉತ್ತರಿಸಲಿ? ನಾನು ಈ ಪುಣ್ಯಗಂಗೆಯಲ್ಲಿ ನನ್ನ ದೇಹವನ್ನು ವಿಸರ್ಜಿಸುತ್ತಿದ್ದೆ.ಆದರೆ ನನ್ನ ಪತಿಯ ವಂಶವೇ ನಿರ್ವಂಶವಾಗುವುದರಿಂದ ಹಾಗೆ ಮಾಡುವುದಿಲ್ಲ. ನೀನು ರಾಜಾಜ್ಞೆ ಪಾಲಿಸು.
"ಮೂವರು ಅತ್ತೆಯರಿಗೂ ಕೈಜೋಡಿಸಿ ನನ್ನ ಪ್ರಣಾಮಗಳನ್ನು ಮಾಡು.ಅಂತೆಯೇ ಮಹಾರಾಜನ ಪಾದಗಳಿಗೆ ನನ್ನ ಸಲುವಾಗಿ ನಮಸ್ಕರಸಿ ಕುಶಲವನ್ನು ಕೇಳು.
ಅಂತ:ಪುರದ ಸಮಸ್ತ ಸ್ತ್ರೀಯರಿಗೆ ತಲೆಬಾಗಿ ವಂದಿಸಿ ನನ್ನ ಸಮಾಚಾರ ಹೇಳು.
ವಿಶೇಷವಾಗಿ ಧರ್ಮಪಾಲನೆಯಲ್ಲೇ ಏಕಾಗ್ರಚಿತ್ತನಾಗಿರುವ ರಾಘವನಿಗೆ- ಈ ಸೀತೆ ಶುದ್ಧಾತ್ಮಳೆಂದು ನಿನಗೆ ಗೊತ್ತು. ಲೋಕಾಪವಾದಕ್ಕೆ ಹೆದರಿ ನನ್ನನ್ನು ಪರಿತ್ಯಜಿಸಿರುವೆ.
ಲೋಕದ ಜನರ ಅಪವಾದವನ್ನು ಪರಿಹರಿಸುವುದು ನಿನ್ನ ಕರ್ತವ್ಯವೇ ಆಗಿದೆ.ಅದು ನನ್ನ ಕರ್ತವ್ಯವೂ ಆಗಿದೆ. ಏಕೆಂದರೆ ನೀನೇ ನನಗೆ ಪರಮಾಶ್ರಯ.
ಸ್ತ್ರೀಯರಿಗೆ ಪತಿಯೇದೈವ,
ಗುರು,ಬಂಧು ಎಲ್ಲವೂ. ಆದುದರಿಂದ ಪ್ರಾಣವನ್ನೊತ್ತೆಯಿಟ್ಟಾದರೂ ನಿನಗೆ ಪ್ರಿಯವಾಗುವಂತಹ ಕಾರ್ಯ ಮಾಡಲೇಬೇಕು. ಮಾಡುತ್ತೇನೆ- ಎಂದು ನಾನು ಹೇಳಿದ್ದೇನೆಂದು ಹೇಳಲು ಹೇಳಿದಳು.
ಸೀತೆಗೆ ಪ್ರದಕ್ಷಿಣೆ ಬಂದು ನಮಸ್ಕರಿಸಿದ ಲಕ್ಷ್ಮಣನು; ಸೀತೆ ನನ್ನನ್ನೊಮ್ಮೆ ನೋಡಿ ಹೋಗೆಂದರೂ ನೋಡಲಾರದೆ ನೋಡದೆ; ಹೋಗಲಾರದೆ ಅಳುತಳುತ್ತಾ ಹೋದನು.
ಲಕ್ಷ್ಮಣನು ದೋಣಿಯನ್ನೇರಿದ.
ಗಂಗಾನದಿಯನ್ನು ದಾಟಿದ.
ರಥವನ್ನೇರಿದ. ತಿರುತಿರುಗಿ ತಿರುತಿರುಗಿ ಎಳೆಗರು ತಾಯಿಯನ್ನು ಅಗಲುವಂತೆ ಅನಾಥೆ ಸೀತಾದೇವಿಯನ್ನು ಮಂಜುಕಂಗಳಿಂದ ನೋಡುತ್ತಾ ಹಿಂದಿರುಗಿದ!
ಸನಾಥೆ ಸೀತೆ ಅನಾಥೆಯಾದಳು,
ಒಂಟಿಯಾದಳು.
ಸುರಕ್ಷಿತವಾಗಿದ್ದವಳು ಒಮ್ಮೆಲೇ ಅಸುರಕ್ಷಿತಳಾದಳು.
ಅಸಹಾಯಕ ಸೀತೆ ಅಳತೊಡಗಿದಳು.
ಗಟ್ಟಿಯಾಗಿ..
ಗಟ್ಟಿಯಾಗಿ.. ನವಿಲುಗಳ ಕೇಕೆಯೂ ಕೇಳದಷ್ಟು ಗಟ್ಟಿಯಾಗಿ ಅಳತೊಡಗಿದಳು.
ಪುಣ್ಯ!
ಅದು ಅರಣ್ಯ ರೋದನವಾಗಲಿಲ್ಲ.
ರಾಮನಾಜ್ಞೆ ರಾಮನಿಚ್ಛೆಯಂತೆ ಎಲ್ಲವೂ ನಡೆಯತೊಡಗಿದವು.
ಯಾಕೆಂದರೆ ಅದು ಸ್ವಾರ್ಥರಹಿತವಾಗಿತ್ತು.
ವಿಧಿಯ ಇಚ್ಛೆಯೂ ಆಗಿತ್ತು.
ವಿಶ್ವ
Om ShriRamaya Namaha : 185
A Bird's-eye view of Ramayana : 185
A hard blow !! hit by the harsh words ! hit by the blame.
As the queen has fallen off the throne, Seetha fell to the ground unconsciously.
By regaining her consciousness gradually, being humble, she says to Lakshmana that - " Brahma has created my body to suffer this grief for sure. What sin have I done in my previous birth ? Whom had I separated from a wife ?
Has the king abandoned me who is purely a chaste woman ?
What should I answer if saints and sages ask me the reason for being abandoned by the king ?
I would have given up my body in this sacred Ganga but I will not do so since it would annihilate the entire clan of my husband.
You, follow the command of Rama.
Convey my respect by joining your palms together to all the three mother in laws. In the same way fall to the feet of the king on behalf of me and enquire about his well-being.
Convey my tidings to all the women in the harem by bowing down to them ".
Especially she asks Lakshmana to convey her words to Raghava the one who always focused on following the righteousness. Seetha says that " You know that this Seetha is sacred and pure. You have abandoned me fearing for being blamed by the world. It is absolutely your duty to solve the blame which has imposed by the people. And that has become my duty too. Because you are the ultimate shelter for me.
For women, the husband himself is a God,
Guru, relative everything. Therefore I have to do the deed which is dear to you even at the cost of my life. And I will do that - " In this way she conveyed message to Rama through Lakshmana.
Lakshmana bowed down to Seetha by circumambulating her. When Seetha asked Lakshmana to look at her before leaving, looked at her through he couldn't ; and went back by shedding tears though he couldn't leave her there alone.
Lakshmana got into the boat.
He crossed the river Ganga.
He got into the chariot. He returned with teary eyes, looking back at Seetha again and again who had become an orphan as if children were getting separated from their mothers !
The holy Seetha became an orphan,
she became lonely.
The one who was safe became unsafe.
The helpless Seetha began to weep.
Loudly...
Loudly... She began to weep so loudly that even the jubilant cry of the peacocks was not heard.
Fortunately !
It was not the cry in the wilderness .
Everything began to take place as per the command and will of Rama.
Because it was selfless.
It was the will of the fate too.
Kannada version of the story is written by-
Shri U S Vishweshwara Bhat
Translated by-
Kum. Rashmi A Suvarna
Lecturer in English,Vivekananda P U College,Puttur.
ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ


No comments:
Post a Comment
Please leave your comments here.....