ಶ್ರೀರಾಮಾಯಣ ಹಕ್ಕಿನೋಟ -೧೭೮ A Bird's-eye view of Ramayana : 178

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೭೮


ಜಗಲಿ ಹಾರದವ ಗಗನ ಹಾರಿಯಾನೇ?ಗಾದೆ.

ಹನುಮನ ಪಾಲಿಗೆ ಗಗನ ಹಾರಿದವಗೆ ಜಗಲಿ ಯಾವ ಲೆಕ್ಕ? ಎಂದಾಯಿತು.


'ಆಂಜನೇಯ   ತಾಯ್ಮಡಿಲಿನಿಂದ 

ಕಾಡಿಗೆ ಜಿಗಿದ.ಅಲ್ಲಿ 

ಎಲ್ಲೆಂದರಲ್ಲಿ ಓಡಾಡಿದ.

ಕೈಗೆ ಸಿಕ್ಕಿದ್ದನ್ನು ಬಗೆದ-ಒಗೆದ-ಒಡೆದ! ಆಶ್ರಮವಾಸಿಗಳಿಗೆ ನುಂಗಲಾಗದ ಉಗುಳಲಾಗದ ಪರಿಸ್ಥಿತಿ.ಹೋಮ ಯಜ್ಞಗಳಿಗೆ ತನ್ನದೇ ಆದ  ಕಾಣಿಕೆ ನೀಡುವಾಗ ಋಷಿಗಳಿಗೆ ಅದು ಉಪಟಳವಾಯಿತು.ಸಹಿಸಲು ಅಸಾಧ್ಯವಾದಾಗ - ಇನ್ನೊಬ್ಬರು ಕಾಣಿಸುವ ತನಕ ನಿನಗೆ ನಿನ್ನ ಶಕ್ತಿಯ ಅರಿವು ತಿಳಿಯದಿರಲಿ- ಎಂದು ಶಪಿಸಿದರು.ಹನುಮನ ತೇಜಸ್ಸು ವೀರತೆಗಳು ಮಂಕಾದವು.ಅಂದಿನಿಂದ ಆಶ್ರಮಗಳಲ್ಲಿ ಮೃದುಸ್ವಭಾವದಿಂದ ವರ್ತಿಸತೊಡಗಿದ. ಹನುಮನ ಶಕ್ತಿಯ ಅರಿವು ಅವನಿಗೆ ತಿಳಿಸುವವರಿಲ್ಲದುದರಿಂದಲೇ ವಾಲಿ ಸುಗ್ರೀವರಲ್ಲಿ ಸಂಘರ್ಷ ನಡೆದಾಗ ಸರ್ವಶಕ್ತನಾಗಿದ್ದರೂ ಕಟ್ಟಿಹಾಕಿದ ಸಲಗದಂತೆ ಇದ್ದು ಸುಗ್ರೀವನಿಗೆ ನ್ಯಾಯ ಒದಗಿಸದಾದ! ಪರಾಕ್ರಮ,ಉತ್ಸಾಹ, ಬುದ್ಧಿ, ಪ್ರತಾಪ, ಸೌಶೀಲ್ಯ,

ಮಾಧುರ್ಯ,

ನೀತಿ-ಅನೀತಿಗಳ ವಿವೇಕ,ಗಾಂಭೀರ್ಯ,

ಚಾತುರ್ಯ,ಬಲ ಧೈರ್ಯಗಳಲ್ಲಿ ಹನುಮನನ್ನು ಮೀರಿಸುವವರು ಈ ಜಗತ್ತಿನಲ್ಲಿ ಯಾರಿದ್ದಾರೆ?

ಜಾಂಬವಂತನ ಪ್ರೇರಣೆಯಿಂದ ಮತ್ತೆ ಆ ಶಕ್ತಿ ಜಾಗೃತಿಯಾಗಿ ನಿನಗೆ ಸೀತೆಯನ್ನು ಮರಳಿ ಪಡೆಯುವಲ್ಲಿ ಮಹಾನ್ ಸಾಧನೆಗಳನ್ನು ಮಾಡಿದ'-ಎಂದು ಅಗಸ್ತ್ಯರು ಹನುಮನ ಕತೆಯನ್ನು ಹೇಳಿ ನಿಲ್ಲಿಸಿದರು. 



ರಾಮ ಸಂತೃಪ್ತನಾದ.

ಅಗಸ್ತ್ಯರೇ ಮೊದಲಾದ ಮಹರ್ಷಿಗಳನ್ನು ಸತ್ಕರಿಸಿ ಅವರ ಆಶೀರ್ವಾದಗಳನ್ನು ಪಡೆದು ಬೀಳ್ಕೊಟ್ಟನು. 


ರಾಮನಿಗೆ ಹನುಮ ಏನು? ಏನಾಗಬೇಕು?

ಏನೂ ಅಲ್ಲ! 

ಆದರೆ ಎಲ್ಲವೂ ಹೌದು! ಮಾನವನೆಲ್ಲಿ ವಾನರನೆಲ್ಲಿ!!

ರಾಮ ಪಾದಗಳಿಗೆ ಮಣಿಯುವಾಗ ಅಲ್ಲಿ ಹನುಮನಿದ್ದೇ ಇರುತ್ತಾನೆ.

ಆದ ಕಾರಣ ನಮ್ಮ ನಮನ ಅವನಿಗೂ ಸಲ್ಲುತ್ತದೆ, ಸಲ್ಲಬೇಕು ಅಲ್ಲವೇ?

ಹೌದು.ಸಲ್ಲಲೇಬೇಕು.


ವಿಶ್ವ



Om ShriRamaya Namaha : 178


A Bird's-eye view of Ramayana : 178


Will  anyone fly into the sky who has not even jumped across the platform ? Proverb. But in the case of Hanuman it was like - will it be a matter for Hanuman to jump across the platform who has jumped into the sky ?


Anjaneya leapt into the wood from the lap of his mother. He wandered there everywhere. He wished - threw - broke whatever he got ! But it was like neither to swallow nor to spit situation for the inhabitants of the hermitage. When he began to give his own offerings for the sacrificial rituals it became a harassment for the saints. When it became impossible to tolerate, they cursed Hanuman that he should not be aware of his own potentials until and unless someone else make him realise that. The radiance and valor of Hanuman became dull. From then onwards he began behaving in a gentle manner in the hermitages. Since there were none to make him realise his own capabilities, he had to be like an restrained elephant though he was all efficient, when there was conflict between Vaali and Sugreeva and he was unable to bring justice to Sugreeva !

Who is there in this world who can surpass Hanuman in valor, energy, knowledge, dare, good conduct, gentleness, the knowledge of morality and immorality, dignity, shrewdness ,strength and courage ?

Agasthya put an end to the story of Hanuman by saying that Hanuman did a great achievement of bringing Seetha back to Rama by being inspired by Jaambavantha who awoke the prowess of Hanuman. 



Rama got contented. 

He honoured and offered hospitality to Agasthya and other Maharshis and bid adieu to them by receiving blessings from them. 


What is Hanuman to Rama ? What is he mean to Rama ?

Nothing !

but still he is everything ! Where a human, where an ape !!

There will always be Hanuman while surrendering to the feet of Rama. 

Because of this, our respect is even submitted to Hanuman. 

It has to be submitted, hasn't it ?

Yes. It must be submitted. 


Kannada version of the story is written by- 

Shri U S Vishweshwara Bhat 

Translated by- 

Kum. Rashmi A Suvarna

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....