ಶ್ರೀರಾಮಾಯಣ ಹಕ್ಕಿನೋಟ -೧೭೯ A Bird's-eye view of Ramayana : 179

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೭೯


ಕೃತಜ್ಞತಾ ಗುಣಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ತ್ವದ ಸ್ಥಾನವಿದೆ.ಅಂದಿನಿಂದ ಇಂದಿನವರೆಗೂ ನಮ್ಮವರಲ್ಲಿ ನಾವಿದನ್ನು ಕಾಣಬಹುದು.   ರಾಮನ ಬದುಕಿನುದ್ದಕ್ಕೂ ವಿಶೇಷವಾಗಿ  ನಾವಿದನ್ನು ಕಾಣಬಹುದು. 


ಪಟ್ಟಾಭಿಷೇಕದ ಬಳಿಕ ಮೊದಲ ಹಂತವಾಗಿ ಮಹರ್ಷಿಗಳ ಉಪದೇಶಗಳನ್ನು ಕೇಳಿ ಗೌರವಿಸಿ; ಮುಂದಿನ ದಿನಗಳಲ್ಲಿ ಬರುತ್ತಾ ಇರಬೇಕು ಎಂದು ಪ್ರಾರ್ಥಿಸಿ ಬೀಳ್ಕೊಟ್ಟನು. 

ಎರಡನೆಯ ಹಂತದಲ್ಲಿ ಮಾವ ಜನಕ ಮಹಾರಾಜನನ್ನು,

ಸೋದರಮಾವ(ಭರತನ ಸೋದರಮಾವನನ್ನು ತನ್ನ ಮಾವನಂತೆಯೇ ಕಂಡಿದ್ದ )ಯುಧಾಜಿತನನ್ನು ಗೌರವಿಸಿ ಕಾಣಿಕೆಗಳನ್ನು ನೀಡಿ ಭರತ ಶತ್ರುಘ್ನರ ಜೊತೆಯಲ್ಲಿ ಕಳಿಸಿದ. ಅವರು ರಾಮ ನೀಡಿದ ಕಾಣಿಕೆಗಳನ್ನು ಮತ್ತೆ ಅವರಿಗೇ ಕೊಟ್ಟು ಆಶೀರ್ವದಿಸಿ ತಮ್ಮ ತಮ್ಮ ರಾಜ್ಯಗಳಿಗೆ ತೆರಳಿದರು. 

ಮೂರನೆಯ ಹಂತದಲ್ಲಿ ಪಟ್ಟಾಭಿಷೇಕಕ್ಕೆ ಬಂದ ರಾಜರುಗಳಿಗೆ ಸತ್ಕಾರ- ಬೀಳ್ಕೊಡುಗೆ.ಇಲ್ಲಿ ಕಾಶೀರಾಜನಿಗೆ ವಿಶಿಷ್ಟ ಸ್ಥಾನವಿದೆ.ಭರತನ ಹದಿನಾಲ್ಕು ವರ್ಷಗಳ ಪರೋಕ್ಷ ಆಳ್ವಿಕೆಯಲ್ಲಿ ಅವನಿಗೆ ನೆರವಾಗಿ ನಿಂತವ ಕಾಶೀರಾಜ.ಅಷ್ಟೇ ಅಲ್ಲ ಭರತನಿಗೆ ಸೀತಾಪಹರಣ,ಯುದ್ಧದ ವಿಚಾರ ಗೊತ್ತಾದಾಗ ಸ್ನೇಹಿತ ರಾಜರುಗಳನ್ನು  ಸೇನಾಸಹಿತರಾಗಿ ಅಯೋಧ್ಯೆಗೆ ಕರೆಸಿ ರಾಮನ ಕರೆ ಬಂದ ಯಾವುದೇ   ಕ್ಷಣದಲ್ಲಿ ರಾವಣನೊಡನೆ ಯುದ್ಧ ಮಾಡಲು ಹೊರಡುವ ಸಿದ್ಧತೆಯನ್ನು ಮಾಡಿದ್ದರಲ್ಲಿ ಅವನ ಕೊಡುಗೆ ದೊಡ್ಡದು. ರಾಮ ಅವನನ್ನು ವಿಶೇಷವಾಗಿ ಗೌರವಿಸಿ ಕಾಣಿಕೆಗಳನ್ನು ನೀಡಿ  ಕೃತಜ್ಞತೆಗಳನ್ನು ಸಲ್ಲಿಸಿ ಬೀಳ್ಕೊಟ್ಟನು. ಇತರ ರಾಜರುಗಳನ್ನು ಕಾಣಿಕೆ ಸಹಿತ  ಆತ್ಮೀಯವಾಗಿ ಬೀಳ್ಕೊಟ್ಟನು. ತಮ್ಮ ತಮ್ಮ ರಾಜ್ಯಗಳಿಗೆ ತಲುಪಿದ ರಾಜರುಗಳು ರಾಮನಿಗೆ ಬಹು ಅಮೂಲ್ಯವಾದ ಕಾಣಿಕೆಗಳನ್ನು ಕೊಟ್ಟು ಕಳುಹಿಸಿದರು. ರಾಮ ಅವೆಲ್ಲವನ್ನೂ ವಾನರ-ಋಕ್ಷ-ರಾಕ್ಷಸರಿಗೆ ಹಂಚಿದನು.



ಇದೀಗ ಕೊನೆಯ ಹಂತ.

ಜೀವದ ಹಂಗು ತೊರೆದು,ಸೋದರ ಬಂಧವನ್ನೇ ಹರಿದು ನ್ಯಾಯ ಧರ್ಮಕ್ಕಾಗಿ ತನ್ನೊಡನೆ ಇದ್ದ ಸುಗ್ರೀವ ಹನುಮಂತ ಜಾಂಬವಂತ ವಿಭೀಷಣರನ್ನು ಬೀಳ್ಕೊಡುವ ಸಮಯ.

ಸುಮಾರು ಒಂದು ತಿಂಗಳ ಕಾಲ ಇವರು ರಾಮಾತಿಥ್ಯವನ್ನು ಸವಿದಿದ್ದರು.ರಾಮನಿಗೆ ಅವರನ್ನು  ಹೋಗಿ ಅನ್ನುವಂತಿಲ್ಲ, ಅವರಿಗೆ ರಾಮನನ್ನು ಬಿಟ್ಟು ಹೋಗುತ್ತೇವೆ ಅನ್ನುವಂತಿಲ್ಲ! ಬಿಡಲಾರದ ಬಿಡಿಸಲಾರದ ಭಾವಬಂಧ!


ವಿಶ್ವ


Om ShriRamaya Namaha  : 179


A Bird's-eye view of Ramayana : 179


The attribute of expressing gratitude has a great place in an Indian culture. We can see this from the decades till now. We can see this especially throughout the life of Rama. 


After the coronation as the first step, he respected the Maharshis after hearing their preachings. Then he send them off with honor by requesting them to visit often in the future. In the second stage, he honoured his father in law Janaka the king, and his maternal uncle Yudhaajitha by offering them presents( the maternal uncle of Bharatha whom Rama had considered his own) with Bharatha and Shatrughna. They gave the presents back to them which were given by Rama and returned to their respective states by blessing them.

In the third stage, honor and sending off the kings who had come for the coronation.

 There is a special place for the king Kaashi here. The king Kaashi was the one who stood by Bharatha in his 14 years of indirect reign. Not only that ,during the time Bharatha came to know about the abduction of Seetha and about the war, the contribution of Kaashi was commendable in making arrangements for the war by calling aligned kings with Ravana at any moment they would get a call from Rama .

Rama honoured him specially and expressed his gratitude by offering him presents and bid him adieu. He sent off other kings cordially along with Valuable presents. The kings who reached their respective states, sent valuable gifts to Rama. Rama distributed all those presents to apes - yakshas  - monsters .



Now, it's the last stage. 

It was the time to bid adieu to Sugreeva, Hanuman, Jaambavantha and Vibhishana who had risked their life, who had broken the relationship of brotherhood and who were with Rama for justice and righteousness. 

They had enjoyed the hospitality of Rama for almost one month. Rama could not tell them to leave  and they could not say they would leave Rama ! The emotional attachment , which was unbreakable and unable to detach !


Kannada version of the story is written by- 

Shri U S Vishweshwara Bhat 

Translated by- 

Kum Rashmi A Suvarna

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....