ಶ್ರೀರಾಮಾಯನಮ:
ರಾಮಾಯಣ ಹಕ್ಕಿನೋಟ-೧೫೦
ಸೋಲಿನ ಮೇಲೆ ಸೋಲು!
ಸಾವಿನ ಮೇಲೆ ಸಾವು!!
ಲಂಕೆಯ ರಕ್ಕಸಿಯರು ಮಗ-ಗಂಡ-ತಂದೆ-ಸೋದರರನ್ನು ಕಳಕೊಂಡು ಅನಾಥೆಯರಾಗಿ ಗುಂಪು ಗುಂಪಾಗಿದ್ದುಕೊಂಡು ಅಳತೊಡಗಿದರು.ತಮ್ಮಳುವಿಗೆ ಕಾರಣಳಾದ ಶೂರ್ಪನಖಿಗೆ ಹಿಡಿಶಾಪ ಹಾಕತೊಡಗಿದರು.
ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ತಮ್ಮ ನೋವಿಗೆ ಕಾರಣರಾದವರಿಗೆ ಶಾಪ ಹಾಕುವುದನ್ನು ಕಾಣುತ್ತೇವೆ. ಅಂದರೆ ಇಲ್ಲಿ ರಾಮನು ಅವರಿಗೆ ಗುರಿಯಾಗಬೇಕಿತ್ತು!ಆದರೆ ಹಾಗಾಗಲಿಲ್ಲ! ಲಂಕಾ ಸ್ತ್ರೀಯರು ಹಾಗೆ ಮಾಡದೆ ಆತ್ಮಶೋಧನೆಯ ಮಾತುಗಳಿಂದ ನಮ್ಮವರು ತಪ್ಪಿದ್ದೆಲ್ಲಿ? ಸೋತದ್ದೆಲ್ಲಿ? ಎಂದು ತಮ್ಮೊಳಗೇ ಚರ್ಚಿಸುತ್ತಾ-
•ಶೂರ್ಪನಖಿಯ ಅಸಹ್ಯ ಕಾಮುಕತೆಯನ್ನು
•ರಾವಣನ ದರ್ಪದ ನಡೆಗಳನ್ನು
•ರಾವಣನ ಅತಿಯಾದ ಪರಸ್ತ್ರೀ ವ್ಯಾಮೋಹವನ್ನು
•ಅಪಶಕುನಗಳ ಸರಮಾಲೆಯನ್ನು
•ರಾಮನ ಸುಂದರ ರೂಪವನ್ನು ,ಸದ್ಗುಣಗಳನ್ನು,
ಸದ್ವರ್ತನೆಗಳನ್ನು,
•ವಿರಾಧನಿಂದ ತೊಡಗಿ ಈ ಕ್ಷಣದ ವರೆಗೆ ಅವನು ತೋರಿದ ಅಸಾಮಾನ್ಯ ಶೂರತ್ವವನ್ನು,
•ವಿಭೀಷಣನ ಸರಿಯಾದ ನಿರ್ಧಾರಗಳನ್ನು,
•ದೇವತೆಗಳು ರಾಮನ ಪರವಾಗಿರುವುದನ್ನು ...ಹೀಗೆ ಎಲ್ಲವನ್ನೂ ವಿವೇಚಿಸುತ್ತಾ ರಾವಣನಿಗೆ ಸಾವೇ ಗತಿ,ನಮಗೆ ಅನಾಥತ್ವವೇ ಗತಿ ಎಂದು ವಿಲಾಪಿಸುತ್ತಿದ್ದರು.
ಮನೆಯ ಹೆಣ್ಣು ಮಕ್ಕಳೇ ವೈರಿಯನ್ನು ಕೊಂಡಾಡ ತೊಡಗಿರುವುದು ರಾವಣನ ಪತನದ ಸೂಚನೆಯಲ್ಲವೇ?
ಈ ತನಕ ಅದುಮಿಟ್ಟ (ಬಲಾತ್ಕಾರದಿಂದ ಇಡಲ್ಪಟ್ಟ) ನೋವು, ಅಸಹನೆ, ಅಸಹಾಯಕತೆ, ಅಸಮಾಧಾನಗಳು ಒದೊಂದಾಗಿ ಹೊರಬರತೊಡಗಿದವು!! ಹೆಣ್ಣಿನ ಕಣ್ಣೀರು ಆಕೆಗೂ ಹಾಳು,ಕಣ್ಣೀರಿಳಿಸಿದವರಿಗೂ ಹಾಳು!ಅಲ್ಲವೇ?
ಇತ್ತ ರಾವಣ ತಾನೇ ಯುದ್ಧ ಮಾಡಲು ನಿರ್ಧರಿಸಿ ಸಮಸ್ತ ರಾಕ್ಷಸರೊಡನೆ ರಣರಂಗಕ್ಕೆ ಹೋದನು. ಅಶುಭಶಕುನಗಳು ದಾರಿಯುದ್ದಕ್ಕೂ ಕಂಡು ಬಂದವು. ಲಕ್ಷ,ಕೋಟಿಗಳ ಸಂಖ್ಯೆಯಲ್ಲಿ ಆನೆ, ಕುದುರೆ, ರಥ, ಪದಾತಿಗಳು ಮಹಾರಥಿಗಳ-ಸೇನಾಧಿಪತಿಗಳ ನೇತೃತ್ವದಲ್ಲಿ ಯುದ್ಧರಂಗದಲ್ಲಿ ಜಮೆಯಾದರು. ದಿವ್ಯವಾದ ರಥದಲ್ಲಿ ರಾವಣ!
ಸುಗ್ರೀವನ ನೇತೃತ್ವದಲ್ಲಿ ವಾನರವೀರರು ಯುದ್ಧಕ್ಕೆ ತೊಡಗಿದರು.ಸುಗ್ರೀವನ ಹೊಡೆತಕ್ಕೆ ವಿರೂಪಾಕ್ಷ ಬಲಿಯಾದರೆ,ಮಹೋದರನು ತನ್ನ ಖಡ್ಗದಿಂದಲೇ ಸುಗ್ರೀವನಿಂದ ಹತನಾದನು.ಮಹಾಪಾರ್ಶ್ವನನ್ನು ಯುವರಾಜ ಅಂಗದನು ಕೊಂದೆಸೆದನು. ಕೊನೆಗೆ ರಾಮ-ರಾವಣರು ಎದುರೆದುರಾದರು.
ವಿಶ್ವ


No comments:
Post a Comment
Please leave your comments here.....