ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೧೬೪
ರಾಮರಾಜ್ಯ!
•ಹನ್ನೊಂದು ಸಾವಿರ ವರ್ಷಗಳ ಕಾಲ
•ಭರತ ಯುವರಾಜ,
ಲಕ್ಷ್ಮಣ ಅನುಚರ
•ನೂರು ಅಶ್ವಮೇಧ ಯಾಗಗಳನ್ನು ಮಾಡಿದ.
•ವಿಧವೆಯರಿಲ್ಲ,ವಿಷ, ಆಧಿ ವ್ಯಾಧಿಗಳಿಲ್ಲ.
•ಅನ್ಯಾಯ ಅನಾಚಾರಗಳಿಲ್ಲ.
•ಶ್ರೀರಾಮನ ಬದುಕೇ ಎಲ್ಲರಿಗೂ ಆದರ್ಶ.
•ಮಕ್ಕಳು ಮೊಮ್ಮಕ್ಕಳನ್ನು ಜನರು ಹೊಂದಿರುತ್ತಿದ್ದರು.
•ಕಾಲಕಾಲಕ್ಕೆ ಮಳೆ ಬೆಳೆ,ಸುಜಲ ಸುಫಲ ಸ್ವಚ್ಛ ವಾಯು ಇದ್ದವು.
•ವರ್ಣಾಶ್ರಮ ಪದ್ಧತಿ ಪ್ರಕಾರ ಸಂತೃಪ್ತ ಬದುಕು ಎಲ್ಲರದಾಗಿತ್ತು.
•ಜನರೆಲ್ಲ ಧರ್ಮ ಪರಾಯಣರು,ಲಕ್ಷಣ ಸಂಪನ್ನರೂ ಆಗಿದ್ದರು.
ರಾಮರಾಜ್ಯವು ಕಲ್ಯಾಣರಾಜ್ಯವಾಗಿತ್ತು.
ರಾಮಾಯಣವನ್ನು ಓದಿದರೆ-ಕೇಳಿದರೆ-
•ಪಾಪಮುಕ್ತಿ,ಸಂತಾನ ಭಾಗ್ಯ
•ಸ್ವನಿಯಂತ್ರಣ,ಶತ್ರುನಾಶ
•ಸ್ವಸ್ಥ ದೀರ್ಘಾಯುಷ್ಯ
.ಸಂಕಷ್ಟ ನಾಶ,
ಸುಖ ಪ್ರಯಾಣ
•ಇಷ್ಟಾರ್ಥ ಸಿದ್ಧಿ,
ಗೃಹದೋಷ ಪರಿಹಾರ
•ದೇವತೆಗಳು ಪಿತೃದೇವತೆಗಳು ಸಂತುಷ್ಟರಾಗುವರು
•ಆಯುಷ್ಯ, ಆರೋಗ್ಯ, ಯಶಸ್ಸು,ಸದ್ಬುದ್ಧಿ, ಸೋದರಪ್ರೇಮಗಳು ಉಂಟಾಗುತ್ತವೆ.
ಶುಭವಾಗಲಿ ಮಂಗಳವಾಗಲಿ
ಯುದ್ಧಕಾಂಡಕ್ಕೆ ಮಂಗಳ.
ಶ್ರೀರಾಮಾಯನಮ:
ರಾಮಾಯಣ ಹಕ್ಕಿನೋಟ-೧೬೪ ಅ
ಉತ್ತರಕಾಂಡಕ್ಕೆ ಸಾಗುವ ಮುನ್ನ....
ಮಂದೋದರಿಯ ಕಣ್ಣಲ್ಲಿ ರಾಮ- ರಾವಣ
#ರಾಮ-
•ಶ್ರೀರಾಮ ಮನುಷ್ಯ ಮಾತ್ರದವನಲ್ಲ
ಅವನು ಮಹಾಯೋಗಿ,
•ಪರಮಾತ್ಮ,
•ಸನಾತನ,
•ಆದಿ ಮಧ್ಯಾಂತ್ಯರಹಿತ,
•ಮಹತೋಮಹಿಮ,
•ಅಜ್ಞಾನಾಂಧಕಾರದಿಂದ ಆಚೆ ಇರುವವನು,
•ಪರಮೇಶ್ವರ, •ಶಂಖ-ಚಕ್ರ-ಗದಾಧಾರಿ,
•ಶ್ರೀವತ್ಸಾಂಕಿತ,
•ಮಹಾಲಕ್ಷ್ಮೀಸಹಿತ,
•ಅಜೇಯ,
•ಶಾಶ್ವತ,
•ಸಮಸ್ತ ಲೋಕಾಧೀಶ್ವರ,
•ಮಹಾವಿಷ್ಣುವೇ ಮಾನವ ರೂಪವನ್ನು ತಾಳಿ, ದೇವತೆಗಳು ವಾನರರೂಪವನ್ನು ಹೊಂದಿ ರಾಕ್ಷಸರ ಸಹಿತ ರಾವಣನ ಅಂತ್ಯಕ್ಕಾಗಿ ಬಂದವನು.
ಇವಿಷ್ಟು ರಾಮನ ಅವತಾರದ ಕುರಿತು.
•ಜನಸ್ಥಾನದಲ್ಲಿ ಸಾವಿರಾರು ರಕ್ಕಸರನ್ನು ಕೊಂದವ,
•ಅಭೇದ್ಯ ಲಂಕೆಗೆ ಹನುಮನೊಬ್ಬನೇ ಬಂದು ಬೆಂಕಿ ಇಕ್ಕಿ ಮರಳಿ ಹೋಗುವಂತಹ ಪ್ರೇರಣೆ ನೀಡಿದಾತ,
•ರಾವಣನ ಅತಿಮುಖ್ಯ ಆಯುಧವಾದ ಪರಿಘಾಯುಧವನ್ನು ಸಾವಿರಾರು ತುಂಡುಗಳನ್ನಾಗಿ ಮಾಡಿದಾತ..
#ರಾವಣ-
•ನೀಲಮೇಘಶ್ಯಾಮ,
•ಪೀತಾಂಬರಧಾರಿ,
•ಮಹಾಬಾಹು,
•ಸುಂದರವಾದ ಮುಖಮಂಡಲದವ,
•ಮುಗುಳು ನಗೆಯಿಂದ ಕೂಡಿದ ಮಾತುಗಳನ್ನಾಡುವವ,
•ಪರ್ವತ ಶಿಖರದಂತೆ ಎತ್ತರದ ದೇಹಧಾರಿ,
•ತೇಜಸ್ವಿ.
•ದೇವ ದಾನವರನ್ನು ಗೆದ್ದವ,
•ಮೂರು ಲೋಕಗಳ ಐಶ್ವರ್ಯವನ್ನು ಉಪಭೋಗಿಸುತ್ತಿದ್ದವ,
•ಲೋಕಪಾಲರನ್ನು ಗೆದ್ದವ,
•ಭಗವಾನ್ ಶಂಕರನ ಸಹಿತ ಕೈಲಾಸವನ್ನೇ ಮೇಲಕ್ಕೆತ್ತಿದವ,
●ಲೋಕಗಳನ್ನು ಉಲ್ಲೋಲ ಕಲ್ಲೋಲ ಮಾಡಿದವ,
●ಸಾಧು ಸತ್ಪುರುಷರನ್ನು ಹಿಂಸಿಸಿದವ,
•ತನ್ನ ಕಡೆಯವರನ್ನು ತನ್ನನ್ನು ಒಪ್ಪಿದವರನ್ನು ರಕ್ಷಿಸುತ್ತಿದ್ದವ,
●ಮಹಾಪರಾಕ್ರಮಿಗಳಾದ ದಾನವರನ್ನು- ಯಕ್ಷರನ್ನು ಸಾವಿರಾರು ಸಂಖ್ಯೆಯಲ್ಲಿ ಸಂಹರಿಸಿದವ,
●ಹಲವಾರು ಯಜ್ಞಗಳನ್ನು ಧ್ವಂಸಮಾಡಿದವ,
●ಧರ್ಮದ ವ್ಯವಸ್ಥೆಗಳನ್ನು ಹಾಳು ಮಾಡಿದವ,
•ಮಾಯಾಯುದ್ಧದ ಪ್ರವೀಣ,
●ದೇವತೆಗಳ-ಅಸುರರ-
ಮನುಷ್ಯರ ಕನ್ಯೆಯರನ್ನು ಅಪಹರಿಸಿದವ,
●ಶತ್ರುಗಳ ಸ್ತ್ರೀಯರನ್ನು ಹಿಂಸಿಸಿದವ,
●ಪತಿವ್ರತೆಯರಾದ-ಧರ್ಮಪರಾಯಣೆಯರಾದ-ಅತ್ತೆ ಮಾವಂದಿರ ಶುಶ್ರೂಷೆಯಲ್ಲಿ ಸದಾ ನಿರತರಾಗಿರುವ ಅನೇಕಾನೇಕ ಕುಲಸ್ತ್ರೀಯರನ್ನು ವಿಧವೆಯರನ್ನಾಗಿ ಮಾಡಿದವ,ಅವಮಾನಿಸಿದವ,●ಮೂರು ಲೋಕಗಳನ್ನು ಗೆದ್ದ ಮಹಾಶೂರನಾಗಿದ್ದರೂ ಮಾಯಾಮೃಗದ ಜಾಲ ಹೂಡಿ ಪತಿ ಮೈದುನರು ದೂರಹೋಗುವಂತೆ ಮಾಡಿ ;
ಅವರಿಲ್ಲದ ವೇಳೆ ಅಸಹಾಯಕ ಹೆಂಗಸನ್ನು
ಕದ್ದು ತಂದ ಹೇಡಿ,
●ಅರುಂಧತಿ ರೋಹಿಣಿಯರನ್ನೂ ಮೀರಿಸಿದ ಪತಿವ್ರತೆ-ಮಹಾಲಕ್ಷ್ಮಿಗೂ ಮೀರಿದ ಐಶ್ವರ್ಯವಂತೆ-ಭೂದೇವಿಗೂ ಮೀರಿದ ಕ್ಷಮಾಗುಣಿ-
ಸರ್ವಾಂಗ ಸುಂದರಿ ಸೀತೆಯನ್ನು ಕಾಮಿಸಿದ ಮತಿಗೆಟ್ಟವ,
●ಸದಾ ಹಿತವನ್ನು ಬಯಸುತ್ತಿದ್ದ ಸತ್ಯಭಾಷಿ,ತ್ರಿಕಾಲಜ್ಞಾನಿ
ತನ್ನ ಸೋದರ; ನನ್ನ ಮೈದುನ ವಿಭೀಷಣನನ್ನು ಅವಮಾನಿಸಿ ಹೊರಗಟ್ಟಿದ ಅವಿವೇಕಿ,
●ಮಾರೀಚ ಕುಂಭಕರ್ಣ ಸುಮಾಲಿಯರ ಮಾತುಗಳನ್ನು ಧಿಕ್ಕರಿಸಿ ತನ್ನ ನಾಶಕ್ಕೂ ರಾಕ್ಷಸ ಕುಲನಾಶಕ್ಕೂ ಕಾರಣನಾದವ,
●●ತಾನು ಮಾಡಿದ ಪಾಪಕರ್ಮಗಳ ಫಲಾನುಭವಿ.
ಇದು ಮಂದೋದರಿ ರಾಮ- ರಾವಣರನ್ನು ಕಂಡ ಬಗೆ.
ಅವಳೇ ಹೇಳಿದಂತೆ ರಾವಣನು ಈ ರೀತಿಯ ಸಾವಿಗೆ ಅರ್ಹ.
ಮಾಡಿದ್ದುಣ್ಣೋ ಮಾರಾಯ ಮಾತನ್ನು ನಂಬಿದ ಪತಿವ್ರತೆ ಈ ಇಷ್ಟೂ ಮಾತುಗಳನ್ನು ಹೇಳಿದ್ದು ರಣರಂಗದಲ್ಲಿ ಅನಾಥನಂತೆ ಸತ್ತು ಬಿದ್ದಿದ್ದ ರಾವಣನನ್ನು ಕಂಡು!
ರಾಮನ ಕುರಿತಾಗಲೀ ಅವನ ಸೈನಿಕರ ಕುರಿತಾಗಲೀ ತಪ್ಪಿಯೂ ಒಂದೇ ಒಂದು ಅಸಮಾಧಾನದ ಮಾತನ್ನು ಹೇಳಿಲ್ಲ!
ಅವಳ ಈ ವಿವೇಕಯುತವಾದ ನಡೆ ನುಡಿಗಳೇ ಅವಳನ್ನು ಪತಿವ್ರತೆಯರ ಸಾಲಿಗೆ ಸೇರಿಸಿರಬಹುದು!
ರಾಕ್ಷಸನ ಸತಿಯಾದರೂ ಸಾತ್ವಿಕತೆಯ ಮೂರ್ತಿ.ರಾವಣನ ಕಾಮದ ಬೆಂಕಿಯಲ್ಲರಳಿದ ನರಳಿದ ಪಾವನೆ ಪತಿವ್ರತೆ!
ಆದರೆ ಅಸಹಾಯಕಿ.
ವಿಶ್ವ
Om ShriRamaya Namaha : 164
A Bird's-eye view of Ramayana : 164
Ramaraajya ! The ideal state.
• 11 thousand years of time span,
• Bharatha the young prince,
• Lakshmana the follower,
• He performed 100 Ashwamedha Yagas.
• There were no widows, venom, miseries and diseases,
• There were no injustice and impropriety.
• The life of ShreeRama itself is the model for everyone.
• People children and grandchildren.
• There were rain, yield, pure water, fruits and pure air in every season.
• As per the tradition of Varnaashrama ( order of the four castes) everyone had the contented life.
• All the inhabitants were studying devotedly the righteousness ,
Advantages of reading and listening the Ramayana -
• Redemption from the sin, Propagation,
• Self-control, annihilation of the enemy,
• Longevity with good health ,
• Annihilation of the misery,
• Happy journey,
• Fulfillment of all the wishes,
• Problems related to home will get sorted out,
• The gods and the ancestral gods will get satisfied.
• Longevity, health ,success, intelligence, love among brothers will invoke.
Let it be auspicious.
The auspicious end to the 'Yuddha Kaanda '
A Bird's-eye view of Ramayana : #164 A
Before taking the journey into Uttara Kaanda...
Rama - Ravana in the eyes of Mandodari.
Rama -
• ShreeRama is not only a human, but a great monk,
• The almighty,
• The one who is untouched by time,
• The one with no beginning, existence and the end,
• The greatest influencer,
• The one who is away from the darkness of ignorance,
• Parameshwar,
• The one who is armed with conch - wheel ( the weapon of the lord Vishnu) - club,
• The one who is named as ' Shreevatsa',
• The one along with Mahaalaxmi,
• Unconquerable,
• Eternal,
• The lord of the universe,
• By taking the form of a human MahaaVishnu himself, and gods taking the form the apes ,he had come to slay Ravana along with the monsters.
These are about the incarnation of Rama.
• The one who slayed thousands of monsters in ' Janasthaana' ,
• The one who inspired Hanuman to enter and burn the unbreakable Lanka and to come out without getting harmed,
• The one who broke Ravana's most important artillery ' Parighaayudha' into thousands of pieces.
Ravana -
• Neelameghashyama. ( The one with the complexion of rainy clouds),
• Clad in yellow garments,
• The one who possessed the great arms,
• The one who has got a beautiful face,
• The one who speaks with a smile on the face,
• The one who has the tall physique as a mountain peak,
• The wise,
• The one who had won the gods and the monsters,
• The one who was enjoying the wealth of the 3 worlds,
• The one who had won the leaders of the worlds,
• The one who had lifted Kailasa along with the lord Shankara,
• The one who made the world topsy - turvy ,
• The one who tortured the monks and the saints,
● The one who tortured the monks and
the virtuous men,
• The one who was protecting his.
people and those who had accepted
him,
● The one who had slayed thousands of
great valiant monsters,
● The one who had destroyed so many
religious rituals,
● The one who spoiled the order of the
righteousness,
• The one who was an expert in fighting ,
through illusion,
● The one who abducted the women of
the gods and the monsters,
● The one who tortured the women of.
enemies,
● The one who humiliated many women
and made them widows who were
chaste, who were studying
righteousness being devoted and who
used to indulge themselves in
nurturing their in-laws ,
● Though being the great valiant who
had won the 3 worlds, he is a coward
who abducted a helpless woman in the
absence of her husband and brother in
law by making them go away through
spinning the conspiracy of '
MaayaMrugha'.
● The insane, who desired to obtain
flawless, beautiful and merciful Seetha
who surpassed even Arundhathi,
Rohini, the chaste woman Mahaalaxmi
and even the prosperous mother earth.
● The fool who threw his own brother
Vibhishana who was always praying
for his good, the one who followed the
truth and the one who knows about the
past ,the present and the future, by
humiliating him.
● The one who became the reason for
his own destruction and the
destruction of his people by ignoring
the words of Maaricha, Kumbhakarna
and Sumaali.
● The beneficiary of his own sinful deeds.
This is how Mandodari looked upon Rama and Ravana.
As she herself stated Ravana deserved such kind of death.
The chaste woman who believed the proverb eat what you have prepared, uttered all these by seeing Ravana who was lying dead in the battlefield !
She didn't utter even a single word of contempt even by mistake about Rama or his warriors !
Her rational behaviour and statements might have associated her in the list of chaste women !
She is an idol of virtue though the wife of a monster. She is a chaste and sacred woman who bloomed
She is an idol of virtue though the wife of a monster. She is a chaste and sacred woman who bloomed and suffered in the last.
Kannada version of the story is written by-
Shri U S Vishweshwara Bhat
Translated by-
Kum. Rashmi A Suvarna
Lecturer in English,Vivekananda P U College,Puttur.
ಚಿತ್ರ :ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ



No comments:
Post a Comment
Please leave your comments here.....