ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೧೬೩
ಎಲ್ಲರೂ ಸುಖಾಸೀನರಾದರು.ಭರತನು ರಾಮನಲ್ಲಿ 'ಪಟ್ಟಾಭಿಷೇಕ ಮಾಡಿಸಿಕೊಂಡು ರಾಜ್ಯವನ್ನು ಮುನ್ನಡೆಸಬೇಕು' ಎಂದು ವಿನಂತಿಸಿದನು. ರಾಮನು ಸಮ್ಮತಿಸಿದನು.ಕ್ಷೌರಿಕರು ಬಂದರು.ಸೋದರರ ಜಟೆಯನ್ನು ಅಂದವಾಗಿ ಕತ್ತರಿಸಿದರು.ರಾಮನೂ ಸೇರಿದಂತೆ ಸೋದರರೆಲ್ಲರೂ,
ಸುಗ್ರೀವ ವಿಭೀಷಣರೂ ಮಿಂದು ಹೊಸ ಉಡುಪನ್ನು ತೊಟ್ಟರು.ರಾಮ ಲಕ್ಷ್ಮಣರನ್ನು ಶತ್ರುಘ್ನನು ಅಲಂಕರಿಸಿದರೆ ಸೀತೆಯನ್ನು ತಾಯಂದಿರು ಶೃಂಗಾರಗೊಳಿಸಿದರು. ರಾಮನು ಸೀತೆಯೊಂದಿಗೆ ವಿಶೇಷವಾದ ರಥವನ್ನೇರಿದ.
ಭರತನು ಸಾರಥಿಯಾದ.
ಶತ್ರುಘ್ನನು ಬೆಳ್ಗೊಡೆಯನ್ನು ಹಿಡಿದ.ಲಕ್ಷ್ಮಣ ವಿಭೀಷಣರು ಚಾಮರ ಬೀಸಿದರು.
ಶ್ರೀರಾಮಪರಿವಾರ!! ಸಾವಿರಾರು ವಾನರವೀರರು ಮಾನವ ರೂಪಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದರು.ಶ್ರೀರಾಮನ ಅತ್ಯಪೂರ್ವವಾದ ಅಯೋಧ್ಯಾಪುರ ಪ್ರವೇಶವನ್ನು ದೇವತೆಗಳು ಋಷಿಗಳು ಸೇರಿದಂತೆ ಎಲ್ಲರೂ ಕಣ್ತುಂಬ ನೋಡಿದರು,ಧನ್ಯರಾದರು.
ಮಿಂಚಿನ ವೇಗದಲ್ಲಿ ಪಟ್ಟಾಭಿಷೇಕದ ಸಿದ್ಧತೆಗಳನ್ನು ವಸಿಷ್ಠ ವಾಮದೇವರೇ ಮೊದಲಾದ ಮಹರ್ಷಿಗಳ ಮಾರ್ಗದರ್ಶನದಲ್ಲಿ ಸಚಿವರುಗಳು ಮಾಡಿದರು.
ಅಭಿಷೇಕಕ್ಕೆ ಬೇಕಾದ ಸಮುದ್ರಗಳ ತೀರ್ಥಗಳನ್ನು ಹನುಮಾದಿಗಳು ತಂದರು.
ಸಂಪ್ರದಾಯಕ್ಕನುಗುಣವಾಗಿ ಸೀತಾರಾಮರಿಗೆ ಅಭಿಷೇಕ ಮಾಡಿದರು.ಸೀತಾರಾಮರನ್ನು ಸಿಂಹಾಸನದಲ್ಲಿ ಕೂರಿಸಿ ಮನುವಿನಿಂದ ತೊಡಗಿ ದಶರಥನ ವರೆಗೆ ತೊಟ್ಟಿದ್ದ ರತ್ನ ಖಚಿತ ಕಿರೀಟವನ್ನು ರಾಮನಿಗೆ ವಸಿಷ್ಠರು ತೊಡಿಸಿದರು.
ರಾಮ ಶ್ರೀರಾಮ- ರಾಜಾರಾಮನಾದ.
ಸೀತೆ ಪಟ್ಟದ ರಾಣಿಯಾದಳು.
ಭೂಮಿಗೆ ಭೂಮಿಯೇ ಧನ್ಯವಾಯಿತು.
ಬಂದಂತಹ ಎಲ್ಲರನ್ನೂ ರಾಜೋಚಿತವಾಗಿ ಸತ್ಕರಿಸಿದರು.ಹಿಂದೆಂದೂ ಆಗಿರದ ಮುಂದೆಂದೂ ಆಗದ ರೀತಿಯಲ್ಲಿ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವವು ನಡೆಯಿತು.
ಕ್ರಮ ಪ್ರಕಾರದ ದಾನ ದಕ್ಷಿಣೆಗಳು ನಡೆದ ಬಳಿಕ ಸಾರ್ವಭೌಮ ಶ್ರೀರಾಮನು ಸುಗ್ರೀವನಿಗೆ ದಿವ್ಯಮಾಲೆಯೊಂದನ್ನು ಉಡುಗೊರೆಯಾಗಿತ್ತನು.
ಅಮೂಲ್ಯ ತೋಳ್ಬಳೆಗಳನ್ನು ಅಂಗದನಿಗಿತ್ತನು.ಶ್ರೇಷ್ಠವಾದ ಮುತ್ತಿನ ಹಾರವನ್ನು ಸೀತೆಗೀಯಲು ಅವಳು ಅದನ್ನು ಕುತ್ತಿಗೆಯಲ್ಲಿ ಧರಿಸಿ ಮತ್ತೆ ತೆಗೆದು ವಾನರರ ಮುಖವನ್ನು ನೋಡತೊಡಗಿದಳು.
ಆಗ ರಾಮನು 'ನಿನಗಿಷ್ಟವಾದವರಿಗೆ ನೀಡು'ಎಂದು ಸೀತೆಗೆ ಹೇಳಲು ಸೀತೆ ಅದನ್ನು "ತೇಜಸ್ಸು,ಧೃತಿ,ಯಶಸ್ಸು,
ಚತುರತೆ,ಶಕ್ತಿ, ವಿನಯ, ನೀತಿ, ಪುರುಷಾರ್ಥ, ಪರಾಕ್ರಮ,
ಉತ್ತಮಬುದ್ಧಿಗಳ ಗುಣಗಳ" ಪರಮಾಶ್ರಯನಾದ ರಾಮದೂತ ಹನುಮಂತನಿಗಿತ್ತಳು.
ಹನುಮ ಕಂಬನಿದುಂಬಿ ಸ್ವೀಕರಿಸಿದ.ವಾನರೆಲ್ಲರೂ ಸಂಮಾನಿಸಲ್ಪಟ್ಟು ಅವರವರ ಸ್ಥಾನಗಳಿಗೆ ತೆರಳಿದರು. ಸುಗ್ರೀವ ಕಿಷ್ಕಿಂಧೆಗೆ,ವಿಭೀಷಣ ಲಂಕೆಗೆ ತನ್ನವರೊಂದಿಗೆ ತೆರಳಿದರು.
ಭರತ ಯುವರಾಜನಾದ.
ಅಪೂರ್ವ ಸೋದರರ ಅಪೂರ್ವ ರಾಮರಾಜ್ಯದ ಶುಭಾರಂಭವಾಯಿತು.
ಕಲ್ಯಾಣರಾಮನ,
ರಾಜಾರಾಮನ ಹನ್ನೊಂದು ಸಾವಿರ ವರ್ಷಗಳ ಸುವ್ಯವಸ್ಥಿತ ಆಡಳಿತದಲ್ಲಿ ಎಲ್ಲರೂ ಎಲ್ಲವೂ ಸುಖಿಗಳೇ! ಅದೇ ರಾಮರಾಜ್ಯ!!
ಅದೇ ಕಲ್ಯಾಣರಾಜ್ಯ!!
ವಿಶ್ವ
Om ShriRamaya Namaha : 163
A Bird's-eye view of Ramayana : 163
Everyone sat comfortably. Bharatha requested Rama to reign the state by getting coronated. The hair locks of the brothers were cut beautifully. Including Rama all the brothers , Sugreeva and Vibhishana took a shower and wore new clothes. If Rama and Lakshmana were adorned by Shatrugna then Seetha was adorned by the mothers. Rama climbed the special chariot along with Seetha.
Bharatha became the charioteer.
Shatrugna held a white parasol. Lakshmana and Vibhishana swang the fan which was made of the hair of the Bos Grunniens.
The family of ShreeRama !! Thousands of monkey warriors participated in the procession being in the form of humans. Everyone including the gods and the sages witnessed ShreeRama's entry to the unprecedented ' Ayodhya Pura' and felt contented.
The arrangements for the coronation was made in the speed of the light by the ministers under the guidance of Vasishta, Vaamadeva and other Maharshis. The holy water of the seas which required for the holy bath at the time of the coronation was brought by Hanuman and others. According to the tradition and the culture Rama and Seetha were showered with holy water. Seetha Rama were made to sit in the royal throne. Vasishta crowned Rama with a crown made of precious gemstones which was worn by the emperors right from Manu till Dasharatha.
Rama ShreeRama became RajaRama ( the king Rama).
Seetha became the Queen.
The entire earth got contented.
They offered the kingly hospitality to everyone who had come there. The coronation ceremony of ShriRama was performed in such a way that it had never taken place before and it would not take place ever.
After giving charity according to the procedure, the emperor ShreeRama gave the finest chain to Sugreeva as a present. He gave the precious arm accessories to Angada. When he gave the great pearl chain to Seetha ,she wore that around her neck and took that off again and began to see the faces of the apes.
During the time, Rama told her to give the chain to anyone that she wished to give. Seetha gave the chain of pearls to Rama's servant Hanuman who possessed all the good attributes and virtues such as , brilliance, unflinching will, success, proficiency, strength, humility, integrity, valor and righteousness.
Hanuman accepted that with the teary eyes. The apes returned to their region after being honored. Sugreeva returned to Kishkindha along with his people and Vibhishana returned to Lanka along with his people.
Bharatha became the prince.
The auspicious time of the uncommon ' Rama Rajya' which means an ideal state of the uncommon brothers began.
Everyone and everything was fortunates in the 11 thousand years of proper administration of the prosperous Rama and the king Rama !
That itself is ' Rama Rajya' !!
And that is the welfare state !!
Kannada version of the story is written by-
Shri U S Vishweshwara Bhat
Translated by-
Kum. Rashmi A Suvarna
Lecturer in English,Vivekananda P U College,Puttur.
ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ



No comments:
Post a Comment
Please leave your comments here.....