ಶ್ರೀರಾಮಾಯಣ ಹಕ್ಕಿನೋಟ -೯೯ A Bird's-eye view of Ramayana : 99

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೯೯


ಅಶೋಕೆಯ ಸೌಂದರ್ಯವನ್ನು ನೋಡುತ್ತಾ ಸೀತೆಯನ್ನು ಹುಡುಕುತ್ತಾ ಇಡೀ ಅಶೋಕೆಯನ್ನು ಮರದಿಂದ ಮರಕ್ಕೆ ಹಾರುತ್ತಾ ಕೊನೆಗೆ ಶಿಂಶುಪಾ ಮರವೊಂದರಲ್ಲಿ ಕುಳಿತು ಸಮೀಕ್ಷಿಸಿದನು.ನಿಜಾರ್ಥದಲ್ಲಿ ಅಶೋಕಾ ವನ.

ದುಗುಡ ಕಳೆಯುವ ಬನ,ತಾಣ.ಖಂಡಿತವಾಗಿಯೂ ಸೀತೆ ಇಲ್ಲೇ ಇರಬೇಕು.

ಯಾಕೆಂದರೆ ಅವಳಿಗೆ ಮೃಗಗಳೆಂದರೆ ತುಂಬಾ ಪ್ರೀತಿ.ಹೀಗೆ ಸುತ್ತಲೂ ಕಣ್ಣು ಹಾಯಿಸುತ್ತಾ ಸೀತೆಯಿರುವ ತಾಣವನ್ನು ಹುಡುಕುತ್ತಾ ಇರುವಾಗ ವನದ ಮಧ್ಯೆ ಎತ್ತರದಲ್ಲಿ ಕೈಲಾಸದಂತಿರುವ ಚೈತ್ಯಪ್ರಾಸಾದವೊಂದನ್ನು ಕಂಡನು! ಹೌದು ಖಂಡಿತಾ ಅವಳೇ! ಪಾಡ್ಯದ ಚಂದ್ರನಂತೆ ಕ್ಷೀಣವಾಗಿ ಕಾಣುತ್ತಿರುವ ಇವಳೇ ಸೀತಾಮಾತೆ! 

ಮಲಿನ ವಸ್ತ್ರಧಾರಿಣಿ.

ನಿತ್ಯೋಪವಾಸಿನಿ.

ರಕ್ಕಸಿಯರಿಂದ ಸುತ್ತುವರೆಯಲ್ಪಟ್ಟವಳು.

ಕಣ್ಣೀರು ಸುರಿಸುತ್ತಿರುವವಳು.

ಅಲಂಕಾರರಹಿತೆ...

ಶ್ರೀರಾಮನು ಸೀತೆಯ ಅಂಗಾಂಗಳಲ್ಲಿರುವ ಆಭರಣಗಳನ್ನು ಹೇಳಿದ್ದನು.ಅದರಂತೆಯೇ ಇವಳು ಆಭರಣಗಳನ್ನು ಧರಿಸಿದ್ದಾಳೆ.

ಅಂತೂ ಸೀತಾ ದರ್ಶನ

"ಮೃತ್ಯೋರ್ಮಾ ಅಮೃತಂಗಮಯ" ಆಯಿತು.

ಮನದಲ್ಲೇ ರಾಮನಿಗೆ,ಅವನ ಸ್ಥೈರ್ಯಕ್ಕೆ ವಂದಿಸಿದನು.

ಸೀತೆಯ ಶೀಲ ಸೌಂದರ್ಯವನ್ನು ಶ್ಲಾಘಿಸಿ ಮಣಿದನು.ಅವಳು ಅನುಭವಿಸಿರಬಹುದಾದ ಕಷ್ಟಕೋಟಲೆಗಳನ್ನು ನೆನೆದು ಮಮ್ಮಲ ಮರುಗಿದನು.ರಾಮ ಲಕ್ಷ್ಮಣರ ಎಣೆಯಿಲ್ಲದ ಪರಾಕ್ರಮದ ಬಗ್ಗೆ ಅವಳಿಗಿದ್ದ ನಂಬುಗೆಯನ್ನು ನೆನೆದು ಅವಳ ಧೈರ್ಯವನ್ನು ಮೆಚ್ಚಿದನು.

ಅಲ್ಲಿಯ ತನಕ ನಡೆದ ಘಟನೆಗಳನ್ನೆಲ್ಲಾ ನೆನಪಿಸಿದನು.

ರಾಮನು ಎಷ್ಟು ಸಂತಸಗೊಂಡಾನು ಎಂಬುದನ್ನು ನೆನೆದೇ ಹಿರಿಹಿರಿಹಿಗ್ಗಿದನು.

ಹಾಗೆಯೇ ಸಮಯಾವಕಾಶ ಕಾಯುತ್ತಾ ಆ ಮರದಲ್ಲಿ ಅಡಗಿ ಕುಳಿತನು.




Om ShriRamaya Namaha  : 99


A Bird's-eye view of Ramayana : 99


Hanuman was searching for Seetha by jumping from a tree to tree in the entire Ashoka Vana .The beauty of the garden thrilled him. After wandering in the garden for a long time , he came and sat on a Shimshupaa tree and surveyed the garden from the tree. It was truly Ashoka Vana in real sense (which means the garden where there is no grief). It was the garden where one could lose his / her worries. So he thought Seetha had to be there.


Because she was fond of animals .He was looking everywhere to find out the place where Seetha was in. While searching for Seetha ,his eyes fell on a shrine which was at the center of the forest and it appeared as Kailasa . It was Seetha ! He said that it was the mother Seetha who seemed so thin just like the moon which would appear after the eclipse. 

Seetha was in polluted cloth. 

Had been performing fasting. 

Had been guarded by the demon women.  Shw was shedding tears.

Was not beautified with ornaments...


ShreeRama had told Hanuman about the jewels that were there on Seetha. Hanuman noticed the same jewels on Seetha.

Finally Hanuman could see Seetha. 

His life got rejuvenated as a line of a verse says " Mruthyormaa Amruthangamaya ". Hanuman bowed down to Rama and to his courage. 

He praised the beauty of  Seetha's chastity and felt surrendering himself to her feet. He imagined the pain and hurdles that Seetha had been facing and he felt pity for her. He appreciated the courage of Seetha who had the firm belief in the valor and courage of Rama - Lakshmana. He recalled all the incidents that had happened so far .


Hanuman was on the cloud nine with the thought of Rama being happy after hearing the good news about Seetha.

Hanuman hid himself in the tree ,waiting for the right time and opportunity. 



No comments:

Post a Comment

Please leave your comments here.....