ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೬೦
ರಾಮನು ಚಿತ್ರಕೂಟದ ಸಮೀಪದ ಆಶ್ರಮ ಮಂಡಲಕ್ಕೆ ಹೋಗುವಾಗ ತನ್ನ ಮತ್ತು ಲಕ್ಷ್ಮಣನ ಬಿಲ್ಲುಗಳ ಸಿಂಜನಿಗಳನ್ನು ಬಿಡಿಸಿ ಪ್ರವೇಶಿಸಿದ್ದನು.ಕಾರಣ ಕೇಳಿದಾಗ ಆಶ್ರಮಗಳಿಗೆ ಹೋಗುವಾಗ ಹೀಗೆ ಹೋಗುವುದು ಸಂಪ್ರದಾಯ ಎಂದು ವಿವರಿಸಿದ್ದನು.
ಸೀತೆ ಬಹುಶ್ರುತೆ,ಸುಶ್ರುತೆ.
ಅವಳಿಗೆ ಇದನ್ನು ಕೇಳಿ ಖುಷಿಯಾಗಿದ್ದಿರಬೇಕು.ಅದೇ ರಾಮ ದಂಡಕಾರಣ್ಯದ ಆಶ್ರಮ ಮಂಡಲವನ್ನು ಸಂದರ್ಶಿಸಲು ಹೊರಟ ಸಂದರ್ಭದಲ್ಲಿ ಸುಸಜ್ಜಿತ ಧನುರ್ಧಾರಿಯಾಗಿ ಹೊರಟಾಗ ಅಹಿಂಸಾ ಧರ್ಮದ ಪಾಠವನ್ನು ಉದಾಹರಣೆ ಸಹಿತ ರಾಮನಿಗೆ ಮಾಡಿದ್ದಳು.ಆಗ ರಾಮನ ಉತ್ತರ- ಇಲ್ಲಿನ ಮಂಡಲವಾಸಿಗಳು ರಕ್ಕಸರ ಉಪಟಳವನ್ನು ಎದುರಿಸುತ್ತಿದ್ದಾರೆ.ಅವರಿಂದ ತಮ್ಮನ್ನು ಕಾಪಾಡುವಂತೆ ವಿನಂತಿಸಿದ್ದಾರೆ.ಅದು ಅವರ ಆದೇಶವೆಂದು ನಾವು ತಿಳಿಯಬೇಕು.ರಕ್ಕಸರಿಂದ ಈ ಋಷಿಗಳನ್ನು ಕಾಪಾಡಲು ಇಂದು ಇದು ಅನಿವಾರ್ಯ.-ಎಂದು ಉತ್ತರಿಸಿದನು.
ಈ ಸಂದರ್ಭದಲ್ಲಿ ಸೀತೆ ಹೇಳುವ ಒಂದು ಕತೆ ನಮ್ಮನ್ನು ಚಿಂತನೆಗೆ ಹಚ್ಚುವ ಕೆಲಸ ಮಾಡುತ್ತದೆ-
ಒಬ್ಬ ಮಹಾನ್ ತಪಸ್ವಿ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದನು.ಅವನ ತಪಸ್ಸಿನಿಂದ ಇಂದ್ರನು ಬೆದರಿದನು.ತನಗೆ ಅಪಾಯ ಉಂಟೆಂದು ಬಗೆದನು.ಆತನ ತಪಸ್ಸಿಗೆ ಭಂಗ ತರುವ ಯೋಜನೆಯನ್ನು ಮಾಡಿದನು.ಒಬ್ಬ ಭಟನ ವೇಷವನ್ನು ಧರಿಸಿ ಆಶ್ರಮಕ್ಕೆ ಬಂದನು.ತನ್ನಲ್ಲಿದ್ದ ಉತ್ತಮವಾದ ಕತ್ತಿಯನ್ನು ನ್ಯಾಸರೂಪವಾಗಿ ಆ ತಪಸ್ವಿಯ ಬಳಿ ಇಟ್ಟು ತೆರಳಿದನು.ಭಟನು ತನ್ನ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಆ ಕತ್ತಿಯನ್ನು ಸದಾ ತನ್ನೊಂದಿಗೆ ಇಟ್ಟುಕೊಂಡನು.ಇರುವಾಗ ಹೋಗುವಾಗ ಬರುವಾಗ...ಹೀಗೆ ಅದು ಅವನ ಅವಿಭಾಜ್ಯ ಅಂಗವಾಯಿತು.ಬೆಂಕಿ ತನ್ನ ಸಂಗಕ್ಕೆ ಬಂದ ಕಟ್ಟಿಗೆಯನ್ನು ಸುಡುವಂತೆ ಕತ್ತಿಯ ಕತ್ತರಿಸುವ ಕಡಿಯುವ ಗುಣ ಇವನಿಗೂ ಬಂತು! ನಿಧಾನಕ್ಕೆ ತಪಸ್ಸು ಕಡಿಮೆಯಾಗಿ ಸಾತ್ವಿಕನಾಗಿದ್ದ ಅವನು ತಾಮಸ ಗುಣದವನಾದನು.ಯಾರಿಗೂ ಬೇಡದ ಬೇಡನಾಗಿ ಹಾಳಾದನು.ಎಂಬ ಕತೆ ಹೇಳಿ - ಹಾಗೆ ನೀನು ಬಿಲ್ಲು ಬಾಣಗಳನ್ನು ತೆಗೆದು ಕೊಂಡು ಹೋಗಿ ನಮಗೆ ತೊಂದರೆ ಕೊಡದ ರಕ್ಕಸರನ್ನು ಕೊಲ್ಲಬೇಡ.ಶಸ್ತ್ರವು ಹಿಂಸೆಯನ್ನು ಪ್ರಚೋದಿಸುತ್ತದೆ.ಇವುಗಳನ್ನು ಬಿಟ್ಟೇ ತಿರುಗಾಡುವ ಎಂದು ಸಲಹೆಯಿತ್ತಳು.ರಾಮನು ಅದಕ್ಕೆ ಸೂಕ್ತವಾದ ಉತ್ತರವನ್ನು ಕೊಡುತ್ತಾ - ದಂಡಕಾರಣ್ಯದ ಋಷಿಗಳು ತಮಗೆ ತೊಂದರೆ ಕೊಡುವ ರಕ್ಕಸರನ್ನು ಶಾಪದ ಮೂಲಕ ಕೊಲ್ಲಲು ಸಮರ್ಥರಿದ್ದರೂ ಅವರು ಆ ಕೆಲಸ ಮಾಡುವುದಿಲ್ಲ.ಅವರಿಗೆ ಸಾವಿಗಿಂತ ತಪಸ್ಸು,ಅದರ ಶಕ್ತಿ ದೊಡ್ಡದು.ರಕ್ಕಸರಿಂದ ಜನರನ್ನು ರಕ್ಷಿಸಲೆಂದೇ ಕ್ಷತ್ರಿಯನಿರುವುದು,ಅವನ ಅಸ್ತ್ರ ಶಸ್ತ್ರಗಳಿರುವುದು-ಎಂದು ಸಮಾಧಾನ ಗೊಳಿಸಿ ಆಶ್ರಮಮಂಡಲದಲ್ಲಿ ಶಸ್ತ್ರಧಾರಿಯಾಗಿಯೇ ಋಷಿಗಳ ಆಶ್ರಮಗಳಲ್ಲಿ ವಾಸಿಸ ತೊಡಗಿದರು.
ದಂಡಕಾರಣ್ಯದ ಆಶ್ರಮ ಮಂಡಲದಲ್ಲಿ ತನ್ನ ವನವಾಸದ ಬಹುಪಾಲು ಅವಧಿಯನ್ನು ಅಂದರೆ ಸುಮಾರು ಹತ್ತು ವರ್ಷಗಳನ್ನು ರಾಮನು ಸೀತೆ ಲಕ್ಷ್ಮಣರೊಂದಿಗೆ ಆರಾಮದಲ್ಲಿ ಕಳೆದನು.
Om ShriRamaya Namaha : 60
A Bird's-eye view of Ramayana : 60
Rama untied the threads or strings which were tied to the bows of his and Lakshmana's before entering the council of hermitage which was near to Chitra Koota. When he was asked the reason,he explained that it was the tradition to be followed while going into the hermitage.
Seetha was a virtuous woman.
She might have felt happy hearing the words of Rama. Seetha had preached the lesson of non violence with an exemplary story to Rama in the past when he was about to go to interact with the council of sages,by equipping himself in Dandakaaranya. During the time, Rama had answered her that the sages who were residing there had been suffering from the harassment of the monsters and they had requested Rama to save them from the monsters. And he told Seetha that their request had to be considered as an order. Rama told Seetha, that equipments were necessary then to save the sages from the monsters.
During the same time, Seetha narrated a story to Rama. The story which was recounted by Seetha makes us think...
There was a great ascetic who was penancing in the forest ardently. His penance scared Indra off. Indra realized that he would have to face trouble from the ascetic. So he made a plan to distract the ascetic. Indra came to the hermitage of the ascetic by disguising himself as a minister . He handed over his finest sword to the ascetic so that it would be safeguarded by him. The ascetic was unaware of the crooked plan of Indra. The ascetic never wanted to disappoint the minister ( Indra in disguise) who had given him the responsibility of the sword. So the ascetic always carried the sword with him. The sword became a part of his life. But as the days passed the ascetic adopted the stabbing and slashing nature of the sword as if fire which consumes firewood which comes in contact with it. Gradually he lost the power of penancing since he was no longer focused. Finally the ascetic became willful and harmful who was docile and pious earlier. He was treated as a vicious hunter and kept aloof from everyone.
After narrating the story to Rama, Seetha told him not to take his bow and arrow and slay the monsters who did not harm them. She stated that' the artillery provokes violence ' and advised him to roam without artillery. But Rama explained her with suitable answers, where he said that though the sages of Dandakaaranya were able to destroy the monsters who harassed them, through cursing, would not do that deed ,because the sages considered that the penance and its power were greater than death. He convinced Seetha with a statement that Kshatriya was born to protect the people from the monsters. He began residing in the hermitage of sages being armed.
Rama along with Seetha and Lakshmana spent most of the years of his exile which means 10 years of the exile in the council of hermitage of Dandakaaranya leisurely.





No comments:
Post a Comment
Please leave your comments here.....