ಶ್ರೀರಾಮಾಯನಮ:
ರಾಮಾಯಣ ಹಕ್ಕಿನೋಟ-೫೫
ಎರಡನೇ ನಿಲುವು-
ರಾಮನು ವನವಾಸವನ್ನು ಪೂರೈಸಿಯೇ ಅಯೋಧ್ಯೆಗೆ ಹಿಂತಿರುಗಬೇಕು,
ಪಟ್ಟದ ನಿರಾಕರಣೆ
೧-ಕೈಕೇಯಿಗೆ ದಶರಥನಿಂದ ಕೊಡಲ್ಪಟ್ಟ ಎರಡು ವರಗಳನ್ನು ಈಡೇರಿಸುವ ಹೊಣೆ
೨-ದಶರಥನು ಕೈಕೇಯಿಯನ್ನು ಮದುವೆಯಾಗುವ ಸಂದರ್ಭದಲ್ಲಿ ಕೋಸಲವನ್ನು ಕನ್ಯಾಶುಲ್ಕವಾಗಿ ನೀಡುತ್ತೇನೆ ಎಂಬ ಮಾತನ್ನು ಕೈಕೇಯಿಯ ತಂದೆಗೆ ನೀಡಿದ್ದುದು
೩-ಮೊದಲ ವರದಂತೆ ಭರತನಿಗೆ ಪಟ್ಟ
೪-ಎರಡನೆ ವರದಂತೆ ತನಗೆ ಹದಿನಾಲ್ಕು ವರ್ಷಗಳ ಕಾಲ ದಂಡಕಾರಣ್ಯದಲ್ಲಿ ಅರಣ್ಯವಾಸ
೫-ತಂದೆಯಿತ್ತ ಮಾತಿನ ಪ್ರಕಾರ ವನವಾಸ ತನಗೆ, ರಾಜ್ಯಾಧಿಕಾರ ಭರತನಿಗೆ.ತನ್ನ ಕರ್ತವ್ಯ ನೆರವೇರಿಸುತ್ತಿದ್ದೇನೆ, ಭರತನ ಕರ್ತವ್ಯ ನೆರವೇರಿಸಿ ತಂದೆಯನ್ನು ಸ್ತ್ರೀಋಣ ಮುಕ್ತನಾಗಿಸಿ ನರಕದಿಂದ ಪಾರು ಮಾಡುವುದು
೬- ಭರತನು ಮನುಷ್ಯರಿಗೆ ರಾಜನಾಗುವುದು,ತಾನು ವನದಲ್ಲಿರುವ ಪಶು ಪಕ್ಷಿಗಳಿಗೆ ರಾಜನಾಗುತ್ತೇನೆ ಎನ್ನುವುದು
೭-ಚತುರಮತಿ ಶತ್ರುಘ್ನ ಭರತನಿಗೆ ಸಹಾಯಕನಾಗಿರಲಿ,ಲಕ್ಷ್ಮಣ ತನ್ನೊಂದಿಗೆ ಇರಲಿ
೮- ನಾಲ್ವರ ಸೋದರರೂ ಸೇರಿ ತಮ್ಮ ತಮ್ಮ ಕರ್ತವ್ಯಗಳನ್ನು
ನಿಭಾಯಿಸಿ ದಶರಥನು ಸತ್ಯದಲ್ಲಿಯೇ ಸ್ಥಿರವಾಗಿ ಉಳಿಯುವಂತಾಗಿಸುವುದು
೯- ಜಾಬಾಲಿಯ ನಾಸ್ತಿಕವಾದವನ್ನು ಖಂಡಿಸುತ್ತಾ"ರಾಜನ ವೃತ್ತಿಯನ್ನೇ ಪ್ರಜೆಗಳೂ ಅನುಸರಿಸುತ್ತಾರೆ.ಧರ್ಮಕ್ಕೆ ಆಶ್ರಯವಾದ ಸತ್ಯವನ್ನು ಆಶ್ರಯಿಸುವುದು ತನ್ನ ಕರ್ತವ್ಯವೆಂಬ ಅಚಲ ನಿರ್ಧಾರ
೧೦-ತಂದೆಯ ಎದುರು ಮಾಡಿದ ಪ್ರತಿಜ್ಞೆಗೆ ಬದ್ಧತೆ
೧೧- ವಸಿಷ್ಠರ ಮಾತುಗಳನ್ನೂ ನಯವಾಗಿ ಅಲ್ಲಗಳೆದದ್ದು
೧೨- ತನ್ನ ದೃಢವಾದ ಮಾತುಗಳಿಗೆ ಪ್ರಜೆಗಳೂ ತಲೆದೂಗಿದ್ದುದು
೧೩-ಎಲ್ಲಕ್ಕಿಂತಲೂ ಮೇಲಾಗಿ ತಾನು ಭರತನಿಗೆ ಅಯೋಧ್ಯೆಗೆ ಹಿಂತಿರುಗಿ ರಾಜ್ಯವಾಳಲು ಆಜ್ಞೆ ಮಾಡಿದ್ದು
Om ShriRamaya Namaha : 55
A Bird's-eye view of Ramayana : 55
The second determination.
The firm decision of Rama not to return to Ayodhya until the completion of his exile.
Refusal to the throne.
1. The responsibility of accomplishing the boons of Kaikeyee which were granted by Dhasharatha to her.
2. The promise given by Dhasharatha to the father of Kaikeyee during time of marrying her, that he would give Kosala as a dowry for a bride.
3. Coronation to Bharatha according to the first boon.
4. 14 years of exile for Rama in Dandakaaranya according to the second boon.
5. Exile for Rama as per the words of his father, and coronation for Bharatha. According to Rama ,he was performing his duty. He wanted to redeem his father from the hell by giving him salvation from the ows of a woman. So expected Bharatha to perform his duty.
6. Bharatha would be the king of humans whereas Rama would be the king to the animals and birds of the forest.
7. The skillful and astute Shatrughna should be with Bharatha to assist him in reigning the state ,whereas Lakshmana would be with Rama.
8. The four brothers should perform their duties so that Dhasharatha would forever remain in the path of truth.
9. By protesting the atheist view of Jaabaali, he stated that the citizens would follow the same deeds that the king followed. So it was his duty to follow and protect the truth which protects the righteousness.
10. He was bound to the pledge that he had made before his father.
11. Denied even the words of Vasishta politely .
12. The people too agreed with the firm determination of Rama.
13. Above all, he commanded Bharatha to go back to Ayodhya and to reign the kingdom.

No comments:
Post a Comment
Please leave your comments here.....