ಶ್ರೀರಾಮಾಯಣ ಹಕ್ಕಿನೋಟ -೧೩೩ A Bird's-eye view of Ramayana : 133

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೩೩


ರಾಮ ಪಿತೃವಾಕ್ಯ ಪರಿಪಾಲಕ.

ಇಂದ್ರಜಿತು ಪಿತೃ ಹಿತ(?)ರಕ್ಷಕ!

ಅತ್ತ ಮಗ ವನವಾಸಿಯಾದ ನೋವು ತಾಳಲಾರದೆ ದಶರಥ ಅಸುನೀಗಿದ.ಇತ್ತ ಮಗ(ಅಕ್ಷಕುಮಾರ) ಸತ್ತಿದ್ದರೂ ಅಪ್ಪನ ಕಾಮಾಸಕ್ತಿಯೇ ಇಳಿದಿಲ್ಲ!


ಎತ್ತು ಈಯಿತು ಅಂದ್ರೆ ಕಟ್ಟು ಕೊಟ್ಟಿಗೆಯಲ್ಲಿ! ಎಂದನಂತೆ!!

ಇಲ್ಲೂ ಹಾಗೆಯೇ ಆಯಿತು. ಎಚ್ಚರದಪ್ಪಿ ಬಿದ್ದ ರಾಮ ಲಕ್ಷ್ಮಣರನ್ನು ಸತ್ತಿದ್ದಾರೆ ಎಂದು ಭ್ರಮಿಸಿದ ಮಾಯಾಯುದ್ಧ ಪ್ರವೀಣ ಮಗನ ಮಾತು ನಂಬಿದ ಅಪ್ಪ ರಾವಣ ಈ ಸಂದರ್ಭವನ್ನೂ ಸೀತೆಯನ್ನೊಲಿಸಲು ನಿಶ್ಚಯಿಸಿದ!ರಾಮ ಲಕ್ಷ್ಮಣರನ್ನು ಇಂದ್ರಜಿತು ಕೊಂದನೆಂದು ಡಂಗೂರ ಹೊಡೆಸಿದ.


 ರಕ್ಕಸಿಯರೊಂದಿಗೆ ಪುಷ್ಪಕ ವಿಮಾನದಲ್ಲಿ  ಸೀತೆಯನ್ನು ಕೂರಿಸಿ ಎಚ್ಚರದಪ್ಪಿ ಶವದಂತೆ ಮಲಗಿದ್ದ ರಾಮ ಲಕ್ಷ್ಮಣರನ್ನು ತೋರಿಸಲು ಹೇಳಿದ.ಪುಷ್ಪಕದಲ್ಲಿದ್ದ ಸೀತೆ  ಇವರನ್ನು ನೋಡಿ  ಗೋಳಾಡಿದಳು.

ಸೀತೆಗೆ ಜೌತಿಷ್ಯ,

ಹಸ್ತಸಾಮುದ್ರಿಕೆ,

ಋಷಿವಾಕ್ಯಗಳ ಮೇಲಣ ವಿಶ್ವಾಸ ಹೊರಟು ಹೋಯಿತು. ಆಗ ತ್ರಿಜಟೆಯು ಅನಾಥರಕ್ಷಕಳಾಗಿ ಸೀತೆಯಲ್ಲಿ-

ನಿನ್ನ ಪತಿ ಜೀವಿಸಿದ್ದಾನೆ.

ಒಂದೊಮ್ಮೆ ನೀನು ವಿಧವೆಯಾಗಿರುತ್ತಿದ್ದರೆ ದಿವ್ಯವಾದ ಪುಷ್ಪಕ ವಿಮಾನದಲ್ಲಿ ನೀನು ಸಂಚರಿಸಲಾಗುತ್ತಿರಲಿಲ್ಲ!- ಎಂದಾಗ ಸೀತೆಯು ಸಮಾಧಾನ ಹೊಂದಿದಳು.


ಇತ್ತ ನಾಗಪಾಶದ ಬಂಧನದಲ್ಲಿದ್ದರೂ ಸ್ಥೈರ್ಯ ಧೈರ್ಯಗಳ ರಾಮ ಎಚ್ಚೆತ್ತುಕೊಂಡನು.ಆದರೆ ಮೂರ್ಛಿತ ತಮ್ಮನನ್ನು ನೋಡಿ ಸತ್ತನೆಂದೇ ಬಗೆದು ಸೀತೆ- ಅಯೋಧ್ಯೆಗೆ ಮರಳುವ ಆಸೆಯನ್ನು ತೊರೆದು ಶಾಶ್ವತವಾಗಿ ವನವಾಸಿಯಾಗುತ್ತೇನೆಂದನು.


ವಿಭೀಷಣನನ್ನು ಇಂದ್ರಜಿತು ಎಂದು ಭಾವಿಸಿ ಹೆದರಿ ಓಡತೊಡಗಿದ ವಾನರವೀರರನ್ನು ಜಾಂಬವಂತನು ತಡೆದು ಸಮಾಧಾನ ಹೇಳಿ ಧೈರ್ಯ ತುಂಬಿದ.

ಆಸ್ತಿಕ ಮಾನವನು ಪುರುಷ ಪ್ರಯತ್ನ  ಮೀರಿದ ಸಂಕಟಕ್ಕೆ ಸಿಲುಕಿದಾಗ ಒಂದಲ್ಲೊಂದು ರೀತಿಯಲ್ಲಿ ದೈವಸಹಾಯವೊದಗಿ ಬರುತ್ತದೆ.ಇಂತಹ ಸಂದರ್ಭದಲ್ಲಿ 

ದಾನವ ಜೀವ ಕಳಕೊಳ್ಳುತ್ತಾನೆ.ಇದು ಆಸ್ತಿಕ ಮಾನವನಿಗೂ ದಾನವನಿಗೂ ಇರುವ ಅಂತರ.

ಇಲ್ಲೂ ಹಾಗೆಯೇ ಆಯಿತು. ಆಪದ್ಬಾಂಧವನಾಗಿ ಗರುಡ ಬಂದ. ಅವನ ಆಗಮನ- ಆಲಿಂಗನಗಳಿಂದ ಸಹಜವಾಗಿಯೇ ನಾಗಬಾಣದ ಶಕ್ತಿ ನಷ್ಟವಾಗಿ ರಾಮ ಲಕ್ಷ್ಮಣರು ಮುಕ್ತರಾದರು.

ವಾನರವೀರರು ಹರ್ಷೋದ್ಗಾರ ಮಾಡಿದರು.


ಸೀತೆಗೆ ತ್ರಿಜಟೆ! 

ರಾಮನಿಗೆ ಗರುಡ!! 

ಇವೇ ದೈವಬಲ!!



ವಾನರ ಸೇನೆಯ ಹರ್ಷೋದ್ಗಾರ ರಾವಣನನ್ನು ಚಿಂತೆಗೆ ದೂಡಿತು! ಸಾವು ತನ್ನ ಸುತ್ತ ತಿರುಗುತ್ತಿರುವ ಅನುಭವವಾಯಿತು! ಆದರೂ.........

ಸಾಯುವ ಸರದಿಯಲ್ಲಿ ಧೂಮ್ರಾಕ್ಷ ಬಂದನು! ರಾವಣನಿಗೆ ಧೈರ್ಯ ತುಂಬಿ ಯುದ್ಧಕ್ಕೆ ಹೋದನು. ದಾರಿಯುದ್ದಕ್ಕೂ ಅಪಶಕುನಗಳ ಸಾಲು!

'ಮಾಡು ಇಲ್ಲವೇ ಮಡಿ' ಯುದ್ಧದಲ್ಲಿ ವಾನರವೀರರು ಮಾಡಿದರು.ಧೂಮ್ರಾಕ್ಷನು ಹನುಮನ ಕೈಯಲ್ಲಿ ಮಡಿದನು!


.....ಸರದಿಯಲ್ಲಿ ವಜ್ರದಂಷ್ಟ್ರ!!


ವಿಶ್ವ


Om ShriRamaya Namaha : 133


A Bird's-eye view of Ramayana : 133


Rama was the follower of his father's words.

Indrajithu was the protector of his father's interest(?). 

On the one side, Dasharatha died of grief when Rama went into the exile. On the other side, the father's lust did not wane though the son( Aksha Kumar)had died !


As the proverb says , " Ox gave birth ,tether in the hut"! - 

the same happened here too. The father Ravana believed the words of the son who was an expert in fighting through magic and who celebrated by assuming that Rama - Lakshmana who were unconscious as dead. Ravana decided to use the opportunity to convince Seetha ! He commanded to make an announcement that Indrajithu slayed Rama and Lakshmana. 


He commanded to take Seetha in Pushpaka Vimaana along with demon women and to show her Rama - Lakshmana who were lying unconscious as corpse. Seetha who was in 'Pushpaka' lamented seeing Rama and Lakshmana. 

Seetha lost hopes and belief in

astrology, 

palmistry, 

and on the words of the saints. During the time Trijata came as the protector and said that nothing had happened to her husband and he was alive. Further she said that if she was a widow then she would not be able to travel in the sacred Pushpaka Vimaana. Seetha was consoled by these words. 


On the other hand, the courageous and the determined Rama woke up though he was imprisoned by ' Naaga paasha' . But when he saw Lakshmana who was unconscious, he became desperate by assuming that he was dead and said that he would be the inhabitant of the forest forever by abandoning the hopes of getting Seetha back and returning to Ayodhya. 


The monkey warriors began to run being scared by misinterpreting Vibhishana as Indrajithu.  During the time Jaambavantha consoled them by filling courage in them. 

When the human who is theist get in one or other trouble which is beyond his hand, gets the grace and help of the God. During this time the monster loses his life. This is the difference between a theist and a monster. The same happened even here. Garuda came as a friend in need or as a good Samaritan. Because of his arrival and the embrace, Nagabaana lost its power naturally  and Rama - Lakshmana got redemption from the Nagabaana..

The monkey warriors were overjoyed .


Trijata for Seetha !

Garuda for Rama !!

This is the support of the God !!



The cheerful cry of the monkey army made Ravana ponder and worry ! He experienced as if death was revolving around him ! But Dhoomraaksha came in the turn of dying ! 

He went to the battle by filling courage in Ravana. 

The series of inauspicious omens throughout the way !

' Do or Die ' the monkeys warriors did in the battle.  Dhoomraaksha died in the battle. He was killed by Hanuman !


... Vajradamshtra in the turn !!.


Kannada version of the story is written by- 

Shri U S Vishweshwara Bhat 

Translated by- 

Kum. Rashmi A Suvarna 

Lecturer in English,Vivekananda P U College,Puttur.


 ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....