ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ-೧೩೪
ವಜ್ರದಂಷ್ಟ್ರನು ಹೊರಡುವಾಗಲೂ ಅಪಶಕುನಗಳ ಸುರಿಮಳೆ!ಆದರೂ ಮುಂದೊತ್ತಿದ.
ಅವನೆದುರಿನಲ್ಲೇ ವಾನರರು ರಕ್ಕಸರನ್ನು ತಮ್ಮ ಅಂಗಾಂಗಗಳಿಂದ,ಕೆಲವೊಮ್ಮೆ ಅವರ ಶಸ್ತ್ರಗಳನ್ನು ಸೆಳೆದು ಅವುಗಳಿಂದಲೇ ಸಾಯಬಡಿಯುತ್ತಿದ್ದರು.
ಕೆಲವರು ವಾನರರೂ ಸಾಯುತ್ತಿದ್ದರು.ವಾನರರ ಕೈಮೇಲಾಗುತ್ತಿರುವುದನ್ನು ಕಂಡು ಅವರ ಮೇಲೆ ಬಾಣಗಳ ಮಳೆಯನ್ನು ಸುರಿಸಿದಾಗ ಅಂಗದನು ತನ್ನವರ ರಕ್ಷಣೆಗೆ ಬಂದನು.
ಅಂಗದ ವಜ್ರದಂಷ್ಟ್ರರ ಮಧ್ಯೆ ಸಮಬಲದ ಹೋರಾಟ! ಕೊನೆಗೆ ಅಂಗದನು ವಜ್ರದಂಷ್ಟ್ರನ ಖಡ್ಗದಿಂದಲೇ ಅವನ ತಲೆಯನ್ನು ಸವರಿದನು.
ರಾಮನ ಪಡೆಯಲ್ಲಿ ವಾನರ ವೀರರು ಅಸುನೀಗಿದರೆ ರಾವಣನು ಸೇನಾಧಿಪತಿಗಳನ್ನೇ ಕಳಕೊಳ್ಳುತ್ತಿದ್ದನು.
ಇದೀಗ ರಾವಣಾಜ್ಞೆಯಂತೆ ಅಕಂಪನನೇ ರಾಮ ಲಕ್ಷ್ಮಣರನ್ನು ಕೊಲ್ಲಲು ಬಹುದೊಡ್ಡ ಸೇನೆಯೊಂದಿಗೆ ರಣರಂಗಕ್ಕೆ ಹೊರಟನು.
ರಕ್ಕಸರ ಸೈನ್ಯಕ್ಕೆ ವಾನರರು ಬೆದರಿದರು.ಧೂಳೆದ್ದು ಯಾರಿಗೆ ಯಾರೆಂದು ತಿಳಿಯದೆ ತಮ್ಮ ತಮ್ಮೊಳಗೂ ಕಲಹವೆಸಗುವಂತಾಗಿ ಪ್ರಾಣಹಾನಿಯುಂಟಾಯಿತು.
ಅಕಂಪನನ ಕೈಮೇಲಾಗುತ್ತಿರುವುದನ್ನು ಕಂಡ ಹನುಮನು ತಾನೇ ಅವನನ್ನು ಎದುರಿಸಿದನು.
ಅವನ ಬಾಣಗಳು ಹನುಮನ ಮೈಯ್ಯನ್ನು ತುಂಬಿದವು.
ಸಿಟ್ಟಿಗೆದ್ದ ಹನುಮನು ಮರವೊಂದನ್ನು ಕಿತ್ತು ಅದರಿಂದಲೇ ಅಕಂಪನನ ತಲೆಯನ್ನೊಡೆದು ಕೊಂದನು.
ರಾವಣನ ಬಹುದೊಡ್ಡ ದಾನವಾಸ್ತ್ರವೊಂದು ವ್ಯರ್ಥವಾಯಿತು.
ರಾವಣ ಹತಾಶನಾಗಿ ಕೋಪಗೊಂಡು ತನ್ನ ಪ್ರೀತಿಯ ಸಚಿವನಾದ ಅಜೇಯ ಪ್ರಹಸ್ತನನ್ನು ಸರ್ವಸಜ್ಜಿತ ಸೇನೆಯೊಂದಿಗೆ ಯುದ್ಧಕ್ಕೆ ಕಳಿಸಿದನು.ಹೋಗುವಾಗ-
ನಾನು ನಿನ್ನ ಸಲುವಾಗಿ ಯುದ್ಧದಲ್ಲಿ ನನ್ನ ಪ್ರಾಣಾಹುತಿಯನ್ನು ಮಾಡುವುದನ್ನು ನೀನೇ ನೋಡುವೆ- ಎಂದು ಹೇಳಿ ಹೋದನು.
ಅವನಿಗರಿವಿದ್ದೋ ಇಲ್ಲದೆಯೋ ಭವಿಷ್ಯ ನುಡಿದಿದ್ದನು. ಸೀತೆಯನ್ನು ರಾಮನಿಗೊಪ್ಪಿಸಿ ಲಂಕೆಯನ್ನು ಉಳಿಸುವ ಕುರಿತು ಪ್ರಹಸ್ತ ರಾವಣನಿಗೆ ಉಚಿತ ಸಲಹೆ ನೀಡಿದ್ದ!
ಲಂಕಾದಹನದ ಸಂದರ್ಭದಲ್ಲಿ ಹನುಮನು ರಾವಣನ ಮೂರನೇ ಒಂದು ಭಾಗ ಸೇನೆಯನ್ನು ಸಂಹರಿಸಿದ್ದ.ಈಗ ಪ್ರಹಸ್ತ ಉಳಿದ ಸೇನೆಯ ಮೂರನೇ ಒಂದು ಭಾಗದೊಂದಿಗೆ ರಣರಂಗಕ್ಕೆ ಬಂದಿದ್ದನು. ಅವನೊಂದಿಗೆ ನರಾಂತಕ,ಕುಂಭಹ,
ಮಹಾನಾದ,ಸಮುನ್ನತರೆಂಬ ಅವನ ಖಾಸಾ ಸಚಿವರುಗಳೂ ಇದ್ದರು.
ರಕ್ಕಸರ ಆಯುಧಗಳಿಗೆ ವಾನರರು ಬಲಿಯಾದರೆ,
ವಾನರರ ಪ್ರಹಾರ,ಬಂಡೆ- ಮರಗಳ ಹೊಡೆತದಿಂದ ರಕ್ಕಸರು ಸಾಯುತ್ತಿದ್ದರು.
ನರಾಂತಕನನ್ನು ದ್ವಿವಿದ,
ಸಮುನ್ನತನನ್ನು ದುರ್ಮುಖ,
ಮಹಾನಾದನನ್ನು ಜಾಂಬವಂತ,
ಕುಂಭಹನನ್ನು ತಾರ- ಸಂಹರಿಸಿದರು.
ತನ್ನೆದುರಿನಲ್ಲೇ ತನ್ನ ಸಚಿವರುಗಳ ಸಾವನ್ನು ಕಂಡ ಪ್ರಹಸ್ತ ಕನಲಿ ಕೆಂಡವಾದನು.
ರಣರಂಗದಲ್ಲಿ ನೆತ್ತರಿನ ಹೊಳೆ ಹರಿಯ ತೊಡಗಿತು. ನೀಲನು ಎದುರಾಗಲು ಅವನ ಮೇಲೂ ಬಾಣಗಳ ಮಳೆ.ಅಸಾಮಾನ್ಯ ನೀಲ ದೊಡ್ಡ ಬಂಡೆಯೊಂದರಿಂದ ಪ್ರಹಸ್ತನ ತಲೆಯನ್ನು ಒಡೆಯುವಿದರೊಂದಿಗೆ ಪ್ರಹಸ್ತ ಸತ್ತ. ಪ್ರಹಸ್ತನ ಮಾತು ನಿಜವಾಯಿತು.
ಋಣ ಸಂದಾಯವಾಯಿತು.
ವಿಶ್ವ
Om ShriRamaya Namaha : 134
A Bird's-eye view of Ramayana : 134
There was the shower of inauspicious omens while Vajradamshtra was fighting ! But still he was marching forward.
The monkeys killed the monsters with their body parts and sometimes killed them with the artilleries which the monsters had by snatching from them, right infront of Vajradamshtra. Some monkeys were dying. When he saw that monkeys were getting upper hand in the battle, he began showering arrows upon them. During the time Angada came for the protection of his people.
There was equal force fight between Angada and Vajradamshtra ! At last taking away Vajradamshtra's sword forcibly Angada cut off his head.
In Rama's army, monkey soldiers were dying but Ravana was losing the chief commanders of his army.
Now as per the command of Ravana, Akampana himself left for the battlefield along with his huge army to kill Rama and Lakshmana.
The monkeys were terrified by the army of the monsters. Dust enveloped everywhere. They couldn't recognize each other in the created commotion and as a result so many lives were lost .
When Hanuman saw Akampana was getting upper hand in the battle, Hanuman himself marched to confront Akampana. The arrows of Akampana covered Hanuman completely.
Hanuman who became furious ,plucked a tree and killed Akampana by breaking his head with the tree.
The biggest monster artillery of Ravana went in vain.
Ravana being desperately angry ,sent his dearest minister the unbeatable Prahastha to the war along with the well - equipped army. While leaving for the battlefield he says to Ravana that - " you will see my life being offered in the war because of you ". With or without his knowledge he forecasted the future.
Prahastha had given Ravana the right advice of saving Lanka by returning Seetha to Rama !
During the time Hanuman burnt Lanka, he had annihilated the one third of Ravana's army. And Prahastha had come to the battlefield along with the remaining one third of the army. Along with him there were his personal ministers namely Naraanthaka, Kumbhaha, Mahaanaada and Samunnatha.
If the monkeys became the victim of the monsters' weapons, then the monsters were dying due to the attack of the monkeys with boulders and trees.
Naraanthaka was killed by Dwivida,
Samunnatha was killed by Durmukha,
Mahaanaada was killed by Jaambavantha,
and Kumbhaha was killed by Taara.
Prahastha's anger crossed the bounds when he saw the deaths of his ministers.
The stream of blood began to flow in the battlefield.
The shower of arrows upon Neela when he was marching forward. The peerless Neela killed Prahastha by breaking his head with a huge boulder. The words of Prahastha became true.
The debt was paid...
Kannada version of the story is written by-
Shri U S Vishweshwara Bhat
Translated by-
Kum. Rashmi A Suvarna
Lecturer in English,Vivekananda P U College,Puttur.
ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ




No comments:
Post a Comment
Please leave your comments here.....