ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೧೧೮
ಸೀತಾನ್ವೇಷಣೆಯು ಹನುಮನು ಮಾಡಿದ ಅತ್ಯಂತ ಅತ್ಯಪೂರ್ವ ಮಹಾನ್ ಕಾರ್ಯ ಎಂದು ರಾಮ ಹನುಮನನ್ನು ಕೊಂಡಾಡಲು ಕಾರಣಗಳಿವೆ-
•ಲಂಕೆಯನ್ನು ಶತ್ರುಗಳು ಒಳನುಸುಳದಂತೆ ರಕ್ಷಿಸುವ ಕೋಟೆಗಳು- ಅವುಗಳ ನಿರ್ಮಾಣ ವಿಧಾನ
•ಲಂಕಾಪಟ್ಟಣದ ರಕ್ಷಣಾ ವ್ಯವಸ್ಥೆ
•ರಕ್ಷಣಾ ಸೈನಿಕರ ನಿಯೋಜನಾ ಕ್ರಮ
•ರಾವಣ-ರಾಕ್ಷಸರ ನಡುವೆ ಇರುವ ಸಂಬಂಧ
•ಲಂಕೆಯ ಸಾಂಪತ್ತಿಕ ಸಾಮರ್ಥ್ಯ
•ಲಂಕೆಯಲ್ಲಿರುವ ಪದಾತಿ ಸೈನಿಕರ ಸಂಖ್ಯೆ
•ಚತುರಂಗಬಲದ ಸಾಮರ್ಥ್ಯ
•ವಾಹನಗಳ ಸಂಖ್ಯೆ
•ಯುದ್ಧ ಸಾಮಗ್ರಿಗಳ,
ಯಂತ್ರೋಪಕರಣಗಳ ಸಂಗ್ರಹ
•ಯಾವ ಯಾವ ದಿಕ್ಕಿನಲ್ಲಿ,ಯಾವ ಯಾವ ದ್ವಾರದಲ್ಲಿ ಎಷ್ಟೆಷ್ಟು ಸೈನಿಕರು ಕಾವಲು ಮಾಡುತ್ತಿದ್ದಾರೆ......
ಇವುಗಳ ಸಮಗ್ರ ಚಿತ್ರಣ- ಮಾಹಿತಿಗಳನ್ನು ಕುಶಾಗ್ರಮತಿಯಾದ ಹನುಮನು ಸಂಗ್ರಹಿಸಿ ರಾಮನಿಗೊಪ್ಪಿಸಿದ್ದನು.
ಯುದ್ಧಕ್ಕೆ ಬೇಕಾದ ಪೂರ್ವಸಿದ್ಧತೆಗಳಿಗೆ,ವ್ಯೂಹ ರಚನೆಗಳಿಗೆ ಇವುಗಳ ಅಗತ್ಯವಿತ್ತು.
ಇದರೊಡನೆ ತಾನು ಮಾಡಿದ ನಾಶ ನಷ್ಟಗಳ(ಸೈನ್ಯದ ಮೂರನೇ ಒಂದಂಶ) ವಿವರವನ್ನೂ ನೀಡಿ ಹತಾಶ ರಾಮನನ್ನು ಹುರಿದುಂಬಿಸಿದ್ದನು.
ಕಿಷ್ಕಿಂಧೆಯಿಂದ ವಾನರ ಸೇನಾಸಾಗರ ದಕ್ಷಿಣಸಾಗರದತ್ತ ಹರಿದು ಅಲ್ಲಿ ನೆಲೆಯೂರಿತು.
ವಿಶ್ವ.
Om ShriRamaya Namaha : 118
A Bird's-eye view of Ramayana :118
There are reasons for ,Rama appreciating the work of Hanuman that the quest for Seetha was the most astounding and great work -
• The unbearable forts which prevents the entry of the enemies and protects Lanka - and the way they were built.
• The security force of the town Lanka.
• The relationship which was there between Ravana and the monsters.
• The power of the wealth and the assets of Lanka.
• The strength of the infantry men who were there in Lanka.
• The caliber of the army comprising four wings of elephants, cavalry, chariots and infantry.
• The strength of the vehicles.
• The collection of war equipments .
• The number of the soldiers who were guarding the different entrances...
Hanuman who was known to be an astute, collected the complete picture and the information of all the above mentioned and submitted them to Rama. These information were required for the preparation of the war and for the formation of the army. Along with these information, he also gave him the account of the things that he had destroyed in Lanka and the loses he caused there ( one third of the army). By informing all these, he encouraged and cheered Rama up who was depressed.
The sea - like army of monkeys flew from Kishkindha towards the South sea got settled there.
Kannada version of the story is written by-
U S Vishweshwara Bhat
Translated by-
Rashmi A Suvarna
Lecturer in English,Vivekananda P U College,Puttur.
ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ





No comments:
Post a Comment
Please leave your comments here.....