ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೧೧೭
"ಭೂಮಂಡಲದಲ್ಲಿಯೇ ಯಾರೂ ಮಾಡಲಾಗದ,
ದುಷ್ಕರವಾದ ಕಾರ್ಯವನ್ನು ಹನುಮನು ಮಾಡಿದ್ದಾನೆ. ಹನುಮನು ಮಾಡಿದ ಈ ಕಾರ್ಯವನ್ನು ಬೇರೆಯವರು ಮನಸ್ಸಿನಲ್ಲೂ ಕೂಡ ಚಿಂತಿಸಲು ಸಾಧ್ಯವಿಲ್ಲ."- ಎಂದು ಹೇಳಿ ರಾಮನು ಹನುಮನನ್ನು ಬಿಗಿದಪ್ಪಿದನು.ಇದಕ್ಕಿಂತ ದೊಡ್ಡ ಪ್ರಶಂಸೆ ಬೇಕೇ?
ಸೇವಕ ನಾಯಕನಾಗುವುದು ಹೇಗೆ ಎಂಬುದನ್ನು ಮಾರುತಿಯನ್ನು ನೋಡಿ ಕಲಿಯಬೇಕು.
•ಮಾರುತಿಯನ್ನು ಸುಗ್ರೀವನು ನೇಮಿಸಿದ್ದು ಸೀತಾನ್ವೇಷಣೆ ಮಾಡಿ ಬರಲು.ಆದರೆ ಸೀತೆಯ ಇರವನ್ನು ಕಂಡುಹಿಡಿದ ಬಳಿಕ ಅವನು ನೇರವಾಗಿ ಅಂಗದನ ಬಳಿಗೆ ಬರಬಹುದಾಗಿದ್ದರೂ ಹಾಗೆ ಮಾಡದೆ-
•ಮುಖ್ಯ ಕಾರ್ಯಕ್ಕೆ ಪೂರಕವಾದ ಅನೇಕ ಕಾರ್ಯಗಳನ್ನು ಸಾಧಿಸಿಕೊಂಡು ಬಂದು ಸೇವಕಪುರುಷರಲ್ಲಿ ಶ್ರೇಷ್ಠನಾದನು.ಅದಕ್ಕಾಗಿಯೇ ರಾಮನು ಹನುಮನಿಗೆ ಬ್ರಹ್ಮಾನಂದವನ್ನು ನೀಡಿದ ಆಲಿಂಗನಸುಖವನ್ನು ನೀಡಿದ.
ಸೀತಾನ್ವೇಷಣಾ ಕಾರ್ಯ ಯಶಸ್ವಿಯಾಗಿ ನಡೆಯಿತು. ಈಗ ರಾಮನಿಗೆ-
•ಅವಳನ್ನು ಪಡೆಯುವ ಬಗೆ ಹೇಗೆ?
•ಸಮುದ್ರದ ದಕ್ಷಿಣ ಭಾಗಕ್ಕೆ ಹೋಗುವುದು ಹೇಗೆ?
•ವಾನರವೀರರು ಸಾಗರವನ್ನು ದಾಟುವುದು ಹೇಗೆ?
ಎನ್ನುವ ಚಿಂತೆ!
ಶೋಕದಿಂದ ಚಿಂತಾಮಗ್ನನಾದನು.
ಆಗ ಸುಗ್ರೀವ - ಈ ಲೋಕದಲ್ಲಿ ಶೋಕವೆಂಬುದು ಮಾನವನ ವೀರ್ಯ ಶೌರ್ಯಗಳನ್ನೇ ಹಾಳು ಮಾಡುತ್ತದೆ.ನೀನು ಧೈರ್ಯವನ್ನಾಶ್ರಯಿಸು.
ಸಾಗರೋಲ್ಲಂಘನೆಯ ಕುರಿತು ನಾವೆಲ್ಲಾ ಸೇರಿ ವಿಚಾರ ಮಾಡುವ. ನೀನು ಸರ್ವಥಾ ವಿಜಯಿಯಾಗುವೆ.- ಎಂದು ರಾಮನಲ್ಲಿ ಹೇಳಿದನು.
ರಾಮನು ಈ ಮಾತುಗಳಿಂದ ಸ್ಫೂರ್ತಿಗೊಂಡು ಕಾರ್ಯೋನ್ಮುಖನಾದನು.
ವಿಶ್ವ
Om ShriRamaya Namaha : 117
A Bird's-eye view of Ramayana : 117
" Hanuman has done the work which can not be done by anyone on this earth. The work Hanuman has done can not even be imagined " - These lines are stated by Rama. Rama embraced Hanuman in his arms tightly. Does anyone need appreciation more than this ?
How can a servant become a leader, one must learn by looking at Maaruthi .
• Sugreeva appointed Maaruthi to search Seetha . But after finding Seetha he could have come back to Angada but without doing that -
• He became a superior among the other servants by doing and achieving many things which were necessary for their main work. That's why ,Rama granted Hanuman the greatest happiness by giving him the pleasure of his embrace.
The work of 'Seethanweshana ' or the quest for Seetha accomplished successfully. The questions and the worries of Rama are -
• How to bring Seetha back ?
• How to get to the South side of the sea ?
• How would the monkey soldiers cross the sea !?
Rama became perturbed with grief.
During the time Sugreeva says - in this world grief and sorrow destroys valor and courage of a man. He told Rama to have belief on courage and further consoled him that they all together would discuss regarding crossing the sea. Further Sugreeva told him that he would achieve success. Rama got inspired by these words and decided to engross himself in his duty.
Kannada version of the story is written by-
Shri U S Vishweshwara Bhat
Translated by-
Kum. Rashmi A Suvarna
Lecturer in English,Vivekananda P U College,Puttur.
ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ



No comments:
Post a Comment
Please leave your comments here.....