ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೧೧೨
ಮಾರುತಿಗೆ ರಾವಣನನ್ನು ನೋಡುವಾಗ "ಸರ್ವ ಲಕ್ಷಣಸಂಪನ್ನ ರಾಕ್ಷಸ" ಎನ್ನುವ ಸದ್ಭಾವ ಮೂಡಿತ್ತು.ಆದರೆ ಮಹಾನ್ ಸಾಹಸ ಮಾಡಿ ಲಂಕೆಯನ್ನು ಹೊಕ್ಕು ರಾಕ್ಷಸರನ್ನು ಸದೆಬಡಿದ ಮಾರುತಿಯ ಬಗ್ಗೆ ರಾವಣನಿಗೆ? ಕೇವಲ ತುಚ್ಛ ಭಾವನೆ ಮಾತ್ರ ಇತ್ತಷ್ಟೇ!
ರಾವಣನ ಆದೇಶದ ಮೇರೆಗೆ ಪ್ರಹಸ್ತನು ಮಾರುತಿಯ ವಿಚಾರಣೆಯನ್ನು ಕೈಗೆತ್ತಿಕೊಂಡು ಅಭಯಪ್ರದಾನ ಮಾಡಿ ತನ್ನ ಬಗ್ಗೆ ಹೇಳಲು ಹೇಳಿದನು.ಮಾರುತಿಯು ತನ್ನ ಶಕ್ತಿ ಸಾಮರ್ಥ್ಯಗಳನ್ನು ಹೇಳಿ ತಾನು 'ರಾಮದೂತ' ಎಂಬುದನ್ನೂ,ತಾನು ಬಂದ ಉದ್ದೇಶವನ್ನೂ ಸ್ಪಷ್ಟ ಶಬ್ದಗಳಲ್ಲಿ ಹೇಳಿದ.
ಹನುಮನು ರಾವಣನಲ್ಲಿ ರಾಮನ ಅಸಾಮಾನ್ಯ ಶಕ್ತಿ ಸಾಮರ್ಥ್ಯಗಳನ್ನು ಹೇಳಿ ಅವನ ಮತ್ತು ಲಂಕೆಯ ಸರ್ವಹಿತಕ್ಕಾಗಿ ಸೀತೆಯನ್ನು ರಾಮನಿಗೊಪ್ಪಿಸುವಂತೆ ಸಲಹೆಯಿತ್ತನು.
ಅವನು ರಾಮನ ಕುರಿತು ಹೇಳಿದ -"ಮಹಾಯಶಸ್ವಿಯಾದ ಶ್ರೀರಾಮನು ಸಮಸ್ತ ಲೋಕಗಳನ್ನು ಸಂಹರಿಸಿ ಮತ್ತೊಮ್ಮೆ ಈ ಹಿಂದೆ ಇದ್ದಂತಯೇ ಮರುಸೃಷ್ಟಿ ಮಾಡುವ ಸಾಮರ್ಥ್ಯ ಉಳ್ಳವನು"- ಎಂಬ ಮಾತು ಅವನ ಬುದ್ಧಿವಂತಿಕೆಗೆ ಸಾಕ್ಷಿ.
ಸಂಹಾರ ಮಾತ್ರ ಗೊತ್ತಿರುವ ರಾವಣನಿಗೆ ಮಾರುತಿಯ ಮಾತಿಂದ ಕೋಪ ಬಂದು ಮಾರುತಿಯನ್ನು ವಧಿಸಲು ಆದೇಶಿಸಿದನು.ಆದರೆ ವಿಭೀಷಣನ ಸಕಾಲಿಕ ಮಧ್ಯ ಪ್ರವೇಶವು ಅದನ್ನು ತಡೆಯಿತು. ಅವನು ದೂತ ವಧೆಯು ನಿಷಿದ್ಧವಾದದ್ದೆಂಬ ರಾಜನೀತಿಯನ್ನು ಉಲ್ಲೇಖಿಸಿದನು.
ಅವನನ್ನು ಮತ್ತೆ ರಾಮನ ಬಳಿಗೆ ಕಳಿಸುವುದರಲ್ಲೇ ಹೆಚ್ಚಿನ ಲಾಭವಿದೆ ಎಂದು ಸಕಾರಣವಾಗಿ ಅವನು ರಾವಣನಿಗೆ ಹೇಳಿದನು.
ಇವೆಲ್ಲವುಗಳಿಂದ ಹನುಮನ ವಧಾ ಶಿಕ್ಷೆ ತಪ್ಪಿತು.ಅವನ ಬಾಲಕ್ಕೆ ಬೆಂಕಿಯಿಟ್ಟು ಲಂಕಾ ನಗರದಲ್ಲಿ ಮೆರವಣಿಗೆ ಮಾಡಿಸುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದರು.
ಅದು ಜ್ಯಾರಿಯಾಯಿತು.
. ಹನುಮನು ಬ್ರಹ್ಮಾಸ್ತ್ರದಿಂದ ಬಂಧಿಸಲ್ಪಟ್ಟರೂ ರಕ್ಕಸರು ಹಗ್ಗದಿಂದ ಕಟ್ಟಿ ಕೆಟ್ಟರು.
.ಮೊದಲೇ ವಾಯುಪುತ್ರ! ಇನ್ನು ಬೆಂಕಿಯನ್ನೂ ಜೋಡಿಸಿದರೆ!? ಅದಕ್ಕೂ ಕೈಯಿಕ್ಕಿದರು!
.ಬೆಂಕಿಯೂ ಗಾಳಿಯೂ ಒಂದಾದರೆ ಏನಾದೀತೋ,ಏನೇನು ಆಗಬಹುದೋ ಅವೆಲ್ಲಾ ಆಗುವ ಲಕ್ಷಣಗಳು ಗೋಚರಿಸ ತೊಡಗಿದವು..
ಇನ್ನು ತೊಂಬತ್ತಾರೇ ಹೆಜ್ಜೆಗಳು.
Om ShriRamaya Namaha : 112
A Bird's-eye view of Ramayana : 112
When Maaruthi saw Ravana, the feeling of good will manifested in Maaruthi that Ravana was the monster with all the good attributes. But what about the feelings of Ravana about Maaruthi who had undertaken the great adventure of destroying the monsters by entering Lanka? He had only mean feelings !
As per the command of Ravana ,Prahastha took the initiation of enquiring Maaruthi. He gave Maaruthi the assurance of safety and asked him to introduce himself. Maaruthi told them about his strength and caliber. He told them that he was the messenger of Rama and also told them the purpose of his arrival in Lanka precisely.
Maaruthi told Ravana the unparalleled caliber, valor and strength of Rama and suggested Ravana to hand over Seetha to Rama for the overall well-being of Lanka.
The words that Hanuman stated about Rama -
" The great triumphant ShreeRama has the power and ability to destroy all the worlds and to recreate them the way they were earlier, again ".- These words of Hanuman are the proof for his shrewdness.
The words of Maaruthi made Raavana angry who knew only slaying. He commanded to kill Maaruthi.
But the interference of Vibhishana at the right time obstructed that. He mentioned the law of statesmanship that the slaying of a messenger was prohibited.
He told Ravana with right reasons that there was an advantage for them in sending Maaruthi back to Rama.
Due to all these the punishment of Hanuman prevented. They all came to the decision that it would be right to set fire to the tail of Hanuman and to take him in the procession in the town Lanka.
The plan was executed.
• The monsters ruined themselves by tying Maaruthi with rope though he was being tied by Brahmaastra.
• He was the son of Vaayu ! What may happen if fire get joined with wind !?
• The signs of what all happen and may happen if fire and wind get united ,that all began to appear...
Only 96 steps to go...



No comments:
Post a Comment
Please leave your comments here.....