ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೧೧೩
ಕಷ್ಟ ಪಟ್ಟು ತಪಸ್ಸುಗೈದು ಧರ್ಮವನ್ನು ಸಂಪಾದಿಸಿರುವ,ಆತ್ಮ ರಕ್ಷಣೆಯನ್ನೂ ಪಡೆದಿರುವ ರಾವಣನು; ಸೀತಾಪಹರಣವೆಂಬ ಮಹಾ ಪಾಪವನ್ನು ಮಾಡಿ ತನ್ನನ್ನೂ ತನ್ನವರನ್ನೂ ಅದಕ್ಕೆ ಬಲಿಪಶುವಾಗಿಸುವ ದುಷ್ಕಾರ್ಯಕ್ಕೆ ಕೈಹಾಕಿದ!
ರಕ್ಕಸರು ಹನುಮನ ಬಾಲಕ್ಕೆ ಬಟ್ಟೆ ಕಟ್ಟಿದ್ದೇ ಕಟ್ಟಿದ್ದು!
ಹನುಮ ಬೆಳೆಯುತ್ತಾ ಹೋದದ್ದೇ ಹೋದದ್ದು!! ಬಾಲವೂ ಬೆಳೆಯುತ್ತಾ ಹೋಯಿತು!!
ತನಗೆ ಸಾಕು ಎನಿಸಿದಾಗ ನಿಲ್ಲಿಸಿದ!!
ಅಂತೂ
"ಹನುಮನ ಬಾಲದಂತೆ"
ಎನ್ನುವ ಗಾದೆ ಅಜರಾಮರವಾಯಿತು!!
ಬಾಲಕ್ಕೆ ಕೊಳ್ಳಿಯಿಟ್ಟರು! ಅಲ್ಲಲ್ಲ,ಲಂಕೆಗೇ ಕೊಳ್ಳಿಯಿಟ್ಟರು ರಕ್ಕಸರು!!
ಲಂಕೆಯಲ್ಲಿ ಬೆಂಕಿ-ಗಾಳಿಗಳ ಮೆರವಣಿಗೆ ಸುರುವಾಯಿತು!
ಇರುಳು ನೋಡಿದ್ದ ಲಂಕೆಯನ್ನು ಮಾರುತಿ ಹಗಲೂ ನೋಡಿದನು!
ಹನುಮನ ಬಾಲಕ್ಕೆ ಬೆಂಕಿಯಿಟ್ಟ ಸುದ್ದಿ ಸೀತಾಮಾತೆಯನ್ನು ತಲುಪಿತು.
ತುಂಬಾ ನೊಂದು ಕೊಂಡಳು.
ಅಗ್ನಿದೇವನನ್ನು ಪ್ರಾರ್ಥಿಸಿದಳು
-ಮಾರುತಿಗೇನೂ ಆಗದಿರಲಿ
-ಎಂದು.ಅಗ್ನಿ ಒಲಿದ!ಒಟ್ಟಲ್ಲಿ ಮಗನಿಗಾಗಿ ವಾಯುವೂ ಮಿಡಿದ!
ಅದರ ಅನುಭವವಾದದ್ದು ವೀರ ಮಾರುತಿಗೆ.
ಬಾಲಕ್ಕೆ ಮಂಜುಗಡ್ಡೆ ಕಟ್ಟಿದ ಹಿತಾನುಭವ!
ಅವನಿಗೂ ಅಚ್ಚರಿ!!
ರಾಮದೂತ!
ಅತುಲಿತ ಬಲಧಾಮ! ಮನದಲ್ಲೇ ಪ್ರತೀಕಾರದ ಯೋಜನೆ ರೂಪಿಸಿದ!
ಒಮ್ಮೆಲೇ ತನ್ನನ್ನು ಬಂಧಿಸಿದ್ದ ಹಗ್ಗಗಳನ್ನು ತುಂಡರಿಸಿ ಗಗನಕ್ಕೆ ನೆಗೆದು ಸಿಂಹನಾದ ಮಾಡಿದ!ಬೆಳೆಬೆಳೆದು ಪರ್ವತವಾದ! ನೆಲಕ್ಕಿಳಿದ!
ಈ ಹಿಂದೆ ರಕ್ಕಸರನ್ನು ಸಾಯಬಡಿದ ಕಬ್ಬಿಣದ ಅಗಳಿ ಸಿಕ್ಕಿತು! ನಗರದ ದ್ವಾರದಲ್ಲಿದ್ದ ರಕ್ಕಸರನ್ನು ಕೊಂದುಹಾಕಿದ!!
ಬಾಲದ ಬೆಂಕಿಯಲ್ಲಿ
ಮಾರುತಿ ಬೆಳಗಿದ!
ಬಾಲದ ಬೆಂಕಿಯಲ್ಲಿ
ಲಂಕೆ ಸುಡತೊಡಗಿತು!!
ಸುಟ್ಟು ಸುಡುಮಣ್ಣಾಗತೊಡಗಿತು!!
"ಅಂಕೆಯಿಲ್ಲದ ಕಪಿ ಲಂಕೆ ಸುಟ್ಟಿತು"
ಹನುಮಾಧಾರಿತ ಎರಡನೆಯ ಗಾದೆಯೂ ಹುಟ್ಟಿತು!
ಹುಟ್ಟಿ ಅಮರವಾಯಿತು!!
ಮಾರುತಿಯು ಯಜ್ಞೇಶ್ವರನು ಕೇಳದೆಯೇ ಆಹುತಿ ಕೊಡಲು ಸುರು ಮಾಡಿದ.
ಮನೆಯಿಂದ ಮನೆಗೆ ಹಾರಿದ!
ಉಪ್ಪರಿಗೆಯಿಂದ ಉಪ್ಪರಿಗೆಗೆ ನೆಗೆದ!!
ಅವರಿವರೆನ್ನದೆ ಎಲ್ಲಾ ಮಂತ್ರಿಗಳ ಮನೆ,
ಸೇನಾಧಿಪತಿಗಳ ಮನೆ,
ವಿಭೀಷಣನನ್ನುಳಿದು ರಾವಣನ ಎಲ್ಲಾ ಸೋದರರ ಮನೆ,
ಮಕ್ಕಳ ಮನೆ...ಆ ಮನೆ ಈ ಮನೆಗಳಿಗೆ ನೆಗೆದು ಬಾಲ ಬೀಸಿದ!!
ಬೆಂಕಿ ಬಿತ್ತು!
ಮಗನ ನೋವಿನ ಕಾವಿಗೆ ವಾಯುದೇವ ಗಾಳಿಹಾಕಿದ!
ಸೀತೆಯ ತಾವೊಂದುಳಿದು ರಾವಣನ ಅರಮನೆಯೂ ಸೇರಿದಂತೆ ಅರಮನೆ ನೆರೆಮನೆ ಉದ್ಯಾನ...ನಗರಕ್ಕೆ ನಗರವೇ ಅಗ್ನಿಗೆ ಸ್ವಾಹಾ!!!
ಜೀವಹಾನಿ!
ಪ್ರಾಣಹಾನಿ!!
ದೇವತೆಗಳ ಮಾನವನ್ನು ತೆಗೆದವನಿಗೆ,ಪರಸ್ತ್ರೀ ಸೆರಗು- ಮುಡಿಗಳಿಗೆ ಕೈಯಿಕ್ಕಿದವನಿಗೆ ಕಪಿಯಿಂದ ಮಾನಹಾನಿ!!!
ಅಗ್ನಿಯೊಂದಿಗೆ ಕೋಪಾಗ್ನಿ! ಇವೆರಡರೊಂದಿಗೆ ಬೀಸುಗಾಳಿ!!
ಇನ್ನೇನು ಬೇಕು??
ಮಾಡಬಾರದ್ದನ್ನು ಮಾಡಿ ಆಗಬಾರದ್ದನ್ನು ಆಗಿಸಿಕೊಂಡ್ಡದ್ದು ಬಂತು!!
ಇನ್ನು ತೊಂಬತ್ತೈದೇ ಹೆಜ್ಜೆಗಳು.
Om ShriRamaya Namaha : 113
A Bird's-eye view of Ramayana : 113
Ravana who had obtained self protection and earned values or goals of life by penancing ardently ; committed a sin of abducting Seetha and made himself and his people as sacrificial animals !
The monsters kept tying cloths to the tail of Hanuman !
Hanuman kept himself growing !!
The tail too was growing !!
He ceased to grow when he felt it was enough !!
Finally the proverb "Like the tail of Hanuman "( Hanumana Baaladanthe ) marked ageless !!
They set fire to the tail of Hanuman ! No No, the monsters set fire to Lanka !!
The procession of fire and wind began in Lanka !
Maaruthi saw the same Lanka in the day that he had seen in the night !
The news of setting fire to Hanuman's tail reached Seethamaatha.
She lamented for Maaruthi.
She prayed to the lord Agni ( the god of fire) - to safeguard Hanuman and for his safety.
Agni prevailed and was pleased ! Vaayu yearned for the son !
And Maaruthi experienced that.
He felt as if an ice cube was tied to his tail !
He too was surprised !!
The messenger of Rama !
The mightiest ! made strategies to take revenge in his mind itself !
At a time, he broke the ropes which had been tied to him, sprang into the sky and roared like a lion ! He became a mountain by growing and growing ! Climbed down to the ground !
He found the huge iron bolt with which he had slayed the monsters before ! He killed the monsters who were there in the entrance of the town !!
Maaruthi sparkled in the light of the fire which was set to his tail !
Lanka was burning in the fire of tail !!
It was burning into ashes !!
The second proverb based on Hanuman took birth !
" Anke illada kapi Lanke suttithu "
Which means - the unrestrained monkey burnt Lanka .
Maaruthi began to offer oblation to the god of fire Yajneshwara, though he had not asked.
Maaruthi jumped from house to house !
He leapt from upper storey to upper storey !!
He leapt to the houses of all the ministers, chief commanders, all Ravana's brothers except Vibhishana and to the houses of the children. Without being selective he leapt to all the houses and brandished his tail !!
Fire was set !
Vaayudeva fanned the burning pain of his son !!
The entire town was consumed by fire, including the palace , neighborhood and garden of Ravana except the place where Seetha was in !!!
Destruction of life !
Loss of life !!
Defamation of the one who defamed the Gods, the one who put his hand to the brink of the saree and to the hair of an another woman, by monkey !!!
The fire of wrath with fire ! Along with these, the wind !!
What else is required ?
He did what was not supposed to be done and made the way for the things to happen which was not supposed to happen !!
Only 95 steps are left...







No comments:
Post a Comment
Please leave your comments here.....