ಶ್ರೀರಾಮಾಯಣ ಹಕ್ಕಿನೋಟ -೧೧೧ A Bird's-eye view of Ramayana : 111

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೧೧


ಸದ್ಯ ಆರನೆಯ ಮತ್ತು ಅಂತಿಮ ಸುತ್ತು.

ಮಾರುತಿ - ಇಂದ್ರಜಿತು ನಡುವೆ ಯುದ್ಧಾರಂಭವಾಯಿತು.

ತುಂಬಾ ವಿಶೇಷದ ಸಂಗತಿ ಎಂದರೆ ಇಂದ್ರಜಿತುವಿನ ಬಾಣಗಳು ಮಾರುತಿಯನ್ನು ತಾಗಲೇ ಇಲ್ಲ! ಇದರ ಅರ್ಥ ಇಂದ್ರಜಿತು ಗುರಿತಪ್ಪಿದನೇ? ಎಂದಲ್ಲ! ಕೊನೆಯ ಕ್ಷಣ ಇನ್ನೇನು ಬಾಣ ತಾಗಿತು ಎನ್ನುವಾಗ ಮಾರುತಿ ತನ್ನನ್ನು ತಾನು ತಪ್ಪಿಸಿಕೊಳ್ಳುತ್ತಿದ್ದ.

ಹಾಗೆಯೇ ಮಾರುತಿಗೂ ಇಂದ್ರಜಿತುವಿನ ಮೇಲೆ ದಾಳಿ ಮಾಡಲಾಗಲಿಲ್ಲ!

ಇಬ್ಬರೂ ಶತ್ರುವನ್ನು ಹಿಮ್ಮೆಟ್ಟಿಸಲು ಉಪಾಯಗಳನ್ನು ಹೆಣೆಯುತ್ತಲೇ ಯುದ್ಧ ಮಾಡುತ್ತಿದ್ದರು.

ತಾನು ಬಾಣಗಳ ಮಳೆಗರೆಯುತ್ತಿದ್ದರೂ ಅವುಗಳೆಡೆಯಲ್ಲಿ ಮಾರುತಿ ತಪ್ಪಿಸುವುದನ್ನು ನೋಡಿದಾಗ ಇಂದ್ರಜಿತು 'ಶಸ್ತ್ರಗಳಿಂದ ಇವನನ್ನು ಸೋಲಿಸಲು ಅಸಾಧ್ಯ. ಇವನಿಗೆ ಅಸ್ತ್ರವೇ ಸೂಕ್ತ 'ಎಂದು ನಿರ್ಧರಿಸಿ ಅಸ್ತ್ರಗಳಲ್ಲಿ ಶ್ರೇಷ್ಠವಾದ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಬಂಧಿಸಿ ಆಗಸದಿಂದ ನೆಲಕ್ಕೆ ಬೀಳಿಸಿದ.ರಕ್ಕಸರು ನಿಟ್ಟುಸಿರು ಬಿಟ್ಟರು.ಇನ್ನು ಒಂದು ಮುಹೂರ್ತ ಕಾಲ ಮಾರುತಿ ಏನೂ ಮಾಡುವಂತಿರಲಿಲ್ಲ!.


ರಕ್ಕಸರು ಅವರದೇ ಶೈಲಿಯಲ್ಲಿ ಮಾರುತಿ ಪೂಜೆ ಮಾಡಿದರು.

ರಾಮನಿಗಾಗಿ, 

ಸುಗ್ರೀವನ ಕಾರ್ಯ ಸಾಧನೆಗಾಗಿ,

ಸೀತಾಮಾತೆಯ ಬಿಡುಗಡೆಗಾಗಿ,

ವೈರಿ ರಾವಣ ಮತ್ತು ಅವನ ಪರಿವಾರದ ಇನ್ನಷ್ಟು ಗುಟ್ಟನ್ನು ತಿಳಿಯಲಿಕ್ಕಾಗಿ,

ರಾವಣ-ರಾವಣನ ಆಸ್ಥಾನವನ್ನೊಮ್ಮೆ ನೋಡಲಿಕ್ಕಾಗಿ- ಸಿಕ್ಕಿಬಿದ್ದು ಸೋತೆ ಎನ್ನುವಂತೆ ನಟಿಸಿದ!!

ಅವನ ಮೌನ ಇಂದ್ರಜಿತುವಿಗೆ ಅಚ್ಚರಿ-ಸಮಸ್ಯೆಗಳಾದವು!!


ಇದರೆಡೆಯಲ್ಲಿ ಅತ್ಯುತ್ಸಾಹದ ರಕ್ಕಸರು ಅವನನ್ನು ಹಗ್ಗದಿಂದ ಕಟ್ಟಬೇಕೇ!?! 

ಬ್ರಹ್ಮಾಸ್ತ್ರ ಎಂದೂ ಇನ್ನೊಂದರ ಬಂಧನದಲ್ಲಿ ಇರುವುದಿಲ್ಲ! 

ಈ ಗುಟ್ಟು ಅಲ್ಲಿ ಗೊತ್ತಿರುವುದು ಇಂದ್ರಜಿತು ಮತ್ತು ಮಾರುತಿಗೆ ಮಾತ್ರ! 

ಅನಾಯಾಸವಾಗಿ ಮಾರುತಿ ಬ್ರಹ್ಮಾಸ್ತ್ರದ ಬಂಧನದಿಂದ ಬಿಡುಗಡೆ ಹೊಂದಿದ.ಆದರೆ ಅದನ್ನು ತೋರ್ಪಡಿಸಿ ಕೊಳ್ಳಲಿಲ್ಲ! ಇಂದ್ರಜಿತು ರಕ್ಕಸರ ಮೂಲಕ ರಾವಣನ ಓಲಗಕ್ಕೆ ಮಾರುತಿಯನ್ನು ಸಾಗಿಸಿದನು.



 ತೇಜಸ್ವಿ ರಾವಣನನ್ನು ನೋಡಿ ಮಾರುತಿಗೆ ಅವನ ಕುರಿತು ಅಚ್ಚರಿ-ಗೌರವಗಳು ಏಕಕಾಲದಲ್ಲಿ ಮೂಡಿದವು!ಅದರೊಂದಿಗೆ ಅವನ ಸೀತಾಪಹರಣದಂತಹ ಹೀನ ಕಾರ್ಯ ನೆನಪಾದಾಗ ಹೇಸಿಗೆಯೂ ಉಂಟಾಯಿತು.(ಹೌದು! ಲೋಕದಲ್ಲಿ ದೊಡ್ಡ ವರೆನಿಸಿಕೊಂಡವರು ತಪ್ಪು ಗಳನ್ನು ಮಾಡುವುದಿಲ್ಲ!ಅಲ್ಲವೇ!? ಮಾಡುವಾಗ ಸಣ್ಣ ಸಣ್ಣ ತಪ್ಪುಗಳನ್ನು ಮಾಡುವುದೇ ಇಲ್ಲ! ಇದು ರಾವಣನಿಗೆ ಚೆನ್ನಾಗಿ ಅನ್ವಯಿಸುತ್ತದೆ!)

ರಾವಣನಿಗೆ ಮಾರುತಿಯನ್ನು ನೋಡಿ ಸಿಟ್ಟು ನೆತ್ತಿಗೇರಿತು.ತನ್ನ ಮಂತ್ರಿಗಳಲ್ಲಿ ಅವನನ್ನು ಯಥೋಚಿತವಾಗಿ ವಿಚಾರಿಸಲು ಆದೇಶಿಸಿದನು.


ಇನ್ನು 97 ಹೆಜ್ಜೆಗಳು ಬಾಕಿ. 



Om ShriRamaya Namaha : 111


A Bird's-eye view of Ramayana : 111


Finally it was the sixth and the last round.

The war began between Maaruthi and Indrajithu. 

But the miracle was, the arrows which were thrown by Indrajithu did not hit Hanuman !

But that didn't mean his aim had missed !

At the last moment ,when the arrow was about to hit, Maaruthi was escaping himself from the arrow. Due to this Hanuman could not attack Indrajithu !

Both were fighting by spinning strategies to defeat the enemy. 

While Indrajithu was showering arrows, Hanuman was escaping from them without getting hit. Indrajithu who saw Hanuman escaping, thought that it was impossible for him to defeat Hanuman through arrows. And decided that the use of artillery would be better to defeat Hanuman.  Indrajithu bound and Put Hanuman down to the ground through the greatest artillery Brahmastra. The monsters took the sigh of relief. 

Maaruthi was unable to do anything for the period of one Muhoortha !


The monsters treated Maaruthi in their own way.

For Rama ,

For the accomplishment of Sugreeva's work.

For the emancipation of Seethamaatha.

To know even more secrets of the enemy Ravana and his family, 

To see Ravana and his royal court - he surrendered himself, got caught and pretended as if he was defeated  !!

His silence became astonishment and problem for Indrajithu !!


Amidst of all these, should the super excited monsters tie Hanuman with ropes!?!

Brahmaastra will never be in clutch of another !

And only Indrajithu and Maaruthi knew that fact there !

Maaruthi got released from the clutch of Brahmaastra effortlessly.  But he did not let anyone notice that. Indrajithu sent Maaruthi to the royal assembly of Ravana through the monsters. 



Both astonishment - respect arose simultaneously in Hanuman when he saw Ravana who was sparkling with brilliance ! But at the same time, when he remembered Ravana's vicious deed of abducting Seetha, Hanuman felt disgusting about him. ( Yes ! The people who are known respectful and honorable, do not make mistakes ! Isn't it? While making, they never make small small mistakes ! This applies to Ravana perfectly !)

Ravana was mad with rage when he saw Maaruthi. 

Ravana commanded his ministers to enquire Hanuman appropriately. 


97 steps are remaining !


No comments:

Post a Comment

Please leave your comments here.....