ಶ್ರೀರಾಮಾಯನಮ:
ರಾಮಾಯಣ ಹಕ್ಕಿನೋಟ-೧೪
ಪ್ರಶ್ನೆಯು ಜ್ಞಾನದ ಕೀಲಿಕೈ.ಅರಿಯುವ ಕುತೂಹಲವನ್ನು, ಆಸಕ್ತಿಯನ್ನು, ಪ್ರಶ್ನಿಸುವವನ ಧಾರಣಾ ಸಾಮರ್ಥ್ಯವನ್ನು.. ಪ್ರಶೆಯು ತೋರಿಸುತ್ತದೆ.ರಾಮಾಯಣದಲ್ಲಿ ಅದರಲ್ಲೂ ವಿಶೇಷವಾಗಿ ರಾಮ-ವಿಶ್ವಾಮಿತ್ರರ ಸಂಭಾಷಣಾ ಸಂದರ್ಭಗಳಲ್ಲಿ ನಾವಿದನ್ನು ಧಾರಾಳವಾಗಿ ಕಾಣಬಹುದು.ಇದು ವಾಲ್ಮೀಕಿ ಮಹರ್ಷಿಗಳ ಕತೆ ಹೇಳುವ ಜಾಣ ಶೈಲಿಯೂ ಹೌದು.ಇದೊಂದು ಏಕಪಾತ್ರಾಭಿನಯ!
ವಿಶ್ವಾಮಿತ್ರರ ಯಜ್ಞ ಪರಿಸಮಾಪ್ತಿಯಾದ ಮರುದಿನ ಬೆಳಗಿನ ಕರ್ಮಗಳನ್ನು ಮುಗಿಸಿದ ರಾಮ ಲಕ್ಷ್ಮಣರು ವಿಶ್ವಾಮಿತ್ರರಲ್ಲಿ- ಇನ್ನು ನಮ್ಮಿಂದೇನಾಗಬೇಕು ಅಪ್ಪಣೆಯಾಗಲಿ ಎಂದು ಪ್ರಾರ್ಥಿಸಿದರು.ಆಗ ಅಲ್ಲಿದ್ದ ಮುನಿಗಳು ರಾಮಲಕ್ಷ್ಮಣರಲ್ಲಿ-ನಾವು ಮಿಥಿಲೆಗೆ ಹೋಗುತ್ತಿದ್ದೇವೆ.ಅಲ್ಲಿ ಜನಕರಾಜನು ಯಜ್ಞವನ್ನು ಮಾಡುತ್ತಿದ್ದಾನೆ.ಆತನಲ್ಲಿ ಅಪೂರ್ವವಾದ ಶಿವಧನುಸ್ಸು ಇದೆ.ಅದನ್ನೂ ನಾವು ನೋಡಿ ಧನ್ಯರಾಗಬೇಕೆಂದಿದ್ದೇವೆ.ನೀವೂ ಬನ್ನಿ ಎಂದು ಆಮಂತ್ರಿಸಿದರು.ವಿಶ್ವಾಮಿತ್ರರೂ ಇದಕ್ಕೆ ಒಪ್ಪಿ ಮುನಿಗಡಣದೊಂದಿಗೆ ಮಿಥಿಲೆಯತ್ತ ಪಯಣಿಸಿದರು.
ಹೋದಲ್ಲೆಲ್ಲಾ,ನಿಂದಲ್ಲೆಲ್ಲಾ ಎಂಬಂತೆ ಇಲ್ಲಿನ ವಿಶೇಷವೇನು?ಇದು ಯಾಕೆ ಹೀಗೆ...ಮುಂತಾದ ಪ್ರಶ್ನೆಗಳನ್ನು ಕೇಳಿದಾಗ ವಿಶ್ವಾಮಿತ್ರರು ರಾಮನ ಕುತೂಹಲವನ್ನು ತಣಿಸಲು ವಿಸ್ತಾರವಾಗಿ ಉತ್ತರಗಳನ್ನು ನೀಡುತ್ತಾ ಹೋದರು.ಅದರ ಫಲವೇ-
. ಬ್ರಹ್ಮದತ್ತನ ಕತೆ
. ವಿಶ್ವಾಮಿತ್ರರ ಜನ್ಮ
. ಗಂಗೆ ಉಮೆಯರ ಜನ್ಮ ವೃತ್ತಾಂತ
. ಕಾರ್ತಿಕೇಯನ ಕತೆ
.ಸಗರನ ಅಶ್ವಮೇಧ ಯಾಗದ ಕತೆ
.ಗಂಗಾವತರಣದ ಕತೆ
.ಸಮುದ್ರಮಥನ.. ಹೀಗೆ ಕತೆಗಳ ಗಂಗಾಪ್ರವಾಹವೇ ಹರಿಯಿತು.ರಾಮಲಕ್ಷ್ಮಣರೊಂದಿಗೆ ಅವರೊಡನಿದ್ದ ಮುನಿಗಳೂ ಇದರಲ್ಲಿ ಮಿಂದು ಪಾವನರಾದರು.
ರಾಮಾಯಣದ ಮುಂದುವರಿಕೆಯ ದೃಷ್ಟಿಯಿಂದ ಗಂಗಾವತರಣದ ಕತೆ ಮುಖ್ಯವಾದುದು.ಗಂಗೆಯಿಲ್ಲದಿರೆ.....
Om ShriRamaya Namaha:
A Bird's-eye view of Ramayana:14
Questioning is the key to knowledge. The quality of questioning unveils the interest, curiosity and the ability of a learner. This can be seen in the Ramayana especially when the conversation takes place between Rama and Vishwamitra which is written as mono-act by Valmiki which also exhibits the skill of Valmiki.
The following day of the sacrificial ritual, Rama and Lakshmana went to Vishwamitra to ask him if he expected any other favor from them and waited for his command. At the same time the group of sages who were there in Siddhaashrama came and stated that they were about to leave for the kingdom 'Mithile' where the king Janakaraja was performing a Sacrificial ritual (Yajna)and he was the one who possessed the divine and enchanting 'Shivadhanus' .The group of sages expressed their wish to purify themselves by seeing the Shivadhanus and invited both Rama and Lakshmana. Vishwamitra agreed and accepted their invitation and took journey towards Mithile.
Rama's curiosity to learn new things was at the height throughout the journey. He had a zeal to know and learn everything. Rama kept on asking questions to Vishwamitra about everything he saw and the places they visited while going to Mithile. Vishwamitra was flooded with the questions about various things which shows the Rama's thirst for knowledge. To fulfill the curiosity of Rama ,Vishwamitra answered all the questions in detail which resulted in the emergence of many stories such as:
• The story of Brahmadatha.
• The birth of Vishwamitra.
• The birth of Ganga Umeya.
• The story of Kartikeya.
• The story of Ashwamedha ritual by Sagara.
• The story of Gangaavatarana (Avatar).
• Samudra Mathana.
In this way there was a flood of many stories. Along with Rama and Lakshmana the sages felt purified and blessed after listening to these stories.
The story of Gangaavatarana is essential for the continuation of the Ramayana.

No comments:
Post a Comment
Please leave your comments here.....