ಓಂ ಶ್ರೀರಾಮಾಯನಮ:
ರಾಮಾಯಣ ಹಕ್ಕಿನೋಟ-೩
ಮಹರ್ಷಿ ವಾಲ್ಮೀಕಿಗಳು ಮಧ್ಯಾಹ್ನದ ಕ್ರಿಯೆಗಳಿಗಾಗಿ ತಮಸಾ ನದಿಗೆ ಹೋದರು.ಅಲ್ಲಿನ ಸ್ವಚ್ಛ ಸುಂದರ ಪರಿಸರದಲ್ಲಿ ಸಂತಸದಿಂದಿರುವಾಗ ಒಂದು ದುರ್ಘಟನೆ ನಡೆಯಿತು.ಎರಡು ಸುಂದರವಾದ ಗಂಡು ಹೆಣ್ಣು ಕ್ರೌಂಚ ಪಕ್ಷಿಗಳು ಅಲ್ಲಿ ಆನಂದದಿಂದ ವಿಹರಿಸುತ್ತಿದ್ದವು.ಕ್ರೂರನಾದ ಬೇಡನೊಬ್ಬ ನಿಷ್ಕರುಣೆಯಿಂದ ಗಂಡು ಹಕ್ಕಿಯನ್ನು ಬಾಣದಿಂದ ಹೊಡೆದುರುಳಿಸಿದನು.ಹೆಣ್ಣುಹಕ್ಕಿಯ ಅಳು ಮುಗಿಲು ಮುಟ್ಟಿತು.ಇದನ್ನು ಕಂಡು ಕರುಣೆಗೊಂಡ ವಾಲ್ಮೀಕಿ ಮಹರ್ಷಿಗಳು ಬೇಡನಿಗೆ- ವಿಹರಿಸುತ್ತಿದ್ದ ಕ್ರೌಂಚ ಪಕ್ಷಿಗಳಲ್ಲಿ ಗಂಡು ಹಕ್ಕಿಯನ್ನು ಹೊಡೆದುರುಳಿಸಿದ ನಿನಗೆ ಬಾಳಿನಲ್ಲಿ ಬಹುಕಾಲ ನೆಲೆ ಇಲ್ಲದಂತಾಗಲಿ -ಎಂದು ನೊಂದು ನುಡಿದರು.ಈ ಶೋಕವೇ ಶ್ಲೋಕ ರೂಪವಾಯಿತು-
ಮಾ ನಿಷಾದ ಪ್ರತಿಷ್ಠಾಂ ತ್ವಮಗಮ: ಶಾಶ್ವತೀ ಸಮಾ:|
ಯತ್ಕ್ರೌಂಚಮಿಥುನಾದೇಕಮವಧೀ: ಕಾಮಮೋಹಿಮ್||
ಜೊತೆಯಲ್ಲಿದ್ದ ಶಿಷ್ಯ ಭಾರಧ್ವಾಜ ಇದನ್ನು ಕಂಠಪಾಠ ಮಾಡಿ ಗುರುಗಳಿಗೆ ಒಪ್ಪಿಸಿದನು.ನೋವಿನಿಂದಲೇ ಆಶ್ರಮಕ್ಕೆ ಬಂದ ಮಹರ್ಷಿಗಳು ಅದೇ ನೋವಿನ ಸ್ಥಿತಿಯಲ್ಲಿದ್ದರು.
ಆಗ ಬ್ರಹ್ಮನು ವಾಲ್ಮೀಕಿ ಮಹರ್ಷಿಗಳನ್ನು ಕಾಣಲು ಆಶ್ರಮಕ್ಕೆ ಬಂದನು.ಅಚ್ಚರಿಗೊಂಡ ಮಹರ್ಷಿಗಳು ಅವನನ್ನು ಪೂಜ್ಯ ಭಾವನೆಯಿಂದ ಪೂಜಿಸಿ ಸತ್ಕರಿಸಿದರು.ಮಹರ್ಷಿಗಳ ಅಂತರಂಗವನ್ನರಿತ ಬ್ರಹ್ಮನು ಅವರಿಗೆ ಈ ರೀತಿ ಹೇಳಿದನು- ಈ ಶ್ಲೋಕದ ಆಧಾರದಲ್ಲೇ ನೀನು ನಾರದನು ಹೇಳಿದ ರಾಮ ಚರಿತ್ರೆಯನ್ನು ವಿಸ್ತಾರವಾಗಿ ರಚಿಸು.ರಾಮ,ಲಕ್ಷ್ಮಣ,ಸೀತೆ,ರಾವಣ ಮುಂತಾದವರ ಎಲ್ಲಾ ವಿಚಾರಗಳು ನಿನಗೆ ತನ್ನಿಂದ ತಾನೇ ತಿಳಿಯುತ್ತದೆ.ನಿನ್ನಿಂದ ರಚಿಸಲ್ಪಟ್ಟ ಈ ರಾಮಾಯಣ ಕತೆಯು ಈ ಭೂಮಿ ಇರುವ ತನಕ ಇರುವುದು.ಲೋಕ ಪ್ರಿಯವಾಗುವುದು,ನೀನು ಸರ್ವಲೋಕಗಳಲ್ಲಿ ವಿಹರಿಸುವನಾಗುವೆ-ಎಂದು ಹೇಳಿ ಆಶೀರ್ವಾದ ಮಾಡಿ ಕಣ್ಮರೆಯಾದನು.
ವಾಲ್ಮೀಕಿ ಮಹರ್ಷಿಗಳು ಧ್ಯಾನಕ್ಕೆ ಕುಳಿತರು.ಧ್ಯಾನದಲ್ಲಿದ್ದಾಗ ಅವರಿಗೆ ಬ್ರಹ್ಮನ ಅನುಗ್ರಹದಿಂದಾಗಿ ಇಡೀ ರಾಮಾಯಣದ ಘಟನೆಗಳು ಕಣ್ಮುಂದೆ ಬಂದವು.ಅವುಗಳ ಆಧಾರದಲ್ಲಿ- ರಾಮನ ಹುಟ್ಟಿನಿಂದ ತೊಡಗಿ ವನವಾಸ, ರಾವಣ ವಧೆ, ಪಟ್ಟಾಭಿಷೇಕ ಸೀತಾಪರಿತ್ಯಾಗವೂ ಸೇರಿದಂತೆ ಎಲ್ಲವನ್ನೂ ಎಲ್ಲರೂ ಮೆಚ್ಚುವಂತೆ ಹಾಡಿ ಕುಣಿವಂತೆ ರಚಿಸಿದರು.
ನಾರದರು ಹೇಳಿದ ಕತೆ ಮೊದಲ ಮುನ್ನೋಟವಾದರೆ ಬ್ರಹ್ಮನು ಬಂದು ಹೋದ ಬಳಿಕ ವಾಲ್ಮೀಕಿ ಮಹರ್ಷಿಗಳಿಗೆ ಹೊಳೆದ ಕತೆ ಎರಡನೇ ಮುನ್ನೋಟ.ಇದರಲ್ಲಿ ಓದುಗರಿಗೆ ಇನ್ನೂ ಹೆಚ್ಚಿನ ಕಥಾವಿವರಣೆಯು ಸಿಗುತ್ತದೆ.ರಾಮಾಯಣ ಬಾಯಿಯಿಂದ ಬಾಯಿಗೆ ಹರಿದು ಬಂದ ಕತೆಯಾಗಿರಬೇಕು.ಆದುದರಿಂದ ಎಲ್ಲೂ ತಪ್ಪದಂತೆ ಕತೆಗಳು- ಘಟನೆಗಳು ಹಿಂದೆ ಮುಂದಾಗದಂತೆ ನಮ್ಮ ಈಗಿನ ಪುಸ್ತಕಗಳಲ್ಲಿ ಕಂಡು ಬರುವ ಪರಿವಿಡಿಯ ಸ್ಥಾನದಲ್ಲಿ ಇದು ನಿಂತಿದೆ ಎಂದು ಹೇಳಬಹುದು.
ಮುಂದೆ ವಾಲ್ಮೀಕಿ ಮಹರ್ಷಿಗಳು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳಿಂದ ಕೂಡಿದ,ಐನ್ನೂರು ಸರ್ಗಗಳಿಂದಲೂ, ಉತ್ತರ ಕಾಂಡವೂ ಸೇರಿದಂತೆ ಏಳುಕಾಂಡಗಳಲ್ಲಿ ಇರುವ ರಾಮಾಯಣವನ್ನು ರಚಿಸಿದರು.ಇದುವೇ ನಾವಿಂದು ಕೇಳುತ್ತಿರುವ ನೋಡುತ್ತಿರುವ ಎಲ್ಲಾ ರಾಮಾಯಣಗಳ ಮೂಲ.
Om ShriRamaya Namaha:
A Bird's eye view of Ramayana:3
One fine day Valmiki Maharshi went to the bank of the river 'Thamasa' to perform his afternoon rites. He was delighted by the beautiful nature which was unruffled and serene. While he was enjoying the surrounding ,he happened to see an incident which disturbed his peace of mind. The two Crauncha birds (male and female birds)were flying and wandering happily. At the same time a cruel hunter hit one of those birds dead (which was a male bird) with his arrow. Valmiki was outraged by this cruel deed of the hunter.
The helplessness and the mourning of the female bird reached the sky. Witnessing this disastrous incident Valmiki was filled with empathy for the birds and in anger he cursed the hunter with a fervent wish that he should be a vagabond in his life. And these words were delivered in the form of shloka ,Where he said:
"Maa Nishaada Prathishtaam
Twamagamaha shashwathee samaaha:
Yathrcraunchamithunaadaekamavadhee:
Kaamamoheem".
His pupil who was with him watching all these, grasped the shloka ,by hearted it and reproduced the same to his Guru Valmiki.
Valmiki Maharshi returned to his hermitage with a heavy heart and his mind was preoccupied with the incident. While he was brooding over the two birds, the Lord Brahma visited hermitage of Valmiki Maharshi. Valmiki was overwhelmed by his arrival and welcomed him with hospitality. By realizing the inner soul of Valmiki Lord Brahma adviced him to write the Ramayana based on Shlokas(Manishada) in detail as explained and narrated by Narada Muni. Further he continued by saying that Valmiki would come to know everything about Rama ,Lakshmana, Seetha ,Ravana so on and so forth while writing. Before leaving Valmiki's hermitage he blessed Valmiki with his words where he said that the Ramayana created by Valmiki would remain eternal through which Valmiki would be known and remembered by everyone and it would be loved by the world forever.
After that Valmiki engrossed himself in meditation. By the grace of Lord Brahma he could see the incidents of the whole Ramayana while meditating. Based on those incidents he created Ramayana starting right from the birth of Rama till the trial by fire of Seetha(Agni pariksha). He created it in such a way that it was praised and sung by everyone.
If the story narrated by Narada Muni was the first Preview of Ramayana then the story conceived by Valmiki after the arrival of Lord Brahma was the second Preview which provides more details about the stories to readers.
The Ramayana could have been a folk story since it had been narrated by a person to person. Probably this could be a reason that the incidents are arranged and organized systematically in the books that we read today without any ambiguity.
Later Valmiki Maharshi wrote the Ramayana consisting 24,000 verses ( shlokas)500 sargas( chapters),7 Kaandas including Uttara Kaanda which is the core of all the Ramayana stories that we have been reading and hearing from a long time.

No comments:
Post a Comment
Please leave your comments here.....