#ಧಾರಾ_ರಾಮಾಯಣ - ದಿನ 5
#ವಿಷ್ಣುಗುಪ್ತ_ವಿಶ್ವವಿದ್ಯಾಪೀಠ
ರಾಮಾಯಣದ ಫಲ ಏನು ಅಂದರೆ ಕಳೆದು ಹೋದ ಅಮೂಲ್ಯ ಸ್ವತ್ತಿನ ಪುನಃಪ್ರಾಪ್ತಿ, ಇದಕ್ಕೆ ಸಾಕ್ಷಾತ್ ರಾಮನೇ ಉದಾಹರಣೆ, ತನ್ನ ಮಕ್ಕಳಾದ ಲವಕುಶರನ್ನು, ಸೀತೆಯನ್ನು, ರಾಜ್ಯವನ್ನು ಮರಳಿಪಡೆದ. ಧಾರಾ ರಾಮಾಯಣವೂ ಇದೇ ಅಲ್ಲವೇ, ಕಳೆದು ಹೋದ ವಿದ್ಯೆಗಳ ಪುನರುತ್ಥಾನದ ಸಂಕಲ್ಪಕ್ಕೆ ಸಮರ್ಪಿತ.
~
ರಾಮ ಜನ್ಮತಾಳಿದ್ದು ಇತಿಹಾಸದಲ್ಲಿ ಶ್ರೇಷ್ಠ ಪರಂಪರೆಯಾದ ಇಕ್ಷ್ವಾಕು ಪರಂಪರೆಯಲ್ಲಿ.. ಮಾನವ ಲೋಕದ ಉದ್ಧಾರಕ್ಕಾಗಿ ಮನುನಿರ್ಮಿತ ಅಯೋಧ್ಯೆಯಲ್ಲಿ
ರಾಮಾಯಣದಲ್ಲಿ ಚತುರ್ವರ್ಗಗಳಿವೆ, ಧರ್ಮ,ಅರ್ಥ,ಕಾಮ... ಇನ್ನು ರಾಮನೇ ಮೋಕ್ಷ
ಅಯೋಧ್ಯೆಯಲ್ಲಿ ಏನೇನಿತ್ತು? ಜಗತ್ತಿನ ಒಳಿತು ಅಂತ ಏನೇನಿದೆಯೋ ಅವೆಲ್ಲವೂ ಅಲ್ಲಿತ್ತು. ಯಂತ್ರಗಳು, ರತ್ನಾಲಂಕೃತ ಮನೆಗಳು, ಶತಗ್ನಿಯಂಥ ಆಯುಧಗಳು, ಎಲ್ಲೆಲ್ಲೂ ಹಸಿರು-ನೀರು,ಪಶುಗಳು.. ಜೊತೆಗೆ ಮಹದೆತ್ತರದ ಪ್ರಾಕಾರ ಹಾಗೂ ಸುತ್ತಲೂ ಆಳವಾದ ಕಂದಕವಿತ್ತು, ಹಾಗಾಗಿಯೇ ಅದು ಅಯೋಧ್ಯೆ, ಯುದ್ಧದಿಂದ ಗೆಲ್ಲಲಸಾಧ್ಯವಾದುದು.
ಅಯೋಧ್ಯೆಯ ಜನ ಎಂಥವರು? ನಾನಾ ದೇಶದ ವ್ಯಾಪಾರಿಗಳು, ಸರ್ವ ವಿದ್ಯಾ ಸಂಪನ್ನರು, ವೀರರು, ಶೂರರು, ಧರ್ಮಪಾಲಕರು, ಋಷಿಗಳು, ಜ್ಞಾನೋತ್ತಮರು
ದಶರಥ ಎಂಥವನು? ಸರ್ವಗುಣ ಸಂಪನ್ನೂ, ದೂರಾಲೋಚನೆ ಇರುವವನೂ, ನಗರ-ಹಳ್ಳಿ ವಾಸಿಗರಿಬ್ಬರಿಗೂ ಪ್ರಿಯನೂ, ಅತಿರಥನೂ ಧರ್ಮದಲ್ಲಿ ಪ್ರೀತಿ ಉಳ್ಳವನೂ, ನಿಯಂತ್ರಣ(ಪ್ರಭುತ್ವ) ಹೊಂದಿದವನೂ, ಋಷಿತ್ವ ಇದ್ದವನೂ, ಮೂರು ಲೋಕದಲ್ಲಿ ಹೆಸರುಳ್ಳವನೂ, ಸಾಕಷ್ಟು ಮಿತ್ರರನ್ನು ಹೊಂದಿದ್ದವನೂ, ಕುಬೇರನಷ್ಟು ಸಂಗ್ರಹ ಇದ್ದವನೂ ಆಗಿದ್ದ ದಶರಥ
ದಶರಥನ ಮಂತ್ರಿಗಳು ರಾಜನ ಇಂಗಿತ ಬಲ್ಲವರು. ರಾಜ್ಯದ ಪ್ರಿಯ-ಹಿತ ಬಲ್ಲವರು. ದಶರಥನ ಆಸ್ಥಾನದಲ್ಲಿ ಎಂಟು ಜನ ಮಂತ್ರಿಗಳು ಹಾಗೂ ಎಂಟು ಪುರೋಹಿತರು ಇದ್ದರು. ಪರಸ್ಪರ ಪ್ರೀತಿ-ನೀತಿ ಇತ್ತು. ಧರ್ಮಪ್ರತಿಜ್ಞರೆಲ್ಲರೂ ಮಂತ್ರಿಗಳಿಗೆ ಪ್ರಿಯ. ಇಡೀ ರಾಜ್ಯದಲ್ಲಿ ಸುಳ್ಳ-ಕಳ್ಳ-ದುಷ್ಟರಿಲ್ಲದಂತೆ ಮಂತ್ರಿಗಳು ಆಳುತ್ತಿದ್ದರು. ತಪ್ಪು ಯಾರೂ ಮಾಡಿದರೂ ಶಿಕ್ಷೆ, ತಪ್ಪು ಮಾಡದ ಯಾರಿಗೂ ಶಿಕ್ಷೆ ಇರುತ್ತಿರಲಿಲ್ಲ. ಮಂತ್ರಿಗಳಿಗೆ ಗೊತ್ತಿಲ್ಲದ ಸಂಗತಿ ಇರಲಿಲ್ಲ.. ಈ ಮಂತ್ರಿಗಳ ಕೀರ್ತಿ ಜಗತ್ತಿನಾದ್ಯಂತ ಹಬ್ಬಿತ್ತು
ಇಂತಹ ಶ್ರೇಷ್ಠ ಮಂತ್ರಿಗಳನ್ನು ಹೊಂದಿದ್ದ ದಶರಥ ಕೋಸಲವನ್ನು ಆಳಿದ, ಅಲ್ಲ ಇಡಿಯ ಭೂಮಂಡಲವನ್ನೇ ಆಳಿದ.
ಇಷ್ಟೂ ಗುಣವನ್ನು ನುಂಗುವ ಕೊರತೆ ಒಂದಿತ್ತು ಅ ರಾಜ್ಯದಲ್ಲಿ, ಇದರಿಂದ ಚಿಂತಿತನಾಗಿದ್ದ ದಶರಥ. ಅಷ್ಟೆಲ್ಲ ಒರತೆಗಳನ್ನು ಹೊಂದಿದ್ದ ಅಯೋಧ್ಯೆಯಲ್ಲಿ ಇದ್ದ ಆ ಒಂದು ಕೊರತೆ ಏನು ಎಂಬುದು ನಾಳಿನ ಪ್ರವಚನದಲ್ಲಿ ಕೇಳೋಣ
#DhaaraRaamayan

No comments:
Post a Comment
Please leave your comments here.....