ಓಂ ಶ್ರೀರಾಮಾಯನಮ:
ರಾಮಾಯಣ ಹಕ್ಕಿನೋಟ-೧
ಬ್ರಹ್ಮನು ನೂರು ಕೋಟಿ ಶ್ಲೋಕಗಳ ರಾಮಾಯಣವನ್ನು ರಚಿಸಿ ನಾರದಾದಿ ಮಹರ್ಷಿಗಳಿಗೆ ಉಪದೇಶಿಸಿದನು. ಬ್ರಹ್ಮನ ಆದೇಶದಂತೆ ನಾರದನು ಭೂಲೋಕದಲ್ಲಿ ಮನುಷ್ಯರಿಗೆ ರಾಮಾಯಣದ ಕತೆಯನ್ನು ಸಂಕ್ಷಿಪ್ತವಾಗಿ ಉಪದೇಶಿಸಲು ವಾಲ್ಮೀಕಿ ಮಹರ್ಷಿಗಳಲ್ಲಿಗೆ ಬಂದನು.
ನಾರದನ ಅಪೇಕ್ಷೆ, ಬ್ರಹ್ಮನ ಆದೇಶದ ಮೇರೆಗೆ ವಾಲ್ಮೀಕಿ ಮಹರ್ಷಿಗಳು ಉತ್ತರ ಕಾಂಡವೂ ಸೇರಿದಂತೆ 'ಏಳು ಕಾಂಡಗಳು','ಐನ್ನೂರು ಸರ್ಗಗಳು' ಮತ್ತು 'ಇಪ್ಪತ್ನಾಲ್ಕು ಸಾವಿರಶ್ಲೋಕಗಳು'ಳ್ಳ ರಾಮಾಯಣವನ್ನು ರಚಿಸಿದರು.
ಭಾರತದರ್ಶನ ಪ್ರಕಾಶನದವರು ಪ್ರಕಟಿಸಿದ
ಶ್ರೀಮದ್ವಾಲ್ಮೀಕಿರಾಮಾಯಣದಲ್ಲಿ (ಇಲ್ಲಿ ಸ್ವಲ್ಪ ಹೆಚ್ಚಿವೆ)
ಏಳುಕಾಂಡಗಳು- ಸರ್ಗಗಳು
ಬಾಲ ಕಾಂಡ 77
ಅಯೋಧ್ಯಾ ಕಾಂಡ 119
ಅರಣ್ಯ ಕಾಂಡ 75
ಕಿಷ್ಕಿಂಧಾ ಕಾಂಡ 67
ಸುಂದರ ಕಾಂಡ 68
ಯುದ್ದ ಕಾಂಡ 131
ಉತ್ತರ ಕಾಂಡ 110
ಒಟ್ಟಿಗೆ 647ಸರ್ಗಗಳಿವೆ.
ಸುದೀರ್ಘ ಕಾಲದಲ್ಲಿ ಸಾಗಿಬಂದ ಅದರಲ್ಲೂ ಹೆಚ್ಚಿನ ಕಾಲದಲ್ಲಿ ಮೌಖಿಕವಾಗಿ ಒಂದು ಕಾವ್ಯ ಸಾಗಿ ಬಂದಾಗ ಶ್ಲೋಕಗಳ ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾಗುವುದು ಸಹಜ ತಾನೇ?
ತಾನು ರಚಿಸಿದ ರಾಮಾಯಣವನ್ನು ವಾಲ್ಮೀಕಿ ಮಹರ್ಷಿಗಳು ಮೊದಲು ಲವ-ಕುಶರಿಗೆ ಉಪದೇಶಿಸಿದರು.ಅವರು ಅದನ್ನು ತಾಳ ಲಯಬದ್ಧವಾಗಿ ಮುನಿವೃಂದಗಳಲ್ಲಿ,ರಾಮನ ಆಸ್ಥಾನದಲ್ಲಿ ಹಾಡಿ ಮೆಚ್ಚುಗೆ ಗಳಿಸಿದರು.
ರಾಮಾಯಣ ಜಗತ್ತಿನ ಆದಿಕಾವ್ಯ.ವಾಲ್ಮೀಕಿ ಆದಿಕವಿ.

No comments:
Post a Comment
Please leave your comments here.....