ಶ್ರೀರಾಮಾಯಣ ಹಕ್ಕಿನೋಟ -೨೦೩ A Bird's-eye view of Ramayana : 203

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೨೦೩


ಸೀತೆಯು ರಸಾತಳವನ್ನು ಪ್ರವೇಶಿಸಿದ ಮರುದಿನ ಎಂದಿನಂತೆ ರಾಮಾಯಣ ಗಾಯನ ಮುಂದುವರೆಯಿತು. 

ಶ್ರೀರಾಮನು ದುಃಖಿತನಾಗಿದ್ದುಕೊಂಡು ಯಜ್ಞಕರ್ಮವನ್ನು ಸಮಾಪ್ತಿಗೊಳಿಸಿದನು.

ಬಂದವರೆಲ್ಲರನ್ನು ಗೌರವಿಸಿ ಬೀಳ್ಕೊಟ್ಟನು.

ಬಳಿಕ ಶ್ರೀರಾಮನು ಸೀತಾದೇವಿಯನ್ನು ಹೃದಯದಲ್ಲಿಯೇ ಧಾರಣೆಮಾಡಿಕೊಂಡು ನೈಮಿಷಾರಣ್ಯದಿಂದ ಹೊರಟು ಅಯೋಧ್ಯೆಗೆ ಬಂದನು.

ಸೀತೆಯನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗಲಿಲ್ಲ.ಕುಶ ಲವರ ಜತೆಯಲ್ಲಿ ಅವರಿಗೆ ಅಪ್ಪ ಅಮ್ಮನಾಗಿದ್ದುಕೊಂಡು ಪ್ರಜೆಗಳ ಯೋಗಕ್ಷೇಮವೇ ಪರಮ ಕರ್ತವ್ಯ ಎಂದೆಣಿಸಿ ರಾಜ್ಯವನ್ನಾಳುತ್ತಾ ಕಾಲಕಳೆಯತೊಡಗಿದನು.

ಭರತ ಲಕ್ಷ್ಮಣರು ಅಣ್ಣನ ಎಡಗೈ ಬಲಗೈಗಳಂತಿದ್ದು ಸಹಕರಿಸುತ್ತಿದ್ದರು.

 ಪುತ್ಥಳಿ ಸೀತಾಪ್ರತಿಮೆಯನ್ನೇ ಪತ್ನಿಯ ಸ್ಥಾನದಲ್ಲಿರಿಸಿ ಭಾವಿಸಿ ಅವೆಷ್ಟೋ ಯಜ್ಞಗಳನ್ನು  ಮಾಡಿದನು.

ಅಶ್ವಮೇಧ ಯಾಗಗಳ ಹತ್ತು ಪಟ್ಟು ವಾಜಪೇಯ ಯಾಗಗಳನ್ನು ಮಾಡಿದನು.

ರಾಜನು ಮಾಡಬಹುದಾದ ಮಾಡಬೇಕಾದ ಎಲ್ಲಾ ಯಾಗಗಳನ್ನು ಮಾಡಿದನು. ಅವನ ರಾಜ್ಯಭಾರದಲ್ಲಿ 

ಕಾಲ ಕಾಲಕ್ಕೆ ಮಳೆ ಸುರಿಯುತ್ತಿತ್ತು,

ದೇಶ ಸುಭಿಕ್ಷವಾಗಿತ್ತು,

ಎಲ್ಲಾ ದಿಕ್ಕುಗಳು ನಿರ್ಮಲವಾಗಿದ್ದವು.

ಪ್ರಜೆಗಳು ಹೃಷ್ಟ ಪುಷ್ಟರಾಗಿದ್ದರು.

ಸುಖ ಮನೆಮಾಡಿತ್ತು.



ಕಾಲ ಕಳೆಯಿತು.


ಕೌಸಲ್ಯೆ,ಕೈಕೇಯಿ,ಸುಮಿತ್ರೆಯರು ಅಜ್ಜಿಯಂದಿರರಾದರು.

ಕೌಸಲ್ಯೆಯು ಸ್ವರ್ಗಸ್ಥಳಾದಳು.

ಕೈಕೇಯಿ ಸುಮಿತ್ರೆಯರೂ ಅಕ್ಕನ ದಾರಿಯಲ್ಲಿ ನಡೆದರು.

ರಾಜಯೋಗ್ಯ ರೀತಿಯಲ್ಲಿ ರಾಮನು ತಾಯಂದಿರ ಉತ್ತರ ಕ್ರಿಯೆಗಳನ್ನು ನಡೆಸಿದನು.

ಧರ್ಮ ಕಾರ್ಯಗಳಲ್ಲಿ ನಿರತನಾಗುತ್ತಾ ಪ್ರಜೆಗಳನ್ನು ಪಾಲಿಸುತ್ತಾ ಶ್ರೀರಾಮನು  ಸಾವಿರಾರು ವರ್ಷಗಳ ಕಾಲ ರಾಜ್ಯಭಾರ ಮಾಡಿದನು.


ಸೋದರಮಾವ ಯುಧಾಜಿತನು ಗಾರ್ಗ್ಯ ಮಹರ್ಷಿಗಳ ಮೂಲಕ 

ಹೇಳಿ ಕಳಿಸಿದ ಸಂದೇಶ- ಸಲಹೆಗಳಂತೆ ರಾಮನು ಯಮುನಾ ನದೀದಡದಲ್ಲಿರುವ 

ಗಂಧರ್ವ ದೇಶವನ್ನು ತನ್ನದಾಗಿಸಿಕೊಳ್ಳಲು ಭರತ ಹಾಗೂ ಅವನ ಮಕ್ಕಳಾದ ತಕ್ಷ-ಪುಷ್ಕಲರನ್ನು ಸೇನೆಯೊಂದಿಗೆ ಕಳುಹಿಸಿದನು.

ತಕ್ಷ ಪುಷ್ಕಲರಿಗೆ ಎರಡು ಪ್ರತ್ಯೇಕ ನಗರಗಳನ್ನು ನಿರ್ಮಿಸಿ ಕೊಡಲು ಭರತನಿಗೆ ರಾಮ ಆದೇಶಿಸಿದ. ಮಾತ್ರವಲ್ಲ ಅವರಿಬ್ಬರಿಗೆ ಯುದ್ಧಕ್ಕೆ ಹೋಗುವ ಮೊದಲೇ  ಪಟ್ಟಾಭಿಷೇಕವನ್ನೂ ಮಾಡಿದ.

ಗಂಧರ್ವ ದೇಶವನ್ನು ಗೆದ್ದ ಭರತನು ಸುಂದರ  ತಕ್ಷಶಿಲಾ ನಗರವನ್ನು ನಿರ್ಮಿಸಿ ಅದಕ್ಕೆ ತಕ್ಷನನ್ನು ರಾಜನನ್ನಾಗಿಸಿದನು.

ಬಳಿಕ ಅಂದವಾದ ಪುಷ್ಕಲಾವತ ನಗರವನ್ನು ನಿರ್ಮಿಸಿ ಅದಕ್ಕೆ ಪುಷ್ಕಲನನ್ನು ರಾಜನನ್ನಾಗಿಸಿದ.

ಐದು ವರ್ಷಗಳ ಕಾಲ ಮಕ್ಕಳೊಂದಿಗಿದ್ದು ಸೂಕ್ತ ಮಾರ್ಗದರ್ಶನಗಳನ್ನು ನೀಡಿದ ಭರತ ಮರಳಿ ಅಯೋಧ್ಯೆಗೆ ಬಂದು ಶ್ರೀರಾಮನನ್ನು ಸೇರಿಕೊಂಡನು.


ವಿಶ್ವ


Om ShriRamaya Namaha : 203


A Bird's-eye view of Ramayana : 203


The singing of the Ramayana continued the very next day Seetha entered the subterranean region. 

ShreeRama completed the rites of sacrificial ritual being sad. He sent off all those who had come there with respect. Later ShreeRama went to Ayodhya from Naimishaaranya by sustaining Seethadevi in his heart. 

He did not marry anyone else except Seetha. 

He spent time with Kusha and Lava being both father and mother to them and  in reigning the kingdom by assuming the welfare of the citizens as the ultimate duty.

Bharatha and Lakshmana assisted the elder brother as being his right and left hand.

He had performed so many sacrificial ritual by placing the statue of Seetha itself in the position of the wife and assuming so . He performed sacrificial ritual ' Vaajapeya Yaaga' ten times more than ' Ashwamedha Yaaga'.

He performed all the sacrificial ritual that a king was supposed to do and a king could have done. In the reign of Rama, it was raining time to time, 

the country was prosperous ,

and all the directions were pure and unsullied .

The subjects were well - nourished .

The happiness and pleasure resided in the state. 



The time had elapsed. 


Kausalya, Kaikeyee, Sumitra became grand mothers. 

Kausalya left for her heavenly abode.

Even Kausalya and Sumitra walked in the same path of their elder sister. 

Rama performed the funeral rites of his mothers in the kingly manner. ShreeRama reigned the state for thousands years by protecting and nurturing the subjects and being indulged in the religious ceremonies. 


As per the message and advice sent by the maternal uncle Yudhaajitha through Gargya Maharshi, Rama sent Bharatha and his children named Thaksha - Pushkala along with the army to the country ' Gandharva ' into his possession which was there on the shore of Yamuna. 

Rama commanded Bharatha to build two separate towns to Thaksha and Pushkala. Not only that Rama coronated both of them even before they set off to the battle. 



Bharatha who won the country Gandharva built the beautiful town ' Thakshashila' and made Thaksha as its king.

Later, by building the beautiful ' Pushkalaavatha' town he made Pushkala as its king.

Bharatha spent five years with his children by guiding them and then he returned to Ayodhya and joined his brother ShreeRama. 


Kannada version of the story is written by- 

Shri U S Vishweshwara Bhat 

Translated by- 

Kum. Rashmi A Suvarna . 

Lecturer in English,Vivekananda P U College,Puttur.



ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

1 comment:

Please leave your comments here.....