ಶ್ರೀರಾಮಾಯಣ ಹಕ್ಕಿನೋಟ -೧೮೭ A Bird's-eye view of Ramayana : 187

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೮೭


•ರಾಮಚಂದ್ರನಾಗಿ ದಾಶರಥಿಯಾಗಿ ಪಿತೃವಾಕ್ಯಪರಿಪಾಲನೆ

•ಶ್ರೀರಾಮನಾಗಿ ದಶಕಂಠನ ಸಂಹಾರ ಲೋಕಕಲ್ಯಾಣ

•ಸೀತಾರಾಮನಾಗಿ ರಾವಣನ ಸೆರೆಯಿಂದ ಸೀತೆಯ ಬಿಡುಗಡೆ

•ರಾಜಾರಾಮನಾಗಿ ಪ್ರಜಾವತ್ಸಲನಾಗಿ ಪ್ರಜೆಗಳ ಮಾತಿಗೆ ಕಟ್ಟುಬಿದ್ದು ಸೀತಾಪರಿತ್ಯಾಗ...

ಇದು ನಮ್ಮ ರಾಮನ ಜೀವನ-ಜೀವವಿಕಾಸದ ಪರಿ!


 ಲಕ್ಷ್ಮಣನು ಸೀತೆಯನ್ನು ವಾಲ್ಮೀಕಿ ಮಹರ್ಷಿಗಳ ಆಶ್ರಮದ ಬಳಿ ಬಿಟ್ಟು ಮರಳಿ ಅಯೋಧ್ಯೆಗೆ ಬರುವ ಹೊತ್ತಿಗೆ ನಾಲ್ಕು ದಿನಗಳಾಗಿದ್ದವು.ಇಷ್ಟು ದಿನಗಳ ಕಾಲವೂ ರಾಮ ರೋದಿಸುತ್ತಲೇ ಇದ್ದನು.

ಲಕ್ಷ್ಮಣನು ಅಣ್ಣನ ಬಳಿ ಸಾರಿದನು.ಅಣ್ಣನ ದಯನೀಯ ಸ್ಥಿತಿಯನ್ನು ಕಂಡು ದುಃಖಿಸಿದನು.

ಸೀತೆಯನ್ನು ವಾಲ್ಮೀಕಿ ಮಹರ್ಷಿಗಳ ಆಶ್ರಮದ ಬಳಿ ಬಿಟ್ಟು ಬಂದುದನ್ನು ದೈನ್ಯದಿಂದ  ನಿವೇದಿಸಿದನು. ಕೂಡಲೇ ಸಾವರಿಸಿಕೊಂಡು ಅಣ್ಣನಿಗೆ ಸಾಂತ್ವನದ ಮಾತುಗಳನ್ನು ಹೇಳಿದನು-

ಪುರುಷ ಶ್ರೇಷ್ಠನೇ,

ದುಃಖಿಸಬೇಡ.

ಕಾಲಗತಿಯೇ ಇಂತಹುದು.

ಬುದ್ಧಿವಂತನಾದ ದೃಢಚಿತ್ತನಾದ ನೀನು  ದುಃಖಿಸುತ್ತಾ ಇರಬಾರದು.

ಸಂಯೋಗ-ವಿಯೋಗ,

ಹುಟ್ಟು-ಸಾವುಗಳು ಪ್ರಪಂಚದಲ್ಲಿ ಇದ್ದೇ ಇರುತ್ತವೆ.ಆದುದರಿಂದ ಯಾರಲ್ಲೂ ಯಾವುದರಲ್ಲೂ ಹೆಚ್ಚು ಆಸಕ್ತನಾಗಬಾರದು.

ಸಮಸ್ತ ಲೋಕಗಳನ್ನು ನಿಯಂತ್ರಿಸುವ ನೀನು ನಿನ್ನ ಶೋಕವನ್ನು ನಿಯಂತ್ರಿಸಲಾರೆಯಾ? 

ನೀನು ಹೀಗೇ ಶೋಕಪಡುತ್ತಾ ಇದ್ದರೆ 'ಹೆಂಡತಿಯನ್ನು ಕಾಡಿಗಟ್ಟಿದ ರಾಮ ಅರಮನೆಯೊಳಗೆ ಶೋಕಮಗ್ನನಾಗಿದ್ದು ಪ್ರಜೆಗಳ ಯೋಗ ಕ್ಷೇಮ ನೋಡುತ್ತಾ ಇಲ್ಲ ' ಎಂಬ ಇನ್ನೊಂದು ಲೋಕಾಪವಾದಕ್ಕೆ ನೀನು ಗುರಿಯಾಗುತ್ತೀಯ.

ಸಂತಾಪ ಬಿಡು.ಮನವನ್ನು ಧೈರ್ಯದಿಂದ ಏಕಾಗ್ರಗೊಳಿಸಿ ಕಾರ್ಯೋನ್ಮುಖನಾಗು-ಎಂದು ಸಂತೈಸಿ ರಾಜನು ಮಾಡಬೇಕಾದ ಕರ್ತವ್ಯಗಳನ್ನು ನೆನಪಿಸಿದನು.

ರಾಮ ಸಹಜ ಸ್ಥಿತಿಗೆ ಬಂದ.

ತನ್ನನ್ನು ಎಚ್ಚರಿಸಿದ ಲಕ್ಷ್ಮಣನನ್ನು ಕೊಂಡಾಡಿದ.

ತಾನು ದುಃಖದಿಂದ ಕಳೆದ ನಾಲ್ಕು ದಿನಗಳಿಂದ ಪ್ರಜಾಕಾರ್ಯಗಳಿಂದ ವಿಮುಖನಾದುದನ್ನು ನೆನಪಿಸಿದ.ಬಳಿಕ; ಕೂಡಲೇ ತನ್ನ ಭೇಟಿಗೆ ಬಂದಿರುವ ಪ್ರಜೆಗಳನ್ನು ಸಭಾಭವನಕ್ಕೆ ಕರೆತರಲು ಲಕ್ಷ್ಮಣನಲ್ಲಿ ಹೇಳಿದ. 

ರಾಮರಾಜ್ಯ ಮರಳಿ ಹಳಿಗೆ ಬಂತು.



ಲಕ್ಷ್ಮಣನಿಗೆ ಪಾಪ ಪ್ರಜ್ಞೆ ಬರಬಾರದೆಂದೂ,ಅದರಿಂದ ಅವನು ತೊಳಲಿ ಬಳಲುತ್ತಿರಬಾರದೆಂದು ಸುಮಂತ್ರನು ದುರ್ವಾಸರ-ದಶರಥರ ಭೇಟಿಯ ಘಟನೆಯನ್ನು ಹೇಳಿದನು.ರಾಮ ಲಕ್ಷ್ಮಣನಿಗೆ-

.ನೃಗ ಚಕ್ರವರ್ತಿಗೆ ಬಂದ ಶಾಪದ(ದಾನ ಮಾಡುವಾಗ ಎಚ್ಚರದಪ್ಪಿ ಇನ್ನೊಬ್ಬರ ದನವನ್ನು ದಾನ ಮಾಡಿದ್ದು)ಕತೆ

.ನಿಮಿ-ವಸಿಷ್ಠರು ಪರಸ್ಪರ ಶಾಪಗಳನ್ನು ಕೊಟ್ಟು ಪರಿತಪಿಸಿದ ಕತೆ

.ಜನಕರಾಜನ ಉತ್ಪತ್ತಿಯ ಕತೆ

.ಯಯಾತಿಯ ಕತೆ...

ಇವುಗಳನ್ನು ಹೇಳಿದ. ಲಕ್ಷ್ಮಣನು ಆಸಕ್ತಿಯಿಂದ ಕೇಳಿದ.

ಕತೆ ಹೇಳಿದ ರಾಮ; 

ಕತೆ ಕೇಳಿದ ಲಕ್ಷ್ಮಣ- ಇಬ್ಬರೂ ತೃಪ್ತ ರಾದರು.

ಕೊನೆಗೆ ರಾಮ- ಧರ್ಮಗಳನ್ನು ಪರಿಪಾಲಿಸುವ ಸತ್ಪುರುಷರ ವಿಚಾರಧಾರೆಯನ್ನೇ ಅನುಸರಿಸಿ ನಡೆದುಕೊಳ್ಳೋಣ

- ಎಂದು ಲಕ್ಷ್ಮಣನಲ್ಲಿ ಹೇಳಿದ. 

ಸೋದರರ ಕಟ್ಟೆಚ್ಚರದ ಸಹಾಯ, ಸುಮಂತ್ರನಂತಹ ಪ್ರಾಜ್ಞರಾದ ಮಂತ್ರಿಗಳ ಸಲಹೆಗಳೊಂದಿಗೆ ರಾಮ ತನ್ನ ವೈಯಕ್ತಿಕ ನೋವನ್ನು ಮರೆತು ರಾಜ್ಯವಾಳತೊಡಗಿದ.


ದುಃಖಿತ ರಾಜನ 

ಸುಖೀ ಪ್ರಜೆಗಳು!!


ರಾಮರಾಜ್ಯ!!


ವಿಶ್ವ


Om ShriRamaya Namaha : 187


A Bird's-eye view of Ramayana : 187


• Being Ramachandra ,Daasharathi he followed the words of his father. 

• The annihilation of Dashakanta ( the one with the 10 throats) being ShreeRama for the welfare of the world. 

• Emancipating Seetha from the clutch of Ravana being SeethaRama.

• Abandonment of Seetha being bound to the words of the subjects being Rajarama the lover of the citizens. 

• This is the way of our Rama's life and the evolution of the life !


It had been four days by the time Lakshmana reached Ayodhya after leaving Seetha near the hermitage of Valmiki Maharshi. Rama had been weeping for all those days. Lakshmana moved towards the elder brother. He lamented seeing the miserable condition of his brother. Lakshmana being humble explained Rama that he had come leaving Seetha nearby the hermitage of Valmiki Maharshi. 

Soon after composing himself, Lakshmana consoled Rama with his soothing words, where he says -

"The virtuous man, the superior among the men,

do not lament, 

this is how the divine ordinance will be.

You should not have been weeping the one who is wise and has a firm mind.

Uniting - separation 

Birth - death - will be there in the world .

Therefore one should not grow too fond of anything and anyone. 

Can't you control your own grief when you can control all the worlds ?

If you keep grieving this way, then you will be subjected to another blame by the world that Rama who has sent his wife to the forest is not looking after the interest of his subjects, being immersed in the sorrow. 

Abandon the grief. Get engrossed in your duty by being focused minded with courage " - In this way Lakshmana consoled Rama and reminded him the duties that the king had to do. 

Rama came to the normal state of the mind. He praised Lakshmana who alerted him. He remembered the four days which he had spent in grief and how he had turned away from the duties of the subjects. Later ; he told Lakshmana to bring the subjects who had come to see him to the court immediately. 

Ramaraajya returned to the track. 



Sumantra had told Lakshmana about the incident of meeting of Durvaasa and Dasharatha so that Lakshmana should not repent and suffer from that.

Rama says to Lakshmana -

• The story of the curse which was given to Nruga the emperor ( donated the cow which belonged to others unknowingly while giving charity).

• The story of Nimi - Vasishta who were grieving by cursing each other. 

• The story of the king Janaka's origin. 

• The story of Yayaathi.

- Rama narrated these stories and Lakshmana listened with interest. 

Rama who narrated the story ;

Lakshmana who listened to the stories - both were contented. At last Rama says to Lakshmana that - " Let us follow the thinking of the virtuous men who follow the righteousness ". 

Rama began to reign the kingdom by forgetting his personal sufferings along with the alerting assistance of the brothers and the suggestions of the minister Sumantra who was wise .


The happy subjects !!

of the sad king.


Ramaraajya ( the ideal state) !!


Kannada version of the story is written by- 

Shri U S Vishweshwara Bhat 

Translated by- 

Kum. Rashmi A Suvarna 

Lecturer in English,Vivekananda P U College,Puttur.


ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....