ಶ್ರೀರಾಮಾಯಣ ಹಕ್ಕಿನೋಟ -೧೬೨ Om ShriRamaya Namaha : 162

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೬೨


ಹದಿನಾಲ್ಕು ವರ್ಷಗಳ ಬಳಿಕ ಭರತನ ಮೊಗದಲ್ಲಿ ನಗುವರಳಿತು.

ಶ್ರೀರಾಮನನ್ನು ಎದುರುಗೊಳ್ಳಲು ಎಲ್ಲರೂ ಸ್ವಲ್ಪ ಮುಂದೆ ಸಾಗಿದರು.  ಸಕಲಸಿದ್ಧತೆಗಳು ಪೂರ್ಣವಾಗುವ ಹೊತ್ತಿಗೆ ಆಗಸದಲ್ಲಿ ಪುಷ್ಪಕದ ದರ್ಶನವಾಯಿತು.ಜನರು ಹರ್ಷದಿಂದ 

'ಶ್ರೀರಾಮನು ಬಂದನು,

ರಾಜಾರಾಮನು ಬಂದನು,

ಸೀತಾರಾಮನು ಬಂದನು'

ಎಂದೂ,

ಶ್ರೀರಾಮನಿಗೆ ಜಯವಾಗಲಿ, ಸೀತಾರಾಮನಿಗೆ ಜಯವಾಗಲಿ  ಎಂದು ಘೋಷಣೆಗಳನ್ನು ಕೂಗಿದರು.ಅವು ದಿಗಂತದಲ್ಲಿ ಮಾರ್ದನಿಸಿದವು.

ವಿಮಾನವಿಳಿಯಿತು.

ಭರತನನ್ನು ವಿಮಾನಕ್ಕೇ ಕರೆಸಿಕೊಂಡ ರಾಮನು ಭರತನನ್ನು ತನ್ನ ತೊಡೆಯಲ್ಲಿ ಕೂರಿಸಿ ಆಲಂಗಿಸಿ ಸೋದರನಲ್ಲಡಗಿದ್ದ ಪೀತೃಪ್ರೇಮವನ್ನು ಉಣಿಸಿದನು.(ಲಂಕೆಯಲ್ಲಿ ದಶರಥನು ರಾಮನನ್ನು ತಾನು ಬಂದ  ವಿಮಾನಕ್ಕೆ ಕರೆಸಿ ತನ್ನ ತೊಡೆಯಲ್ಲಿ ಕೂರಿಸಿದುದನ್ನು ಇಲ್ಲಿ ನೆನಪಿಸಬಹುದು)

ಭರತನು ಎಲ್ಲರಿಗೂ ವಂದಿಸಿದನು .ವಾನರರಾಜ ಸುಗ್ರೀವನನ್ನು ಸೋದರನೆಂದೇ ಕರೆದು ಮನ್ನಿಸಿದ. ವಿಭೀಷಣನನ್ನು ವಿಶೇಷವಾಗಿ  ಗೌರವಿಸಿದ.ಶತ್ರುಘ್ನನೂ ಭರತನನ್ನನುಸರಿಸಿದನು.

ರಾಮನನ್ನು ಕಾಣಲು ಎಲ್ಲರೂ ವಿಮಾನವನ್ನೇರಿದರು.ತಾಯಿ ಕೌಸಲ್ಯೆಯ ಪಾದಗಳಿಗೆ ಮಣಿದಂತೆ ಎಲ್ಲಾ ತಾಯಂದಿರ ಪಾದಗಳಿಗೆ ರಾಮ  ವಂದಿಸಿದನು.ಪುರಜನರ ಮುಗಿದ ಕೈದಾವರೆಗಳು (ಕೈಗಳ ತಾವರೆಗಳು) ಹಾಗೇ ಇದ್ದವು.ಭರತನು ತನ್ನ ತಲೆಯ ಮೇಲೆ ಹೊತ್ತು ತಂದಿದ್ದ ತಂದಿದ್ದ  ಶ್ರೀರಾಮನ ದಿವ್ಯಪಾದುಕೆಗಳನ್ನು ರಾಮನ ಪಾದಗಳಿಗೆ ತೊಡಿಸಿದನು.

'ನೀನು ನನ್ನಲ್ಲಿ ನ್ಯಾಸವಾಗಿಟ್ಟಿದ್ದ ಈ ಸಮಗ್ರ ರಾಜ್ಯವನ್ನು  ನಿನ್ನ ಚರಣಾರವಿಂದಗಳಿಗೆ ಸಮರ್ಪಿಸುತ್ತಿದ್ದೇನೆ.ನೀನು ಕೊಟ್ಟಾಗ ಇದ್ದ ಸಂಪತ್ತನ್ನು ಹತ್ತು ಪಟ್ಟು ಹೆಚ್ಚಿಸಿ ಅರ್ಪಿಸುತ್ತಿದ್ದೇನೆ'ಎಂದು ಹೇಳಿ ನಮಿಸಿದ. ಶ್ರೀರಾಮನು ಪುಷ್ಪಕವಿಮಾನದಲ್ಲಿದ್ದುಕೊಂಡು ನಂದಿಗ್ರಾಮಕ್ಕೆ ಬಂದನು.ಅಲ್ಲಿ ವಿಮಾನದಿಂದ ಕೆಳಗಿಳಿದು ವಿಮಾನವನ್ನು ಕೃತಜ್ಞತಾ ಪೂರ್ವಕವಾಗಿ ಬೀಳ್ಕೂಟ್ಟನು. ರಾಮನ ಆದೇಶದಂತೆ ವಿಮಾನವು ತನ್ನೊಡೆಯ ಕುಬೇರನಲ್ಲಿಗೆ ಹಾರಿತು.ಭರತನ ಆಶ್ರಮದಲ್ಲಿ  ಶ್ರೀರಾಮನು ವಸಿಷ್ಠರ ಚರಣಾರವಿಂದಗಳಿಗೆ ನಮಿಸಿ ಅವರು ಆಸೀನರಾದ ಬಳಿಕ ತಾನು ಮತ್ತೊಂದು ಆಸನದಲ್ಲಿ ಕುಳಿತುಕೊಂಡನು.


ವಿಶ್ವ



Om ShriRamaya Namaha : 162


A Bird's-eye view of Ramayana : 162


Smile appeared on the face of Bharatha after 14 years.

Everyone walked a bit far to welcome ShreeRama. By the time all the arrangements were made the plane appeared in the sky.

People being overjoyed proclaimed -

' ShriRama arrived,

The king of the world Rama arrived, 

SeethaRama arrived, 

and 

they all hailed for ShreeRama, which echoed even in the horizon. 

The plane came down. 

Rama showed the fatherly love which was hidden in a brother, towards Bharatha by inviting Bharatha to the plane itself and embracing him with affection ( the incident where Dasharatha invited Rama to the plane which he had come and took him on his lap can be remembered here).

Bharatha bowed down to everyone. 

He honoured the king of monkeys Sugreeva by calling him brother. 

He honoured Vibhishana specially. Shatrugna too followed Bharatha. 

Everyone climbed the plane to see Rama. Rama fell to the feet of all the mothers as he fell to the feet of his mother Kausalya. The closed palms of the inhabitants which was a gesture of the respect ( lotus hands) remained still. Bharatha put on the divine footwear of ShreeRama which Bharatha had brought carrying on his head to the feet of Rama.

He bows down to Rama by saying that -

"I am submitting the entire state which you have given me to safeguard, to your feet. I am submitting this state by increasing its wealth 10 times more than the wealth which was there the time you gave me ".

ShreeRama came to Nandigrama in ' Pushpaka Vimaana ' . He climbed down the plane and sent that off with the feeling of gratitude. As per the command of Rama the plane flew back to its master Kubera. ShreeRama fell to the feet of Vasishta in the hermitage of Bharatha and Rama be seated after Vasishta Maharshi be seated. 



Kannada version of the story is written by- 

Shri U S Vishweshwara Bhat 

Translated by- 

Kum. Rashmi A Suvarna 

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....