ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೧೫೯
ಕೃತಜ್ಞತೆ ಬದ್ಧತೆಗಳು ವಿಶೇಷವಾಗಿ ಎದ್ದುಕಾಣುವ ರಾಮನಲ್ಲಿರುವ ಅಪೂರ್ವ ಗುಣಗಳು.
ತನಗೆ ನೆರವಾಗುವ ವಚನ ಬದ್ಧತೆಯ ನೆಲೆಯಲ್ಲಿ ಸುಗ್ರೀವನಿಗೆ ಪಟ್ಟಾಭಿಷೇಕ ಮಾಡಿದ.
ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿದ ಬಳಿಕ ಯುದ್ಧ, ಯುದ್ಧದ ಬಳಿಕ ಮತ್ತೆ ವಿಧ್ಯುಕ್ತ ಪಟ್ಟಾಭಿಷೇಕ ಮಾಡಿದ.
ಬಂದ ಕಾರ್ಯ ಮುಗಿದ ತತ್ಕ್ಷಣವೇ ಭರತನನ್ನು ಕಾಣಲು ,ಅವನಿಗಿತ್ತ ವಚನವನ್ನು ಪೂರೈಸಲು ಅಯೋಧ್ಯೆಗೆ ಮರಳುವ ಸಿದ್ಧತೆ ಕೈಗೊಂಡ.
ಸುರಿಸಬೇಕಾದ ಕಣ್ಣೀರನ್ನೆಲ್ಲಾ ಸೀತೆಯು ಲಂಕೆಯಲ್ಲೇ ಸುರಿಸಿದಳು.
ಪ್ರಸನ್ನ 'ಚಿತ್ತ -ವದನ'ಗಳ ಸೀತಾರಾಮ!ಸೀತಾ-ರಾಮರು!!
ಬಂದ ಕಾರ್ಯ ಸಂದಿತು.
ಮಾನುಷ ಪ್ರಯತ್ನಕ್ಕೆ ಯಥೇಚ್ಛವಾಗಿ ದೈವಾನುಗ್ರಹ ಸಿಕ್ಕಿತು.
ಧರ್ಮದ ಹಾದಿಯಲ್ಲಿ ನಡೆದವ ಸೋತು
ಬಸವಳಿದರೂ ಕೊನೆಗೆ
ಶಾಶ್ವತ ಗೆಲುವನ್ನು ಪಡೆದ.
ತಾನು ಅಳಿಯದೆ ಉಳಿದು ಬೆಳೆದು ತನ್ನವರನ್ನು ಉಳಿಸಿ ಬೆಳೆಸಿದ.
ಅಧರ್ಮದ ಹಾದಿಯನ್ನು ತುಳಿದವ ತಾನೂ ಅಳಿದು, ತನ್ನವರನ್ನೂ ಅಳಿಸಿದ.
ಅಳಿದುಳಿದವರು ಅಳುತಿರುವಂತೆ ಮಾಡಿದ.
ಕರ್ತವ್ಯದ ಕರೆ,
ಭರತನ ದಯನೀಯ ಕರೆ,
ತಾಯಂದಿರ ಮಮತೆಯ ಕರೆಗಳು
ರಾಮನ ಕಿವಿಗಳಿಗೆ ಬೀಳತೊಡಗಿದವು,
ಎದೆಯನ್ನು ಮೀಟತೊಡಗಿದವು.
ತಾಳದಾದ;ನಿಂತಲ್ಲಿ ನಿಂತಿರದಾದ.
ವಿಭೀಷಣನನ್ನು ಕರೆದು ತನ್ನ ಇಂಗಿತವನ್ನು ಹೇಳಿದ. ವಿಭೀಷಣನು ಒಂದೆರಡು ದಿನಗಳ ಕಾಲ ತನ್ನ ಆತಿಥ್ಯವನ್ನು ಸ್ವೀಕರಿಸಲು ಕೋರಿದಾಗ ರಾಮನು ಕೋಸಲದ ಕರೆಯನ್ನು, ತನಗಾಗಿ ಕಾಯುತ್ತಿದ್ದ ಭರತನನ್ನು ನೆನಪಿಸಿದ. ರಾಮನ ನಿರ್ದೇಶನದಂತೆ
ವಿಭೀಷಣನು ವಾನರವೀರರನ್ನು ಕೃತಜ್ಞತೆಯಿಂದ ಸಂಮಾನಿಸಿ ಸತ್ಕರಿಸಿದ.
ಪುಷ್ಪಕ ವಿಮಾನದ ಉಡುಗೊರೆಯನ್ನಿತ್ತ.
ಅಯೋಧ್ಯೆಗೆ ಹೊರಟುನಿಂತಾಗ
ವಿಭೀಷಣ ಮತ್ತು ವಾನರಸೇನಾಧಿಪತಿಗಳು ತಮ್ಮನ್ನೂ ಅಯೋಧ್ಯೆಗೆ ಕರೆದೊಯ್ಯುವಂತೆ,ಪಟ್ಟಾಭಿಷೇಕವನ್ನು ನೋಡಲು ಅನುವು ಮಾಡುವಂತೆ ಪ್ರಾರ್ಥಿಸಿದರು. ರಾಮನು ಸಂತಸದಿಂದ ಒಪ್ಪಿದನು.ಎಲ್ಲರೂ ನೋಡು ನೋಡುತ್ತಿದ್ದಂತೆಯೇ ರಾಮನು ಲಜ್ಜಿತ ಸೀತೆಯನ್ನು ಕಂಕುಳದಲ್ಲೆತ್ತಿಕೊಂಡು ವಿಮಾನವನ್ನೇರಿದನು.
ಲಕ್ಷ್ಮಣನ ಸಹಿತ ಎಲ್ಲರನ್ನು ಹೊತ್ತ ವಿಶೇಷವಾಗಿ ಅಲಂಕರಿಸಲ್ಪಟ್ಟ ಪುಷ್ಪಕವಿಮಾನವು ಅಯೋಧ್ಯೆಯತ್ತ ಹಾರಿತು.
"....ಜನನೀ ಜನ್ಮ ಭೂಮಿಶ್ಚ
ಸ್ವರ್ಗಾದಪಿ ಗರೀಯಸಿ" ಶ್ಲೋಕವಾಗಲೀ;
ಆ ಸಂದರ್ಭವಾಗಲೀ ವಾಲ್ಮೀಕಿ ರಾಮಾಯಣದಲ್ಲಿಲ್ಲ!
ವಿಶ್ವ
Om ShriRamaya Namaha : 159
A Bird's-eye view of Ramayana : 159
Commitment and Gratitude are the unique attributes of ShriRama and they are highlighted here.
Sugreeva kept his promise of helping him so ShreeRama coronated him.
After coronating Vibhishana ,the war , after the war he coronated him again formally. Soon after accomplishing the work that he had come for, he made arrangements to return to Ayodhya to see Bharatha and to fulfill the promise that he had given to him.
Seetha shed all the tears in Lanka itself which she had to shed.
Seetha Rama of the happy and the pleasant faces and minds.
Seetha - Rama !!
The duty which he had come for was accomplished.
The effort of a man got abundance grace and blessings of the God.
The one who walked in the path of righteousness, obtained the eternal victory at the end though he struggled and was defeated.
Without being perished ,he survived, grew and he saved and raised his people too.
The one who walked in the path of unrighteousness got perished and he perished his own people along with himself.
He made those who remained lament.
The call of responsibility,
The pathetic call of Bharatha,
The compassionate call of the mothers,
began to fall into the ears of Rama.
They began to touch his heart.
Unable to bear ; unable to stand.
He called Vibhishana and expressed his intentions.
When Vibhishana requested Rama to accept his hospitality for two more days ,Rama reminded him the call of Kosala and Bharatha who had been waiting for him. As per the guidance of Rama ,Vibhishana offered hospitality to the monkey warriors by treating them cordially.
He presented ' Pushpaka Vimaana '.
When Rama was about to leave for Ayodhya; Vibhishana and the chief commanders of the monkey armies prayed to Rama to take them to Ayodhya along with him and to permit them to witness the coronation for which Rama agreed happily. As everyone was watching Rama climbed Pushpaka Vimaana by taking Seetha in his arms who was shy.
Pushpaka Vimaana which had been decorated uniquely and which carried everyone including Lakshmana flew towards Ayodhya.
" Api swarnamayee... jananee janma bhoomishta swargaadapi gareeyasi " - Neither this verse nor that circumstance is there in Valmiki Ramayana.
Kannada version of the story is written by-
Shri U S Vishweshwara Bhat
Translated by-
Kum. Rashmi A Suvarna
Lecturer in English,Vivekananda P U College,Puttur.
ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ




No comments:
Post a Comment
Please leave your comments here.....