ಶ್ರೀರಾಮಾಯಣ ಹಕ್ಕಿನೋಟ -೧೫೫ A Bird's-eye view of Ramayana : 155

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೫೫


 ರಾಮ-ರಾವಣರ ಯುದ್ಧ ನೋಡಲು ಸ್ವರ್ಗದಿಂದ ಬಂದವರು ಮರಳಿ ಸ್ವರ್ಗಕ್ಕೆ  ತೆರಳಿದರು.ಉಳಿದವರು ತಮ್ಮ ತಮ್ಮ ಸ್ಥಳಗಳಿಗೆ ಮರಳಿದರು.


 ವಚನಬದ್ಧ ರಾಮ,ಸತ್ಯಸಂಧ ಶ್ರೀರಾಮ ಲಕ್ಷ್ಮಣನಲ್ಲಿ ವಿಭೀಷಣನಿಗೆ ಲಂಕಾರಾಜ್ಯದ ಪಟ್ಟಾಭಿಷೇಕವನ್ನು  ಮಾಡಲು ಹೇಳಿದ.ತತ್ಕ್ಷಣವೇ ಕಾರ್ಯ ಪ್ರವೃತ್ತನಾದ ಲಕ್ಷ್ಮಣನು ವಿಭೀಷಣನಿಗೆ ವಿಧಿವತ್ತಾಗಿ ಪಟ್ಟಾಭಿಷೇಕವನ್ನು ಮಾಡಿದ.ವಿಭೀಷಣನು ಲಂಕೆಯ ರಾಜನಾದ.ರಾಮ ಲಕ್ಷ್ಮಣರು ಸಂತಸಪಟ್ಟರು.


 ರಾಮ ಹನುಮನನ್ನು ಕರೆದು ವಿಭೀಷಣನ ಅನುಮತಿ ಪಡೆದು ಮೈಥಿಲಿಗೆ ಕುಶಲ ಸಮಾಚಾರನ್ನು ತಿಳಿಸಿ ಅವಳ ಸಂದೇಶವನ್ನು ತರಲು ಹೇಳಿದ.

ಹನುಮನು ರಾಮಾಜ್ಞೆಯನ್ನು ಶಿರಸಾವಹಿಸಿ ಸೀತಾಮಾತೆಗೆ ಚುಟುಕಾಗಿ ನಡೆದ ಘಟನೆಗಳನ್ನು, ರಾಮ ಲಕ್ಷ್ಮಣ ಸುಗ್ರೀವರ ಕ್ಷೇಮವನ್ನೂ ತಿಳಿಸಿದ.ರಾಮನ ಸಂದೇಶವನ್ನು ಹೇಳಿದ.ಸೀತೆ ತುಂಬಾ ಸಂತೋಷ ಪಟ್ಟಳು.ಆಗ ಹನುಮನು ಸೀತೆಯಲ್ಲಿ - ನಿನಗೆ ತುಂಬಾ ಹಿಂಸೆ ನೀಡಿದ ಈ ರಕ್ಕಸಿಯರನ್ನು ನೀನು ಅನುಮತಿಸಿದರೆ ಸಂಹರಿಸುತ್ತೇನೆಂದು ಹೇಳಿದ.ಆಗ ಕರುಣಾಮಯಿ  ಸೀತೆಯು ರಾವಣನ ದಾಸಿಯರಾಗಿದ್ದ ಅವರು ಅವನಾಣತಿಯನ್ನು ಪಾಲಿಸಲೇ ಬೇಕಿತ್ತು. ಅವರು ಅಸಹಾಯಕರು.ಈ ಪ್ರಪಂಚದಲ್ಲಿ ಅಪರಾಧ ಮಾಡದವರಾರು?ಯಾರಿಗೂ ಕೇಡನ್ನು ಬಗೆಯಬಾರದು ಎನ್ನುತ್ತಾ ತನ್ನ ದಯಾಗುಣವನ್ನು ತೋರಿ ಅವರೆಲ್ಲರನ್ನೂ ಕ್ಷಮಿಸಿದಳು.(ಇಂದ್ರಜಿತುವನ್ನು ಕೊಲ್ಲಲು ಲಕ್ಷ್ಮಣನು ಬ್ರಹ್ಮಾಸ್ತ್ರ ಪ್ರಯೋಗಿಸುತ್ತೇನೆ ಎಂದಾಗ ರಾಮನು ಅವನನ್ನು ತಡೆದು ಒಬ್ಬನಿಗಾಗಿ ಇಡೀ ರಾಕ್ಷಸ ಕುಲವನ್ನು ನಾಶಮಾಡುವುದೊಳಿತಲ್ಲ ಎಂದಿದ್ದನ್ನು ಇಲ್ಲಿ ನೆನಪಿಸಬಹುದು)ಬಳಿಕ ಹನುಮನಿಗೆ- "ದ್ರಷ್ಟುಮಿಚ್ಛಾಮಿ ಭರ್ತಾರಂ ಭಕ್ತವತ್ಸಲಮ್" ಭಕ್ತವತ್ಸಲನಾದ ನನ್ನ ಪತಿಯನ್ನು ಕಾಣಲು ಬಯಸುತ್ತೇನೆ- ಎಂಬ ಸಂದೇಶವನ್ನು ಹೇಳಿ ಕಳಿಸಿದಳು.


ಸೀತೆಯನ್ನು ಬೀಳ್ಕೊಟ್ಟ  ಹನುಮನು ರಾಮನಲ್ಲಿಗೆ ಬಂದು ಸೀತಾಸಂದೇಶವನ್ನು ಹೇಳಿದ. ಒಂದು ಕ್ಷಣ ಚಿಂತಾಮಗ್ನನಾದ ರಾಮ ಕಣ್ಣೀರು ತುಂಬಿ ನೆಲವನ್ನು ನೋಡುತ್ತಾ ವಿಭೀಷಣನಲ್ಲಿ- ವಿಭೀಷಣ! ಅಭ್ಯಂಜನ ಸ್ನಾನ ಮಾಡಿಸಿ,ಸರ್ವಾಲಂಕಾರ ಭೂಷಿತೆಯಾದ ಸೀತೆಯನ್ನು ಬೇಗನೇ ಇಲ್ಲಿಗೆ ಕರೆದು ಕೊಂಡು ಬಾ-ಎಂದು ಹೇಳಿದ. 

ಕೂಡಲೇ ವಿಭೀಷಣನು ತನ್ನ ಮಡದಿಯರೊಂದಿಗೆ ಸೀತೆಯನ್ನು ಕಂಡು ರಾಮಾಜ್ಞೆಯನ್ನು ತಿಳಿಸಿದನು.ಸುರುವಿಗೆ ಸೀತೆಯು ನಾನು ಹೀಗೇ ರಾಮನನ್ನು  ಕಾಣಲು ಬಯಸುತ್ತೇನೆ ಎಂದಳು.ಆದರೆ ವಿಭೀಷಣನು ಇದು ರಾಮಾಜ್ಞೆ ಎಂದಾಗ ಮರುಮಾತಿಲ್ಲದೆ ಒಪ್ಪಿದಳು.

ಸರ್ವಾಲಂಕಾರ ಭೂಷಿತೆಯಾದ ಸೀತೆಯನ್ನು ಪಲ್ಲಕ್ಕಿಯಲ್ಲಿ ಶ್ರೀರಾಮನಿದ್ದಲ್ಲಿಗೆ ಕರೆದು ಕೊಂಡು ಬಂದರು.



(ಶ್ರೀರಾಮ ವಿಭೀಷಣರು ಇಲ್ಲಿ ಪಾಲಿಸುತ್ತಿರುವ ಶಿಷ್ಟಾಚಾರದ ಕ್ರಮ,ಪರಸ್ಪರ ಗೌರವಿಸುವ ಕ್ರಮ ಗಮನಾರ್ಹ)


ವಿಶ್ವ


Om ShriRamaya Namaha : 155


A Bird's-eye view of Ramayana : 155


Those who had arrived from the heaven to witness the war between Rama and Ravana, returned to the heaven. The rest returned to their respective places. 


Rama ,the man of words, ShriRama the man of integrity told Lakshmana to coronate Vibhishana the king of Lanka. The very next moment, Lakshmana being engaged in the work, coronated  Vibhishana formally. Vibhishana became the king of Lanka. Rama and Lakshmana expressed their happiness. 


Rama with the consent of Vibhishana, told Hanuman to convey their well-being to Maithili ( Seetha) and to bring message from her. Hanuman followed the command of Rama. He went to Seethamaatha and narrated the incident that had happened so far briefly and told her about the well-being of Rama, Lakshmana and Sugreeva. He conveyed the message of Rama. Seetha felt very happy. During the time Hanuman told Seetha that he would kill the monster women who tortured her so much ,if she would permit him. During the time the kind Seetha told him that they had to follow the command of Ravana since they were the servants of Ravana. She said that they were helpless. She questions him " who doesn't make mistakes in this world ?"  She said that no one should be harmed and she forgave everyone with her kind nature. 

( The incident, when Lakshmana said that he would try out Brahmaastra to slay Indrajith  ,Rama told him that it would not be right to kill the entire clan of monsters for the sake of one ,can be remembered here ). Later she told Hanuman to convey her message to Rama where she says -

" Drashtumichhami bhartharam bhaktavatsalam "

Which means, she wishes to see her husband who is compassionate of devotees. 


After sending off Seetha, Hanuman came back to Rama and conveyed the message of Seetha. The tears accumulated in the eyes of Rama who became emotional and anxious for a moment. By fixing eyes on the ground he told Vibhishana to bring Seetha immediately by giving her bath after applying oil and by beautifying her with ornaments. 

Soon Vibhishana visited Seetha along with his wives and informed her about the command of Rama. Initially Seetha said that she wished to see Rama as she was. But she agreed without uttering a word further when Vibhishana said that it was the command of Rama. 

Seetha who was adorned with all the ornaments brought in the palanquin to the place where Rama was in. 



( The way how ShreeRama and Vibhishana were following the formalities of protocol and respecting each other here is noticeable).


Kannada version of the story is written by- 

Shri U S Vishweshwara Bhat

Translated by- 

Kum. Rashmi A Suvarna 

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....