ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ-೯೭
ಹನುಮ ನೋಡಿದ ಲಂಕೆಯಲ್ಲಿ ಇಲ್ಲದ್ದೇನು!?ಇರದಿದ್ದುದೇನು!? ಎಲ್ಲವೂ ಎಲ್ಲರೂ!!ಚಂದ್ರನೂ ನಿಷ್ಕಳಂಕಿತನಾಗಿ ತನ್ನ ಸಂಪೂರ್ಣ ಪ್ರಭೆಯಿಂದ ಲಂಕೆಯನ್ನು ಬೆಳಗಿದ್ದನು.
ಸಾತ್ವಿಕರಿದ್ದರು,ರಾಜಸರು ಮೆರೆದಿದ್ದರು.ತಾಮಸಿಗಳು ವಿಜೃಂಭಿಸಿದ್ದರು.
ಅರಮನೆ, ಅಂತ:ಪುರ,ಉದ್ಯಾನ,ರಾವಣನ ಸೋದರರ ಅರಮನೆ,ರಾವಣನ ಮಕ್ಕಳ ಮನೆ,ಸಚಿವರ ಗೃಹ..... ಎಲ್ಲೆಂದರಲ್ಲಿ! ಮಾರುತಿ ಎಲ್ಲೆಲ್ಲಿ ಎಂತೆಂತಹ ವೇಷ ಬೇಕೋ ಅಂತಹ ಮಾರುವೇಷಗಳಲ್ಲಿ ಹುಡುಕಿದ.ಆದರೆ...ಸೀತೆ ಇಲ್ಲ.ರಾವಣನ ಪಕ್ಕದಲ್ಲಿ ಹಾದು ಹೋದರೂ ಅವನ ಗಮನಕ್ಕೆ ಹನುಮ ಬರಲೇ ಇಲ್ಲ!! ಅಷ್ಟೂ ಎಚ್ಚರ.ಯಾಕೆಂದರೆ ರಾಮ ಕಾರ್ಯ ದೂತನಿಂದಾಗಿ ಕೆಡಬಾರದಲ್ಲ! ಮಾರುತಿ ಅಂತಿಂಥ ದೂತನೇ?
ಎಲ್ಲಾ ರೀತಿಯ ಸ್ತ್ರೀಯರು ಕಾಣಸಿಕ್ಕರು! ನೋಡಬಹುದಾದ ನೋಡಬಾರದ ಸ್ಥಿತಿಯಲ್ಲಿರುವವರೂ ಸಿಕ್ಕಿದರು! ಸೀತಾಮಾತೆಯನ್ನು ಬಿಟ್ಟು! ಕೃಶಳಾಗಿರುವ,ಕಣ್ಣೀರು ಹರಿಸುತ್ತಿರುವ,ಭಯ ಸೂಸುವ ಕಂಗಳುಗಳಿಂದ ಅತ್ತಿತ್ತ ನೋಡುತ್ತಾ ರಾಮನಿಗಾಗಿ ಕಾಯುವ ಹಂಬಲಿಸುವ ಸೀತಮ್ಮ ಹನುಮನಿಗೆ ಕಾಣಸಿಗಲೇ ಇಲ್ಲ.ಹನುಮ ನಿರಾಸೆಗೊಂಡ, ದುಃಖಗೊಂಡ, ಆತಂಕಗೊಂಡ, ಇನ್ನೆಲ್ಲಿ - ಹೇಗೆ ಹುಡುಕಲಿ ಎಂದು ಚಿಂತಿಸ ತೊಡಗಿದ.
ಇವುಗಳೆಲ್ಲದರ ನಡುವೆ ಕುಬೇರನಿಂದ ರಾವಣನು ಸೆಳೆದು ತಂದೆ ಪುಷ್ಪಕ ವಿಮಾನದ ಅಂದಚೆಂದವನ್ನು ಎರಡೆರಡು ಬಾರಿ ಎಂಬಂತೆ ನೋಡಿ ಅದನ್ನು ರಚಿಸಿದ ವಿಶ್ವಕರ್ಮನ ಕುಶಲತೆಯನ್ನು ಮನದಲ್ಲೇ ಕೊಂಡಾಡಿದ!! ಅದನ್ನೇರಿ ನೋಡಿದ!ಊಂ ಹೂಂ ಸೀತಮ್ಮನ ಸುಳಿವಿಲ್ಲ! ರಾವಣನ ಅಂತ:ಪುರವನ್ನು ಜಾಲಾಡಿದ.ನಿಟ್ಟುಸಿರೇ ಗತಿ!
ರಾವಣನ ದಿವ್ಯಶಾಲೆಯನ್ನು ನೋಡಿದ.ರಾಜರ್ಷಿ-ದ್ವಿಜ-ದೈತ್ಯ-ಗಂಧರ್ವ-ರಾಕ್ಷಸಕನ್ಯೆಯರಲ್ಲಿ ಹೆಚ್ಚಿನ ಎಲ್ಲರೂ ಅವನಿಗೊಲಿದು ಬಂದು ಅವನ ರಾಣಿಯರಾದವರು ಅಲ್ಲಿದ್ದರು.ರಾವಣನು ಸೀತಾದೇವಿಯನ್ನು ಬಿಟ್ಟು ಬೇರೆ ಯಾರನ್ನೂ ಅವರ ಇಚ್ಛೆಗೆ ವಿರುದ್ಧವಾಗಿ ಸೆಳೆದು ತಂದಿರಲಿಲ್ಲ.ಹನುಮ ಹೀಗೂ ಯೋಚಿಸಿದ-ಇವನ ಹೆಂಡತಿಯರಿರುವಂತೆ ರಾಮಸತಿಯೂ ತನ್ನ ಪತಿಯೊಂದಿಗೆ ವಿಹರಿಸುವಂತಿದ್ದರೆ ರಾವಣನು ಜನ್ಮ ಸಾರ್ಥಕವಾಗುತ್ತಿತ್ತು- ಎಂದು!
ಹುಡುಕುತ್ತಾ ಹುಡುಕುತ್ತಾ ಕೊನೆಗೆ ಮಂಡೋದರಿಯನ್ನು ಕಂಡನು.ಇವಳೇ ಸೀತಾಮಾತೆಯೆಂದು ಬಗೆದು ಸಂತಸಗೊಂಡನು.ತನ್ನದೇ ಆದ ಕಪಿ ಚೇಷ್ಟೆಗಳನ್ನು ಮಾಡುತ್ತಾ ತನಗಾದ ಆನಂದವನ್ನು ಆನಂದಿಸಿದನು.
ವಿಶ್ವ
Om ShriRamaya Namaha : 97
A Bird's-eye view of Ramayana : 97
What were not there in the Lanka that Hanuman had seen !?
What was not there !? Everything ,everyone !!
The moon had lightened Lanka flawlessly with his complete brightness.
The pious people, the kings were flaunting, the monsters celebrated.
The palace, harem ,garden,the place of Raavana's siblings ,the residence of Raavana's offsprings, the residence of ministers....everywhere ! Maaruthi searched Seetha by disguising himself in different forms according to the palace that he visited in Lanka. But...Seetha was not found anywhere. Though Hanuman passed right infront of Raavana, he could not notice Hanuman. Hanuman was very cautious !! Because the deed of Rama should not be spoiled by a messenger !
Was Maaruthi an ordinary messenger ?
All kinds of women were seen !
He saw the women who could be seen and also who could not be seen ! Except the mother Seetha !
Hanuman could not see Seetha who had become weak, who was shedding tears, looking at here and there and who had been awaiting Rama with the eyes filled with fear. Hanuman was disappointed, felt sad, became anxious and began worrying about the ways to search Seetha.
In between all these ,Hanuman was enjoying the beauty of the 'Pushpaka Vimaana' again and again,which Ravana had taken away from Kubera . And he praised the skill of Vishwakarma who had built the mesmerizing 'Pushpaka Vimaana'!
He climbed up the Pushpaka Vimaana and looked for Seetha ! But there was no sign of Mother Seetha !
Searched everywhere in the harem of Raavana !
Took a deep sigh of disappointment !
He saw the enchanting school of Raavana which was filled with women. Among the princesses - Dwija - Giants- Celestial beings - Demon maidens, most of them had come there as the queens of Raavana with their own will and wish. Raavana had not brought any woman against her will forcefully except Seetha Devi. Hanuman thought that the life of Raavana would have been fruits if it was possible for Seetha to relax with her husband Rama ,in the same way how the wives of Ravana were relaxing there.
Hanuman kept on searching Seetha. While looking for Seetha, he saw Mandodari. He was overjoyed by assuming Mandodari as Seetha. He was in a state of elation. He enjoyed the moment by doing his monkey mischieves.



No comments:
Post a Comment
Please leave your comments here.....