ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೯೬
"ಸಾವಿರಾರು ಯೋಜನಗಳನ್ನು ಅನಾಯಾಸವಾಗಿ ಹಾರಬಲ್ಲವಿಗೆ ನೂರು ಯೋಜನೆ ಯಾವ ಲೆಕ್ಕ??"
ಕಡಲು ದಾಟಿ ಬಂದ ಉತ್ಸಾಹೀ ಮಾರುತಿಯ ಉದ್ಗಾರ!!
ಸುಂದರವಾದ ವನಗಳಿಂದ ಕೂಡಿದ ಲಂಬ ಪರ್ವತದಿಂದ ಸುಂದರ ಲಂಕಾ ನಗರಿಯನ್ನು ಮಾರುತಿಯು ನೋಡಿದನು.
ಅವನ ಕಣ್ಣಿಗೆ ಅದು ಅಂದದ ಯುವತಿಯಂತೆಯೇ ಕಂಡಿತು.
ರಕ್ಕಸರಿಂದ ರಕ್ಷಿಸಲ್ಪಡುತ್ತಿರುವ ಲಂಕೆಯನ್ನು ಹೊಗುವದು ಹೇಗೆ?
ಒಳಗೊಳಗೂ ರಕ್ಕಸರಿಂದಲೇ ತುಂಬಿರುವ; ಕಾಯಲ್ಪಡುತ್ತಿರುವ ಸೀತಾಮಾತೆಯನ್ನು ಹುಡುಕುವುದು ಹೇಗೆ?
ರಾಮ ಕಾರ್ಯ ಕೆಡದಂತೆ ಮುಂದುವರೆಯುವುದು ಹೇಗೆ?.... ಇಷ್ಟೆಲ್ಲಾ ಪ್ರಶ್ನೆಗಳಿದ್ದರೂ....
ವೀರರಾದ ರಾಮ ಲಕ್ಷ್ಮಣರನ್ನು ನೆನೆಯುತ್ತಲೇ ಹೊಸ ಹುರುಪು ಬಂತು.ಮಾರುತಿ ಮುಸ್ಸಂಜೆಯ ಹೊತ್ತಿನಲ್ಲಿ ಲಂಕೆಯನ್ನು ಪ್ರವೇಶಿಸಿದ!
ಓಹ್!!
ಒಳ ಹೊಗುತ್ತಲೇ ಲಂಕಾಧಿದೇವತೆಯು ಅವನನ್ನು ತಡೆದು ಪ್ರಶ್ನಿಸಿದಳು.ತಾನು ಲಂಕೆಯನ್ನು ನೋಡಬಂದ ಪ್ರವಾಸಿ ಎಂದರೂ ಮುಂದುವರೆಯಲು ಬಿಡದೆ ಹನುಮನ ಮೇಲೆ ದಾಳಿ ಮಾಡಿದಳು.ಹೇಳಿಕೇಳಿ ಸ್ತ್ರೀ.ಹನುಮ ಮೃದುವಾದ.ಆಕೆ ಮತ್ತೂ ದಾಳಿಗೆ ಬಂದಾಗ ಬಲವಾದ ಒಂದೇಟು ಬಿಗಿದ.ನೆಲಕ್ಕೆ ಬಿದ್ದಳು!ವಿವೇಕೋದಯವಾಯಿತು.
ನಾನು ಸ್ತ್ರೀ.ಹೆಚ್ಚಿನ ಶಿಕ್ಷೆ ಬೇಡವೆಂದು ಕೈಮುಗಿದು-
ವಾನರನೊಬ್ಬನು ನಿನ್ನ ಬಳಿ ಬಂದು ಯಾವಾಗ ನಿನ್ನನ್ನು ಗೆಲ್ಲುವನೋ ಆಗ ರಕ್ಕಸರಿಗೆ ಭಯವು ಒದಗಿ ಬಂತೆಂಬುದನ್ನು ನೀನು ತಿಳಿಯಬೇಕು ಎಂಬ ವರವನ್ನು ಬ್ರಹ್ಮನು ನೀಡಿದ್ದನು.ಇಂದು ಅದು ನಿಜವಾಯಿತು.ಇನ್ನು ಲಂಕೆಗೆ ಉಳಿಗಾಲವಿಲ್ಲ.ಸೀತೆಯಿಂದಾಗಿ ಲಂಕೆ ಸರ್ವನಾಶ ವಾಗುವುದು ಖಂಡಿತಾ.ಈಗಾಗಲೇ ನಾಶಗೊಂಡಿದೆ.ನೀನು ಒಳಹೊಕ್ಕು ಇಚ್ಛೆ ಬಂದಂತೆ ತಿರುಗಿ ಜಾನಕಿಯನ್ನು ಹುಡುಕು.ನಿನ್ನ ಕಾರ್ಯವು ಸಂಪೂರ್ಣವಾಗಿ ಯಶಸ್ವಿಯಾಗಲಿ-ಎಂದು ಶುಭ ಹಾರೈಸಿ ಲಂಕಾ ಪ್ರವೇಶಕ್ಕೆ ಅನುಮತಿ ನೀಡಿದಳು.
ಸಾಹಸಿಯ ಎದುರು ನಿಲ್ಲುವ ವಿಘ್ನಗಳಿವೆಯೇ??
ಲಂಕೆಯೇ ಭದ್ರಕೋಟೆ! ಇನ್ನು ಅದರೊಳಗೆ ಕೇಂದ್ರ ಭಾಗದಲ್ಲಿರುವ ರಾವಣನ ಅರಮನೆ? ಹೇಳುವುದೇನಿದೆ!? ಲಕ್ಷಸಂಖ್ಯೆಯ ಚತುರಂಗ ಬಲದಿಂದ ರಕ್ಷಿಸಲ್ಪಡುವ ದಿವ್ಯ ಭವನ!ಬಣ್ಣಿಸಲು ಶಬ್ದಗಳೇ ಸಿಗವು!ಅಂತಹ ಕೇಂದ್ರ ಸ್ಥಾನಕ್ಕೆ ರಾಮದೂತ ಅತುಲಿತ ಬಲಧಾಮ ಜಗದ ಮೊತ್ತಮೊದಲ ಪತ್ತೇದಾರ ತಲುಪಿದ!ಲಂಕೆಯ ಮಹಾನ್ ಪತ್ತೇದಾದರಿಗೆ ತಮ್ಮ ಬುಡಕ್ಕೆ ಬಿದ್ದ ಬೆಂಕಿಯ ಸುಳಿವೂ ಸಿಗದಂತೆ ಮಾರುವೇಷದ ಮಾರುತಿ ರಾವಣನ ಅಂತ:ಪುರವನ್ನೇ ಪ್ರವೇಶಿಸಿದ!!
Om ShriRamaya Namaha : 96
A Bird's-eye view of Ramayana : 96
"100 yojanas are not a big deal to fly, for the one who can fly 1000 yojanas effortlessly ".
The ejaculation of Maaruthi who had come after crossing the sea !!
Maaruthi looked at the beautiful city Lanka from the Lamba mountain which was enriched with beautiful forests.
The city Lanka appeared as a beautiful woman to the eyes of Hanuman.
How to enter Lanka which was being guarded by the monsters ?
How to find out mother Seetha who had been watched by the monsters everywhere in the city ?
How to move further without spoiling the deed of Rama ?
Though these questions arose in Hanuman, he experienced a new enthusiasm within himself when he remembered and worshipped the valiants Rama and Lakshmana . Maaruthi finally entered Lanka in the dawn ! When he entered the city, the Godess of Lanka came in his way and questioned him. She attacked him though he said that he was a tourist who had come to see the city Lanka. Hanuman stayed calm and gentle since she was a woman. But when she attacked him again he slapped her with all his might . She fell to the ground !
She got enlightened !
She requested him not to punish her further since she was a woman. Then she told him that she had been told by the lord Brahma that when she would be defeated by a monkey then she had to realize that the fear would begin in the hearts of the monsters. And the words of Brahma became true. She stated that Lanka would not survive. Lanka would be annihilated by Seetha for sure. It had already been destroyed. She told him to enter Lanka and search Seetha wherever he wished to search. She permitted him to enter Lanka and wished him good luck to accomplish his deed.
Are there any impediments for an adventurous man ?
The unthreatened and secure fort of Lanka !
What about the palace of Raavana which was there in the heart of the fort, then ?
What is there to say about that ?
It was the grand palace which was being safeguarded by the lacks of army comprising of four wings of Elephants, cavalry ,chariots and infantry. The words would not be sufficient to describe the palace of Raavana. And the first spy of the universe, who was peerless, mighty and the messenger of Rama reached such a highly safeguarded and centralized place of Lanka.
Maaruthi entered the harem of Raavana by disguising himself without being suspected by anyone. Even the great spies of Lanka could not get the clues about the fire which was put at their feet.



No comments:
Post a Comment
Please leave your comments here.....