ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೯೫
ಬಣ್ಣ ಬಣ್ಣದ ಮುಗಿಲುಗಳ ಸ್ವಸ್ಥ ಮಾರ್ಗದಲ್ಲಿ ಹನುಮನು ವಾಯುವೇಗದಲ್ಲಿ ಸಾಗುತ್ತಿದ್ದನು.ಆಗ ಒಮ್ಮೆಲೇ ಸಿಂಹಿಕೆಯೆಂಬ ರಕ್ಕಸಿಯ ಕಣ್ಣು ಇವನ ಮೇಲೆ ಬಿತ್ತು.ಒಳ್ಳೆಯ ಆಹಾರ ಸಿಕ್ಕಿತೆಂದುಕೊಂಡಳು.
ಯಾವುದೇ ಜೀವಿಯ ನೆರಳನ್ನು ಹಿಡಿದು ಜೀವಿಯನ್ನೆಳೆಯುವ ವಿಶಿಷ್ಟ ಶಕ್ತಿ ಅವಳಿಗಿತ್ತು.
ಹನುಮನನ್ನು ಅದೇ ರೀತಿ ಹಿಡಿದು ಸೆಳೆಯತೊಡಗಿದಳು.
ಹನುಮನಿಗೆ ತನ್ನ ವೇಗವು ಕಡಿಮೆಯಾಗುತ್ತಿರುವ ಅನುಭವ ಉಂಟಾಯಿತು.
ನೋಡುತ್ತಾನೆ!ಮಹಾಪ್ರಾಣಿಯೊಂದು ಸಮುದ್ರದಲ್ಲಿದ್ದು ತನ್ನನ್ನು ಸೆಳೆಯುತ್ತಿದೆ.ಸುಗ್ರೀವನು ಹೇಳಿದ್ದ ಛಾಯಾಗ್ರಾಹಕಿ ರಕ್ಕಸಿ ಸಿಂಹಿಕೆ ಇವಳೇ ಇರಬೇಕು ಎಂದು ಬಗೆದನು.ಒಮ್ಮೆಲೇ ತನ್ನ ದೇಹವನ್ನು ತುಂಬಾ ಹಿಗ್ಗಿಸಿದನು.ಸಿಂಹಿಕೆಯೂ ಅಂತೆಯೇ ಮಾಡಿದಳು.ತತ್ಕ್ಷಣ ತನ್ನ ದೇಹವನ್ನು ತುಂಬಾ ಕಿರಿದಾಗಿಸಿ ಅವಳ ದೇಹವನ್ನು ಹೊಕ್ಕು ಅವಳ ಮರ್ಮ ಸ್ಥಾನಗಳನ್ನು ಪರಚಿ ಹರಿದು ದೇಹವನ್ನು ಸೀಳಿಕೊಂಡು ಹೊರಬಂದನು.ಸಿಂಹಿಕೆ ಜೀವತೆತ್ತಳು.
ರಾಮಾಯಣದಲ್ಲಿ ತಾಟಕಿ!
ಹನುಮಾಯಣದಲ್ಲಿ ಸಿಂಹಿಕೆ!!ಹನುಮ ಮತ್ತೆ ಮುಂದೆ ಸಾಗಿದನು.
ಬ್ರಹ್ಮನ ಇಚ್ಛೆಯಂತೆ ಮಾರುತಿಯ ಕೈಯಲ್ಲಿ ಸಿಂಹಿಕೆ ಮಡಿದಳು!
ಸಾರೋಲ್ಲಂಘನೆಯ ಅಡ್ಡಿ ಆತಂಕಗಳು ನಿವಾರಣೆಯಾಗಿ ಹನುಮನು ಲಂಕೆಯ ದಡವನ್ನು ತಲುಪಿದನು.ಈಗಿನ ಬೃಹದ್ರೂಪವು ಉಚಿತವಲ್ಲವೆಂದು ಬಗೆದು ಹಿಂದಿನ ನಿಜರೂಪಕ್ಕೆ ಬಂದನು.ಲಂಕೆಯಲ್ಲಿರುವ ಸಮೃದ್ಧವಾದ ಲಂಬ ಪರ್ವತದ ಶಿಖರದಲ್ಲಿಳಿದನು.ಅಲ್ಲಿಂದ ಇಂದ್ರನ ಅಮರಾವತಿಯಂತಿರುವ ರಾವಣನ ಲಂಕಾ ಪಟ್ಟಣವನ್ನು ನೋಡಿದನು.
Om ShriRamaya Namaha : 95
A Bird's-eye view of Ramayana : 95
Hanuman was flying in the serene way of the colorful clouds. During the time, all of a sudden the eyes of a demon named Simhini fell on him. She was happy that she got good food. She had the supernatural power of drawing any creature towards her by catching its shadow. In the same way she began pulling Hanuman powerfully .
Hanuman felt his speed and force was being decreased. He saw ! A gigantic animal from the sea was pulling him towards it. He thought that she had to be the demon Simhika who would catch creatures by her sight and he was already told about her by Sugreeva. He enlarged his body all of a sudden. Simhika too enlarged herself. Hanuman decreased the size of his body immediately and entered her body. He scratched, tore the inner parts of her body and came out by splitting her body. Simhika fell dead.
Thataki in Ramayana !
Simhika in Hanumaayana !!
Hanuman moved forward.
As per the wish of the lord Brahma, Simhika was slayed by Maaruthi !.
The impediments, hurdles which were there in the way of Hanuman while flying across the sea got warded off.
Hanuman reached the shore of Lanka.
He came back to his normal appearance as the gigantic appearance was not agreeable for that situation. He landed on the summit of enriched Lamba mountain of Lanka . From there he witnessed Lanka, the city of Ravana, which appeared as Amaraavathi of lord Indra.


No comments:
Post a Comment
Please leave your comments here.....