ಶ್ರೀರಾಮಾಯಣ ಹಕ್ಕಿನೋಟ -೯೧ A Bird's-eye view of Ramayana : 91

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೯೧


ಹಕ್ಕಿಗಳಲ್ಲಿ ಹಾರುವ ಶಕ್ತಿ ಗನುಸಾರವಾಗಿ ಏಳು ರೀತಿಯ ಹಕ್ಕಿಗಳಿವೆ-

.೧-ಆಕಾಶದಲ್ಲಿ ಮೊದಲ ಮಾರ್ಗದಲ್ಲಿಹಾರುವ ಧಾನ್ಯಗಳನ್ನು ತಿಂದು ಬದುಕುವ ಗುಬ್ಬಚ್ಚಿ..ಮುಂತಾದ ಪಕ್ಷಿಗಳು.

‌.೨-ಕಾಗೆಗಳು ಮತ್ತು ಹಣ್ಣು ಹಂಪಲುಗಳನ್ನು ತಿಂದು ಬದುಕುವ ಹಕ್ಕಿಗಳು ಎರಡನೇ ಮಾರ್ಗದಲ್ಲಿ.

.೩-ಭಾಸ ಪಕ್ಷಿಗಳು,ನೀರು ಕೊಕ್ಕರೆಗಳು.. ಮೂರನೇ ಮಾರ್ಗದಲ್ಲಿ.

. ೪-ನಾಲ್ಕನೇ ಮಾರ್ಗದಲ್ಲಿ ಹಾರುವ ಗಿಡುಗ ಮುಂತಾದ ಪಕ್ಷಿಗಳು.

.೫-ಐದನೇ ಮಾರ್ಗದಲ್ಲಿ ಹಾರುವ ಹದ್ದುಗಳು.

.೬-ಆರನೇ ಮಾರ್ಗದಲ್ಲಿ ಹಾರುವ ಹಂಸ ಪಕ್ಷಿಗಳು.

.೭- ಎಲ್ಲಕ್ಕಿಂತ ಮೇಲೆ ಹಾರುವ ಗರುಡ ಪಕ್ಷಿ ಏಳನೇ ಮಾರ್ಗದಲ್ಲಿ.

ನಾವು ಈ ವರ್ಗಕ್ಕೆ ಸೇರಿದ ಹಕ್ಕಿಗಳು.ನಮಗೆ ದಿವ್ಯ ದೃಷ್ಟಿಯಿದೆ.ಕುಳಿತಲ್ಲಿಂದಲೇ ನೂರು ಯೋಜನಗಳಷ್ಟು ದೂರವಿರುವ ವಸ್ತುವನ್ನು ನೋಡಬಲ್ಲೆವು. ನನ್ನ ಮಗ ಸುಪಾರ್ಶ್ವನು ಸೀತೆಯನ್ನು ರಾವಣ ಕದ್ದೊಯ್ಯುತ್ತಿರುವುದನ್ನು ನೋಡಿದ್ದು ಅದನ್ನು ನನಗೆ ಹೇಳಿದನು. 

ಇದೀಗ ನಾನು ಕಾಣುತ್ತಿರುವುದನ್ನು ಹೇಳುತ್ತೇನೆ-


ನನಗೆ ಇಲ್ಲಿಂದಲೆ ಸೀತೆ ಕಾಣುತ್ತಿದ್ದಾಳೆ.ರೇಷ್ಮೆ ವಸ್ತ್ರವನ್ನುಟ್ಟ ಅವಳು ದೀನ ಸ್ಥಿತಿಯಲ್ಲಿದ್ದಾಳೆ. ಅವಳು ರಾಕ್ಷಸರಾಜ ರಾವಣನ ಸೆರೆಯಲ್ಲಿ ಅವನ ಅಂತ:ಪುರದಲ್ಲಿದ್ದಾಳೆ.ಲಂಕೆ ಅವನ ರಾಜಧಾನಿ.

ವಿಶ್ವಕರ್ಮನೇ ಈ ಲಂಕಾಪಟ್ಟಣದ ಶಿಲ್ಪಿ.ನೀವಿಲ್ಲಿಂದ ಸಮುದ್ರದ ದಕ್ಷಿಣ ದಿಕ್ಕಿಗೆ ಹೋಗಬೇಕು.ಬಳಿಕ ಸಮುದ್ರಲ್ಲಿ ನೂರು ಯೋಜನಗಳಷ್ಟು ದೂರವಿರುವ ಲಂಕೆಗೆ ಹೋಗಬೇಕು.ಅದಕ್ಕೆ ಬೇಕಾದ ಉಪಾಯವನ್ನು ಕಂಡುಹಿಡಿಯಿರಿ.ಶೂರರಾದ ಕಾರ್ಯತತ್ಪರರಾದ ನೀವು ಖಂಡಿತವಾಗಿಯೂ ಈ ಮಹಾಕಾರ್ಯದಲ್ಲಿ ಯಶಸ್ಸು ಗಳಿಸುವಿರಿ.ರಾಮನು ಲಂಕೆಯನ್ನು ಗೆದ್ದು ಸೀತೆಯನ್ನು ಮರಳಿ ಪಡೆಯುತ್ತಾನೆ.ಇಷ್ಟು ಹೇಳುವ ಹೊತ್ತಿಗೆ

ನೋಡು ನೋಡುತ್ತಿದ್ದಂತೆಯೇ ಸಂಪಾತಿಗೆ ರೆಕ್ಕೆಗಳು ಬಂದವು.ಮುನಿಯ ಮಾತು ನಿಜವಾಯಿತು.

ಸಾಯ ಹೊರಟ ಕಪಿವೀರರು ಹೊಸ ಹುರುಪಿನೊಂದಿಗೆ ದಕ್ಷಿಣ ದಿಕ್ಕಿಗೆ ಪಯಣ ಬೆಳೆಸಿದರು.

ಸಂಪಾತಿ ಅವರಿಗೆ ಶುಭ ಹಾರೈಸಿ ಹೊಸ ಬದುಕಿನತ್ತ ಹುಮ್ಮಸ್ಸಿನಿಂದ ಹಾರಿದನು.


Om ShriRamaya Namaha  : 91


A Bird's-eye view of Ramayana : 91


Sampaathi says :


" There are seven kinds of birds according 

   to their ability of flying. 

1. Sparrows and other birds which fly in the first range in the sky. They live by eating grains. 

2. Crows and the birds which live by eating fruits, fly in the second range.

3. Bhasa birds and stork birds fly in the third range .

4. Falcons and other birds fly in the fourth range.

5. Vultures fly in the fifth range.

6. Swans fly in the sixth range.

7. Eagles fly in the seventh range which is higher than any other birds.


We are the birds which belong to this category. We have divine sights. We are able to see things which are 100 yojanas away from the place we sit. My son Supaarshwa has seen Raavana abducting Seetha and he informed me that. Now I will tell you all what I can see -


Seetha is visible to my eyes. She is in a miserable condition who has worn silk clothes . She is captivated in the harem of the demon King Raavana . Lanka is his capital.  Vishwakarma is the sculptor of the town Lanka. You have to go to the South direction of the sea from here. Later you have to go to Lanka which is 100 yojanas away in the sea and find out required strategies for that. You all ,who are valiants and dedicated to your duty will definitely achieve success in this great deed. Rama will win Lanka and get Seetha back".


By the time he gave information about Seetha to monkeys, Sampaathi got his wings back . The words of the sage became true. The monkeys who had decided to die ,walked towards the south direction with new enthusiasm. 


Sampaathi wished them good luck and flew to start a new life with a new zeal.





No comments:

Post a Comment

Please leave your comments here.....