ಶ್ರೀರಾಮಾಯನಮ:
" ನನ್ನ ಆಜ್ಜಾನುಸಾರವಾಗಿ ಹತ್ತು ದಿವಸಗಳ ಅವಧಿಯಲ್ಲಿ ಯಾವ ದುರಾತ್ಮರು ಇಲ್ಲಿಗೆ ಬರುವುದಿಲ್ಲವೋ-ಅಂತಹವರೆಲ್ಲರೂ ಮರಣದಂಡನೆಗೆ ಗುರಿಯಾಗುತ್ತಾರೆ.ನನ್ನ ಆಜ್ಞಾಪಾಲಕರಾದ ಲಕ್ಷ ಕೋಟಿ ಸಂಖ್ಯೆಯ ವಾನರರು ಈಗಲೇ ಹೊರಡಲಿ.ಇಲ್ಲಿಗೆ ಬಂದು ಸೇರಿದ ಬಳಿಕ ನನ್ನ ಆಜ್ಜಾನುಸಾರವಾಗಿ ಇಲ್ಲಿಂದ ಪ್ರಯಾಣ ಮಾಡಲಿ..." ಇದು ಸುಗ್ರೀವಾಜ್ಞೆ!!
ತಾಗದೆ ಬಾಗದು!
ಬಿಸಿಯಾಗದೆ ಬೆಣ್ಣೆ ಕರಗದು!! ಬಿಸಿಯಾಗದೆ ಮತ್ತೂ ಕರಗದು!! ಇದು ಸುಗ್ರೀವಾಜ್ಞೆಯ ಹಿಂದಿನ ರಾಮ ರಹಸ್ಯ!
ಸುಗ್ರೀವನ ಆಜ್ಞೆ ಕ್ಷಣ ಮಾತ್ರದಲ್ಲಿ ಜ್ಯಾರಿಯಾಯಿತು.ಲಕ್ಷ್ಮಣನೊಡನೆ ಸುಗ್ರೀವನು ರಾಮನನ್ನು ಕಾಣಲು ಹೊರಡುವ ವೇಳೆಗೆ ಕೋಟಿ ಕೋಟಿ ಸಂಖ್ಯೆಯ ವಾನರ ವೀರರು ಬಂದು ಸೇರಿದರು.ಆ ವೀರರ ನಾಯಕರು ಸುಗ್ರೀವನನ್ನು ಅನುಸರಿಸಿ ರಾಮನೆಡೆಗೆ ಬಂದರು.ಸುಗ್ರೀವನು ರಾಮಚರಣಗಳಿಗೆ ವಂದಿಸಿ, ಸಿದ್ಧತೆಯನ್ನು ವಿವರಿಸಿ ಅವರೆಲ್ಲರನ್ನೂ ರಾಮನಿಗೆ ಪರಿಚಯಿಸಿದನು. ಶತಬಲಿ,ತಾರೆಯ ತಂದೆ ಸುಷೇಣ,ಹನುಮನ ತಂದೆ ಕೇಸರಿ,ರುಮೆಯ ತಂದೆ ತಾರ,ಗವಾಕ್ಷ,ಧೂಮ್ರ,ಪನಸ,ನೀಲ,ಗಯ,ಮೈಂದ-ದ್ವಿವಿದ,ಗಜ,ಜಾಂಬವಂತ(ಕರಡಿಗಳ ರಾಜ),ನಲ,ದಧಿಮುಖ.... ಮುಂತಾದ ಕಪಿ ನಾಯಕರು ಇಲ್ಲಿಗೆ ಬಂದಿದ್ದರು.ಬಳಿಕ ಎಲ್ಲಾ ಸೇನಾಪತಿಗಳಿಗೆ ಸೂಕ್ತವಾದ ಪ್ರದೇಶಗಳಲ್ಲಿ ತಮ್ಮ ತಮ್ಮ ಸೇನೆಗಳನ್ನು ನೆಲೆಗೊಳಿಸಲು ಹೇಳಿ ಸುಗ್ರೀವನು ರಾಮನ ಅಪ್ಪಣೆಯೊಂದಿಗೆ ಸೇನಾ ಬಲವನ್ನು ತಿಳಿಯಲು ಹೊರಟನು.
ಚದುರಿದಂತಿದ್ದವರು ಗುರಿ ಸಾಧನೆಗಾಗಿ ಒಂದಾದರು. ಗುರಿ ಸಾಧನೆಗಾಗಿ- ಸೀತಾನ್ವೇಷಣೆಗಾಗಿ ಮತ್ತೆ ಸಂಘಟಿತರಾಗಿ ಚದುರಿ ಹೋಗುವ ಕಾಲವೂ ಸನ್ನಿಹಿತವಾಯಿತು.
ಈಗ ರಾಮ ಸ್ವಾಮಿ!
ಸುಗ್ರೀವ ಸೇವಕ! ನಿಷ್ಠಾವಂತ ಸೇವಕ!
ಹನುಮ ಸೇವಕನ ಸೇವಕ!!
A Bird's-eye view of Ramayana : 87
" As per my command, the wretches who do not come here within ten days - will be sentenced to death. Let the lacks and crores of monkey soldiers who follow my bidding, leave immediately. Let them all gather here and then begin the journey as per my command "- This was the inviolable command of Sugreeva (Sugreevaajne)!!.
Things do not bend unless they get hit !
Butter does not melt unless it is heated ! Without getting heated even inebriation will not get melted !! - This was the mystery of Rama behind the command of Sugreeva !
The command of Sugreeva came into action immediately. Crores of monkey soldiers gathered during the time Lakshmana was about to leave to see Rama along with Sugreeva. The leaders of the Monkey army came to see Rama by following Sugreeva . Sugreeva fell to the feet of Rama and explained the arrangements made for the quest for Seetha. Then he introduced Rama his army. Shathabali ,Sushena the father of Tara, Kesari the father of Hanuman, Taara the father of Ruma, Gavaaksha, Dhoomra, Panasa, Neela, Gaya, Mainda - Dwivida, Gaja, Jaambavantha ( the king of bears), Nala, Dadhimukha and many other monkey leaders arrived to see Rama. Later Sugreeva ordered all the commanders of their army to get settled down in an appropriate region. Then Sugreeva went to know the efficiency and capacity of the army by taking the consent of Rama. Everyone who had scattered got united. The time approached to get scattered being united to reach the goal and for the quest for Seetha.
Sugreeva was a servant ! An honest servant !!
Hanuman was the servant of the servant !!.



No comments:
Post a Comment
Please leave your comments here.....