ಶ್ರೀರಾಮಾಯಣ ಹಕ್ಕಿನೋಟ-೮೫ A Bird's-eye view of Ramayana : 85

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ-೮೫


ವೈರ ದ್ವೇಷಗಳಳಿದು ಪ್ರೇಮವುಕ್ಕಿದಾಗ ಸುಗ್ರೀವನಲ್ಲಿ ಅಣ್ಣನನ್ನು ಕೊಂದ ಪಾಪಪ್ರಜ್ಞೆ ಮೂಡಿತು.ಪ್ರಾಯಶ್ಚಿತ್ತ ರೂಪವಾಗಿ ಪ್ರಾಯೋಪವೇಶಕ್ಕೆ ನಿರ್ಧರಿಸಿದನು.ತಾರೆಯೂ ಸತಿಸಹಗಮನವನ್ನು ಬಯಸಿದ್ದಳು.ರಾಮನ ಸಾಂತ್ವನದ ನುಡಿಗಳು ಇಬ್ಬರನ್ನೂ ಬದುಕಿನ ಹಳಿಗೆ ತಂದು ನಿಲ್ಲಿಸಿದವು.ವಾಲಿಯ ಶವ ಸಂಸ್ಕಾರ- ಉತ್ತರ ಕ್ರಿಯೆಗಳು ರಾಜೋಚಿತವಾಗಿ ನಡೆದವು.ಸುಗ್ರೀವನಿಗೆ ಪಟ್ಟಾಭಿಷೇಕ,ಅಂಗದನಿಗೆ ಯುವರಾಜ ಪಟ್ಟಾಭಿಷೇಕಗಳು ನಡೆದವು.ಕಾಲವು ನೋವು ನೀಗಿ ನಲಿವನ್ನು ಕೊಟ್ಟಿತು.



ಕಿಷ್ಕಿಂಧೆಯಲ್ಲಿ ಸುಗ್ರೀವನ ರಾಜ್ಯಭಾರ ಮೊದಲಾಯಿತು.ಇತ್ತ ರಾಮ ಲಕ್ಷ್ಮಣರು ಪ್ರಸ್ರವಣ ಪರ್ವತದ ಸುಂದರ ಗುಹೆಯೊಂದರಲ್ಲಿ ವಾಸಿಸತೊಡಗಿದರು.ಮಳೆಗಾಲ ಬಂತು.ಸೀತಾನ್ವೇಷಣೆಯೇನು! ಯಾವುದೇ ಕೆಲಸವೂ ಸಾಗದ ಕಾಲ.ಶರತ್ಕಾಲದ ಆಗಮನದ ತನಕ ಕಾದುಕೊಂಡು ಬಳಿಕ ಸೀತಾನ್ವೇಷಣಾ ಕಾರ್ಯಕ್ಕೆ ತೊಡಗುವ ಎಂಬ ನಿರ್ಧಾರಕ್ಕೆ ಸೋದರರು ಬಂದರು.ಪ್ರಕೃತಿ ಸೌಂದರ್ಯವನ್ನು ನೋಡುತ್ತಾ ಸೀತೆಯನ್ನು ನೆನಪಿಸಿ ದುಃಖಿಸುವ ಅಣ್ಣನನ್ನು ಲಕ್ಷ್ಮಣನು ಸಂತೈಸಿ ಕ್ರಿಯಾಶೀಲನಾಗಿ ಮಾಡುತ್ತಿದ್ದನು.ನೋಡುನೋಡುತ್ತಿದ್ದಂತೆಯೇ ಮಳೆಗಾಲ ಹೋಗಿ ಶರತ್ಕಾಲ ಕಾಲಿಟ್ಟಿತು.



Om ShriRamaya Namaha  : 85


A Bird's-eye view of Ramayana  : 85


When enmity ,vengeance vanished and love overflowed ,Sugreeva felt guilty for assassinating his elder brother. He decided to perform the ritual of fasting unto death as an expiation for the mistake he had done. Tara too wished to burn herself with the corpse of her husband. But the consoling words of Rama brought both of them to the life track. The funeral and the last rites of Vaali were performed in a royal way. Coronation for Sugreeva. And Angada was crowned the prince .Time swiped away sorrow and brought happiness. 



Sugreeva began reigning Kishkinda. On the other hand Rama and Lakshmana began residing in the beautiful cave of Prasravana mountain. The rainy season began, what about the quest for Seetha!? It was the season where works would not get processed. Both the brothers decided to wait until the Autumn arrived and then they would get indulged in searching for Seetha. Lakshmana was consoling and Keeping Rama active who was weeping for Seetha by seeing the beauty of nature. Time flew quickly. Rainy season came to an end and the autumn season began.

No comments:

Post a Comment

Please leave your comments here.....