ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೭೯
ಸಮೃದ್ಧ ಸುಂದರ ಮತಂಗವನ! ಸಮೃದ್ಧ ಸುಂದರ ಪಂಪಾ ಸರೋವರ!!
ಇವುಗಳು ಸಹಜವಾಗಿಯೇ ರಾಮನಲ್ಲಿ ಸೀತೆಯ ವಿರಹ ವೇದನೆಯನ್ನು ಹೆಚ್ಚಿಸಿದವು.ವಸಂತ ಋತುವಿನ ಪ್ರಭಾವವೂ ಜೊತೆಗೂಡಿತು.ರಾಮನು ಮತ್ತೊಮ್ಮೆ ಪ್ರಲಾಪಿಸ ತೊಡಗಿದನು.ಆಗ ಲಕ್ಷ್ಮಣನು-
ಆರ್ಯ,ಉತ್ಸಾಹವೆಂಬುದು ಬಲವತ್ತರವಾದುದು.ಉತ್ಸಾಹಶೀಲನಿಗೆ ಪ್ರಪಂಚದಲ್ಲಿ ದುರ್ಲಭವಾದುದು ಯಾವುದೂ ಇಲ್ಲ.ಅವನು ದುಷ್ಕರ ಕಾರ್ಯದಲ್ಲಿ ತೊಡಗಿದ್ದರೂ ವಿನಾಶಹೊಂದುವುದಿಲ್ಲ.ಆದುದರಿಂದ ನಾವೂ ಉತ್ಸಾಹಶೀಲರಾಗಿ ಸೀತೆಯನ್ನು ಹುಡುಕೋಣ-ಎಂದು ಸಮಾಧಾನ ಮಾಡಿ ರಾಮನನ್ನು ಹುರಿದುಂಬಿಸಿದನು. ಆಗ ರಾಮನಿಗೂ ಶುಭ ಸೂಚನೆಗಳು ಕಾಣತೊಡಗಿದವು.
ಇವರು ಪಂಪಾತೀರದಲ್ಲಿ ಸುತ್ತಾಡುವುದನ್ನು ಸುಗ್ರೀವನು ಗಮನಿಸಿದನು.ನೋಡಲು ಅಸಾಮಾನ್ಯರಂತಿರುವ ಇವರ ಕುರಿತು ಸಂಶಯ ತಾಳಿದನು.ಹೆದರಿದನು.ತನ್ನಣ್ಣ,ಈಗ ಶತ್ರುವಾಗಿರುವ ವಾಲಿಯ ಕಡೆಯವರಿರಬಹುದೆಂದು ಬಗೆದನು.ತನ್ನ ಅನುಚರರಲ್ಲಿ ವಿಷಯವನ್ನು ಹೇಳಿದನು.ಆಗ ಹನುಮಂತನು ತಾವಿರುವ ಸುರಕ್ಷಿತ ತಾಣವನ್ನು ನೆನಪಿಸಿ ಸುಗ್ರೀವನ ಸಂದೇಹವನ್ನು ಅಲ್ಲಗಳೆದನು.ಬಳಿಕ- ಬುದ್ಧಿ ಬಲದ ಆಶ್ರಯವಿಲ್ಲದ ರಾಜನು ಎಲ್ಲಾ ಪ್ರಜೆಗಳನ್ನು ಆಳಲಾರನು.ಬುದ್ಧಿ ವಿಜ್ಞಾನಗಳನ್ನು ಬಳಸಿ ಎಲ್ಲಾ ಕಾರ್ಯಗಳನ್ನು ಮಾಡು-ಎಂದು ಸುಗ್ರೀವನಿಗೆ ಹೇಳಿದನು.ಸುಗ್ರೀವನು ರಾಮ ಲಕ್ಷ್ಮಣರನ್ನು ತಿಳಿಯಲು ಹನುಮಂತನನ್ನೇ ಅವರ ಬಳಿಗೆ ಕಳುಹಿಸಿದನು.
ಹನುಮಂತನು ಭಿಕ್ಷು ರೂಪದಲ್ಲಿ ಅವರ ಬಳಿಗೆ ಹೋಗಿ ಅವರ ಪರಿಚಯವನ್ನು ಕೇಳಿದನು."ತಪಸ್ವಿಗಳ ವೇಷ;ವ್ರತಾನುಷ್ಠಾನದಲ್ಲಿರುವಂತೆ ಕಾಣುತ್ತೀರಿ. ಬಿಲ್ಲು ಬಾಣ ಬತ್ತಳಿಕೆ ಖಡ್ಗಗಳನ್ನು ಹೊಂದಿದ್ದೀರಿ.ಮನುಷ್ಯರಾದರೂ ಅಮಾನುಷ ತೇಜಸ್ಸಿನಿಂದ ಬೆಳಗುವ ನೀವು ಯಾರು?ಇಲ್ಲಿಗೇಕೆ ಬಂದಿರಿ- ಎಂದು ಸೌಜನ್ಯದಿಂದ ಪ್ರಶ್ನಿಸಿದನು.ತನ್ನನ್ನು- ತನ್ನಣ್ಣನಿಂದ ವಂಚಿಸಲ್ಪಟ್ಟ ಸುಗ್ರೀವನೆಂಬ ವಾನರ ರಾಜನ ಪ್ರತಿನಿಧಿ ನಾನು.ನಾನು ಹನುಮಂತನೆಂಬ ವಾನರ.ನಿಮ್ಮಗಳ ಗೆಳೆತನಕ್ಕಾಗಿ ಸುಗ್ರೀವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ- ಎಂದು ಹನುಮನು ತನ್ನನ್ನು ಪರಿಚಯಿಸಿದನು.ಹನುಮನ ಸವಿ ನುಡಿಗೆ ರಾಮನು ತಲೆದೂಗಿದನು.
Om ShriRamaya Namaha : 79
A Bird's-eye view of Ramayana : 79
Enriched beautiful Mathanga forest !!
Enriched beautiful Pampa lake !!
These naturally arose and increased loneliness and grief in Rama of being separated from Seetha. Along with these the spring season also influenced him. Rama began to grieve again. During the time Lakshmana consoled him with his words. The words of Lakshmana:
" Enthusiasm or zeal is very powerful. There is nothing weak in the world for a man who is enthusiastic, and will not get annihilated though he is involved in the deeds of evils. So let us find Seetha being enthusiastic ". Lakshmana cheered Rama up with these words. Rama began to see the signs of good omens.
Sugreeva noticed Rama and Lakshmana who were wandering on the shore of the Pampa. He suspected the two brothers, though they looked as common people. He was scared and thought that they might have been the people of his brother Vaali who had become his enemy. So he told his followers about the two doubtful men wandering on the shore. During the time Hanumantha calmed him down by reminding him that they were in the secure place and denied his opinion. Then he said to Sugreeva that a king without wisdom and intelligence would never be capable of ruling all the subjects and advised him to do all the duties using his intelligence. So Sugreeva sent Hanuma to know about Rama and Lakshmana. Hanuman went there by disguising himself as a sage and enquired about them. He asked them who they were ,who seemed to be under pious observance (Vratha) and fasting ,who were in the attire of ascetics, and who possessed bows ,arrows, quivers and swords. Further he asked them, who they were, who were illuminating with the uncommon radiance. And he questioned them gently why they had come there. Hanuman introduced himself as he was the representative of Sugreeva the king of monkeys, who had been cheated on by his own brother Vaali , to Rama and Lakshmana . Further continued that he had been sent there by Sugreeva himself to make friendship with Rama and Lakshmana. Rama nodded to the pleasing words of Hanuma.


No comments:
Post a Comment
Please leave your comments here.....