ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೫೭
ರಾಮನನ್ನಗಲಿದ ಭರತನು ಅಯೋಧ್ಯೆಗೆ ಹಿಂದಿರುಗುವ ದಾರಿಯಲ್ಲಿ ಭರಧ್ವಾಜ ಮಹರ್ಷಿಗಳನ್ನು ಸಂದರ್ಶಿಸಿ ನಡೆದ ಘಟನೆಗಳನ್ನು ಹೇಳಿದನು. ಪಾದುಕೆಗಳನ್ನು ಪಡೆದ ವಿಚಾರವನ್ನು ಹೇಳಿ ಅದರಂತೆ ನಡೆಯುವ ಸಂಕಲ್ಪವನ್ನು ಮಾಡಿದುದಾಗಿಯೂ ಹೇಳಿ ಅವರ ಆಶೀರ್ವಾದ ಪಡೆದು ಅಯೋಧ್ಯೆಗೆ ಮರಳಿದನು.ಶೂನ್ಯ ಮನಸ್ಸಿನೊಂದಿಗೆ ಶೂನ್ಯವಾದ ಅಯೋಧ್ಯೆಯನ್ನು ಪ್ರವೇಶಿಸಿದನು.ಬಳಿಕ ಗುರುಹಿರಿಯರ ಸಚಿವರುಗಳ ಅನುಮತಿಯನ್ನು ಪಡೆದು ನಂದಿಗ್ರಾಮಕ್ಕೆ ಹೋದನು.ಅಲ್ಲಿ ಪಾದುಕೆಗಳನ್ನು ಪಟ್ಟದ ಮೇಲಿಟ್ಟು ಪ್ರತಿದಿನವೂ ರಾಜ್ಯದ ಎಲ್ಲಾ ಆಗುಹೋಗುಗಳನ್ನು ನಿವೇದಿಸುತ್ತಾ ನಾಡಿನಲ್ಲಿ ಕಾಡಿನ ಬದುಕನ್ನು ಬಾಳಲಾರಂಭಿಸಿದನು.ತಾನೂ ರಾಮ ಲಕ್ಷ್ಮಣರಂತೆ ಜಟಾಧಾರಿಯಾಗಿ,ನಾರುಮಡಿಯನ್ನುಟ್ಟು ರಾಮನ ದಾರಿ ಕಾಯುತ್ತಾ ವ್ರತಾನುಷ್ಠಾನ ಮಾಡತೊಡಗಿದನು.
ಇತ್ತ ರಾಕ್ಷಸರಿಗೆ ಹೆದರಿದ ತಾಪಸರು ರಾಮನಿಗೆ ಹೇಳಿ ಚಿತ್ರಕೂಟವನ್ನು ತೊರೆದು ಹೋದರು.ರಾಮನಿಗೂ ಚಿತ್ರಕೂಟದ ಬದುಕು ಸಾಕೆನಿಸಿತ್ತು.ಅಲ್ಲಿದ್ದರೆ ತಾಯಂದಿರು ಬಂದು ಹೋದ ನೆನಪು ಮರುಕಳಿಸುತ್ತದೆ, ಅಯೋಧ್ಯೆಯ ಜನರು ಬಂದು ಹೋಗುವ ಸಾಧ್ಯತೆ ಇರುವುದರಿಂದ ಬೇರೆಡೆಗೆ ಹೋಗಲು ನಿರ್ಧರಿಸಿದನು.ಅಲ್ಲಿಂದ ಅವರು ಅತ್ರಿ ಮುನಿಗಳ ಆಶ್ರಮಕ್ಕೆ ಹೋದರು.ಮಹಾಸತಿ ಅನಸೂಯೆಯಿಂದ ಸೀತೆಗೆ ವಾತ್ಸಲ್ಯ ಪೂರಿತ ಉಪಚಾರ- ಉಡುಗೆ ತೊಡುಗೆಗಳು ಲಭಿಸಿದವು.ಅನಸೂಯೆ ತುಂಬಾ ವೃದ್ಧಳಾದರೂ ಸೀತೆಯನ್ನು ಸತ್ಕರಿಸಿ ಅವಳಿಗೆ ವಿಶೇಷವಾದ ಸತಿಧರ್ಮವನ್ನು ಉಪದೇಶಿಸಿದಳು.ಸೀತೆಯ ಬಾಯಿಯಿಂದಲೇ ಅವಳ ಸ್ವಯಂವರದ ಕತೆಯನ್ನು ಕೇಳಿ ಸಂತಸಗೊಂಡಳು.ಸೀತೆಯನ್ನು ಉಡುಗೆ ತೊಡುಗೆಗಳಿಂದ ಸಿಂಗರಿಸಿ ಹರಸಿ ರಾಮನ ಬಳಿಗೆ ಹೋಗಿ ತೋರಿಸುವಂತೆ ಹೇಳಿದಳು.ಮಿಥಿಲೆಯನ್ನು ಬಿಟ್ಟ ಬಳಿಕ ಸೀತೆಗೆ ಇದೇ ಮೊದಲ ಬಾರಿಗೆ ತವರು ಮನೆಯ ಸಂಮಾನ ದೊರೆಯಿತು.ವನವಾಸದಲ್ಲಿ ಇದೇ ಸೀತೆಗೆ ದೊರೆತ ಮೊದಲ ಮತ್ತು ಕೊನೆಯ ಸತ್ಕಾರ ವಾಯಿತು.ಮರುದಿನ ಋಷಿದಂಪತಿಯ ಸಲಹೆ ಆಶೀರ್ವಾದಗಳನ್ನು ಪಡೆದು ರಾಮನು ತನ್ನ ಪಯಣವನ್ನು ಮುಂದುವರೆಸಿದನು.
ಅಯೋಧ್ಯಾ ಕಾಂಡಕ್ಕೆ ಮಂಗಳ.
Om ShriRamaya Namaha : 57
A Bird's-eye view of Ramayana : 57
Bharatha who was departed from Rama, met Bharadhwaja Maharshi on his way back to Ayodhya. He explained him the incidents that had happened in Chitra Koota. Bharatha told him about the 'Paaduka ' (holy footwear) and about his determination of leading the life according to the pledge he had take before Rama that he would lead the same life which would be led by Rama for 14 years. Bharatha returned to Ayodhya by taking the blessings of Bharadhwaja. He entered Ayodhya which had become void without Rama, with his void soul. Then ,by taking the consent of his Gurus ,elders and ministers he went to Nandi Graama. He placed the 'Paaduka' on the throne and said that he would report every day happenings of the kingdom there .Bharatha began leading the life of forest in the country. He got his hair matted and wore the barks of trees as Rama and Lakshmana. And started performing religious observance.
On the other hand, the ascetics, after informing Rama deserted Chitra Koota being scared of demons .Even Rama too thought of migrating from Chitra Koota . Because if he stayed on there he would be haunted by the memories of his mothers who had visited him there and there was also a possibility of people of Ayodhya visiting again to see Rama. So he decided to find some other place for his exile. The three of them went to the hermitage of sage Atri. Seetha received abundance of love ,good hospitality and clothes from the ' Mahaasathi' Anasooya. Even though Anasooya was too old, she treated Seetha with love and preached her the duties of a wife. She enjoyed herself when Seetha recounted the story of her 'Swayamvara'. Anasooya bedecked or beautified Seetha with new clothes and blessed her. She asked Seetha to go to Rama so that he could see the adoring Seetha. This was the first time Seetha received all the honor and felicitation of a parent's home after her departure from Mithile. This was the first and last hospitality that Seetha received in the exile. The following day ,Rama continued the journey by taking the blessings and advise of the sage Atri and Anasooya.
The end of Ayodhya Kaanda!!.



No comments:
Post a Comment
Please leave your comments here.....