ಶ್ರೀರಾಮಾಯನಮ:
ರಾಮಾಯಣ ಹಕ್ಕಿನೋಟ-೫೩
ರಾಮನು ತಾನೊರ್ವನೇ ಅತ್ತಿದ್ದು ಇದೆ.ಇನ್ನೊಬ್ಬರು ಅಳುತ್ತಿರುವಾಗ ರಾಮನು ತಾನೂ ಅಳುವ ಸಂದರ್ಭ ತುಂಬಾ ಕಡಿಮೆ. ಆದರೆ ಇತರರು ಅಳುವಾಗ ಪ್ರತಿಧ್ವನಿ ಮಾಡುವಷ್ಟು ದೊಡ್ಡ ದನಿಯಲ್ಲಿ ಎಲ್ಲರೊಂದಿಗೆ ಬಿಕ್ಕಿಬಿಕ್ಕಿ ಅತ್ತ ಸಂದರ್ಭ ಇದೀಗ ನಮ್ಮೆದುರಿನಲ್ಲಿ.
ತಂದೆಗೆ ತರ್ಪಣ ಬಿಟ್ಟು ಪರ್ಣಕುಟಿಗೆ ಮರಳಿದ ಸೋದರರಿಗೆ ಅಗಲುವಿಕೆಯ ದುಃಖ ತಡೆಯಲಾಗದೆ ಅಳತೊಡಗಿದರು.ಸೀತೆಯೂ ಅಳತೊಡಗಿದಳು.ಎಷ್ಟು ಗಟ್ಟಿಯಾದ ದನಿಯಲ್ಲಿ ಎಂದರೆ- ಅಯೋಧ್ಯೆಯಿಂದ ಬಂದ ಜನರಿಗೆಲ್ಲ ಕೇಳುವಷ್ಟು!ಗಿರಿಗಳು ಮಾರ್ದನಿಸುವಷ್ಟು!! ಸಿಂಹದ ಗರ್ಜನೆಯಷ್ಟು! ನೋವನ್ನು ಸಹಿಸಿಕೊಳ್ಳಲು, ದುಃಖವನ್ನು ಹೊರಗೆಡವಿ ಮನಸನ್ನು ತಹಬಂದಿಗೆ ತರಲು ಅಳುವಿಗೆ ಸಮನಾದುದು ಯಾವುದು? ಶ್ರದ್ಧಾಂಜಲಿ ಬಾಷ್ಪಾಂಜಲಿಗಳೆರಡೂ ನಿಜಾರ್ಥದಲ್ಲಿ ಅಲ್ಲಿ ನಡೆದವು.
ನಿಧಾನಕ್ಕೆ ಸೋದರರು ಅಳುವನ್ನು ಹತ್ತಿಕ್ಕಿ ಬಂದ ಉದ್ದೇಶದತ್ತ ಗಮನವಿತ್ತರು.ಈ ಮಧ್ಯೆ ವಸಿಷ್ಠರ ಜೊತೆಯಲ್ಲಿ ತಾಯಂದಿರು,ಇತರ ಅಯೋಧ್ಯಾವಾಸಿಗಳು ರಾಮನನ್ನು ಕಾಣಲು ಬಂದರು. ರಾಮ ಸೀತೆ ಲಕ್ಷ್ಮಣರು ತಾಯಂದಿರ, ವಸಿಷ್ಠರ ಪಾದಗಳಿಗೆ ನಮಸ್ಕಾರ ಮಾಡಿ ಕೃತಾರ್ಥರಾದರು.
ಬಂದವರಲ್ಲಿ ಕೆಲವರು ರಾಮನ ಪಾದಗಳಿಗೆ ಮಣಿದರೆ ಇನ್ನು ಕೆಲವರ ಪಾದಗಳಿಗೆ ರಾಮನು ಮಣಿದನು.ಇನ್ನು ಕೆಲವರನ್ನು ಆಲಂಗಿಸಿದನು.ಹೀಗೆ ಎಲ್ಲರೂ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸಿದರು.
ಎಲ್ಲರೆದುರು ಆಸೀನನಾದ ರಾಮನು ಭರತನಲ್ಲಿ ಕಾಡಿಗೆ ಬಂದುದರ ಕಾರಣವನ್ನು ಕೇಳಿದನು.ನೀನೂ ಜಟಾಧಾರಿಯಾಗಿ ನಾರುಮಡಿ,ಕೃಷ್ಣಾಜಿನ ಉಟ್ಟದ್ದು ಯಾಕೆಂದು ಕೇಳಿದನು.ಆಗ ಭರತನು-ನಿನ್ನ ದಾಸ್ಯ ಬಯಸಿ ಬಂದಿದ್ದೇನೆ.ಕೋಸಲ ದೇಶದ ರಾಜನಾಗಿ ಪಟ್ಟಾಭಿಷಿಕ್ತನಾಗಿ ನಮ್ಮನ್ನೆಲ್ಲಾ ಸಂತೋಷಪಡಿಸು ಎಂದು ಪ್ರಾರ್ಥಿಸಲು ಬಂದಿದ್ದೇವೆ.ನಿನ್ನ ಸುಹೃದರ ಇಷ್ಟಾರ್ಥಗಳನ್ನು ನಡೆಸಿಕೊಡು- ಎಂದು ಕೈಮುಗಿದುಕೊಂಡೇ ಹೇಳಿದನು.
ShriRamaya Namaha : 53
A Bird's-eye view of Ramayana : 53
There were some instances where Rama had shed tears alone. But there were no such circumstances where he wept while others were weeping. But we are going to witness that in this chapter, where Rama cries and sobs louder than others.
The brothers who returned to the dwelling after performing the ritual ,began lamenting and shedding tears for being unable to depart from each other. Their sorrow reached the sky. They wept so loudly that it reached the people who had come from Ayodhya. Their mourning shook the hills as if the roaring of a Lion. Tears consoles the soul from throwing out sorrows, grief and pain. Is there anything else equivalent to tears to endure grief? Both the obituary and the divine offering of the tears were offered to Dhasharatha in the real sense in the forest.
The brothers Bharatha and Shatrughna composed themselves slowly and focused on their agenda. Meanwhile, Vasishta Maharshi came to see Rama along with the mothers and other inhabitants of Ayodhya. Rama ,Seetha and Lakshmana fell to the feet of the mothers and Vasishta and received their blessings.
A few people among who had come there fell to the feet of Rama, Rama fell to the feet of some and embraced some among who had come there .In this way everyone expressed their love and affection towards one another.
Rama who was be seated infront of everyone asked Bharatha the reason for his arrival. He asked Bharatha the reason for getting his hair matted and why he had worn the bark of trees .For which Bharatha answered that he had come there to be a slave of Rama. He requested Rama to make all of them joyous by agreeing to get coronated as the king of Kosala. Further he requested Rama with his folded hand to fulfill the wishes of his well wishers.

No comments:
Post a Comment
Please leave your comments here.....