ಶ್ರೀರಾಮಾಯಣ ಹಕ್ಕಿನೋಟ-೧೩೦ A Bird's-eye view of Ramayana : 130

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ-೧೩೦


ಸುವೇಲದಲ್ಲಿ ರಾಮ ಸುಗ್ರೀವರು.

ತ್ರಿಕೂಟದಲ್ಲಿ ರಾವಣ! ರಾಜವೈಭವದಲ್ಲಿ ಮಿರುಗುತ್ತಿದ್ದ ರಾವಣನನ್ನು ಕಾಣುತ್ತಲೇ  ಸುಗ್ರೀವನಿಗೆ ಸಿಟ್ಟು ನೆತ್ತಿಗೇರಿತು! 

ರಾಮ ನೋಡ ನೋಡುತ್ತಿದ್ದಂತೆಯೇ ಛಂಗನೆ ಆಗಸಕ್ಕೆ ಹಾರಿ ರಾವಣನ ಬಳಿ ಸೇರಿ ಅವನೊಂದಿಗೆ ದ್ವಂದ್ವ ಯುದ್ಧವನ್ನು ಆರಂಭಿಸಿದ! ವಾನರರಾಜ ಮತ್ತು ರಾಕ್ಷಸರಾಜರ ನಡುವೆ ಯುದ್ಧ. ಅದೇ ಯುದ್ಧದ ಆರಂಭದ ಸೀಟಿಯಾಯಿತು.



ಸಮಬಲದ ಹೋರಾಟ! ಮಲ್ಲಯುದ್ಧ! 

ರಾವಣ ಬಸವಳಿದ.

ಇನ್ನೇನು ಮಾಯಾಯುದ್ಧ ಆರಂಭಿಸಬೇಕೆನ್ನುವಾಗ 

ಅದರ ಸುಳಿವರಿತ ಸುಗ್ರೀವ ಬಂದಂತೆಯೇ ಹಿಂದಿರುಗಿ ರಾಮತಾಣವನ್ನು ಸೇರಿದ! ರಾಮನು ಸುಗ್ರೀವನಿಗೆ ಈ ರೀತಿಯಲ್ಲಿ ದು:ಸಾಹಸಕ್ಕೆ ದುಡುಕದಂತೆ ಎಚ್ಚರಿಸಿದ.


ಈ ಹಿಂದೆ ಯೋಜಿಸಿದಂತೆ ನಾಲ್ಕು ದಿಕ್ಕುಗಳಿಂದಲೂ ಏಕಕಾಲದಲ್ಲಿ  ಲಂಕೆಗೆ ಲಗ್ಗೆಯಿಡುವಂತೆ ವಾನರ ಸೇನೆಯು ಆಯಾ ಸೇನಾಧಿಪತಿಗಳ ನೇತೃತ್ವದಲ್ಲಿ ಲಂಕೆಯ ಸುತ್ತ ನೆರೆಯಿತು.

ಕಟ್ಟಕಡೆಯ ಯತ್ನವೆಂಬಂತೆ,

'ಸಾರಿ ಕೊಂದರೆ ಪಾಪವಿಲ್ಲ' ಎನ್ನುವಂತೆ ರಾಮ ಅಂಗದನ ಮೂಲಕ ರಾವಣನಿಗೆ -

 ರಾಮನಿಗೆ ಶರಣಾಗಿ  ಸೀತೆಯನ್ನೊಪ್ಪಿಸು,ಇಲ್ಲವೇ ಯುದ್ಧಕ್ಕೆ ಸಿದ್ಧನಾಗಿ ಪ್ರಾಣ ಕಳೆದುಕೊಂಡು ವಿಭೀಷಣನಿಗೆ ಲಂಕೆಯನ್ನೊಪ್ಪಿಸು'

ಎಂಬ ಸಂದೇಶವನ್ನು ಹೇಳಿ  ಕಳಿಸಿದ.

ನಿರ್ಭೀತ ಅಂಗದನು ರಾವಣನಲ್ಲಿಗೆ ಹೋಗಿ ರಾಮ ಸಂದೇಶವನ್ನು ಚಾಚೂ ತಪ್ಪದೆ ಹೇಳಲು ರಾವಣನು ಸಿಟ್ಟಿಗೆದ್ದನು.

ಅಂಗದನನ್ನು ಕೊಲ್ಲುವಂತೆ ಆಜ್ಞಾಪಿಸಿದನು.ರಾಕ್ಷಸರು ಅಂಗದನನ್ನು ಹೀಡಿದರು. 

ಆಗ ಅಂಗದನು ತನ್ನನ್ನು ಹಿಡಿದುಕೊಂಡ ರಾಕ್ಷಸರ ಸಹಿತ ಆಗಸಕ್ಕೆ ನೆಗೆದು ಅಲ್ಲಿಂದಲೇ ಅವರನ್ನು ಕೊಡವಿ ನೆಲಕ್ಕೆ ಕೆಡವಿದನು.ಅಷ್ಟು ಮಾತ್ರವಲ್ಲ  ರಾವಣನ ಅರಮನೆಯ ಗೋಪುರದ ಶಿಖರವನ್ನು ತನ್ನ ಕಾಲುಗಳಿಂದ ಒದೆದು ಕೆಡವಿದನು.ಆಗ ರಾಜ,ಈಗ ಯುವರಾಜ!ಇಬ್ಬರೂ ರಾವಣನ ಅಹಮಿಕೆಗೆ ಬಲವಾದ ಪೆಟ್ಟು ಕೊಟ್ಟು ಬಂದರು! ರಾವಣನಿಗೆ ತನ್ನ ವಿನಾಶಕಾಲ ಬಂದಿರುವುದರ ಅರಿವಾಗಿ ನಿಟ್ಟುಸಿರನ್ನು ಬಿಟ್ಟನು!


ವಿಶ್ವ



Om ShriRamaya Namaha : 130


A Bird's-eye view of Ramayana : 130


Rama - Sugreeva in Suvela.

Ravana in Trikoota !

Sugreeva's anger crossed the bounds when he saw Ravana who was shimmering in the glory of the king !

As Rama was watching Sugreeva sprang off into the sky and began the duel with Ravana ! The battle between the king of the monkeys and the king of the monsters. And that became the signal of the beginning of the war.

The war of equal force ! The wrestling began !

Ravana was knocked down. 

When Ravana was about to begin the war being invisible, Sugreeva who got the hint about that joined Rama ! Rama told Sugreeva not to make haste.



As it was planned earlier, the army of monkeys stormed Lanka from all the four directions simultaneously in the initiation of the commanders of the army.

As the ultimate try,

As the saying ' It's not a sin if he is informed before killing him ', Rama says  Ravana through Angada " Hand over Seetha to Rama by surrendering to Rama or else be prepared for the war and hand over Lanka to Vibhishana after losing your life ".

Rama sent this message to Ravana. 

Ravana got angry when the fearless Angada went to Ravana and said each and every word that Rama said to him.

He commanded to slay Angada. The monsters caught hold of Angada. During the time Angada leapt into the sky along with the monsters who were holding on to him and killed them by throwing them down to the ground. Then the king ! Now the prince ! Both gave a hard blow to the ego of Ravana ! Ravana took a sigh when he realized that reck and ruin was approaching him !


Kannada version of the story is written by- 

Shri U S Vishweshwara Bhat 

Translated by- 

Rashmi A Suvarna 

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....