ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೧೨೨
ಸುಗ್ರೀವನಿಗೆ ರಾಮನ ಸಂಸರ್ಗವೆಂಬುದು ಸತ್ಸಂಗವೂ,ರಾಜನೀತಿಯ ಕಲಿಕೆಯೂ ಆಯಿತು. ಶರಣಾರ್ಥಿಯಾಗಿ ಬಂದ ವಿಭೀಷಣನನ್ನು ಬರಮಾಡಿದ ಸಂದರ್ಭದಲ್ಲಿ ರಾಮ ಹೇಳಿದ ಶರಣಾರ್ಥಿಗಳ ರಕ್ಷಣಾ ಕ್ರಮ ಸುಗ್ರೀವನಿಗೆ ಒಂದು ಪಾಠವೇ ಆಗಿತ್ತು. ಇದರೊಂದಿಗೆ ರಾಮನ ವ್ಯಕ್ತಿತ್ವದ ಮತ್ತೊಂದು ಮುಖದ ಪರಿಚಯವೂ ಆಗಿತ್ತು.
ರಾಮನ ಅಪೇಕ್ಷೆಯಂತೆ ವಿಭೀಷಣನು ಗಗನದಿಂದಿಳಿದು ರಾಮನಿದ್ದೆಡೆಗೆ ಬಂದಾಗ ರಾಮ ಅವನನ್ನು ಆಲಿಂಗನದ ಮೂಲಕ ಹೃತ್ಪೂರ್ವಕವಾಗಿ ಬರಮಾಡಿಕೊಂಡನು.
ವಿಭೀಷಣ ತನ್ನ ಮತ್ತು ತನ್ನ ಒಡನಾಡಿಗಳ ಪರಿಚಯ ಮಾಡಿ - ಅನ್ಯಥಾ ಶರಣಂ ನಾಸ್ತಿ...ಎಂದು ಬಂದಿರುವ ನಮಗೆ ಆಶ್ರಯ ನೀಡಲು ಪ್ರಾರ್ಥಿಸಿದನು.
ರಾಮನು ಆಶ್ರಯ ನೀಡಲು ಒಪ್ಪಿದ.ಬಳಿಕ ವಿಭೀಷಣನಲ್ಲಿ ಲಂಕೆಯಲ್ಲಿರುವ ರಕ್ಕಸರ ಬಲಾಬಲಗಳನ್ನು ಪರಿಚಯಿಸಲು ಹೇಳಿದ. ವಿಭೀಷಣನು ರಾವಣ,ಕುಂಭಕರ್ಣ,ಇಂದ್ರಜಿತು, ಪ್ರಹಸ್ತ, ಮಹೋದರ,
ಮಹಾಪಾರ್ಶ್ವ, ಅಕಂಪನ ಮುಂತಾದವರನ್ನು ಅವರವರ ಬಲಾಬಲಗಳನ್ನು ಹೇಳುತ್ತಾ ಪರಿಚಯಿಸಿದನು.
ವಿಭೀಷಣನ ಮಾತುಗಳಿಂದ ಮುದಗೊಂಡ ರಾಮ - ವಿಭೀಷಣ,ಸತ್ಯವಾದ ನನ್ನ ಮಾತನ್ನು ಕೇಳು.ನಾನು ರಾವಣಾದಿಗಳನ್ನು ಸಂಹರಿಸಿ ಲಂಕಾ ಪಟ್ಟಣಕ್ಕೆ ನಿನ್ನನ್ನು ರಾಜನನ್ನಾಗಿ ಮಾಡುತ್ತೇನೆ-
ಎಂದು ಮಾತು ಕೊಟ್ಟನು.
ರಾಮನು ಲಕ್ಷ್ಮಣನಲ್ಲಿ ಸಮುದ್ರದ ತೀರ್ಥವನ್ನು ತರಹೇಳಿ ತತ್ಕ್ಷಣವೇ ವಾನರರ ಮಧ್ಯೆ ಲಕ್ಷ್ಮಣನಿಂದ ವಿಭೀಷಣನಿಗೆ ಲಂಕಾಪಟ್ಟಣದ ಪಟ್ಟಾಭಿಷೇಕ ಮಾಡಿಸಿದನು.
ವಿಭೀಷಣನ ಸೇರ್ಪಡೆಯಿಂದ ರಾಮಬಲ ಹಿಗ್ಗಿತು,
ರಾವಣಬಲ ಕುಗ್ಗಿತು.
ಲಂಕೆಯನ್ನು ಸೇರಲು ಸಾಗರೋಲ್ಲಂಘನೆಗಿರುವ ಉಪಾಯ ಯಾವುದೆಂದು ಸುಗ್ರೀವ ಹನುಮ ಲಕ್ಷ್ಮಣರು ವಿಭೀಷಣನನ್ನು ಕೇಳಲು;
ಅವನು ವರುಣನಿಗೆ ಶರಣುಹೋಗುವುದೇ ಸೂಕ್ತ ಎಂದನು. ಅವರು ರಾಮನಿಗೆ ಈ ವಿಷಯ ತಿಳಿಸಿದರು. ರಾಮನು ವರುಣನನ್ನೊಲಿಸಲು ಕಡಲದಂಡೆಯಲ್ಲಿ ದರ್ಭಾಸನ ಹಾಕಿ ಅದರಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಅಗ್ನಿಯಂತೆ ಕುಳಿತನು.
ವಿಶ್ವ
Om ShriRamaya Namaha : 122
A Bird's-eye view of Ramayana - 122
The company of Rama became a divine company and also the lesson of the political ethics to Sugreeva. The words of Rama about the method of protecting those who seek refuge after accepting the defeat, during the time welcoming Vibhishana who came seeking refuge became a lesson for Sugreeva. Along with that, the other side of Rama's personality was also introduced to him.
As per the wish of Rama, Vibhishana descended from the sky and came to the place where Rama was in. Rama welcomed him by embracing affectionately. Vibhishana introduced himself and his followers and prayed to Rama to provide them shelter who had surrendered themselves, where he recited ' Anyathaa sharanam naasthi '.
Rama agreed to give them shelter. Later he asked Vibhishana to give him the account of the force of monsters in Lanka. Vibhishana gave the detailed accounts of the might and force of Ravana, Kumbhakarna, Indrajithu, Prahastha, Mahodara, Mahapaarshwa, Akampana . Rama being pleased by the words of Vibhishana, asked him to trust his true words of assurance and said that he would coronate Vibhishana the king of Lanka after destroying Ravana and others.
Rama asked Lakshmana to bring the holy water of the sea and in the presence of the monkeys, Rama ,by Lakshmana, got Vibhishana coronated as the king of Lanka.
The force of Rama expanded due to the addition of Vibhishana whereas the force of Ravana Shrunk.
When Sugreeva, Lakshmana, and Hanuman asked Vibhishana about the means of crossing the sea to reach Lanka, Vibhishana told them that it would be better to surrender themselves to Varuna. They informed the same to Rama. Rama sat as Agni which had been established on the seat of Dharbe grass on the bank of the sea, to please the lord Varuna.
Kannada version of the story is written by-
Shri U S Vishweshwara Bhat
Translated by-
Kum. Rashmi A Suvarna
Lecturer in English,Vivekananda P U College,Puttur.
ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ





No comments:
Post a Comment
Please leave your comments here.....