ಶ್ರೀರಾಮಾಯಣ ಹಕ್ಕಿನೋಟ -೧೨೦ A Bird's-eye view of Ramayana : 120

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೨೦


 ರಾವಣನ ಕುರಿತು  ಅಚ್ಚರಿಯ ವಿಷಯಗಳು :

●ತನ್ನನ್ನು ತಾನು ಮೂರು ಲೋಕಗಳ ವೀರ ಎಂದುಕೊಳ್ಳುವ ರಾವಣನು ಮೂರು ವರ್ಗದ ಪುರುಷರನ್ನು,ಸಲಹೆಗಾರರನ್ನು ಉಲ್ಲೇಖಿಸಿ ಕೊನೆಯ ವರ್ಗವನ್ನಾಶ್ರಯಿಸಿದನೇಕೆ?

●ಮೂರು ಲೋಕಗಳಿಗೆ ದಂಡೆತ್ತಿ ಹೋದವ ಪಕ್ಕದ;  ಕೇವಲ ನೂರು ಯೋಜನ ದೂರವಿರುವ ರಾಮನ ಮೇಲೆ  ಯಾಕೆ  ದಾಳಿ ಮಾಡಿಲ್ಲ?

●ರಾಮ ಸೈನ್ಯವು ಅಸಾಧ್ಯವಾದ ಸಾಗರವನ್ನು ದಾಟುವ ತನಕ ಸುಮ್ಮನಿದ್ದನೇಕೆ?....

●ವೀರ ಹನುಮನು  ಅವರ ಕೋಟೆ ಕೊತ್ತಲಗಳನ್ನು,

ಸೇತುವೆಗಳನ್ನು ಮುರಿದ ಘಟನೆ ಕಣ್ಮುಂದೆಯೇ ಇರುವಾಗ ಕನಿಷ್ಠ  ರಾಮಸೇತುವೆಯನ್ನು ಭಗ್ನಗೂಳಿಸುವ  ಯೋಚನೆಯನ್ನಾದರೂ ಮಾಡಲಿಲ್ಲವೇಕೆ?...

●ಸೀತಾ ವಿಯೋಗದಿಂದ ರಾಮನಲ್ಲಿ  ಹತಾಶ ಭಾವ ಹುಟ್ಟುವುದು  ಸಹಜವೆಂದೇ ಇಟ್ಟುಕೊಳ್ಳೋಣ,

ರಾವಣನಿಗೇನು ಬಂತು?..

●ರಾವಣನಿಗೆ ಸಚಿವರುಗಳು ಮಾನಸಿಕ ಸ್ಥೈರ್ಯವನ್ನು ತುಂಬುವ ಸನ್ನಿವೇಶ  ಯಾಕೆ ಬಂತು?...



ರಾವಣನು ಮಂತ್ರಿಗಳ ಸಲಹೆಗಳನ್ನು ಕೇಳಲು  ಪ್ರಹಸ್ತ,ದುರ್ಮುಖ,ವಜ್ರದಂಷ್ಟ್ರ,ನಿಕುಂಭಾದಿಗಳು ತಾವೇ ಶತ್ರುಗಳ ಸಂಹಾರ ಮಾಡುತ್ತೇವೆ, ಹಾಗೆ ಅಗತ್ಯ ಇದೆ ಎಂದಾದರೆ ಇಂದ್ರಜಿತ್  ಇದ್ದಾನೆ ಎಂಬ ಉತ್ಸಾಹದ ಭರವಸೆಯ ನುಡಿಗಳನ್ನು ಹೇಳಿದರು.

'ಎಲ್ಲಾ ಬೀಜಗಳು ಒಳಗಾದರೆ ಗೇರು ಬೀಜ ಹೊರಗೆ' ಎಂಬಂತೆ  ಎಲ್ಲರದೂ ಒಮ್ಮತವಾದರೆ ವಿಭೀಷಣನ  ಮತ ಭಿನ್ನವಾಗಿತ್ತು.ಅವನ ನ್ಯಾಯೋಚಿತ ಸಲಹೆ- 

●ಅಜಾಗರೂಕನಲ್ಲದ,ದುರ್ಜಯನಾದ,ಕೋಪವನ್ನು ಜಯಿಸಿದ,

ಸೇನೆಯೊಂದಿಗೆ ಯುದ್ಧ ಸನ್ನದ್ಧನಾದವನೊಂದಿಗೆ ಯುದ್ಧ ಸಲ್ಲದು. 

●..ಸಾಗರೋಲ್ಲಂಘನೆಯಂತಹ ಊಹಾತೀತ ಸಾಧನೆಯನ್ನು ಮಾಡಿ ಏಕಾಕಿಯಾಗಿ ನಮ್ಮ ನೆಲದಲ್ಲೇ ನಮ್ಮವರ ಹೆಣಗಳನ್ನುರುಳಿಸಿದ,ಲಂಕೆಯನ್ನು ಸುಟ್ಟ ಹನುಮನಂತಹ ಸಾವಿರಾರು ಯೋಧರನ್ನು ಹೊಂದಿರುವ ರಾಮ ಸೇನೆಯೊಂದಿಗೆ ಯುದ್ಧ ಸಲ್ಲದು.

●ಖರಾದಿಗಳ ವಧೆಯೇ ಸೀತಾಪಹರಣಕ್ಕೆ ಕಾರಣವೆಂದರೆ  ಖರನೇ ಇದಕ್ಕೆ ಕಾರಣ.ಆದುದರಿಂದ ಸೀತೆಯನ್ನು ರಾಮನಿಗೊಪ್ಪಿಸಿ ಲಂಕೆಯ ಸಹಿತ ನಮ್ಮೆಲ್ಲರನ್ನು ಉಳಿಸು.

●ಸುಖ ಧರ್ಮಗಳನ್ನು ವಿನಾಶಗೊಳಿಸುವ ಕೋಪವನ್ನು ಬಿಡು.

ಸೀತೆಯನ್ನು ರಾಮನ ಬಳಿಗೆ ಕಳುಹಿಸಿಬಿಡು-ಎಂಬುದಾಗಿತ್ತು


ವಿಶ್ವ



Om ShriRamaya Namaha : 120


A Bird's-eye view of Ramayana : 120


The surprising factors of Ravana :

• Why did Ravana who was known to be the gallant hero of 3 worlds, mentioned about the three kinds of men,advisors and resort to the last category?

• Why did not Ravana who marched with an army on the 3 worlds, attack Rama who was just 100 yojanas away ?

• Why was he quiet until the army of Rama crossed the vast sea ?

• Why did not he think of destroying atleast the bridge of Rama ,though the image of the incident of Valiant Hanuman destroying his fort, bridge was right infront of his eyes ?

• Let's understand that ,it was common that desperation arose in Rama due to the separation of Seetha from him . But what had happened to Ravana ?

• Why did the circumstance arise where the ministers had to fill courage in Ravana ?



When Ravana asked the suggestion of his ministers, Prahastha, Durmukha, Vajradanshtra, Nikumbhaa and others assured him that they themselves would destroy the enemies and there would be Indrajithu in the time of any need.

As the line says, ' if all the seeds are inside then the seed of the cashew is outside " ,in the same way if everyone had  unity in giving their suggestions then the advice of Vibhishana was different from theirs. The fair suggestions of Vibhishana -

• The war is impossible with the one who is not careless, imposter, the one who has won anger and who is well- equipped along with the army.

• The war is not possible with the army of Rama who possesses thousands of great soldiers just as Hanuman who slayed our own people in our own place and burnt Lanka single handedly .

• If slaying Khara and others is the reason for the abduction of Seetha then Khara himself is the reason for this. Therefore, hand over Seetha to Rama and save all of us along with Lanka.

• Abandon anger which destroys happiness and righteousness.  Send Seetha back to Rama. 

These are the words of Vibhishana. 


Kannada version of the story is written by- 

Shri U S Vishweshwara Bhat 

Translated by- 

Kum. Rashmi A Suvarna

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....