ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೧೧೬
ಮೇಲುನೋಟಕ್ಕೆ ರಾಮಾಯಣದಲ್ಲಿ ಹಿನ್ನೋಟದ ಘಟನೆಗಳು ಪದೇ ಪದೇ ಬಂದರೂ ಅವುಗಳಲ್ಲಿ ಘಟನೆಗಳ ಸೇರ್ಪಡೆಗಳು,ವಿಸ್ತೃತ ವಿವರಣೆಗಳಿರುವುದನ್ನು ಕಾಣಬಹುದು.ಉದಾ:ಸೀತೆಯು ಮಾರುತಿಯಲ್ಲಿ ಎರಡು ಬಾರಿ ಕಾಕಾಸುರನ ಕತೆ ಹೇಳುತ್ತಾಳೆ.ಎರಡನೆಯ ಸಲ ಹೇಳುವಾಗ ಮೊದಲಿಗೆ ಹೇಳಿದುದಕ್ಕಿಂತ ಸ್ವಲ್ಪ ಭಿನ್ನ.ವಿರುದ್ಧವಿಲ್ಲ.
ಸೀತೆಯು ಮಾರುತಿಗೆ ತನ್ನ ನೆನಪಿಗಾಗಿ , ತನ್ನನ್ನು ಹನುಮ ಕಂಡದ್ದಕ್ಕೆ ಆಧಾರವಾಗಿ ಚೂಡಾಮಣಿಯನ್ನು ರಾಮನಿಗೆ ಕೊಡಲು ಕೊಟ್ಟಾಗ ಅದರ ಹಿನ್ನೆಲೆಯನ್ನು ಹೇಳುವುದಿಲ್ಲ.ಮಾರುತಿ ಲಂಕೆಯನ್ನು ಬಿಡುವ ಸಂದರ್ಭದಲ್ಲಿ ಎರಡನೆಯ ಬಾರಿ ಸೀತೆಯನ್ನು ಕಾಣಲು ಹೋದಾಗ ಚೂಡಾಮಣಿಯ ಹಿನ್ನೆಲೆಯನ್ನು ಹೇಳುತ್ತಾಳೆ.
ವಿಶೇಷತೆ!:
•ಸುಂದರ ಕಾಂಡದ ೬೪ನೆ ಸರ್ಗದ ತನಕ ರಾಮನ ಪ್ರವೇಶವಿಲ್ಲ!
•೬೪ನೆಯ ಸರ್ಗದಲ್ಲಿ ರಾಮಾಗಮನವಾಗುತ್ತದೆ.ಅಲ್ಲಿಯ ತನಕ ಉಲ್ಲೇಖ ಮಾತ್ರ!•೬೪ ರಿಂದ ಕಾಂಡದ ಕೊನೆಯ ತನಕವೂ ಇರುತ್ತಾನೆ.
•ಕಿಷ್ಕಿಂಧಾ ಕಾಂಡದಲ್ಲಿ ರಾಮ, ಸುಂದರ ಕಾಂಡದಲ್ಲಿ ಸೀತೆ ಮಾನವ ಸಹಜ ಸ್ಥಿತಿಯಲ್ಲಿ ಕಾಣಿಸುತ್ತಾರೆ.
•ಆಸೆ ನಿರಾಸೆಗಳು ಅವರ ಬಾಯಿಂದ ಜನಸಾಮಾನ್ಯನ ಮಾತುಗಳನ್ನು ಹೇಳಿಸುತ್ತವೆ.
•ಅಳುಮುಂಜಿ ಸೀತೆ ವೀರನಾರಿಯೂ ಹೌದು ಎನ್ನುವುದನ್ನೂ ಈ ಕಾಂಡದಲ್ಲಿ ಕಾಣಬಹುದು!
•ರಾಮ ರಾವಣನನ್ನು ಗೆದ್ದು ತನ್ನನ್ನು ಸೆರೆಯಿಂದ ಬಿಡಿಸಿಕೊಂಡು ಹೋಗಬೇಕು ಎನ್ನುವ ಅವಳ ನಿಲುವು ರಾಮನ ಮೇಲಿನ ಅವಳ ವಿಶ್ವಾಸವನ್ನೂ, ಕ್ಷತ್ರಿಯರ ಕೆಚ್ಚನ್ನೂ ತೋರಿಸುತ್ತದೆ.
•ಲಂಕಾಧಿಪತಿ ರಾವಣನತ್ತ ದೃಷ್ಟಿ ಹೊರಳಿಸಿದರೆ ಅವನ ಮೇಲೆ ಅನುಕಂಪ ಪಡುವ ಅವನ ಯಾವುದೇ ವರ್ತನೆಗಳಾಗಲೀ ಘಟನೆಗಳಾಗಲೀ ಕಾಣ ಸಿಗುವುದಿಲ್ಲ!
•ಲಂಕೆಯೊಳಗಿನ ಅವೆಷ್ಟೋ ಹುಳುಕುಗಳನ್ನು, ಅವ್ಯವಸ್ಥೆಗಳನ್ನು ಹನುಮನು ಕಾಣಿಸುತ್ತಾನೆ.
•ಶೂರ್ಪನಖಿ ಎಚ್ಚರಿಸಿದ ಬಳಿಕವೂ ರಾವಣನ ಬೇಹುಗಾರಿಕಾ ಪಡೆ ಸದೃಢವಾಗಿಲ್ಲವೆಂಬುದನ್ನು ಹನುಮ ಜಗಜ್ಜಾಹೀರು ಮಾಡುತ್ತಾನೆ!
•ಪ್ರಾಯಕ್ಕೆ ಬಂದ ಮಕ್ಕಳಿದ್ದರೂ ತನ್ನ ಕಾಮುಕತೆಯನ್ನು ಬಹಿರಂಗವಾಗಿ ತೋರಿಸುವ ರಾವಣನ ಮೇಲೆ ಯಾವುದೇ ರೀತಿಯ ಸಹಾನುಭೂತಿ ಹುಟ್ಟುವುದಿಲ್ಲ!
•ಲಂಕಾ ನಗರ ದೇವತೆಯು ಮಾರುತಿಗೆ ಸೋತು ಶರಣಾದದ್ದು,
ಮಾರುತಿ ತಾನಿದ್ದ
ಅಂತ:ಪುರಕ್ಕೆ ಬಂದದ್ದೂ ಗೊತ್ತಾಗಿಲ್ಲವೆಂದರೆ ರಾವಣನನ್ನು ಕಾಮುಕತೆಯು ಯಾವ ಪರಿಯಲ್ಲಿ ಆವರಿಸಿತ್ತು ಎಂಬುದನ್ನು ನಾವು ಊಹಿಸಬಹುದು.
•ಎಂತಹ ರಾವಣ ಎಂತಹ ಸ್ಥಿತಿಗೆ ಬಂದ! ಎನ್ನುವುದಕ್ಕೆ ಮಾರುತಿಯ- "ಸೀತಾಪಹರಣದಂತಹ ಹೀನ ಕೆಲಸವನ್ನು ರಾವಣ ಮಾಡದಿರುತ್ತಿದ್ದರೆ ಸ್ವರ್ಗವನ್ನೂ ಆಳುತ್ತಿದ್ದ"-
ಎನ್ನುವ ಮಾತು ಸಾಕು!ಅಲ್ಲವೇ?
ಸುಂದರಕಾಂಡ ಹೆಸರೇ ಸೂಚಿಸುವಂತೆ ಹನುಮನ ಬಹುಮುಖೀ ವ್ಯಕ್ತಿತ್ವದ ಸುಂದರ ಚಿತ್ರಣ ಇಲ್ಲಿದೆ.ಒಂದೇ ಮಾತಲ್ಲಿ ಹೇಳುವುದಿದ್ದರೆ "ಹನುಮನಲ್ಲಿಲ್ಲದ ಯಾವುದೂ ಇಲ್ಲಿಲ್ಲ!!"
ವೀರ ಹನುಮ ಬಹು ಪರಾಕ್ರಮ!!
ಸುಂದರಕಾಂಡಕ್ಕೆ ಮಂಗಳ. 🙏🙏🙏
ಇನ್ನು ತೊಂಬತ್ತೆರಡು!
ವಿಶ್ವ
Om ShriRamaya Namaha : 116
A Bird's-eye view of Ramayana : 116
Though the flashback stories apear here on the outer look again and again ,the detailed explanation and the addition of the incidents can be seen in them. For instance: Seetha narrates Maaruthi the story of Kaakaasura twice. But the story which she narrates for the second time is quite different .But not contrasting. Seetha doesn't tell Maaruthi the story behind the Choodamani while giving to him as a proof that he has seen her. But when Maaruthi goes to her for the second time ,before leaving Lanka ,she tells him the story of Choodamani.
Uniqueness ! :
• There is no entry of Rama till the 64th chapter of Sundara Kaanda !
• Rama arrives in the 64th chapter. Till then, it is only mentioned !
• From the 64th chapter, he will be there till the end of the Kaanda.
• Rama in Kishkindha Kaanda and Seetha in Sundara kaanda appear as if they are in the common tendency of human beings.
• Expectations and disappointments make them utter the usual words that common people utter.
• The lachrymose Seetha is also a valiant woman which can be seen in this Kaanda !
• The firm stand of Seetha that Rama has to emancipate her from the prison by defeating Ravana, shows her strong belief on Rama and the courage of Kshatriyas.
• The behavior or the incidents which invoke sympathy or pity towards the king of Lanka Ravana can not be seen anywhere in this Kaanda !
• Hanuman exposes so many loopholes and disorganization which was there inside Lanka.
• Hanuman shows it to the world that the spies in Lanka is not formed strongly even after being warned and suggested by Shoorpanakha !
• No sympathy or empathy arise towards Ravana who exhibits his lust openly though being the father of children who are adults.
• The Goddess or the deity of the city Lanka ,being defeated surrendered herself to Maaruthi.
Maaruthi entered the harem of Ravana .
But Ravana was not aware of any of
these which makes us imagine how
lustful he was or to what extent Ravana
was consumed by lust.
• " If Ravana had not done the heinous deed of abducting Seetha then he would have even ruled the heaven " - This is stated by Maaruthi about Ravana. These words of Maaruthi are enough to say -
What position has the great Ravana
descended to !? Where he was and
where he came to !? Isn't it?
As the name ' Sundara Kaanda ' indicates ,this Kaanda depicts the beautiful picture of the versatile personality of Hanuman. To put it in one line, " there is nothing in this Kaanda which is not there in Hanuman !! "
The valiant, courageous Hanuman is very mighty !!
Let's bid an auspicious adieu to Sundara Kaanda...🙏
Only 92 steps are remaining !
Kannada version of the story is written by-
Shri U S Vishweshwara Bhat
Translated by-
Kum. Rashmi A Suvarna
Lecturer in English,Vivekananda P U College,Puttur.
ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ


No comments:
Post a Comment
Please leave your comments here.....