ಶ್ರೀರಾಮಾಯಣ ಹಕ್ಕಿನೋಟ-೧೧೪ A Bird's-eye view of Ramayana : 114

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ-೧೧೪


"ಒಂದು ಬೆಂಕಿಯು ಇನ್ನೊಂದು ಬೆಂಕಿಯನ್ನು ಸುಡದು"- ಇದು ಮಾರುತಿಯ ಮಾತು.

ಲಂಕೆಯನ್ನು ಸುಡುವಾಗ ಸೀತಾಮಾತೆಯನ್ನು ಯೋಚಿಸಿರಲಿಲ್ಲ! ನನ್ನಿಂದಾಗಿ ಆಕೆಗೆ ತೊಂದರೆ ಯಾಗಿರಬಹುದಲ್ಲ! 

ಎಂದು ಪಶ್ಚಾತ್ತಾಪ ಪಡುವಾಗ ಅವನು ಸಮಾಧಾನ ಪಟ್ಟುಕೊಂಡದ್ದು ಹೀಗೆ!


 ಹಾಗೆಯೇ ಆಗಿತ್ತು! ಸೀತೆಯ ಪ್ರಾರ್ಥನೆಯ ಮೇರೆಗೆ ಮಾರುತಿಯ ಬಾಲವನ್ನೇ ಸುಡದ ಬೆಂಕಿ ಸೀತೆಯನ್ನು ಸುಟ್ಟೀತೇ?! ಅದು ಸೀತೆಯ ಪಾತಿವ್ರತ್ಯದ ಶಕ್ತಿ! 

ಸೀತೆ ಅಗ್ನಿಯನ್ನು ಪರೀಕ್ಷಿಸಿದಳು!ಅಗ್ನಿಯೂ ಗೆದ್ದಿತು!ಅವಳು ಪಾತಿವ್ರತ್ಯವೂ ಗೆದ್ದಿತು.

ಆಗಸದಲ್ಲಿ ಹೋಗುತ್ತಿರುವ ಚಾರಣ ಮಹಾತ್ಮರು- ಇಡೀ ಲಂಕೆಯೇ ಸುಟ್ಟುರಿದರೂ ಅಶೋಕವನದಲ್ಲಿರುವ ಸೀತಾದೇವಿ ಮಾತ್ರ ಸುಡಲಿಲ್ಲವೆನ್ನುವುದು ಪರಮಾದ್ಭುತ- ಎನ್ನುವ ಮಾತನ್ನು ಕೇಳಿ  ಕುದಿಯುತ್ತಿದ್ದ ಅವನ ಮನವನ್ನು ತಣಿಯಿತು.


ಅಶೋಕವನಕ್ಕೆ ಬಂದು ಸೀತೆಯನ್ನು ಕಂಡನು.ತಾನು ಶ್ರೀರಾಮನಲ್ಲಿಗೆ ತೆರಳುತ್ತಿರುವ ವಿಷಯವನ್ನು ಹೇಳಿ ಅವಳ ಕಾಲುಗಳಿಗೆರಗಿದನು.

ಮತ್ತೊಮ್ಮೆ ಅವಳ ಸಂದೇಹಗಳನ್ನು ನಿವಾರಿಸಿ 'ಶುಭಸ್ಯ ಶೀಘ್ರಂ' ಎಂಬ ಮಾತನ್ನು ಪಾಲಿಸಲು 'ಅರಿಷ್ಟ'ಪರ್ವತವನ್ನೇರಿದನು.ಆ ಸುಂದರ ಪರ್ವತಕ್ಕೆ ವಿದಾಯ ಹೇಳುತ್ತಾ ಭೂಕಂಪದ ಅನುಭವವನ್ನು ಅಲ್ಲಿನ ಜೀವಿಗಳಿಗೆ 

ಕಾಣಿಸುತ್ತಾ ಆಗಸಕ್ಕೆ ಹಾರಿ ಉತ್ತರ ದಿಕ್ಕಿಗೆ ಪಯಣಿಸಿದನು.

ಹನುಮನ ದಕ್ಷಿಣಾಯನ ಮುಗಿದು ಇದೀಗ ಉತ್ತರಾಯಣ!


ರಾವಣನ ಬಗ್ಗೆ ಶೂರ್ಪನಖಿಯು ಹೇಳಿದ ಮಾತು ನಿಜವಾಯಿತು.

●ಆಡಳಿತದಲ್ಲಿ ಅವನಿಗೆ ಹತೋಟಿ ಇರಲಿಲ್ಲ.

●ಬೇಹುಗಾರಿಕೆ ಸಂಪೂರ್ಣ ನೆಲಕಚ್ಚಿತ್ತು.

●ಲಂಕಾ ದೇವತೆಯೇ ಮಾರುತಿಗೆ ಮಂಡಿಯೂರಿ ಅವನನ್ನು ಪಟ್ಟಣದೊಳಗೆ ಬಿಟ್ಟದ್ದು,

●ಅಂತ:ಪುರದ ಮೂಲೆ ಮೂಲೆಗಳಲ್ಲಿ ಹನುಮ ಓಡಾಡಿದ್ದು ರಾವಣನೆಂಬ ಕಾಮುಕ ರಾಜನಿಗೆ ಅರಿವಾಗಲಿಲ್ಲವೆಂದರೆ ಅವನೆಂತಹ ತ್ರಿಲೋಕವೀರ!!? ಅಡಿ ತಪ್ಪಿದರೆ ಆನೆಯೂ ಉರುಳುತ್ತದೆ!ಅಲ್ಲವೇ?


ಒಂದು ಪರ್ವತದ ಮೇಲೆ ಮತ್ತೊಂದು ಪರ್ವತವು ಇಳಿಯಿತೋ? ಎಂಬಂತೆ ಚಂಡ ಮಾರುತದ ವೇಗದಲ್ಲಿ ಬಂದ ಮಾರುತಿಯು ಮಹೇಂದ್ರ ಪರ್ವತದಲ್ಲಿಳಿದನು.ಅವನು ಲಂಕೆಗೆ ಹಾರಿದ ಬಳಿಕ ಅಲ್ಲಿಯ ತನಕ ವಾಯುಸೇವನೆಯಿಂದಲೇ 

ಇದ್ದ ವಾನರ-ಭಲ್ಲೂಕ ವೀರರು ಯುದ್ಧವನ್ನು ಗೆದ್ದಂತೆ ಸಂಭ್ರಮಿಸಿದರು! 

ಹನುಮನು ಜಾಂಬವಾದಿ ಹಿರಿಯರ ಕಾಲುಗಳಿಗೆರಗಿದನು.



ಕಿರಿಯರನ್ನು ಬಿಗಿದಪ್ಪಿದನು.

ಎಲ್ಲರೂ ಹನುಮನನ್ನು ಗೌರವಿಸಿ ಪೂಜಿಸಿದರು.

"ಲೋಕದ ಮೊದಲ ಪತ್ತೇದಾರ!"

 ತನ್ನ ಕಾರ್ಯದಲ್ಲಿ ಯಶಸ್ಸನ್ನು ಗಳಿಸಿ ಹಿಂದಿರುಗಿದ್ದ! ಅಲ್ಲಿ ಸೇರಿದವರೆಲ್ಲರಿಗೂ ತಾನು ಹೋದಲ್ಲಿಂದ ಬರುವ ತನಕ ನಡೆದ ಎಲ್ಲಾ ಘಟನೆಗಳನ್ನು ವಿಸ್ತಾರವಾಗಿ ಹೇಳಿದನು.

ಮಂಡೋದರಿಯು ರಾವಣನಿಗೆ ಹೇಳಿದ ಬುದ್ಧಿವಾದವನ್ನೂ ಹೇಳಿದನು.ರಾಮ ಲಕ್ಷ್ಮಣರು ಸೇರಿದಂತೆ ಎಲ್ಲರ ಪ್ರಾಣವುಳಿಸಿದ 'ಮುಖ್ಯಪ್ರಾಣ' ವಾಯುಪುತ್ರ ಮಾರುತಿಯು ಆದಷ್ಟು ಬೇಗನೆ ಲಂಕೆಯ ಮೇಲೆ ದಾಳಿ ಮಾಡುವಂತೆ ವಾನರರನ್ನು ಪ್ರೇರೇಪಿಸಿದನು.

ಅಲ್ಲಿ ನಾನು ಮಾಡದ ಕೆಲಸವನ್ನು ಇನ್ನು ನೀವು ಮಾಡಿ ಎಂದು ಅವರ ಹೊಣೆಯನ್ನು ನೆನಪಿಸಿದನು.


ಇನ್ನು ತೊಂಬತ್ನಾಲ್ಕು!



Om ShriRamaya Namaha : 114


A Bird's-eye view of Ramayana : 114


" A fire never burns another fire " - This statement was made by Maaruthi . 

He had not thought of Seethamaatha while burning Lanka ! This is how he consoled himself when he was repenting that his action might have caused a trouble to Seetha !


And it had happened the way he had stated ! Will the fire which did not burn the tail of Maaruthi as per the prayer of Seetha, burn Seetha ?! And that was the power of Seetha's fidelity ! Seetha tested Agni ! Agni won ! Her chastity won too . The great wandering men who were going in the sky stated that it was truly the greatest wonder that Seetha was not being burnt who was in Ashoka Vana when the entire Lanka was burning. When Maaruthi heard them saying this, his mind - soul felt satisfied and became calm which was boiling in anguish. 


He came to see Seetha in Ashoka Vana. 

He let her know that he was going back to ShriRama and fell to her feet. By discarding all her doubts again ,to accomplish the saying 'Shubhasya Sheegrham',( auspicious as soon as possible).climbed up the mountain 'Arishta' . He bid adieu to that beautiful mountain, made the animals of the mountain feel the quivering in the mountain ,leapt into the sky and began his journey towards the North direction  .


The end of the winter solstice and the beginning of the summer solstice of Hanuman !


The words stated by Shoorpanakha about Ravana became true.

• He had no control over administration. 

• Spying had completely hit the ground. 

• The Goddess of Lanka herself knelt before Maaruthi and let him inside the city Lanka.

• Hanuman had wandered in each and every corner of Ravana's harem which was not even noticed by the lustful king. What kind of a valiant hero of three worlds is he then !! ? Even the elephant falls if its foot slips ! Isn't it ?


Did a mountain climbed down on an another mountain ? In the same way ,Maaruthi who arrived in the speed of a storm landed on the Mahendra mountain. The monkey - bear soldiers who were living by consuming only air since the day Hanuman had left for Lanka ,celebrated the arrival of Hanuman as if they had won a battle !

Hanuman fell to the feet of Jaambavantha and other elders. 

Embraced the young ones in his arms tightly .

Everyone admired and worshipped Hanuman. 

" The first spy of the world ! "



Who had returned achieving success in his work. 

He explained everything that had happened since the day he had left till he had returned, to everyone who had gathered there.

He also told them about the advice given by Mandodari to Ravana. 

Maaruthi, the son of Vaayu,  ' Mukhya Praana' the one who saved the lives of Rama - Lakshmana and others, inspired the monkeys to attack on Lanka as soon as possible. He reminded them their responsibility  and told them to do the things which he did not do there.


Only 94 steps to go !

!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!

Copyright Info:

No part of the above article should be copied, printed or shared or reproduced in any form without permission from the respective author(s) and artist(s).

!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!

Kannada version of the story is written by- 

Shri U S Vishweshwara Bhat

Translated by- 

Kum. Rashmi A Suvarna. 

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

1 comment:

Please leave your comments here.....