ಶ್ರೀರಾಮಾಯಣ ಹಕ್ಕಿನೋಟ-೧೦೬ A Bird's-eye view of Ramayana : 106

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ-೧೦೬


ಹನುಮನ ನಿಜರೂಪ- ಶಕ್ತಿಗಳನ್ನರಿಯದ ಸೀತೆ ಆತನು ತನ್ನನ್ನು ಕೊಂಡೊಯ್ಯುವ ಬಗ್ಗೆ ಸಂಶಯ ವ್ಯಕ್ತಪಡಿಸಿದಳು.

ಆಗ ಹನುಮನು ತನ್ನ ದೇಹವನ್ನು ಹಿಗ್ಗಿಸಿ ತನ್ನ ಮಹಾನ್ ರೂಪವನ್ನು ತೋರಿಸಿದನು! ತನ್ನ ಬೆನ್ನೇರಿ ಕುಳಿತುಕೋ; ರಾಮನನ್ನು ಸೇರಿಸುತ್ತೇನೆ -ಎಂದನು.

ಸೀತೆ ಅಚ್ಚರಿಗೊಂಡು ಅವನ ಸಾಮರ್ಥ್ಯವನ್ನು ಕೊಂಡಾಡಿ ಅವನೊಡನೆ ಬರುವ ಕುರಿತು ವಿಮರ್ಶಿಸ ಬೇಕಾಗಿದೆ ಎಂದಳು.



ಅವಳು ಮಾರುತಿಯಲ್ಲಿ -

ನಿನ್ನೊಡನೆ ಬರುವುದು ಯುಕ್ತವಲ್ಲ-

. ಯಾಕೆಂದರೆ ನಿನ್ನ ವಾಯುವೇಗ ತಾಳಲಾರದೆ ನಾನು ಸಮುದ್ರಕ್ಕೆ ಬಿದ್ದೇನು.

. ಸ್ತ್ರೀಯೊಬ್ಬಳನ್ನು ಎತ್ತಿಕೊಂಡು ಹೋದರೆ ನಿನ್ನ ವಿಷಯದಲ್ಲೂ ಸಂದೇಹ ಬರುತ್ತದೆ.

.ರಾವಣಾದಿಗಳು ನಿನ್ನನ್ನು ಬೆನ್ನಟ್ಟಿದಾಗ ಯುದ್ಧಮಾಡಬೇಕಾಗಿ ಬಂದರೆ ನಾನು ನಿನಗೆ  ತೊಡಕಾದೇನು.

. ಸೆರೆ ಸಿಕ್ಕಿದರೆ ನನ್ನ ಸಾವು ನಿಶ್ಚಿತ.

.ಆಗ ನಿನ್ನ ಎಲ್ಲಾ ಸಾಹಸವೂ ನೀರಲ್ಲಿ ಮಾಡಿದ ಹೋಮದಂತೆ ವ್ಯರ್ಥ.

. ನೀನು ಹಿಂತೆರಳಲಾರದೆ ಹೋದರೆ ನಿನ್ನ ಆಗಮನವನ್ನೇ ನಿರೀಕ್ಷಿಸುತ್ತಾ ಇರುವ ರಾಮನೂ ಸೇರಿದಂತೆ ಎಲ್ಲರೂ ನಿರಾಶರಾಗಿ ಪ್ರಾಣತ್ಯಾಗ ಮಾಡಿಯಾರು.

.ನಿನ್ನೊಡನೆ ಬಾರದಿರಲು ಬಹು ಮುಖ್ಯ ಕಾರಣ- "ಪತಿಭಕ್ತಿಯನ್ನೇ ಶ್ರೇಷ್ಠವೆಂದು ಭಾವಿಸಿರುವ ನಾನು ಶ್ರೀರಾಮನ ಹೊರತಾಗಿ ಬೇರೆ ಯಾವನ ಶರೀರವನ್ನೂ ನಾನಾಗಿಯೇ ಮುಟ್ಟಲು ಇಚ್ಛಿಸುವುದಿಲ್ಲ." 

ಅಂದು ರಾವಣನು ಅಸಹಾಯಕಳಾದ ನನ್ನನ್ನು ನನ್ನ ಇಚ್ಛೆಗೆ ವಿರುದ್ಧವಾಗಿ ಸೆಳೆದೊಯ್ದ ಕಾರಣ ನಾನು ಏನೂ ಮಾಡಲಾರದ ಸ್ಥಿತಿಯಲ್ಲಿದ್ದೆ.

. ಶ್ರೀರಾಮನು ಇಲ್ಲಿಗೆ ಬರಬೇಕು,ತನ್ನ ಶೌರ್ಯ- ವೀರ್ಯಗಳಿಂದ  ರಾಕ್ಷಸರ ಸಂಹಾರ ಮಾಡಿ ನನ್ನನ್ನು ಕರೆದುಕೊಂಡು ಹೋಗಬೇಕು.

ಅದುವೇ ಸರಿಯಾದ ದಾರಿ, ನನಗೂ ಅವನಿಗೂ ಲೋಕಕ್ಕೂ ಹಿತವಾದ ದಾರಿ- ಎಂದಳು.


ಸೀತೆ ಅಂಜುಬುರುಕಿಯಲ್ಲ!ವೀರನಾರಿ!

ಜನಕನು ಶಿವಧನುಸ್ಸಿನ ಪಣವನ್ನು ಏಕೆ ಇಟ್ಟನು ಎಂಬುದಕ್ಕೆ ಸೀತೆಯ ಈ ಮಾತುಗಳು ಸಾಕು!

ತಾನು ಯುದ್ಧ ಮಾಡದಿದ್ದರೂ ಯುದ್ಧಕ್ಕೆ ಪ್ರೇರಣೆ ನೀಡಿ ಶತ್ರು ಸಂಹಾರ ಮಾಡಿಸುವ ಕೆಚ್ಚು ಅವಳಲ್ಲಿದೆ.

ಅವಳೇ ಹನುಮನಲ್ಲಿ- ನನ್ನ ಪಾತಿವ್ರತ್ಯದ ಶಕ್ತಿಯಲ್ಲಿ ರಾವಣನನ್ನು ಸುಟ್ಟು ಬೂದಿ ಮಾಡಬಲ್ಲೆ.ಆದರೆ ಆ ರೀತಿ ಮಾಡಿ ನನ್ನ ತಪಶ್ಶಕ್ತಿಯನ್ನು ನಷ್ಟಗೊಳಿಸುವವುದು ನನಗಿಷ್ಟವಿಲ್ಲ-ಎನ್ನುವ ಮಾತು ಅವಳ ಸಾಮರ್ಥ್ಯವನ್ನು ತೋರಿಸುತ್ತದೆ.

ರಾಮನಿಗೆ ರಾಮನೇ ಸಾಟಿ!

ಸೀತೆಗೆ ಸೀತೆಯೇ ಸಾಟಿ!!

ನಿಜವಾದ  ರಾಮಸತಿ ಸೀತೆ!!


Om ShriRamaya Namaha  : 106


A Bird's-eye view of Ramayana : 106


Seetha who had little knowledge about the might, valor and the real appearance of Hanuman, expressed her suspicion when he assured her that he would take her to Rama. During the time Hanuman showed her his immense power by enlarging himself ! Then he asked her to sit on his back and said that he would take her to Rama.  Seetha was surprised seeing the immense power of Hanuman and praised his ability. She told him that she had to discuss regarding going with him.



She says to Maaruthi that -

• It is not right to come along with you .

• Because I may fall down into the sea being unable to endure your force of Vaayu.

• Even you might be suspected if you take a woman with you. 

• If the followers of Ravana come chasing you then I might be a problem for you while battling with them.

• If I get caught by them then my death is confirm. 

• Then all your efforts and adventures will go in vain. 

• Rama and all the others who have been waiting for your arrival there ,will sacrifice their lives if you do not return.

• The main reason for not coming with you is  -  " I firmly believe that husband worship is above all and the superior and I never wish to touch the body of any man except ShreeRama ".

      I was in a helpless situation and

      I couldnot do anything then,when 

      Ravana took me forcefully against my 

      wish.

• ShreeRama has to come here, he has to take me from here by slaying the monsters with his might and valor. That is the right way ,the right way for me, him and to the world. 


Seetha was not a coward and timid ! She was a fearless and brave woman !

This is enough to say why Janaka had arranged the challenge of Shivadhanus !

She has the power to inspire to wage war and slay the enemies though she doesn't battle.  She told Hanuman that she could burn Ravana into ashes through the power of her chastity. But she did not want to waste her power of penance which shows her capacity. 

Rama can be matched with only Rama !

Seetha can be matched with only Seetha !



No comments:

Post a Comment

Please leave your comments here.....